For Quick Alerts
  ALLOW NOTIFICATIONS  
  For Daily Alerts

  Exclusive: "ನಾನು ಇನ್ನು ಸತ್ತಿಲ್ಲ.. ಈಗಲೇ ಸಾಯಲ್ಲ": ಹಾಸಿಗೆ ಹಿಡಿಸಿರುವ ಕಾಯಿಲೆ ಬಗ್ಗೆ ಮಾತನಾಡುತ್ತಾ ಸಮಂತಾ ಭಾವುಕ!

  |

  ಖ್ಯಾನ ನಟಿ ಸಮಂತಾ ಮಯೋಸೈಟಿಸ್ ಎನ್ನುವ ದೀರ್ಘಕಾಲದ ಸ್ನಾಯು ರೋಗದಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಸಮಂತಾ ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದನ್ನು ಕೇಳಿ ಚಿತ್ರರಂಗದ ಪ್ರಮುಖರು, ಅಭಿಮಾನಿಗಳು ಆಕೆಗೆ ಧೈರ್ಯ ತುಂಬುತ್ತಿದ್ದಾರೆ. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುತ್ತಾ ತಾನು ಆ ಕಾಯಿಲೆ ವಿರುದ್ಧ ಹೋರಾಟುತ್ತಿದ್ದು, ಅದನ್ನು ಹಿಮ್ಮೆಟ್ಟಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

  'ಯಶೋದ' ಸಿನಿಮಾ ಪ್ರಚಾರಕ್ಕಾಗಿ ನೀಡಿದ ತಮಿಳು, ತೆಲುಗು ಸಂದರ್ಶನಗಳಲ್ಲಿ ಸಮಂತಾ ತಮ್ಮ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಪ್ರಪಂಚದಲ್ಲಿ ಮಯೋಸೈಟಿಸ್ ರೋಗವನ್ನು ಸಾಕಷ್ಟು ಜನ ಸಮರ್ಥವಾಗಿ ಎದುರಿಸುತ್ತಿದ್ದಾರೆ ಎಂದು ಸಮಂತಾ ಹೇಳಿದ್ದಾರೆ. ತಾನು ಕೂಡ ಇದನ್ನು ಎದುರಿಸಿದ್ದೇನೆ ಎಂದು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡುತ್ತಾ ಆಕೆ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು. ಶೀಘ್ರದಲ್ಲೇ ನಾನು ಇದರಿಂದ ಹೊರ ಬರುತ್ತೇನೆ. ನಾನು ಶೀಘ್ರದಲ್ಲೇ ಸಾಯುವುದಿಲ್ಲ ಎಂದು ಸಮಂತಾ ಅಲವತ್ತುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಹೇಳಿದಂತೆ ಕೆಲವು ಒಳ್ಳೆ ದಿನಗಳು ಕೆಲವು ಕೆಟ್ಟ ದಿನಗಳು ಎಲ್ಲರ ಜೀವನದಲ್ಲೂ ಬರುತ್ತದೆ ಎಂದು ಸಮಂತಾ ವಿವರಿಸಿದ್ದಾರೆ.

  'ಯಶೋದಾ' ಸಿನಿಮಾದಲ್ಲಿ ಸಮಂತಾ ಸಾಹಸ ನೋಡಿ ಬೆರಗಾದ ಹಾಲಿವುಡ್ ಸ್ಟಂಟ್ ಡೈರೆಕ್ಟರ್!'ಯಶೋದಾ' ಸಿನಿಮಾದಲ್ಲಿ ಸಮಂತಾ ಸಾಹಸ ನೋಡಿ ಬೆರಗಾದ ಹಾಲಿವುಡ್ ಸ್ಟಂಟ್ ಡೈರೆಕ್ಟರ್!

  ಇದೇ ಶುಕ್ರವಾರ ಸಮಂತಾ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ 'ಯಶೋದ' ಸಿನಿಮಾ ತೆರೆಗೆ ಬರುತ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಸದ್ದು ಮಾಡಲಿದೆ. ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಮಂತಾ ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

  ಸಮಂತಾ ಭಾವುಕ

  ಸಮಂತಾ ಭಾವುಕ

  "ಒಂದೊಂದು ದಿನ ನನಗೆ ಒಂದು ಹೆಜ್ಜೆ ಕೂಡ ಮುಂದೆ ಹಾಕಲು ಸಾಧ್ಯವಾಗುವುದಿಲ್ಲ ಹಾಕಿದರೆ ಎಲ್ಲಾ ಮುಗಿದೇ ಹೋಗುತ್ತದೆ ಅನ್ನಿಸುತ್ತದೆ. ಕೆಲ ದಿನಗಳ ನಂತರ ಹಿಂದೆ ತಿರುಗಿ ನೋಡಿದರೆ ನಾನು ಇದನ್ನೆಲ್ಲಾ ದಾಟಿ ಬಂದಿದ್ದೇನಾ ಎನಿಸುತ್ತದೆ" ಎಂದು ಸ್ಯಾಮ್ ಭಾವುಕರಾಗಿದ್ದಾರೆ. ಈಗ ನೀವು ವಿಚಾರವನ್ನು ಬಹಿರಂಗಪಡಿಸಿದಿದ್ದೀರಾ. ಬಹಿರಂಗ ಪಡಿಸುವ ಮುನ್ನ ಇದರ ವಿರುದ್ಧ ಹೋರಾಡುತ್ತಾ ಎಷ್ಟು ಕಷ್ಟಪಟ್ಟಿರುತ್ತಿರೋ ನನಗೆ ಗೊತ್ತು ಎಂದು ನಿರೂಪಕಿ ಸುಮಾ ಹೇಳಿದ್ದಕ್ಕೆ "ನಾನೊಬ್ಬಳೇ ಅಲ್ಲ, ಜೀವನದಲ್ಲಿ ಎಷ್ಟೋ ಸಮಸ್ಯೆಗಳ ವಿರುದ್ದ ಹೋರಾಡುವವರು ಸಾಕಷ್ಟು ಜನ ಇದ್ದಾರೆ" ಎಂದಿದ್ದಾರೆ.

  ಅಪರೂಪದ 'ಮಯೋಸೈಟಿಸ್' ಕಾಯಿಲೆಯಿಂದ ಬಳಲುತ್ತಿರೋ ಸಮಂತಾಗೆ ಜೂ.ಎನ್‌ಟಿಆರ್ ಹೇಳಿದ್ದೇನು?ಅಪರೂಪದ 'ಮಯೋಸೈಟಿಸ್' ಕಾಯಿಲೆಯಿಂದ ಬಳಲುತ್ತಿರೋ ಸಮಂತಾಗೆ ಜೂ.ಎನ್‌ಟಿಆರ್ ಹೇಳಿದ್ದೇನು?

  ನಾನು ಈಗಲೇ ಸಾಯುವುದಿಲ್ಲ: ಸಮಂತಾ

  ನಾನು ಈಗಲೇ ಸಾಯುವುದಿಲ್ಲ: ಸಮಂತಾ

  "ಈಗ ಮೂರು ತಿಂಗಳಾಯಿತು. ಅಂದಿನಿಂದಲೂ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾನು ಶೀಘ್ರದಲ್ಲೇ ಸಾಯುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನನಗೆ ಪ್ರಾಣಾಪಾಯವಿದೆ, ಬದುಕಲ್ಲ ಅಂತೆಲ್ಲಾ ಏನೇನೋ ಸುದ್ದಿ ಹರಿದಾಡಿತು. ಇಲ್ಲ ನಾನು ಸದ್ಯದಲ್ಲಿ ಸಾಯುವುದಿಲ್ಲ. ಇದು ಅಟೊ ಇಮ್ಯೂನ್ ಕಂಡೀಷನ್. ಇದು ಬರಿದಾಗುತ್ತಿದೆ ಮತ್ತು ದಣಿದಿದೆ. ನಾನು ಹೋರಾಟಗಾರ್ತಿ, ಹೋರಾಡುತ್ತಲೇ ಇರುತ್ತೀನಿ" ಎಂದು ಸಮಂತಾ ಮತ್ತೊಂದು ಸಂದರ್ಶನದಲ್ಲಿ ಹೇಳಿದ್ದಾರೆ.

  ನಿಜಕ್ಕೂ ಕರಾಳ ಸಮಯ

  ನಿಜಕ್ಕೂ ಕರಾಳ ಸಮಯ

  ಚೇತರಿಸಿಕೊಳ್ಳುವ ದಿನಗಳು ಹೇಗಿತ್ತು ಎನ್ನುವ ಪ್ರಶ್ನೆಗೆ "ನಾನು ಸಮಯವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದೇನೆ. ಇದು ನಿಜಕ್ಕೂ ಕರಾಳ ಸಮಯ ಮತ್ತು ತುಂಬಾ ಕಷ್ಟಕರವಾಗಿತ್ತು. ಹೆಚ್ಚಿನ ಡೋಸ್ ಔಷಧಿಗಳು ಮತ್ತು ವೈದ್ಯರ ಜೊತೆಗೆ ಓಡಾಟದಿಂದಲೇ ದಿನಗಳು ಮುಗಿಯುತ್ತಿತ್ತು. ನೀವು ಪ್ರತಿದಿನವನ್ನು ಉತ್ತಮವಾಗಿ ಬಳಸಿಕೊಳ್ಳಲು ಸಾಧ್ಯವಾಗದಿದ್ದರೂ ಪರವಾಗಿಲ್ಲ. ಕೆಲವೊಮ್ಮೆ ವಿಫಲವಾದರೂ ಪರವಾಗಿಲ್ಲ. ಎಲ್ಲಾ ಸಮಯದಲ್ಲೂ ನಿಮ್ಮ ಅತ್ಯುತ್ತಮವಾಗದಿದ್ದರೂ ಪರವಾಗಿಲ್ಲ. ನೀವು ದುರ್ಬಲ ಮತ್ತು ಅನಾರೋಗ್ಯಕ್ಕೆ ಒಳಗಾಗಬಹುದು" ಎಂದಿದ್ದಾರೆ.

  'ಖುಷಿ' ಸಿನಿಮಾ ಶೂಟಿಂಗ್ ಮುಂದಕ್ಕೆ

  'ಖುಷಿ' ಸಿನಿಮಾ ಶೂಟಿಂಗ್ ಮುಂದಕ್ಕೆ

  ಸಮಂತಾ ನಟನೆಯ 'ಯಶೋದ' ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. 'ಶಾಕುಂತಲಂ' ಎನ್ನುವ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲೂ ಆಕೆ ನಟಿಸಿದ್ದು, ಅದು ಕೂಡ ಬಿಡುಗಡೆಗೆ ಸಿದ್ಧವಾಗಿದೆ. ವಿಜಯ್ ದೇವರಕೊಂಡ ಜೊತೆ 'ಖುಷಿ' ಎನ್ನುವ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅನಾರೋಗ್ಯದ ಕಾರಣ ಆ ಸಿನಿಮಾ ಶೂಟಿಂಗ್ ಮುಂದೂಡಲಾಗಿದೆ.

  English summary
  I am not dying anytime soon Actress Samantha clarifies her health condition is not life-threatening. She has opened up about her health condition in a Yashoda promotional interview. Know More
  Tuesday, November 8, 2022, 12:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X