For Quick Alerts
  ALLOW NOTIFICATIONS  
  For Daily Alerts

  ನಾನು ಸಿನಿಮಾ ಹೀರೋ ಆಗಲು ಕಾರಣ ಒಬ್ಬ ಆಟೋ ಡ್ರೈವರ್: ನಟ ನವದೀಪ್

  |

  ತೆಲುಗು ಸಿನಿಮಾ ರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡು ಪ್ರಸ್ತುತ ಪೋಷಕ ಪಾತ್ರಗಳತ್ತ ಸರಿದಿರುವ ನಟ ನವದೀಪ್ ಪಲ್ಲಪೋಲು, ತಾವು ನಟನಾಗಲು ಯಾರು ಕಾರಣ ಎಂಬುದನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

  ಹೌದು, ನಟ ನವದೀಪ್, ಹೈದರಾಬಾದ್‌ನಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದವರು. ಅವರಿಗೆ ಸಿನಿಮಾ ನಟನಾಗುವ ಯಾವ ಇರಾದೆಯೂ ಇರಲಿಲ್ಲವಂತೆ, ಅವರಿಗಿದ್ದದು ಕೆಲವೇ ಆಸೆಗಳು, ಅದರಲ್ಲಿ ಒಂದು ಚಿರಂಜೀವಿ, ಪವನ್ ಕಲ್ಯಾಣ್ ಸಿನಿಮಾಗಳು ಬಿಡುಗಡೆ ಆದ ದಿನ ಮೊದಲ ಶೋ ನೋಡಬೇಕು ಎಂಬುದು.

  ಚಿರಂಜೀವಿ, ಪವನ್ ಕಲ್ಯಾಣ್ ಅವರ ಅಪ್ಪಟ ಅಭಿಮಾನಿಯಾಗಿರುವ ನವದೀಪ್, ಅವರ ಸಿನಿಮಾಗಳಿಗೆ ಹೋಗಿ ಕುಣೀದು ಕುಪ್ಪಳಿಸಿ, ಬಟ್ಟೆಗಳನ್ನು ಹರಿದುಕೊಂಡು ಬಂದ ಉದಾಹರಣೆಗಳೂ ಸಹ ಇವೆಯಂತೆ. ಇಂಥಹಾ ಸಾಮಾನ್ಯ ಕುಟುಂಬದ ವ್ಯಕ್ತಿ ನಟನಾಗಲು ಒಬ್ಬ ಆಟೋ ಡ್ರೈವರ್ ಕಾರಣವಂತೆ!

  ಆಟೋ ಡ್ರೈವರ್ ಹೇಳಿದ ಮಾತು ಕೇಳಿದ ನವದೀಪ್

  ಆಟೋ ಡ್ರೈವರ್ ಹೇಳಿದ ಮಾತು ಕೇಳಿದ ನವದೀಪ್

  ಹೌದು, ಒಮ್ಮೆ ನವದೀಪ್ ಸಿನಿಮಾ ನೋಡಿಕೊಂಡು ಮನೆಗೆ ಬರಬೇಕಾದರೆ, ಒಬ್ಬ ಆಟೋ ಡ್ರೈವರ್‌, 'ನೀನು ನಟನಾಗು, ನಿನಗೆ ನಾಯಕನಾಗುವ ಗುಣಗಳು ಇವೆ' ಎಂದರಂತೆ. ಆ ವರೆಗೆ ನಟನಾಗುವ ಬಗ್ಗೆ ಯೋಚನೆಯೇ ಮಾಡದಿದ್ದ ನವದೀಪ್, ಆ ಆಟೋ ಡ್ರೈವರ್ ಮಾತನ್ನು ಗಂಭೀರವಾಗಿ ಪರಿಗಣಿಸಿದರಂತೆ.

  'ಜೈ' ತೆಲುಗು ಸಿನಿಮಾದಲ್ಲಿ ಅವಕಾಶ

  'ಜೈ' ತೆಲುಗು ಸಿನಿಮಾದಲ್ಲಿ ಅವಕಾಶ

  ನಂತರ ಬಾಡಿ ಬಿಲ್ಡಿಂಗ್ ಮಾಡುವುದು, ಲುಕ್ ಬದಲಾಯಿಸುವುದು ಮಾಡಿ, ಫೊಟೊಶೂಟ್ ಮಾಡಿಸಿ, ಅವಕಾಶಕ್ಕಾಗಿ ಹುಡುಕಾಟ ಮಾಡಲು ತೊಡಗಿದರು. ಕೆಲವೇ ತಿಂಗಳಲ್ಲಿ ಜೈ ಎಂಬ ತೆಲುಗು ಸಿನಿಮಾದಲ್ಲಿ ಅವಕಾಶ ಸಿಕ್ಕಿಬಿಟ್ಟತು. ಆ ನಂತರ ಅಲ್ಲಿಂದ ಹಿಂತಿರುಗಿ ನೋಡಲಿಲ್ಲ ನವದೀಪ್.

  ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ಪಾತ್ರ

  ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕ ಪಾತ್ರ

  ಆರಂಭದಲ್ಲಿ ಹಲವು ಹಿಟ್ ಸಿನಿಮಾಗಳನ್ನು ನೀಡಿದ ನವದೀಪ್, ತಮಿಳು ಸಿನಿಮಾಗಳಲ್ಲಿಯೂ ಖ್ಯಾತಿ ಗಳಿಸಿದ್ದರು. ಆದರೆ ನಂತರ ಸಾಲು-ಸಾಲಾಗಿ ಅವರ ಸಿನಿಮಾಗಳು ಸೋಲಲು ಪ್ರಾರಂಭಿಸಿದರು. ಈ ಬಗ್ಗೆಯೂ ಮಾತನಾಡಿದ ನವದೀಪ್, 'ನನ್ನ ಕೆಟ್ಟ ಆಯ್ಕೆಗಳೇ ನನ್ನ ಇಂದಿನ ಸ್ಥಿತಿಗೆ ಕಾರಣ' ಎಂದಿದ್ದಾರೆ.

  ಬಿಗ್‌ಬಾಸ್‌ನಲ್ಲೂ ಭಾಗವಹಿಸಿದ್ದ ನವದೀಪ್

  ಬಿಗ್‌ಬಾಸ್‌ನಲ್ಲೂ ಭಾಗವಹಿಸಿದ್ದ ನವದೀಪ್

  ಸತತ 16 ವರ್ಷಗಳಿಂದಲೂ ಸಿನಿಮಾ ಉದ್ಯಮದಲ್ಲಿರುವ ನವದೀಪ್, ಪ್ರಸ್ತುತ ಸ್ಟಾರ್ ನಟರ ಸಿನಿಮಾಗಳಲ್ಲಿ ಪೋಷಕರ ಪಾತ್ರ, ವಿಲನ್ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಿಗ್‌ಬಾಸ್‌ನಲ್ಲೂ ಭಾಗವಹಿಸಿದ್ದ ನವದೀಪ್, ಹಲವು ಖ್ಯಾತ ಟಿವಿ ಶೋಗಳನ್ನು ಸಹ ನಿರೂಪಿಸಿದ್ದಾರೆ.

  English summary
  Telugu actor Navdeep told in an interview that he became actor because of a auto driver. That driver told Navdeep to try in movies.
  Wednesday, November 4, 2020, 17:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X