ನಟಿಯರ ಸೊಂಟ ಗಿಲ್ಲುವುದು, ಹೊಡೆಯೋದು ಮಾಡಲ್ಲ ಅಂದೆ, ಇಲ್ಲದೇ ಇದ್ದಿದ್ರೆ..; ಸಿದ್ದಾರ್ಥ್

ತಮಿಳು ನಟ ಸಿದ್ದಾರ್ಥ್ ಕೆಲವೊಮ್ಮೆ ತಮ್ಮ ಹೇಳಿಕೆಗಳಿಂದ ಬಹಳ ಸುದ್ದಿ ಆಗುತ್ತಾರೆ. ಕೆಲ ದಿನಗಳ ಹಿಂದೆ 'ಪುಷ್ಪ'-2 ಈವೆಂಟ್‌ಗೆ ಸೇರಿದ್ದ ಜನರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು. ಹೈದರಾಬಾದ್‌ನಲ್ಲಿ ನಡೆದ ಲಿಟ್ರರಿ ಫೆಸ್ಟಿವಲ್‌ನಲ್ಲಿ ಸಿದ್ಧಾರ್ಥ್ ಭಾಗಿ ಆಗಿದ್ದರು. ಈ ವೇಳೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಆದರೂ ಟ್ರೋಲ್ ಆಗುತ್ತಿದ್ದಾರೆ.

ಇನ್ನು ಈ ಫೆಸ್ಟಿವಲ್‌ನಲ್ಲಿ ಸಿದ್ದಾರ್ಥ್ ನಿರ್ಮಿಸಿ ನಟಿಸಿದ 'ಚಿತ್ತಾ' ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಮಕ್ಕಳ ಭದ್ರತೆ ಬಗ್ಗೆ ಈ ಚಿತ್ರದಲ್ಲಿ ಚರ್ಚಿಸಲಾಗಿದೆ. ನನ್ನ ಮಡದಿ, ತಾಯಿ, ಅತ್ತೆಗಾಗಿ ಈ ಸಿನಿಮಾ ನಿರ್ಮಿಸಿದೆ ಎಂದು ನಟ ಸಿದ್ದಾರ್ಥ್ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಅವರ ಅತ್ತೆ ವಿದ್ಯಾರಾವ್ ಸಹ ಭಾಗಿ ಆಗಿದ್ದರು. ಅತ್ತೆ, ಅಳಿಯ ವೇದಿಕೆಯಲ್ಲಿ ಮಾತನಾಡಿದ್ದು ವಿಶೇಷ.

I might be a far bigger star today had accepted those films says Actor siddharth

ಈ ವೇಳೆ ನಟ ಸಿದ್ದಾರ್ಥ್ ಮಾತನಾಡುತ್ತಾ ನಾನು ಕೆಲ ಚಿತ್ರಗಳಲ್ಲಿ ನಟಿಸೋಕೆ ಒಪ್ಪಿದ್ದರೆ ಈಗ ಇನ್ನಷ್ಟು ದೊಡ್ಡ ಸ್ಥಾನದಲ್ಲಿ ಇರುತ್ತಿದ್ದೆ ಎಂದು ಹೇಳಿದ್ದಾರೆ. "ಹುಡುಗಿಯ ಸೊಂಟ ಗಿಲ್ಲುವುದು, ಅವರನ್ನು ಹೊಡೆಯುವುದು, ಐಟಂ ಸಾಂಗ್ಸ್ ಮಾಡೋದು, ಮಹಿಳೆಯರು ಹೇಗೆ ಇರಬೇಕು, ಎಲ್ಲಿಗೆ ಹೋಗಬೇಕು, ಬೇಡ ಎಂದು ಹೇಳುವಂತಹ ಸ್ಕ್ರಿಪ್ಟ್ ನನಗೆ ಬರುತ್ತಿತ್ತು. ಆದರೆ ನಾನು ಅದನ್ನೆಲ್ಲಾ ತಿರಸ್ಕರಿಸಿದೆ. ಒಂದು ವೇಳೆ ಒಪ್ಪಿದ್ದರೆ ಇನ್ನು ದೊಡ್ಡ ಸ್ಟಾರ್ ಆಗಿರುತ್ತಿದ್ದೆ, ಆದರೆ ನನಗೆ ಇಷ್ಟ ಬಂದಿದ್ದು ಮಾತ್ರ ನಾನು ಮಾಡಿದೆ" ಎಂದು ಸಿದ್ದಾರ್ಥ್ ಹೇಳಿದ್ದಾರೆ.

"ನಾನು ಮಹಿಳೆಯರಿಗೆ ಗೌರವ ಕೊಡುತ್ತೇನೆ ಎಂದು ಕೆಲವರು ಹೇಳುತ್ತಾರೆ. ಕೆಲ ಮಕ್ಕಳಿಗೆ ನಾನು ಇಷ್ಟ ಆಗುತ್ತೇನೆ ಎಂದು ಅವರ ಪೋಷಕರು ಹೇಳುತ್ತಿರುತ್ತಾರೆ. ಆ ರೀತಿ ನಾನು ಇಷ್ಟವಾಗುತ್ತಿದ್ದರೆ ಆ ಮಕ್ಕಳು 15 ವರ್ಷಗಳಿಂದ ನನ್ನ ಸಿನಿಮಾಗಳನ್ನು ನೋಡುತ್ತಿರಬಹುದು. ಇದು ನಿಜಕ್ಕೂ ಗ್ರೇಟ್ ಫೀಲಿಂಗ್. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನನ್ನ ಸುತ್ತಾ ಇರುವವರು ಬಹಳ ಅಗ್ರೆಸ್ಸಿವ್ ಆಗಿರಲು, ಮ್ಯಾಚೋ ಆಗಿರಲು ಪ್ರಯತ್ನಿಸುತ್ತಿದ್ದಾರೆ. ನೋವನ್ನು ಅನುಭವಿಸಲು ಆಲೋಚಿಸುತ್ತಿದ್ದಾರೆ. ಆದರೆ ನಾನು ತೆರೆಮೇಲೆ ಅಳುತ್ತಿದ್ದೇನೆ ಅದು ಸಂತೋಷ ತರುವಂತದ್ದು" ಎಂದು ಸಿದ್ದಾರ್ಥ್ ತಿಳಿಸಿದ್ದಾರೆ.

ನಟ ಸಿದ್ದಾರ್ಥ್ ಹೇಳಿಕೆಯನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಈ ಹಿಂದೆ ಕೆಲ ಸಿನಿಮಾಗಳಲ್ಲಿ ಅವರು ಬೋಲ್ಡ್ ಆಗಿ ನಟಿಸಿದ್ದು, ನಟಿಯರ ಸೊಂಟ ಗಿಲ್ಲುವಂತಹ ಸನ್ನಿವೇಶಗಳ ವೀಡಿಯೋ ತುಣುಕು ವೈರಲ್ ಮಾಡುತ್ತಿದ್ದಾರೆ. ಆಗ ಮಾಡಿದ್ದು ಏನು? ಈಗ ಹೇಳುತ್ತಿರುವುದು ಏನು? ಎಂದು ಕೇಳುತ್ತಿದ್ದಾರೆ.

'ಚಿತ್ತಾ' ಬಳಿಕ 'ಇಂಡಿಯನ್- 2', 'ಮಿಸ್ ಯು' ಸಿನಿಮಾಗಳಲ್ಲಿ ಮಿಂಚಿದರು. 'ಟೆಸ್ಟ್' ಹಾಗೂ 'ಇಂಡಿಯನ್- 3' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹೆಸರಿಡದ ಮತ್ತೊಂದು ಸಿನಿಮಾದಲ್ಲಿ ಕೂಡ ಸಿದ್ದಾರ್ಥ್ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ಸಿದ್ಧಾರ್ಥ್ ನಟಿ ಅದಿತಿ ರಾವ್ ಹೈದರಿ ಜೊತೆ ಎರಡನೇ ಮದುವೆ ಆಗಿದ್ದರು.

ನಿರ್ದೇಶಕ 'ಮಣಿರತ್ನಂ' ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮಾಡಿದ್ದ ಸಿದ್ಧಾರ್ಥ್ 'ಬಾಯ್ಸ್' ಚಿತ್ರದ ಹೀರೊ ಆಗಿದ್ದರು. ಶಂಕರ್ ನಿರ್ದೇಶನದ ಈ ಸಿನಿಮಾ ಹಿಟ್ ಆಗಿತ್ತು. ಮುಂದೆ ಬಾಲಿವುಡ್ ಸಿನಿಮಾಗಳಲ್ಲಿ ಕೂಡ ಸಿದ್ದಾರ್ಥ್ ನಟಿಸುವಂತಾಯಿತು. ತೆಲುಗು ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿ ಸಕ್ಸಸ್ ಕಂಡರು. ಇತ್ತೀಚೆಗೆ ಅವರ ಕ್ರೇಜ್ ಕಮ್ಮಿ ಆಗಿದೆ.

More from Filmibeat

English summary
Actor Siddharth indirectly criticizes macho heroes
Read more about: siddharth tollywood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X