ಕೊನೆಗೂ ತನ್ನ ತಪ್ಪು ಒಪ್ಪಿಕೊಂಡರು ತೆಲುಗು ನಟಿ ಸಮಂತಾ
ಟಾಲಿವುಡ್ ಬ್ಯೂಟಿ ಸಮಂತಾ ಮತ್ತೆ ಬಣ್ಣದಲೋಕದಲ್ಲಿ ಬ್ಯುಸಿಯಾಗುತ್ತಿದ್ದಾರೆ. ಹೊಸ ಹೊಸ ಪ್ರಾಜೆಕ್ಟ್ ಕಡೆ ಮುಖ ಮಾಡಿದ್ದಾರೆ. ಮತ್ತೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಪಾಡ್‌ಕಾಸ್ಟ್ ಮೂಲಕ ಸಾಕಷ್ಟು ವೈದ್ಯಕೀಯ ಮಾಹಿತಿಗಳನ್ನು ಆರೋಗ್ಯ ಸಂಬಂಧಿಸಿದಂತೆ ಉಪಯುಕ್ತ ಮಾಹಿತಿಗಳನ್ನು ಕೊಡುತ್ತಾ ಬರ್ತಿದ್ದಾರೆ.
'ಖುಷಿ' ಬಳಿಕ ಸಮಂತಾ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬರಲಿಲ್ಲ. 'ಸಿಟಾಡೆಲ್' ಇಂಡಿಯನ್ ವರ್ಷನ್ ವೆಬ್ ಸೀರಿಸ್‌ನಲ್ಲಿ ಮಾತ್ರ ನಟಿಸಿದ್ದಾರೆ. ಅಮೇಜಾನ್ ಪ್ರೈಂ ವೀಡಿಯೊದಲ್ಲಿ ಅದು ಸ್ಟ್ರೀಮಿಂಗ್‌ಗೆ ಸಜ್ಜಾಗುತ್ತಿದೆ. ಮಯೋಸೈಟಿಸ್ ಸಮಸ್ಯೆಯಿಂದ ಸ್ಯಾಮ್ ಬಳಲುತ್ತಿದ್ದಾರೆ. ಅದರ ವಿರುದ್ಧ ಹೋರಾಡುತ್ತಲೇ ತಮ್ಮ ಕರಿಯರ್ ಬಗ್ಗೆ ಗಮನ ಹರಿಸಿದ್ದಾರೆ. ಒಂದಷ್ಟು ಜಾಹೀರಾತುಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ನಟಿ ಸಮಂತಾ ಹಿಂದೆ ನಾನು ತಪ್ಪು ಮಾಡಿದ್ದು ನಿಜ. ಈಗ ಆ ತಪ್ಪು ಮಾಡಲ್ಲ. ಮುಂದೆ ಕೂಡ ಅದು ಪುನರಾವರ್ತನೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ. ಇತ್ತೀಚೆಗೆ ಸಮಂತಾ ಟೇಕ್20 ಹೆಲ್ತ್ ಪಾಡ್‌ಕಾಸ್ಟ್ ನಡೆಸಿದ್ದಾರೆ. ಆ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಯಾವೆಲ್ಲಾ ಆಹಾರ ಪದಾರ್ಥಗಳನ್ನು ಸೇವರಿಸಬಾರದು. ಅದರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ ಎನ್ನುವ ವಿಚಾರದಲ್ಲಿ ಇದರಲ್ಲಿ ಚರ್ಚಿಸಲಾಗಿದೆ. ಈ ಪೋಸ್ಟ್‌ಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಒಂದು ಕಾಮೆಂಟ್‌ಗೆ ಸ್ಯಾಮ್ ಪ್ರತಿಕ್ರಿಯಿಸಿದ್ದಾರೆ.
"ಈಕೆ ತುಂಬಾ ಡ್ರಾಮಾ ಮಾಡುತ್ತಾಳೆ. ಸಾಕಷ್ಟು ಐಸ್‌ಕ್ರೀಂ, ಕೂಲ್ ಡ್ರಿಂಕ್ಸ್ ಜಾಹೀರಾತಿನಲ್ಲಿ ಈಕೆ ನಟಿಸಿದ್ದಾಳೆ. ಮತ್ತೆ ಈಗ ಅದೆಲ್ಲಾ ಸೇವಿಸಬಾರದು ಎಂದು ಉಪದೇಶ ಮಾಡುತ್ತಾನೆ" ಎನ್ನುವ ಅರ್ಥದಲ್ಲಿ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ರಿಪ್ಲೇ ಮಾಡಿರುವ ಸ್ಯಾಮ್, "ನಾನು ಹಿಂದೆ ತಪ್ಪುಗಳನ್ನು ಮಾಡಿದ್ದೇನೆ, ನನಗೆ ಆಗ ಆ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ಆದರೆ ನಾನು ಆ ಬಳಿಕ ಅನೇಕ ಜಾಹೀರಾತುಗಳನ್ನು ಒಪ್ಪಿಕೊಳ್ಳಲಿಲ್ಲ. ನಾನು ಬೋಧಿಸುವುದನ್ನೇ ಅಭ್ಯಾಸ ಮಾಡಿಕೊಳ್ಳುವುದನ್ನು ನಾನು ನಂಬುತ್ತೇನೆ. ಗಾಡ್ ಬ್ಲೆಸ್" ಎಂದು ಸಮಂತಾ ಪೋಸ್ಟ್ ಮಾಡಿದ್ದಾರೆ.

ಸಮಂತಾ ಮಾಡಿರುವ ಕಾಮೆಂಟ್ ವೈರಲ್ ಆಗುತ್ತಿದೆ. ಅಭಿಮಾನಿಗಳು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಕೊನೆಗೂ ಆರೋಗ್ಯ ವಿಚಾರದಲ್ಲಿ ಸಮಂತಾ ಪಶ್ಚಾತಾಪ ಪಡುತ್ತಿದ್ದಾರೆ ಎಂದು ಕೆಲವರು ಅಂದುಕೊಳ್ಳುತ್ತಿದ್ದಾರೆ. ಚೆನ್ನೈನಲ್ಲಿ ಹುಟ್ಟಿ ಬೆಳೆದ ಸಮಂತಾ ಬಳಿಕ ತೆಲುಗು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿ ಆಗಿದ್ದರು. ತೆಲುಗು ನಟ ನಾಗಚೈತನ್ಯ ಕೈ ಹಿಡಿದು ಹೈದರಾಬಾದ್‌ನಲ್ಲೇ ಸೆಟ್ಲ್ ಆಗಿದ್ದರು.
3 ವರ್ಷಗಳ ಹಿಂದೆ ಚೈಸ್ಯಾಮ್ ಡಿವೋರ್ಸ್ ಪಡೆದು ದೂರಾಗುವ ನಿರ್ಧಾರಕ್ಕೆ ಬಂದಿದ್ದರು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಸಮಂತಾ ಹೇಳಿಕೊಂಡಿದ್ದರು. ನೋವಿನ ನಡುವೆಯೇ 'ಯಶೋಧ' ಹಾಗೂ 'ಶಾಕುಂತಲ' ಸಿನಿಮಾ ಪ್ರಚಾರ ಮಾಡಿದ್ದರು. ಎರಡೂ ಸಿನಿಮಾಗಳೂ ಸೋಲುಂಡವು.
ಬಳಿಕ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳಲಿಲ್ಲ. ಕೊಂಚ ಚೇತರಿಸಿಕೊಂಡ ಬಳಿ ಅರ್ಧಕ್ಕೆ ಬಿಟ್ಟಿದ್ದ 'ಖುಷಿ' ಸಿನಿಮಾ ಮುಗಿಸಿದ್ದರು. ಸದ್ಯ ವೈದ್ಯಕೀಯ ಚಿಕಿತ್ಸೆ ಜೊತೆಗೆ ಮಯೋಸೈಟಿಸ್ ವಿರುದ್ಧ ಹೋರಾಡಲು ಜಿಮ್‌ನಲ್ಲಿ ಹೆಚ್ಚಿನ ಕಸರತ್ತು ನಡೆಸುತ್ತಿದ್ದಾರೆ. ಮತ್ತೆ ಸಿನಿಮಾಗಳಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ. 'ರಕ್ತಬೀಜ್' ಎನ್ನುವ ಆಕ್ಷನ್ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಭಿಮಾನಿಗಳು ಕೂಡ ತೆರೆಮೇಲೆ ಸ್ಯಾಮ್ ನೋಡಲು ಕಾಯುತ್ತಿದ್ದಾರೆ.


Click it and Unblock the Notifications











