ಒಂದೇ ಚಿತ್ರದಲ್ಲಿ ಚಿರು- ಬಾಲಯ್ಯ; ಮಲ್ಟಿಸ್ಟಾರರ್ ಚಿತ್ರಕ್ಕೆ ಸೈ ಎಂದ ಸೂಪರ್ ಸ್ಟಾರ್ಸ್
ತೆಲುಗು ಚಿತ್ರರಂಗದಲ್ಲಿ ನಂದಮೂರಿ ಫ್ಯಾಮಿಲಿ ಹಾಗೂ ಮೆಗಾ ಫ್ಯಾಮಿಲಿ ನಡುವೆ ದಶಕಗಳಿಂದ ಪೈಪೋಟಿ ನಡೀತಿದೆ. ಚಿರು ರಾಜಕೀಯರಂಗಕ್ಕೆ ಎಂಟ್ರಿ ಕೊಟ್ಟಾಗ ಚಿರು ವರ್ಸಸ್ ಬಾಲಕೃಷ್ಣ ಎನ್ನುವ ಸಮರ ಏರ್ಪಟ್ಟಿತ್ತು. ಕೆಲವೊಮ್ಮೆ ವೇದಿಕೆಗಳಲ್ಲಿ ಎರಡೂ ಕುಟುಂಬಗಳ ನಟರು ಪರೋಕ್ಷವಾಗಿ ಟಾಂಗ್, ಕೌಂಟರ್ ಕೊಟ್ಟಿರುವುದು ಇದೆ.
ಇತ್ತೀಚಿನ ವರ್ಷಗಳಲ್ಲಿ ಎರಡೂ ಫ್ಯಾಮಿಲಿಗಳ ನಡುವಿನ ಸಂಘರ್ಷ ಕೊಂಚ ಕಮ್ಮಿ ಆಗಿದೆ. 'RRR' ಚಿತ್ರದಲ್ಲಿ ರಾಮ್‌ಚರಣ್- ಜ್ಯೂ. ಎನ್‌ಟಿಆರ್ ಒಟ್ಟಿಗೆ ನಟಿಸಿ ಈ ಪೈಪೋಟಿಗೆ ಕೊಂಚ ಮಟ್ಟಿಗೆ ಬ್ರೇಕ್ ಹಾಕಿದ್ದಾರೆ. ತಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದು ಸಾರಿ ಹೇಳಿದ್ದಾರೆ. ಆದರೂ ಅಭಿಮಾನಿಗಳ ನಡುವೆ ಕೆಸರೆರಚಾಟ ನಿಂತಿಲ್ಲ. ಇದೀಗ ಬಾಲಕೃಷ್ಣ ಜೊತೆ ನಟಿಸೋ ಆಸೆಯನ್ನು ಸ್ವತಃ ಚಿರಂಜೀವಿ ವ್ಯಕ್ತಪಡಿಸಿದ್ದಾರೆ.

ಬಾಲಯ್ಯ ಪಕ್ಕದಲ್ಲಿ ಇರುವಾಗಲೇ ಇಬ್ಬರೂ ಸೇರಿ ಸಿನಿಮಾ ನೋಡೋಣ ಎಂದು ಮೆಗಾಸ್ಟಾರ್ ಹೇಳಿದ್ದಾರೆ. ಅದಕ್ಕೆ ಬಾಲಯ್ಯ ಕೂಡ ಸೈ ಎಂದಿದ್ದಾರೆ. ನಟ ಬಾಲಕೃಷ್ಣ ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದಿಂದ ಅವರನ್ನು ಗೌರವಿಸಲಾಯಿತು. ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸಿನಿಮಾ ತಾರೆಯರು, ರಾಜಕೀಯ ಮುಖಂಡರು ಭಾಗಿ ಆಗಿದ್ದರು.
ಚಿರಂಜೀವಿ ಹಾಗೂ ಬಾಲಕೃಷ್ಣ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಪದೇ ಪದೆ ಕೇಳಿಬರುತ್ತಲೇ ಇರುತ್ತದೆ. ಕೆಲ ಘಟನೆಗಳು ಇದಕ್ಕೆ ಪುಷ್ಠಿ ಕೊಟ್ಟಿದ್ದವು. ಆದರೆ ಅದ್ಧೂರಿ ಕಾರ್ಯಕ್ರಮದಲ್ಲಿ ನಾವಿಬ್ಬರು ಸ್ನೇಹಿತರು. ಒಟ್ಟಿಗೆ ಸಿನಿಮಾ ಮಾಡಲು ಸಿದ್ಧ ಎಂದು ಚಿರಂಜೀವಿ ಹೇಳಿ ಗಮನ ಸೆಳೆದಿದ್ದಾರೆ. ಸದ್ಯ ಮೆಗಾಸ್ಟಾರ್ ಹೇಳಿಕೆ ವೈರಲ್ ಆಗುತ್ತಿದೆ.

"ನಮ್ಮ ಮನೆಯಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ಬಾಲಯ್ಯ ಖಂಡಿತ ಬರುತ್ತಾರೆ. ನಮ್ಮೊಟ್ಟಿಗೆ ಡ್ಯಾನ್ಸ್ ಕೂಡ ಮಾಡುತ್ತಾರೆ ಅಭಿಮಾನಿಗಳು ಅನಾವಶ್ಯಕವಾಗಿ ಜಗಳವಾಡುತ್ತಿದ್ದಾರೆ. ನಾವೆಲ್ಲ ಕುಟುಂಬ ಇದ್ದಂತೆ. ಅಭಿಮಾನಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಚಿರು ಹೇಳಿದ್ದಾರೆ.
ಫ್ಯಾಕ್ಷನ್ ಸಿನಿಮಾಗಳು ಅಂದ್ರೆ ಬಾಲಕೃಷ್ಣ. ಅವರು ನಟಿಸಿದ 'ಸಮರಸಿಂಹ ರೆಡ್ಡಿ' ನನ್ನ 'ಇಂದ್ರ' ಚಿತ್ರಕ್ಕೆ ಸ್ಫೂರ್ತಿ. 'ಇಂದ್ರ' ಬಂದಾಗ ನಾನು ಬಾಲಯ್ಯ ರೀತಿ ನಟಿಸೋಕೆ ಸಾಧ್ಯಾನಾ? ಎಂದುಕೊಂಡಿದ್ದೆ. ನನಗೆ ಬಾಲಯ್ಯ ಅವರ ಜೊತೆ ಒಂದು ಫ್ಯಾಕ್ಷನ್ ಚಿತ್ರ ಮಾಡುವ ಆಸೆ. ಇತ್ತೀಚೆಗೆ ಸೀಕ್ವೆಲ್, ಪ್ರಿಕ್ವೆಲ್, ಭಾಗ 2 ಮತ್ತು 3 ಹೀಗೆ ಬರುತ್ತಿವೆ. ಎಲ್ಲರ ಮುಂದೆ ಹೇಳುತ್ತೇನೆ. ಇಂದ್ರಸೇನಾ ರೆಡ್ಡಿ ಮತ್ತು ಸಮರಸಿಂಹ ರೆಡ್ಡಿ ಪಾತ್ರಗಳನ್ನಿಟ್ಟುಕೊಂಡು ಯಾರಾದರೂ ಕಥೆ ಮಾಡಿದರೆ ನಟಿಸೋಕೆ ನಾನು ಸಿದ್ಧ ಎಂದರು.
ಕೂಡಲೇ ಪಕ್ಕದಲ್ಲೇ ಇದ್ದ ಬಾಲಯ್ಯ ಕಡೆ ನೋಡಿ ನೀವೂ ನಟಿಸ್ತೀರಾ? ಎಂದು ಕೇಳಿದ್ದಾರೆ. ಕೂಡಲೇ ಬಾಲಕೃಷ್ಣ ಕೂಡ ಸೈ, ನಾನು ರೆಡಿ ಎಂದಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಅಲ್ಲೇ ಇದ್ದ ನಿರ್ದೇಶಕರಾದ ಬೋಯಪಾಟಿ ಶ್ರೀನು ಹಾಗೂ ವೈವಿಎಸ್ ಚೌಧರಿ ಕಡೆ ನೋಡಿ ಚಿರು, ಯಾರಾದರೂ ಕಥೆ ತನ್ನಿ. ನಿಮಗಿದು ಚಾಲೆಂಜ್. ಟ್ರೈ ಮಾಡಿ. ಯಾರೇ ಕಥೆ ಬರೆದುಕೊಂಡು ಬಂದರೂ ನಟಿಸೋಕೆ ನಾವು ಸಿದ್ಧ ಎಂದು ಚಿರಂಜೀಗೆ ಹೇಳಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ನಿಜಕ್ಕೂ ಇವರಿಬ್ಬರು ಒಟ್ಟಿಗೆ ಒಂದೇ ಚಿತ್ರದಲ್ಲಿ ನಟಿಸಿದರೆ ಬಾಕ್ಸಾಫೀಸ್ ಶೇಕ್ ಆಗುತ್ತದೆ ಎನ್ನುತ್ತಿದ್ದಾರೆ.
'ಇಂದ್ರ' ಹಾಗೂ 'ಸಮರಸಿಂಹ ರೆಡ್ಡಿ' ಒಂದ್ಕಾಲದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ ಸಿನಿಮಾಗಳು. ಅಂತಹ ಸಿನಿಮಾಗಳನ್ನು ಈಗ ಮಾಡೋಕೆ ಸಾಧ್ಯನಾ? ಎಂದು ಕೆಲವರು ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಚಿರು 'ವಿಶ್ವಂಭರ' ಎನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ ಬಾಲಯ್ಯ ತಮ್ಮ 108ನೇ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ.


Click it and Unblock the Notifications











