ಮದುವೆ ನಂತರ ರೊಮ್ಯಾಂಟಿಕ್ ಸಿನಿಮಾ ಮಾಡೋಕೆ ನಾನು ಸಮಂತಾ ಅಲ್ಲ: ನಟಿ ನಿಹಾರಿಕಾ
ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ತಮ್ಮ ನಾಗೇಂದ್ರ ಬಾಬು ಮಗಳು ನಿಹಾರಿಕಾ ಕೊನಿಡೆಲಾ, ನಟಿ ಸಮಂತಾ ಬಗ್ಗೆ ಹೇಳಿರುವ ಮಾತು ಅಚ್ಚರಿ ಮೂಡಿಸಿದೆ. ಮದುವೆ ನಂತರ ಸಿನಿಮಾದಲ್ಲಿ ಅಭಿನಯಿಸುವ ಬಗ್ಗೆ ಮಾತನಾಡುತ್ತ ನಿಹಾರಿಕಾ, ಸಮಂತಾ ಹೆಸರೇಳಿ ಸಮಂತಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಿಹಾರಿಕಾ ಕೊನೆಯದಾಗಿ ಮೆಗಾ ಸ್ಟಾರ್ ಅಭಿನಯದ ಸೈರಾ ನರಸಿಂಹರೆಡ್ಡಿ ಸಿನಿಮಾದಲ್ಲಿ ಕಣಿಸಿಕೊಂಡಿದ್ದಾರೆ.
Recommended Video
ಮೆಗಾ ಸ್ಟಾರ್ ಕುಟುಂಬದಿಂದ ಬಂದವರಾದರು ನಿಹಾರಿಕಾಗೆ ಚಿತ್ರರಗಂದಲ್ಲಿ ಹೇಳುವಷ್ಟು ಯಶಸ್ಸು ಸಿಗಲಿಲ್ಲ. ಅವಕಾಶಗಳಿಲ್ಲದೆ ಖಾಲಿ ಕೂಳಿತಿರುವ ನಿಹಾರಿಕಾ ಮದುವೆ ನಂತರ ಸಿನಿಮಾಗಳಲ್ಲಿ ಅಭಿನಯಿಸುವ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ನಿಹಾರಿಕಾ ಮುಂದಿನ ಸಿನಿಮಾದ ಬಗ್ಗೆ ಮಾತನಾಡುತ್ತ, ಸಮಂತಾ ಹೆಸರನ್ನು ಉಲ್ಲೇಖಿಸಿದ್ದಾರೆ. ಮುಂದೆ ಓದಿ...

ಮದುವೆ ನಂತರ ಸಿನಿಮಾ ಮಾಡೋಕೆ ಸಮಂತಾ ಅಲ್ಲ
ನಟಿ ನಿಹಾರಿಕಾ ಮದುವೆ ನಂತರ ಸಿನಿಮಾ ಮಾಡುತ್ತಾರಾ ಎನ್ನುವ ಪ್ರಶ್ನೆಗೆ "ಮದುವೆ ನಂತರವೂ ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡಲು ನಾನೇನು, ಸಮಂತಾ ಅಲ್ಲ. ಸಿನಿಮಾ ಮಾಡುತ್ತೇನು ಇಲ್ಲವೋ ಎಂದು ನನಗೆ ಖಚಿತವಿಲ್ಲ. ಅಲ್ಲದೆ ನನಗೀಗ ಹೆಚ್ಚು ಸಮಯವಿಲ್ಲ. ಈಗ ಸಾಧ್ಯವಾದಷ್ಟು ಸಿನಿಮಾಗಳನ್ನು ಮಾಡಬೇಕು." ಎಂದು ಹೇಳಿದ್ದಾರೆ.

ಸಮಂತಾ ಹೆಸರು ಹೇಳಿದ್ದೇಕೆ?
ನಿಹಾರಿಕಾ ಮಾತನಾಡುವಾಗ ಸಮಂತಾ ಹೆಸರನ್ನು ಹೇಳಿದ್ದೇಕೆ ಎನ್ನುವ ಚರ್ಚೆ ನಡೆಯುತ್ತಿದೆ. ಅಂದರೆ ನಿಹಾರಿಕಾ ಮದುವೆ ನಂತರ ಸಿನಿಮಾ ಮಾಡಬಾರದು ಎನ್ನುವ ಅರ್ಥದಲ್ಲಿ ಹೇಳಿದ್ದಾರಾ? ಏನು ಎನ್ನುವ ಬಗ್ಗೆ ಅಭಿಮಾನಿಗಳು ಗೊಂದಲದಲ್ಲಿದ್ದಾರೆ. ಆದರೆ ನಿಹಾರಿಕಾ ಮಾತು ಸಮಂತಾ ಅಭಿಮಾನಿಗಳಿಗೆ ಬೇಸರ ತರಿಸಿದೆ.

ರೊಮ್ಯಾಂಟಿಕ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದೀನಿ
ನಿಹಾರಿಕಾ ಸದ್ಯ ತಮಿಳು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರಂತೆ. ಆದರೆ ಯಾವ ಸಿನಿಮಾ ಎನ್ನುವ ಬಗ್ಗೆ ಮಾಹಿತಿ ರಿವೀಲ್ ಮಾಡಿಲ್ಲ. ಸಖತ್ ಗ್ಲಾಮರ್ ಪಾತ್ರಕ್ಕೆ ಬಣ್ಣಹಚ್ಚುತ್ತಿದ್ದಾರಂತೆ. ರೊಮ್ಯಾಂಟಿಕ್ ಸಿನಿಮಾ ಇದಾಗಿದ್ದು ಗೊವಾದ ಕಡಲತೀರದಲ್ಲಿ ಸಾಕಷ್ಟು ರೊಮ್ಯಾಂಟಿಕ್ ದೃಶ್ಯಗಳನ್ನು ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆಯಂತೆ.

ಆಚಾರ್ಯ ಸಿನಿಮಾದಲ್ಲಿ ನಿಹಾರಿಕಾ
ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ಆಚಾರ್ಯ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಿಹಾರಿಕಾ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಖುದ್ದು ಮೆಗಾ ಸ್ಟಾರ್ ಅವರೆ, ತಮ್ಮನ ಮಗಳಿಗೆ ಸಿನಿಮಾ ಆಫರ್ ಮಾಡಿದ್ದಾರಂತೆ. ಆದರೆ ಈ ಬಗ್ಗೆ ಸಹ ನಿಹಾರಿಕಾ ಎಲ್ಲಿಯೂ ಹೇಳಿಕೊಂಡಿಲ್ಲ.


Click it and Unblock the Notifications











