ಕೊನೆಗೂ ತನ್ನ ಮದುವೆ ಬಗ್ಗೆ ಮೌನ ಮುರಿದ ನಟ ಪ್ರಭಾಸ್

ಟಾಲಿವುಡ್ ನಟ ಪ್ರಭಾಸ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಕಾಂಬಿನೇಷನ್‌ನಲ್ಲಿ 3 ಸಿನಿಮಾಗಳಿಗೆ ಹೊಸದಾಗಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಮುಂದೆ ನಾಲ್ಕೈದು ವರ್ಷ ಪ್ರಭಾಸ್ ಕಾಲ್‌ಶೀಲ್ ಖಾಲಿ ಇಲ್ಲ. ಇದೆಲ್ಲದರ ನಡುವೆ ಪ್ರಭಾಸ್ ಮದುವೆ ವಿಚಾರ ಮರೆತುಬಿಟ್ಟಿದ್ದಾರೆ.

ವಯಸ್ಸು 40 ದಾಟಿದರೂ ಪ್ರಭಾಸ್ ಮದುವೆ ಬಗ್ಗ ಆಲೋಚಿಸಿದಂತೆ ಕಾಣ್ತಿಲ್ಲ. 'ಬಾಹುಬಲಿ'-2 ಸಿನಿಮಾ ಬಿಡುಗಡೆ ಬಳಿಕ ಮದುವೆ ಆಗ್ತೀನಿ ಎಂದು ಯಂಗ್ ರೆಬಲ್ ಸ್ಟಾರ್ ಹೇಳಿದ್ದರು. ಆದರೆ ಆ ಬಳಿಕ ವರ್ಷಗಳೇ ಕಳೆದರೂ ಆ ಬಗ್ಗೆ ಯಾವುದೇ ಮಾತಿಲ್ಲ. ಅಭಿಮಾನಿಗಳು ಕೂಡ ಈ ಬಗ್ಗೆ ಕೇಳಿ ಕೇಳಿ ಸುಸ್ತಾಗಿದ್ದಾರೆ.

I want tor marry or Not Prabhas interesting comments on his marriage

ದೊಡ್ಡಪ್ಪ ಕೃಷ್ಣಂರಾಜು ಕೂಡ ಪ್ರಭಾಸ್ ಮದುವೆ ಬಗ್ಗೆ ಚರ್ಚಿಸಿದ್ದರು. ಸಂಬಂಧಗಳನ್ನು ಹುಡುಕುತ್ತಿರುವುದಾಗಿ ಹೇಳಿದ್ದರು. ಅವರ ನಿಧನದ ಬಳಿಕ ದೊಡ್ಡಮ್ಮ ಕೂಡ ಆದಷ್ಟು ಬೇಗ ಪ್ರಭಾಸ್ ಮದುವೆ ಎಂದು ಹೇಳುತ್ತಲೇ ಬರ್ತಿದ್ದಾರೆ. ಆದರೆ ಅಂತಹ ಯಾವುದೇ ಸುಳಿವು ಸಿಗುತ್ತಿಲ್ಲ. ಸದ್ಯಕ್ಕೆ ಪ್ರಭಾಸ್ ಮದುವೆ ಬಗ್ಗೆ ಆಲೋಚಿಸುತ್ತಿರುವಂತೆ ಕಾಣುತ್ತಿಲ್ಲ.

ಪ್ರಭಾಸ್ ಮದುವೆಗೆ ಸಾಕಷ್ಟು ಸಂಬಂಧಗಳು ಬಂದಿರವುದಾಗಿ ಸುದ್ದಿ ಆಗಿತ್ತು. ಅನುಷ್ಕಾ ಶೆಟ್ಟಿ, ಶ್ರದ್ಧಾ ಕಪೂರ್ ಜೊತೆಗೂ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಹೇಳಲಾಗುತ್ತಿದೆ. ಡಾರ್ಲಿಂಗ್- ಸ್ವೀಟಿ ಮದುವೆ ಆಗುತ್ತಾರೆ ಎಂದು ಈಗಲೂ ಕೆಲ ಅಭಿಮಾನಿಗಳು ಅಂದುಕೊಂಡಿದ್ದಾರೆ.

ಸದ್ಯ ಸಂದರ್ಶನವೊಂದರಲ್ಲಿ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ತೆಲುಗಿನ ಗೀತರಚನೆಗಾರ ಸಿರಿವೆನ್ನಲ ಸೀತಾರಾಮ ಶಾಸ್ತ್ರಿ ನೆನಪಿನಲ್ಲಿ 'ಉಚ್ವಾಸಂ ಕವನಂ' ಎನ್ನುವ ಕಾರ್ಯಕ್ರಮಕ್ಕೆ ಪ್ರಭಾಸ್ ಹಾಜರಾಗಿದ್ದರು. ಈ ವೇಳೆ ಸೀತಾರಾಮ ಶಾಸ್ತ್ರಿ ಅವರ ಸಿನಿಮಾ ಹಾಡುಗಳ ಬಗ್ಗೆ ಪ್ರಭಾಸ್ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಚಿಕ್ಕಂದಿನಿಂದಲೂ ಅವರ ಹಾಡುಗಳನ್ನು ಕೇಳುತ್ತಾ ಬೆಳೆದ ಬಗ್ಗೆ ಮಾತನಾಡಿದ್ದಾರೆ.

'ಮನಿ' ಎಂಬ ಚಿತ್ರದಲ್ಲಿ 'ಭದ್ರಂ ಬಿಕೇರ್ ಫುಲ್ ಬ್ರದರ್' ಎಂದು ಶುರುವಾಗುವ ಹಾಡನ್ನು ಸೀತಾರಾಮ ಶಾಸ್ತ್ರಿ ಬರೆದಿದ್ದಾರೆ. ಅದರಲ್ಲಿ ಮದುವೆ ಆಗಬೇಡ, ಮದುವೆ ಅಂದ್ರೆ ಡೇಂಜರ್ ಎಂದು ಬರೆದಿದ್ದಾರೆ. ಬಳಿಕ ಕೆಲ ಸಿನಿಮಾಗಳಲ್ಲಿ ಮದುವೆಯ ಬಗ್ಗೆ ಅನೇಕ ಒಳ್ಳೆ ಹಾಡುಗಳನ್ನು ಬರೆದಿದ್ದಾರೆ. ಹಾಗಿದ್ರೆ ನಾನು ನಾನು ಈಗ ಮದುವೆಯಾಗಬೇಕೇ? ಆಗಬಾರದಾ? ಎಂದು ಹೇಳಿ ಪ್ರಭಾಸ್ ನಕ್ಕಿದ್ದಾರೆ.

ಮದುವೆ ಬಗ್ಗೆ ಪ್ರಭಾಸ್ ಆಡಿರುವ ಮಾತುಗಳು ವೈರಲ್ ಆಗುತ್ತಿದೆ. ಯಾರೋ ಡಾರ್ಲಿಂಗ್‌ಗೆ ಮದುವೆ ಬಗ್ಗೆ ಆಸಕ್ತಿ ಇದ್ದಂತೆ ಇಲ್ಲ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸಿನಿಮಾಗಳ ವಿಚಾರಕ್ಕೆ ಬಂದರೆ 3 ಸಿನಿಮಾಗಳ ಸೋಲಿನ ಬಳಿಕ ಪ್ರಭಾಸ್ ನಟಿಸಿದ 'ಸಲಾರ್' ಹಾಗೂ 'ಕಲ್ಕಿ 2898AD' ಚಿತ್ರಗಳು ಗೆದ್ದಿವೆ.

ಮಾರುತಿ ನಿರ್ದೇಶನದ 'ದಿ ರಾಜಾಸಾಬ್' ಚಿತ್ರದಲ್ಲಿ ಸದ್ಯ ಪ್ರಭಾಸ್ ನಟಿಸುತ್ತಿದ್ದಾರೆ. ಹನು ರಾಘವಪುಡಿ ಸಾರಥ್ಯದ 'ಫೌಜಿ' ಚಿತ್ರದ ಚಿತ್ರೀಕರಣ ಕೂಡ ಆರಂಭವಾಗಿದೆ. ಮುಂದೆ 'ಸಲಾರ್'-2 ಸಿನಿಮಾ ಶುರುವಾಗಬೇಕಿದೆ. ನಂತರ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರ ಕೂಡ ಇದೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮುಂದೆ 2026, 2027 ಹಾಗೂ 2028ರ ವರ್ಷಗಳಲ್ಲಿ ಪ್ರಭಾಸ್ ಜೊತೆ ಒಂದೊಂದು ಸಿನಿಮಾ ಮಾಡುವುದಾಗಿ ಘೋಷಿಸಿದೆ. 2026ಕ್ಕೆ 'ಸಲಾರ್-2' ತೆರೆಗೆ ಬರಲಿದೆ. ಬಳಿಕ ಲೋಕೇಶ್ ಕನಕರಾಜ್ ಹಾಗೂ ಪ್ರಶಾಂತ್ ವರ್ಮಾ ನಿರ್ದೇಶನಗಳಲ್ಲಿ ಮತ್ತರೆಡು ಸಿನಿಮಾ ಬರುತ್ತದೆ ಎನ್ನಲಾಗ್ತಿದೆ.

More from Filmibeat

English summary
Actor Prabhas opens up on his marriage;
Read more about: prabhas telugu tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X