ಡೈರೆಕ್ಟರ್‍‌ಗೆ ಮೆಸೇಜ್ ಮಾಡಿದಷ್ಟು ಹೆಚ್ಚೆಚ್ಚು ಅವಕಾಶ,ನಿರ್ಮಾಪಕರು ಮಲಗೋಕೆ ಕರೆದಿದ್ದರು-ನೋವು ಹಂಚಿಕೊಂಡ ಯುವನಟಿ

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಹೆಸರು, ಕೀರ್ತಿಯ ಬೆನ್ನತ್ತಿ ಬರುವ ಹಲವಾರು ಚೆಲುವೆಯರು, ಇಲ್ಲಿನ.. ಕಾಮಾಂಧರ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಮುಗ್ದತೆಯನ್ನೇ ಬಳಸಿಕೊಂಡು ಹಲವರು ಇಲ್ಲಿ ಹಲವರನ್ನು ಮಂಚಕ್ಕೇರುವಂತೆ ಆಮಂತ್ರಣ ಪತ್ರಿಕೆಯನ್ನು ನೀಡುತ್ತಾರೆ. ಕೆಲವರು ಈ ಖೆಡ್ಡಾಗೆ ಗೊತ್ತಿದ್ದು ಗೊತ್ತಿಲ್ಲದೆಯೋ ಬೀಳುತ್ತಾರೆ.

ಇನ್ನೂ ಕೆಲವರು ''ಹಾಸಿಗೆ ಹಂಚಿಕೊಂಡರಷ್ಟೇ ಇಲ್ಲಿ ಅವಕಾಶ'' ಎಂಬ ಕಹಿ ಸತ್ಯವನ್ನು ಅರಿತು ''ರಾಜಿ'' ಮಾಡಿಕೊಳ್ಳುತ್ತಾರೆ. ಮತ್ತೂ ಕೆಲವರು ಅವಕಾಶ ಸಿಗದಿದ್ದರೂ ಚಿಂತೆ ಇಲ್ಲ ಎಂದು ಇಂತಹ ಕುಕೃತ್ಯವನ್ನು ಎಡಗಾಲಿನಲ್ಲಿ ಎಡಗಾಲಿನಲ್ಲಿ ಒದ್ದು ಬರುತ್ತಾರೆ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ.ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ. ಒಂದರ್ಥದಲ್ಲಿ ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಉದಾಹರಣೆಗೆ ಸಾಹಿತಿ ದಾಸರಿ

I Said No Sahithi Dasari Exposes Middleman Tactics of Tollywood s Casting Couch

ಹೌದು, ಸಾಹಿತಿ ದಾಸರಿ.. ''ತಲ್ಲೆಮಾಲ'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ''ಪೊಲಿಮೇರ''.. ''ಪೊಲಿಮೇರ 2''.. ''ಎ ತುಕ್ಕಾಡ್''.. ಸೇರಿ ಕೆಲ ವೆಬ್ ಸರಣಿಯಲ್ಲಿ ಕೂಡ ಕಾಣಿಸಿಕೊಂಡಿರುವ ಸಾಹಿತಿ ಸದ್ಯ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ.

''ತೆಲುಗು 360'' ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸಾಹಿತಿ ದಾಸರಿ ಪಾತ್ರಕ್ಕಾಗಿ ಪಲ್ಲಂಗವನ್ನೇರದ ಹಿನ್ನೆಲೆ ಹಲವು ಅವಕಾಶ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ . ಇಲ್ಲಿಯವರೆಗಿನ ನನ್ನ ಸಿನಿಮಾ ಪಯಣದಲ್ಲಿ ಹಲವರು ರಾಜಿಯಾಗುವಂತೆ ನನಗೆ ಹೇಳಿದ್ದಾರೆ ಎಂದು ಹೇಳಿರುವ ಸಾಹಿತಿ ಈಗೀಗ ಚಿತ್ರರಂಗದಲ್ಲಿ ಮಧ್ಯವರ್ತಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಕೋಆರ್ಡಿನೇಟರ್‌ಗಳು, ಮ್ಯಾನೇಜರ್‌ಗಳು, ಕೆಲವೊಮ್ಮೆ ಸಹಾಯಕ ನಿರ್ದೇಶಕರು ಇಲ್ಲಿ ಮಧ್ಯವರ್ತಿಗಳಾಗಿರುತ್ತಾರೆ, ಸಹಕಾರ ಸಹಯೋಗ ಕೇಳುತ್ತಾರೆ ಎಂದು ಹೇಳಿರುವ ಸಾಹಿತಿ ಇದರಿಂದ ಕೆಲ ಒಮ್ಮೆ ಅವರು ತಮ್ಮ ಜೊತೆ ಮಲಗಲು ಕರೆಯುತ್ತಿದ್ದಾರಾ ಅಥವಾ ಮಧ್ಯವರ್ತಿಯಾಗಿ ಬಂದಿದ್ದಾರಾ ಎನ್ನುವುದೇ ಗೊತ್ತಾಗುವುದಿಲ್ಲ ಎಂದಿದ್ದಾರೆ.

"ಅಡ್ಜಸ್ಟ್‌ಮೆಂಟ್" ಎಂಬ ಕೋರ್ಡ್ ವರ್ಡ್ ಮೂಲಕ ನಟಿಯರ ಮನಸ್ಥಿತಿಯನ್ನು ಈ ಮಧ್ಯವರ್ತಿಗಳು ಅಳೆಯುತ್ತಾರೆ, ಗೇಟ್‌ಕೀಪರ್‌ಗಳಂತೆ ವರ್ತಿಸುತ್ತಾರೆ, ಎಂದು ಹೇಳಿರುವ ಸಾಹಿತಿ ದೊಡ್ಡ ನಿರ್ದೇಶಕರು, ನಿರ್ಮಾಪಕರು ನಟಿಯರನ್ನು ನೇರವಾಗಿ ಭೇಟಿಯಾಗಲ್ಲ, ಬದಲಿಗೆ ಈ ಮಧ್ಯವರ್ತಿಗಳನ್ನು ಕಳುಹಿಸುತ್ತಾರೆ, ಆ ನಂತರ ಇದೇ ಮಧ್ಯವರ್ತಿಗಳ ಸಹಾಯದಿಂದ ಚಿತ್ರರಂಗದಲ್ಲಿನ ದೊಡ್ಡವರು ಯಾವುದೇ ಕುರುಹು ಕೂಡ ಬಿಡದೇ ತಮ್ಮ ಕೆಲಸ ಮುಗಿಸಿಕೊಂಡು ಪಾರಾಗುತ್ತಾರೆ ಎಂದು ಹೇಳಿದ್ದಾರೆ.

I Said No Sahithi Dasari Exposes Middleman Tactics of Tollywood s Casting Couch

ನಿರ್ದೇಶಕರ ಜೊತೆ ತುಂಬಾನೇ ಆತ್ಮೀಯವಾಗಿ ಇರಬೇಕು, ಅವರಿಗೆ ನಿರಂತರವಾಗಿ ಮೆಸೇಜ್ ಮಾಡುತ್ತಿರಬೇಕು, ಆಗಲೇ ಅವಕಾಶ ಹೆಚ್ಚೆಚ್ಚು ಸಿಗುತ್ತೆ ಎಂದು ನನಗೆ ಹೇಳಿದ್ದಾರೆ ಎಂದು ಹೇಳಿರುವ ಸಾಹಿತಿ ದಾಸರಿ, ಇಬ್ಬರು ಖ್ಯಾತ ನಿರ್ದೇಶಕರು ನನ್ನನ್ನೂ ಮಲಗಲು ಕರೆದಿದ್ದರು ಎಂದು ಕೂಡ ಬಾಂಬ್ ಸಿಡಿಸಿದ್ದಾರೆ.

ನನಗೆ ಮೊದಲಿಂದ ನಿರ್ದೇಶಕರ ಜೊತೆ ಚೆನ್ನಾಗಿ ಸೌಹಾರ್ದಯುತವಾಗಿಯೇ ಇದ್ದು ಅಭ್ಯಾಸ ಎಂದು ಹೇಳಿರುವ ಸಾಹಿತಿ ನಿರ್ದೇಶಕರಿಗೆ ಇನ್ನೂ ಹತ್ತಿರವಾಗಿ, ಅವರ ಜೊತೆ ಇನ್ನೂ ಆಪ್ತವಾಗಿ ಮಾತನಾಡಿ ಎಂದು ನನಗೆ ಹೇಳಿದ್ದಾರೆ. ಆಗ ನಾನು ಈಗಾಗಲೇ ನಾನು ಮಾತನಾಡುತ್ತಿದ್ದೇನೆ ಅಲ್ವಾ ಎಂದು ಪ್ರಶ್ನೆ ಕೇಳಿದಾಗ ನಿಮಗೆ ಅರ್ಥವಾಗಲ್ವಾ..? ಎಂದು ಮರು ಪ್ರಶ್ನೆ ಮಾಡುತ್ತಿದ್ದರು. ಅವರನ್ನು ಹೋಗಿ ಏಕಾಂತದಲ್ಲಿ ಭೇಟಿಯಾಗಿ ಎನ್ನುತ್ತಿದ್ದರು, ಆಗ ನಾನು ಅವರಿಗೆ ಛೀಮಾರಿ ಹಾಕಿ ಹೊರ ಬಂದೆ ಎಂದು ಹೇಳಿದ್ಧಾರೆ. ನನ್ನ ಈ ಧೋರಣೆಯಿಂದ ಹಲವು ಅವಕಾಶಗಳನ್ನು ನಾನು ಕಳೆದುಕೊಂಡೆ ಎಂದಿದ್ದಾರೆ.

More from Filmibeat

English summary
Explore Sahithi Dasari’s shocking revelations about Tollywood casting couch tactics. Discover how "middlemen" manage illicit requests in the Telugu film industry.
Read more about: casting couch tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X