ಹತ್ತನೇ ಕ್ಲಾಸಿನಲ್ಲಿ ಡುಮ್ಕಿ ಹೊಡೆದಿದ್ದ ವಿದ್ಯಾರ್ಥಿ ಇಂದು ತೆಲುಗಿನ ಪ್ರಖ್ಯಾತ ನಟ.!

ವಿದ್ಯಾರ್ಥಿಗಳ ಭವಿಷ್ಯದ ದಿಕ್ಸೂಚಿ ಹತ್ತನೇ ಕ್ಲಾಸ್ ಪರೀಕ್ಷೆ. ಹೀಗಾಗಿ, ಹತ್ತನೇ ಕ್ಲಾಸಿನಲ್ಲಿ ಪಾಸ್ ಆಗಲೇಬೇಕು, ಹೆಚ್ಚು ಪರ್ಸೆಂಟೇಜ್ ತೆಗೆಯಲೇಬೇಕು ಎಂಬ ಒತ್ತಾಯ, ಒತ್ತಡ ಎಲ್ಲಾ ಮಕ್ಕಳ ಮೇಲೂ ಇದ್ದದ್ದೇ.! ಹಾಗಂದ ಮಾತ್ರಕ್ಕೆ ಹತ್ತನೇ ಕ್ಲಾಸ್ ನಲ್ಲಿ ಫೇಲ್ ಆಗ್ಬಿಟ್ಟರೆ, ಜೀವನವೇ ಮುಗಿದು ಹೋದ ಹಾಗೆ ಅಲ್ಲ.! ಹತ್ತನೇ ಕ್ಲಾಸಿನಲ್ಲಿ ಫೇಲ್ ಆದರೂ, ಜೀವನದಲ್ಲಿ ಪಾಸ್ ಆಗುವುದು ಬಹಳ ಮುಖ್ಯ.

ಅಂದ್ಹಾಗೆ, ಈ ಹತ್ತನೇ ಕ್ಲಾಸ್ ಫಲಿತಾಂಶದ ಬಗ್ಗೆ ನಾವು ಇಷ್ಟೆಲ್ಲಾ ಪೀಠಿಕೆ ಹಾಕುವುದಕ್ಕೂ ಒಂದು ಕಾರಣ ಇದೆ.

ಹತ್ತನೇ ಕ್ಲಾಸ್ ನಲ್ಲಿ ಡುಮ್ಕಿ ಹೊಡೆದ ವಿದ್ಯಾರ್ಥಿಯೊಬ್ಬ ಇಂದು ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿದ್ದಾರೆ. ಅಂದು ಫೇಲ್ ಆಗಿ ಬೇಸರ ಮಾಡಿಕೊಂಡಿದ್ದ ಹುಡುಗ ಇಂದು ಸಿನಿಮಾವೊಂದರಲ್ಲಿ ನಟಿಸಲು ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಯಾರು ಆತ ಗೊತ್ತಾ.?

ಇವರೇ... ಅವರು.!

ಇವರೇ... ಅವರು.!

ಹತ್ತನೇ ಕ್ಲಾಸ್ ನಲ್ಲಿ ಫೇಲ್ ಆದರೂ, ಅಭಿನಯದಿಂದ ತೆಲುಗು ಚಿತ್ರರಂಗದಲ್ಲಿ ಪಾಸ್ ಆಗಿರುವ ನಟ ರಾನಾ ದಗ್ಗುಬಾಟಿ. ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಬೆಳೆದ ರಾನಾ ದಗ್ಗುಬಾಟಿಗೆ ವಿದ್ಯೆ ತಲೆಗೆ ಹತ್ತುತ್ತಿರಲಿಲ್ಲ. ಹೀಗಾಗಿ, 10th ಪರೀಕ್ಷೆಯಲ್ಲಿ ಫೇಲ್ ಆಗಿದ್ದರಂತೆ. ಹಾಗಂತ ಖುದ್ದು ರಾನಾ ದಗ್ಗುಬಾಟಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ರಾನಾ ದಗ್ಗುಬಾಟಿ ಮಾತು

ರಾನಾ ದಗ್ಗುಬಾಟಿ ಮಾತು

''ಕ್ಲಾಸ್ 10 ನಲ್ಲಿ ನಾನು ಫೇಲ್ ಆಗಿದ್ದೆ. ಸಹಜವಾಗಿ ಆ ಸಮಯದಲ್ಲಿ ನಾನು ಕುಗ್ಗಿ ಹೋಗಿದ್ದೆ. ಫೇಲ್ಯೂರ್ ಮತ್ತು ಕನ್ ಫ್ಯೂಶನ್ ಜಾಸ್ತಿ ಇದ್ದಿದ್ರಿಂದ, ನನ್ನನ್ನ ನಾನು ಅರ್ಥ ಮಾಡಿಕೊಳ್ಳೋಕೆ ಶುರು ಮಾಡಿದೆ. ಜೀವನದಲ್ಲಿ ನಾನು ಏನು ಮಾಡಬೇಕು ಎಂಬುದನ್ನ ಅರಿತೆ. ಸಿನಿಮಾ ಮಾಡಲು ನನಗೆ ಇಷ್ಟ ಇತ್ತು. ಆಗ ನನಗೆ ಯಾವುದೇ ಗ್ಯಾರೆಂಟಿ ಇರಲಿಲ್ಲ. ಆದ್ರೀಗ, ಹಿಂದೆ ತಿರುಗಿ ನೋಡಿದ್ರೆ, ನಾನು ಸರಿಯಾಗಿರುವುದನ್ನೇ ಆಯ್ಕೆ ಮಾಡಿಕೊಂಡಿದ್ದೇನೆ ಅನಿಸುತ್ತದೆ'' ಎಂದು ಸಂದರ್ಶನದಲ್ಲಿ ರಾನಾ ದಗ್ಗುಬಾಟಿ ಹೇಳಿದ್ದಾರೆ.

ತಂತ್ರಜ್ಞಾನದಲ್ಲಿ ಆಸಕ್ತಿ

ತಂತ್ರಜ್ಞಾನದಲ್ಲಿ ಆಸಕ್ತಿ

''ನಾನು ಓದಿನಲ್ಲಿ ಅಷ್ಟಕಷ್ಟೆ. ಆದರೂ, ಕಂಪ್ಯೂಟರ್ ಮತ್ತು ತಂತ್ರಜ್ಞಾನದಲ್ಲಿ ಬಹಳ ಆಸಕ್ತಿ ಇತ್ತು. ವಿ.ಎಫ್.ಎಕ್ಸ್ ಕಂಪನಿಯೊಂದರ ಮೂಲಕ ನಾನು ವೃತ್ತಿ ಜೀವನ ಆರಂಭಿಸಿದೆ. ಭಾರತದ ಚಿತ್ರಗಳಿಗೆ ವಿ.ಎಫ್.ಎಕ್ಸ್ ನ ಅಳವಡಿಸುವುದು ನನಗೆ ಕನಸಾಗಿತ್ತು'' ಎಂದಿದ್ದಾರೆ ರಾನಾ ದಗ್ಗುಬಾಟಿ

ಗುರಿಯನ್ನ ಮರೆತಿಲ್ಲ

ಗುರಿಯನ್ನ ಮರೆತಿಲ್ಲ

''ಭಾವನೆಗಳಲ್ಲಾಗಲಿ, ಆರೋಗ್ಯದಲ್ಲಾಗಲಿ ಜೀವನದಲ್ಲಿ ನಾನು ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ಆದ್ರೆ, ಗುರಿಯನ್ನ ಯಾವತ್ತೂ ಮರೆತಿಲ್ಲ'' ಅಂತ ರಾನಾ ದಗ್ಗುಬಾಟಿ ಹೇಳಿದ್ದಾರೆ.

More from Filmibeat

English summary
I had failed in Class 10 reveals Telugu Actor Rana Daggubati.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X