ನನ್ನ ಹತ್ರ ಆ ನಿರ್ದೇಶಕ ಕಮಿಟ್ಮೆಂಟ್ ಕೇಳಿದ,ನಾನು ಕಪಾಳಕ್ಕೆ ಬಾರಿಸಿದೆ-ಕಹಿ ಅನುಭವ ಹಂಚಿಕೊಂಡ ನಟಿ

ಬಣ್ಣದ ಲೋಕದಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಕಂಡರೆ ಮುಕ್ಕಿ ತಿನ್ನುವರು ತುಂಬಾ ಜನ ಇದ್ದಾರೆ. ಇಲ್ಲಿ ಬಹುತೇಕರಲ್ಲ ಆದರೆ ಕೆಲವರು ಮುಖವಾಡದ ಬದುಕನ್ನು ಬದುಕುತ್ತಾರೆ. ಕೆಲವರು ಪ್ರಚಾರದ ಹುಚ್ಚಿಗೆ ಬರುತ್ತಾರೆ, ಇನ್ನೂ ಕೆಲವರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ.

ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಹೀಗೆ.. ಆ ಇಂಡಸ್ಟ್ರೀ ಈ ಇಂಡಸ್ಟ್ರೀ ಅಂತ ಅಲ್ಲ. ಎಲ್ಲ ಚಿತ್ರೋದ್ಯಮಗಳಲ್ಲಿ ಬಹುತೇಕ ಈ ಕಥೆ ಒಂದೇ. ಇದಕ್ಕೆ ಕೈಗನ್ನಡಿ ಎಂಬಂತೆ ಹಲವಾರು ಚೆಲುವೆಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಮಾತನಾಡುತ್ತಾ ಮಾತನಾಡುತ್ತಾ ಬಿಕ್ಕಿದ್ದಾರೆ. ಉದಾಹರಣೆಗೆ ಐಶ್ವರ್ಯ ವುಲ್ಲಿಂಗಾಲ.

I Slapped the Director Jabardasth Aishwarya s Explosive Reveal on Casting Couch

ಹೌದು, ಐಶ್ವರ್ಯ ವುಲ್ಲಿಂಗಾಲ.. ಪಕ್ಕದ ಆಂಧ್ರದ ಚೆಲುವೆ. ''ಜಬರ್‌ದಸ್ತ್''.. ''ಎಕ್ಸ್‌ಟ್ರಾ ಜಬರ್‌ದಸ್ತ್''.. ''ಶ್ರೀದೇವಿ ಡ್ರಾಮಾ ಕಂಪನಿ'' ಯಂತಹ ಹಾಸ್ಯ ಕಾರ್ಯಕ್ರಮಗಳ ಮೂಲಕ ತೆಲುಗು ನಾಡಿನೆಲ್ಲೆಡೆ ಮನೆ ಮಾತಾದವರು ಇವರು. ರಿಯಾಲಿಟಿ ಶೋಗಳ ರಾಣಿ ಎಂದೇ ಇವರನ್ನು ಹಲವರು ಕರೆಯುತ್ತಾರೆ. ''ಮೇಮಿದ್ದರಂ'' ಸೇರಿ ಕೆಲ ಚಿತ್ರಗಳಲ್ಲಿ ಕೂಡ ಇವರು ಅಭಿನಯಿಸಿದ್ದಾರೆ. ಧಾರಾವಾಹಿಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಇಂಥಾ ಐಶ್ವರ್ಯ ವುಲ್ಲಿಂಗಾಲ ಕೆಲ ತಿಂಗಳ ಹಿಂದೆ ''iDream Media''ಗೆ ಸಂದರ್ಶನ ನೀಡಿದ್ದರು. ಈ ಸಂದರ್ಶನದಲ್ಲಿ ತಮ್ಮ ಕಹಿ ಅನುಭವ ಹಂಚಿಕೊಂಡಿದ್ದರು. ಸದ್ಯ ಈ ಸಂಪೂರ್ಣ ಸಂದರ್ಶನದಲ್ಲಿನ ಕಾಸ್ಟಿಂಗ್ ಕೌಚ್ ಕುರಿತು ಐಶ್ವರ್ಯ ಮಾತನಾಡಿದ್ದ ತುಣುಕನ್ನು ''iDream Media'' ತನ್ನ ಮತ್ತೊಂದು ಯೂಟ್ಯೂಬ್ ಚಾನೆಲ್ ''iDream Popular''ನಲ್ಲಿ ರೀ ಅಪ್ಲೋಡ್ ಮಾಡಿದೆ. ಈ ಹಿನ್ನೆಲೆ ಐಶ್ವರ್ಯ ಅಂದು ಮಾತನಾಡಿದ್ದ ಮಾತು ಇಂದು ಮತ್ತೆ ಚರ್ಚೆಯಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಕ್ಲಿಪ್ ವೈರಲ್ ಆಗಿದೆ.

ಈ ಸಂದರ್ಶನದಲ್ಲಿ ಕಾಸ್ಟಿಂಗ್ ಕೌಚ್ ಸಂಪ್ರದಾಯದ ಕುರಿತು ಮಾತನಾಡಿರುವ ಐಶ್ವರ್ಯ ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳನ್ನು ಮೆಲುಕು ಮಾಡಿಕೊಂಡಿದ್ಧಾರೆ. ಹೊರಗಡೆ ಪ್ರಪಂಚಕ್ಕೆ ಇಲ್ಲಿ ತಳುಕು ಬಳಕು ಖ್ಯಾತಿ ಮತ್ತು ಸ್ಟಾರ್ ಡಮ್ ಕಾಣಿಸುತ್ತೆ ಆದರೆ ವಾಸ್ತವದಲ್ಲಿ ಕಥೆ ತುಂಬಾ ಕಷ್ಟಕರವಾದದ್ದು ಎಂದಿದ್ದಾರೆ. ಚಿತ್ರರಂಗದಲ್ಲಿ ಬೆಳೆಯಬೇಕು, ಮಿಂಚಬೇಕೆಂಬ ಕನಸೊತ್ತು ಬರುವ ಹಲವು ಹುಡುಗಿಯರಿಗೆ ಇಲ್ಲಿ ಸುಲಭವಾಗಿ ಅವಕಾಶಗಳು ಸಿಗುವುದಿಲ್ಲ ಎಂದು ಹೇಳಿರುವ ಐಶ್ವರ್ಯ ಅನೇಕ ಅಗ್ನಿ ಪರೀಕ್ಷೆಗಳನ್ನು ಇಲ್ಲಿ ಎದುರಿಸಬೇಕಾಗುತ್ತೆ ಎಂದಿದ್ಧಾರೆ.

I Slapped the Director Jabardasth Aishwarya s Explosive Reveal on Casting Couch

ತಮ್ಮ ಬದುಕಿನ ಅನುಭವವನ್ನು ಕೂಡ ಇಲ್ಲಿ ಹಂಚಿಕೊಂಡಿರುವ ಐಶ್ವರ್ಯ ಮೊದ ಮೊದಲು ನನಗೆ ಈ ಕಮಿಟ್ಮೆಂಟ್‌ ಎಂಬ ಪದದ ನಿಜವಾದ ಅರ್ಥ ಗೊತ್ತಿರಲಿಲ್ಲ ಎಂದು ಹೇಳಿರುವ ಐಶ್ವರ್ಯ ನನ್ನ ಹತ್ರ ನಿರ್ದೇಶಕರು ನಿರ್ಮಾಪಕರು ಮಾತನಾಡುತ್ತಿದ್ದಾಗ ನಾನು ಕಮಿಟ್‌ಮೆಂಟ್ ಅಂದರೆ ಕೆಲಸದ ಮೇಲಿನ ಬದ್ದತೆಯ ಕುರಿತು ಮಾತನಾಡುತ್ತಿದ್ದಾರೆ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ. ಆದರೆ, ಆ ಪದದ ನಿಜವಾದ ಅರ್ಥ ನನಗೆ ಗೊತ್ತಾದಾಗ ನನಗೆ ಆಘಾತವಾಯ್ತು ಎಂದಿದ್ದಾರೆ.

ಒಮ್ಮೆ ಹೀಗೆ ಕೆಲಸದ ಒಪ್ಪಂದಕ್ಕೆ ಸಹಿ ಹಾಕುವ ಸಮಯದಲ್ಲಿ ನಿಮ್ಮ ಮೇಲೆ ನನಗೆ ಕ್ರಶ್ ಆಗಿದೆ ಎಂದು ನಿರ್ದೇಶಕರೊಬ್ಬರು ಹೇಳಿದರು ಎಂದು ಹೇಳಿರುವ ಐಶ್ವರ್ಯ, ಆ ವ್ಯಕ್ತಿ ವೈಯಕ್ತಿಕವಾಗಿ ನನ್ನನ್ನೂ ಭೇಟಿ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ ಎಂದಿದ್ದಾರೆ. ಪದೇ ಪದೇ ಕರೆ ಮಾಡಿ ಚಿತ್ರ ಹಿಂಸೆ ನೀಡಿದ ಎಂದಿದ್ಧಾರೆ. ಆ ವ್ಯಕ್ತಿಯ ನಿಜವಾದ ಉದ್ದೇಶ ನನಗೆ ಗೊತ್ತಾಗುತ್ತಿದ್ದಂತೆಯೇ ನಾನು ಅವಕಾಶವನ್ನು ತಿರಸ್ಕರಿಸಿದೆ ಎಂದಿದ್ಧಾರೆ.

ಇದೇ ಸಮಯದಲ್ಲಿ ಮತ್ತೊಂದು ಘಟನೆಯನ್ನು ಕೂಡ ನೆನಪು ಮಾಡಿಕೊಂಡಿರುವ ಐಶ್ವರ್ಯ ಮತ್ತೊಬ್ಬ ನಿರ್ದೇಶಕ ಕೂಡ ನನ್ನನ್ನೂ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದ ಎಂದು ಹೇಳಿದ್ಧಾರೆ. ಪರಿಸ್ಥಿತಿ ಮೀತಿ ಮೀರಿದಾಗ ಆ ನಿರ್ದೇಶಕನ ಜೊತೆ ವಾಗ್ವಾದ ಕೂಡ ನಡೆದಿತ್ತು ಎಂದು ಹೇಳಿರುವ ಐಶ್ವರ್ಯ ಸಹಿಸಲು ಸಾಧ್ಯವಾಗದೇ ನಾನು ಆತನ ಕಪಾಳಕ್ಕೆ ಬಾರಿಸಿ ಅಲ್ಲಿಂದ ಎದ್ದು ಹೊರ ಬಂದೆ ಎಂದಿದ್ಧಾರೆ. ಎಂದಿನಂತೆ ಆ ನಿರ್ದೇಶಕರು ಯಾರು..? ಎನ್ನುವ ಪ್ರಶ್ನೆಗೆ ಐಶ್ವರ್ಯ ಉತ್ತರ ನೀಡಿಲ್ಲ. ಅವರು ಯಾರು ಎನ್ನುವ ಪ್ರಶ್ನೆಯನ್ನು ಕೂಡ ನಿರೂಪಕರು ಕೇಳಿಲ್ಲ.

English summary
Jabardasth Aishwarya slams the casting couch! From slapping a director to losing film roles, discover the shocking truth behind Aishwarya Vullingala’s latest viral interview.
Read more about: casting couch tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X