Baby Movie: ಸೂಪರ್ ಹಿಟ್ 'ಬೇಬಿ' ಚಿತ್ರತಂಡಕ್ಕೆ ಸಂಕಷ್ಟ: ಆ ದೃಶ್ಯಗಳಿಗೆ ಆಕ್ಷೇಪ.. ನಿರ್ಮಾಪಕರಿಗೆ ನೋಟಿಸ್

ಟಾಲಿವುಡ್‌ನಲ್ಲಿ ಇತ್ತೀಚೆಗೆ ಭರ್ಜರಿ ಸಕ್ಸಸ್ ಕಂಡ 'ಬೇಬಿ' ಸಿನಿಮಾ ಸದ್ಯ ಓಟಿಟಿಗೆ ಬಂದು ಸದ್ದು ಮಾಡ್ತಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಸೆನ್ಸೇಷನಲ್ ಹಿಟ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕರ್ನಾಟಕದಲ್ಲೂ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಯೂತ್ಸ್‌ಗೆ ಕನೆಕ್ಟ್ ಆಗಿದ್ದ ಸಿನಿಮಾ 80 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು.

ಪೋಸ್ಟರ್‌, ಟೀಸರ್, ಸಾಂಗ್ಸ್‌ನಿಂದ ಕೊಂಚಮಟ್ಟಿಗೆ ನಿರೀಕ್ಷೆ ಹುಟ್ಟಾಕ್ಕಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೀತು. ವಿಜಯ್ ದೇವರಕೊಂಡ ಸಹೋದರ ಆನಂದ್‌ ದೇವರಕೊಂಡ ಹಾಗೂ ವೈಷ್ಣವಿ ಚೈತನ್ಯಾ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿಬಿಟ್ಟರು. ಸಾಯಿ ರಾಜೇಶ್ ನೀಲಂ ನಿರ್ದೇಶನ, ವಿಜಯ್ ಬಲ್ಗನಿನ್ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು. ಸಿಂಗಲ್, ರಿಲೇಷನ್‌ಶಿಪ್‌ನಲ್ಲಿ ಇರುವವರು ಕೂಡ 'ಬೇಬಿ' ಸಿನಿಮಾ ನೋಡಿ ಭಾವುಕರಾಗಿದ್ದರು.

Hyderabad Police serve advisory notice to makers of Baby over drug abuse scenes

ಥಿಯೇಟರ್‌ಗಳಲ್ಲಿ ಬಹಳ ಸದ್ದು ಮಾಡಿ ಸದ್ಯ ಓಟಿಟಿಯಲ್ಲೂ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ 'ಬೇಬಿ' ಚಿತ್ರತಂಡಕ್ಕೆ ಹೊಸ ತಲೆನೋವು ಶುರುವಾಗಿದೆ. ಚಿತ್ರದಲ್ಲಿ ಡ್ರಗ್ಸ್‌ ಸೇವನೆ ಸಂಬಂಧಿಸಿದಂತೆ ತೋರಿಸಿರುವ ದೃಶ್ಯಗಳ ಬಗ್ಗೆ ತೆಲಂಗಾಣ ಪೊಲೀಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಯುವಕರು ಇದನ್ನು ನೋಡಿ ಹಾಳಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟಾಲಿವುಡ್‌ನಲ್ಲಿ ಮತ್ತೆ ಡ್ರಗ್ಸ್ ದಂಧೆ ಪ್ರಕರಣ ಮುನ್ನಲೆಗೆ ಬಂದಿದೆ. ತೆಲುಗು ಸಿನಿಮಾ ಫೈನಾನ್ಶಿಯರ್ ಕೆ.ವೆಂಕಟರತ್ನಂ ಹಾಗೂ ಮತ್ತೋರ್ವ ಆರೋಪಿ ಕಾಪ ಭಾಸ್ಕರ್ ಬಾಲಾಜಿನ ಬಂಧಿಸಿ ತೆಲಂಗಾಣ ಮಾದಕ ದ್ರವ್ಯ ನಿಗ್ರಹ ದಳ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ಮೂವರು ನೈಜೀರಿಯನ್ ಪ್ರಜೆಗಳನ್ನು ಕೂಡ ಬಂಧಿಸಿ 11 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಹೈದರಾಬಾದ್‌ ಕಮೀಷನರ್ ಸಿವಿ ಆನಂದ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

Hyderabad Police serve advisory notice to makers of Baby over drug abuse scenes

ಸುದ್ದಿಗೋಷ್ಠಿಯಲ್ಲಿ 'ಬೇಬಿ' ಸಿನಿಮಾ ಬಗ್ಗೆ ಸಿವಿ ಆನಂದ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿನಿಮಾದಲ್ಲಿ ಡ್ರಗ್ಸ್ ಸೇವನೆ ಪ್ರೋತ್ಸಾಹಿಸುವ ದೃಶ್ಯಗಳಿದ್ದು, ಫ್ರೆಶ್ ಲಿವಿಂಗ್ ಅಪಾರ್ಟ್‌ಮೆಂಟ್‌ನಲ್ಲಿ ದಾಳಿ ನಡೆಸಿದಾಗ ಇಂಥದ್ದೇ ಸನ್ನಿವೇಶ ಅಲ್ಲಿ ಕಂಡುಬಂದಿತ್ತು ಎಂದು ವಿಡಿಯೋ ಪ್ರದರ್ಶಿಸಿ ಬೇಸರ ವ್ಯಕ್ತಪಡಿಸಿದ್ದರು. 'ಬೇಬಿ' ಸಿನಿಮಾದ ದೃಶ್ಯಗಳು ಕಂಡು ಬಂದಿವೆ ಎಂದರು. ಈ ವಿಚಾರವನ್ನು ತೆಲಂಗಾಣ ಪೊಲೀಸರು ಬಹಳ ಗಂಭೀರವಾಗಿ ಪರಿಗಣಿಸಿರುವುದಾಗಿ ಹೇಳಿದ್ದರು.

ಸಿನಿಮಾದಲ್ಲಿ ಆ ದೃಶ್ಯಗಳು ಬಂದಾಗ ಎಚ್ಚರಿಕೆ ಪ್ರಕಟನೆ(Disclaimer) ಕೂಡ ಇಲ್ಲ. ನಾವು ಎಚ್ಚರಿಸಿದ ಬಳಿಕ ಅದನ್ನು ಹಾಕಿದ್ದಾರೆ ಎಂದ ಸಿವಿ ಆನಂದ್ ಚಿತ್ರತಂಡಕ್ಕೆ ನೋಟಿಸ್ ನೀಡಿರುವುದಾಗಿ ವಿವರಿಸಿದ್ದರು. ಇನ್ನುಮುಂದೆ ಪ್ರತಿ ಸಿನಿಮಾ ಮೇಲೂ ನಿಘಾ ವಹಿಸಲಿದ್ದು ಇನ್ನುಮುಂದೆ ಇಂತಹ ಸನ್ನಿವೇಶಗಳು ಇದ್ದರೆ ಸುಮ್ಮನಿರಲ್ಲ ಎಂದು ಎಚ್ಚರಿಸಿದ್ದರು.

ನೋಟಿಸ್ ಬಗ್ಗೆ 'ಬೇಬಿ' ಚಿತ್ರದ ನಿರ್ದೇಶಕ ಸಾಯಿ ರಾಜೇಶ್ ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಕಮೀಷನರ್ ಸಿವಿ ಆನಂದ್ ಭೇಟಿ ಮಾಡಿ ವಿವರಣೆ ನೀಡಿದ್ದಾರೆ. "ನೀವು ತೋರಿಸಿರುವ ವಿಡಿಯೋ ಯೂಟ್ಯೂಬ್‌ಗೆ ಸಂಬಂಧಿಸಿದ್ದು, ಸಿನಿಮಾದಲ್ಲಿ ತೋರಿಸಿರುವ ವಿಡಿಯೋದಲ್ಲಿ ಎಚ್ಚರಿಕೆ ಪ್ರಕಟನೆ ನೀಡಲಾಗಿದೆ" ಎಂದು ಸಾಯಿ ರಾಜೇಶ್ ಮಾಹಿತಿ ನೀಡಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಾಯಿ ರಾಜೇಶ್ 'ಬೇಬಿ'ಸಿನಿಮಾದಲ್ಲಿ ಡ್ರಗ್ಸ್ ದೃಶ್ಯಗಳನ್ನು ಹಾಕಲು ಕಾರಣವೇನು ಎಂದು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಬಹಿರಂಗಪಡಿಸಿದ್ದಾರೆ. "ಡ್ರಗ್ಸ್ ಬಳಸಬಾರದು ಎಂಬ ಸತ್ಯವನ್ನು ನಮ್ಮ ಚಿತ್ರದ ಮೂಲಕ ತಿಳಿಸಲು ಆ ದೃಶ್ಯವನ್ನು ಹಾಕಿದ್ದೇವೆ. ಆದರೆ ಅದರಲ್ಲಿ ಒಳ್ಳೆಯದನ್ನು ಬಿಟ್ಟು ಕೆಟ್ಟದ್ದನ್ನು ಮಾತ್ರ ನೋಡಿದರೆ ಏನು ಮಾಡಲು ಸಾಧ್ಯ. ಸದ್ಯ ಪೊಲೀಸರು ನಮಗೆ ಸಲಹಾ ನೋಟಿಸ್ ಅಷ್ಟೇ ನೀಡಿದ್ದಾರೆ" ಎಂದಿದ್ದಾರೆ.

More from Filmibeat

English summary
Baby movie director Sai Rajesh Neelam reacts to advisory notice for drug scene.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X