ವಾವ್.. ಡಾ.ರಾಜ್ ಕುಮಾರ್ ಬಗ್ಗೆ 'ಬಾಹುಬಲಿ' ನಟ ರಾನಾ ಬಾಯಿಂದ ಬಂದಿದ್ದು ಎಂಥಾ ಮಾತು.!

Recommended Video

I Am A Huge Fan of Dr Rajkumar Says Telugu Actor Rana | Filmibeat Kannada

'ಲೀಡರ್' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟ ರಾನಾ ದಗ್ಗುಬಾಟಿ. 'ನೇನು ನಾ ರಾಕ್ಷಸಿ', 'ನಾ ಇಷ್ಟಂ', 'ಕೃಷ್ಣಂ ವಂದೇ ಜಗದ್ಗುರು', 'ಬಾಹುಬಲಿ: ದಿ ಬಿಗಿನ್ನಿಂಗ್', 'ರುದ್ರಮಾದೇವಿ', 'ಬಾಹುಬಲಿ: ದಿ ಕನ್ ಕ್ಲೂಶನ್', 'ನೇನೇ ರಾಜು ನೇನೇ ಮಂತ್ರಿ' ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳಿಂದ ಜನಪ್ರಿಯತೆ ಪಡೆದಿರುವ ನಟ ರಾನಾ ದಗ್ಗುಬಾಟಿ.

ಅಸಲಿಗೆ, ರಾನಾ ದಗ್ಗುಬಾಟಿ ಪ್ರಖ್ಯಾತ ತೆಲುಗು ನಿರ್ಮಾಪಕ ದಗ್ಗುಬಾಟಿ ಸುರೇಶ್ ಬಾಬು ಪುತ್ರ ಮತ್ತು ಟಾಲಿವುಡ್ ನ ದಿಗ್ಗಜ ಡಿ.ರಾಮಾನಾಯ್ಡು ಮೊಮ್ಮಗ. ನಟ ವೆಂಕಟೇಶ್ ದಗ್ಗುಬಾಟಿ ಮತ್ತು ಅಕ್ಕಿನೇನಿ ನಾಗಾರ್ಜುನ.. ರಾನಾ ದಗ್ಗುಬಾಟಿಗೆ ಸಂಬಂಧಿ.

ಇಂತಿಪ್ಪ ರಾನಾ ದಗ್ಗುಬಾಟಿ ಯಾರ ಅಭಿಮಾನಿ ಗೊತ್ತಾ.? ಕನ್ನಡ ಚಿತ್ರರಂಗದ ವರನಟ, ನಟಸಾರ್ವಭೌಮ ಡಾ.ರಾಜ್ ಕುಮಾರ್ ಅಂದ್ರೆ ರಾನಾ ದಗ್ಗುಬಾಟಿಗೆ ಸಿಕ್ಕಾಪಟ್ಟೆ ಇಷ್ಟವಂತೆ.! ಹಾಗಂತ ಅವರೇ ಹೇಳಿಕೊಂಡಿದ್ದಾರೆ.

ಡಾ.ರಾಜ್ ಕುಮಾರ್ ಅಭಿಮಾನಿ ರಾನಾ.!

ಡಾ.ರಾಜ್ ಕುಮಾರ್ ಅಭಿಮಾನಿ ರಾನಾ.!

''ನಾನು ಡಾ.ರಾಜ್ ಕುಮಾರ್ ಅವರ ಅತಿ ದೊಡ್ಡ ಅಭಿಮಾನಿ'' ಎಂದು ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ನಟ ರಾನಾ ದಗ್ಗುಬಾಟಿ ಹೇಳಿದ್ದಾರೆ. ಡಾ.ರಾಜ್ ಕುಮಾರ್ ಚಿತ್ರಗಳನ್ನು ನೋಡಿ, ಅವರ ಫ್ಯಾನ್ ಆಗಿದ್ದಾರಂತೆ 'ಬಾಹುಬಲಿ' ನಟ ರಾನಾ ದಗ್ಗುಬಾಟಿ.

'ಭಕ್ತ ಪ್ರಹ್ಲಾದ' ಸ್ಫೂರ್ತಿ

'ಭಕ್ತ ಪ್ರಹ್ಲಾದ' ಸ್ಫೂರ್ತಿ

ನಟ ರಾನಾ ದಗ್ಗುಬಾಟಿ ಸದ್ಯ 'ಹಿರಣ್ಯ ಕಶ್ಯಪ' ಎಂಬ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ 'ಹಿರಣ್ಯ ಕಶ್ಯಪ' ಚಿತ್ರಕ್ಕೆ ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅಭಿನಯದ 'ಭಕ್ತ ಪ್ರಹ್ಲಾದ' ಚಿತ್ರವೇ ಸ್ಫೂರ್ತಿ. 1983 ರಲ್ಲಿ ತೆರೆಕಂಡ ಕನ್ನಡದ 'ಭಕ್ತ ಪ್ರಹ್ಲಾದ' ಚಿತ್ರವನ್ನು ರಾನಾ ದಗ್ಗುಬಾಟಿ ಕಣ್ತುಂಬಿಕೊಂಡಿದ್ದಾರಂತೆ.

ಕನ್ನಡ ಚಿತ್ರವೇ ರೆಫರೆನ್ಸ್.!

ಕನ್ನಡ ಚಿತ್ರವೇ ರೆಫರೆನ್ಸ್.!

''ನಾನು ಈಗ 'ಹಿರಣ್ಯ ಕಶ್ಯಪ' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಏನಾದರೂ ರೆಫರ್ ಮಾಡಬೇಕು ಅಂದ್ರೆ, ನಾನು ಸೀದಾ ಡಾ.ರಾಜ್ ಕುಮಾರ್ ಅಭಿನಯದ 1983 ರಲ್ಲಿ ತೆರೆಕಂಡ 'ಭಕ್ತ ಪ್ರಹ್ಲಾದ' ಚಿತ್ರವನ್ನು ನೋಡುತ್ತೇನೆ'' ಎಂದು ಸಂದರ್ಶನದಲ್ಲಿ ಹೇಳಿದ್ದಾರೆ ನಟ ರಾನಾ ದಗ್ಗುಬಾಟಿ.

ಪುನೀತ್ ರಾಜ್ ಕುಮಾರ್ ಕೂಡ ಗೊತ್ತು.!

ಪುನೀತ್ ರಾಜ್ ಕುಮಾರ್ ಕೂಡ ಗೊತ್ತು.!

''ನನಗೆ ಪುನೀತ್ ರಾಜ್ ಕುಮಾರ್ ಕೂಡ ಬಹಳ ವರ್ಷಗಳಿಂದ ಗೊತ್ತು. ಅವರ ಸಿನಿಮಾಗಳನ್ನು ನೋಡುವುದು ನನಗೆ ಇಷ್ಟ'' ಎಂದು ಅಣ್ಣಾವ್ರು ಮತ್ತು ಅಣ್ಣಾವ್ರ ಮಗನ ಬಗ್ಗೆ ರಾನಾ ದಗ್ಗುಬಾಟಿ ಹಾಡಿ ಹೊಗಳಿದ್ದಾರೆ.

ಯಶ್ ಬಗ್ಗೆಯೂ ಕಾಮೆಂಟ್.!

ಯಶ್ ಬಗ್ಗೆಯೂ ಕಾಮೆಂಟ್.!

''ಕೆ.ಜಿ.ಎಫ್' ಮೂಲಕ ನಟ ಯಶ್ ದೊಡ್ಡ ಮೈಲಿಗಲ್ಲು ತಲುಪಿದ್ದಾರೆ. ನಾವು ಕೂಡ ಅದನ್ನೇ 'ಬಾಹುಬಲಿ' ಮತ್ತು 'ದಿ ಘಾಝಿ ಅಟ್ಯಾಕ್' ಮೂಲಕ ಮಾಡಿದ್ವಿ'' ಅಂತ ಹೇಳುವ ಮೂಲಕ ಕನ್ನಡ ಚಿತ್ರರಂಗದ ನಟರ ಬಗ್ಗೆ ಸಂದರ್ಶನದಲ್ಲಿ ರಾನಾ ದಗ್ಗುಬಾಟಿ ಮಾತನಾಡಿದ್ದಾರೆ.

More from Filmibeat

English summary
I am a huge fan of Dr Rajkumar says Telugu Actor Rana Daggubati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X