ಒರಿಜಿನಲ್ ಪಕ್ಕ ಡೂಪ್ಲಿಕೇಟ್; 'ತಗ್ಗೊದೇ ಇಲ್ಲ' ಎನ್ನುತ್ತಿರುವ ಬನ್ನಿ ಮೇಣದ ಪ್ರತಿಮೆ
'ಪುಷ್ಪ' ಆಗಿ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದು ಗೊತ್ತೇಯಿದೆ. ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಕೂಡ ಮುಡಿಗೇರಿತ್ತು. ಸದ್ಯ 'ಪುಷ್ಪ' ಸೀಕ್ವೆಲ್‌ನಲ್ಲಿ ಸ್ಟೈಲಿಶ್ ಸ್ಟಾರ್ ಬ್ಯುಸಿಯಾಗಿದ್ದಾರೆ. ಸದ್ಯ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣವಾಗಿದೆ.
ದುಬೈನ ಮ್ಯೂಸಿಯಂನಲ್ಲಿ ಸ್ಥಾಪಿಸಲಾದ ಈ ಪ್ರತಿಮೆಯ ಅನಾವರಣ ವೀಡಿಯೊವನ್ನು ಬನ್ನಿ ಹಂಚಿಕೊಂಡಿದ್ದಾರೆ. ಮಾರ್ಚ್ 28 ರ ರಾತ್ರಿ ಪ್ರತಿಮೆಯನ್ನು ಲೋಕಾರ್ಪಣೆ ಆಯಿತು. 'ಅಲವೈಕುಂಠಪುರಂಲೋ' ಚಿತ್ರದಲ್ಲಿ ಅಲ್ಲು ಅರ್ಜುನ್ ಕೆಂಪು ಬಣ್ಣದ ಸೂಟ್ ಧರಿಸಿ ಕಾಣಿಸಿಕೊಂಡಿದ್ದರು. ಆ ಲುಕ್ ವೈರಲ್ ಆಗಿತ್ತು. ಅದೇ ಗೆಟಪ್‌ನಲ್ಲಿ ಈ ಮೇಣದ ಪ್ರತಿಮೆ ಇರುವುದು ವಿಶೇಷ.

ತಮ್ಮ ಮೇಣದ ಪ್ರತಿಮೆ ಲೋಕಾರ್ಪಣೆಗೆ ಕಾರ್ಯಕ್ರಮಕ್ಕಾಗಿ ಅಲ್ಲು ಅರ್ಜುನ್ ಕುಟುಂಬ ಸಮೇತ ದುಬೈಗೆ ತೆರಳಿದ್ದಾರೆ. ಮೇಣದ ಪ್ರತಿಮೆ ಲೋಕಾರ್ಪಣೆ ವೇಳೆ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಸಂಭ್ರಮ ಮುಗಿಲು ಮುಟ್ಟಿತ್ತು. ಪ್ರತಿಮೆಯ ಪಕ್ಕದಲ್ಲಿ ಕೂತು ಅರ್ಹಾ ತಗ್ಗೊದೇ ಇಲ್ಲ ಎಂದು ಪೋಸ್ ಕೊಟ್ಟಿದ್ದಾಳೆ. ಇನ್ನು ಸ್ಟೈಲಿಶ್ ಸ್ಟಾರ್ ಕೂಡ ತಮ್ಮದೇ ತಮ್ಮದೇ ಮೇಣದ ಪ್ರತಿಮೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಗ್ಗೊದೆ ಇಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಜೊತೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಅಭಿಮಾನಿಗಳು,ಮ ಆಪ್ತರು ಸ್ಟೈಲಿಶ್ ಸ್ಟಾರ್‌ಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಇನ್ನು ಮೇಣದ ಪ್ರತಿಮೆ ಥೇಟ್ ಅಲ್ಲು ಅರ್ಜುನ್ ಎತ್ತರವಿದೆ. ಇನ್ನು ಫೋಟೊಗಳಲ್ಲಿ ಮೇಣದ ಪ್ರತಿಮೆಗೂ ಅಲ್ಲು ಅರ್ಜುನ್ ನಡುವೆ ವ್ಯತ್ಯಾಸ ಇಲ್ಲ ಎನ್ನುವಂತೆ ಕಾಣುತ್ತಿದೆ. ಅಷ್ಟರಮಟ್ಟಿಗೆ ನೈಜವಾಗಿ ಪ್ರತಿಮೆ ನಿರ್ಮಿಸಲಾಗಿದೆ. ಡ್ರೆಸ್, ಕುರುಚಲು ಗಡ್ಡ, ಉದ್ದನೆಯ ಕೂದಲು ಸೇಮ್ ಸೇಮ್ ಎನ್ನುವಂತಿದ್ದು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
ಮೇಡಂ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಭಾರತೀಯ ಚಿತ್ರರಂಗದ ಹಲವು ತಾರೆಯರ ಮೇಣದ ಪ್ರತಿಮೆಗಳಿವೆ. ಬಾಲಿವುಡ್ ತಾರೆಯರ ಪ್ರತಿಮೆಗಳು ಹೆಚ್ಚಾಗಿದೆ. ಇನ್ನು ಲಂಡನ್ ಮ್ಯೂಸಿಯಂನಲ್ಲಿ ಪ್ರಭಾಸ್, ಮಹೇಶ್ ಬಾಬು ಪ್ರತಿಮೆಗಳಿವೆ. ಅಲ್ಲು ಅರ್ಜುನ್ ಪ್ರತಿಮೆ ಮಾತ್ರ ದುಬೈ ಮ್ಯೂಸಿಯಂನಲ್ಲಿದೆ.
ಅಂದಹಾಗೆ 2003 ಮಾರ್ಚ್ 28ರಂದು ಅಲ್ಲು ಅರ್ಜುನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬನ್ನಿ ನಟಿಸಿದ ಚೊಚ್ಚಲ ಸಿನಿಮಾ 'ಗಂಗೋತ್ರಿ' ಅಂದು ಬಿಡುಗಡೆಯಾಗಿತ್ತು. ಇದೀಗ 19 ವರ್ಷಗಳ ಬಳಿಕ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ನಿರ್ಮಾಣವಾಗಿರುವುದು ವಿಶೇಷ. ಈ ವಿಚಾರವನ್ನು ಐಕಾನ್ ಸ್ಟಾರ್ ನೆನಪಿಸಿಕೊಂಡಿದ್ದಾರೆ. ತಮ್ಮ ಮೊದಲ ಚಿತ್ರ ಬಿಡುಯಾಗಿದ್ದ ಅದೇ ಮಾರ್ಚ್ 28ರಂದು ಈ ಗೌರವ ಧಕ್ಕಿರುವುದಕ್ಕೆ ಖುಷಿಯಾಗಿದ್ದಾರೆ.
'ಗಂಗೋತ್ರಿ' ಚಿತ್ರದಲ್ಲಿ ಅಲ್ಲು ಅರ್ಜುನ್ ಮೋಡಿ ಮಾಡಿದ್ದರು. ಆದರೆ ಆತನ ಲುಕ್ ಬಗ್ಗೆ ಕೆಲವರು ಚಕಾರ ಎತ್ತಿದ್ದರು. ಬಳಿಕ ಬಂದ 'ಆರ್ಯ' ಚಿತ್ರದಲ್ಲಿ ಸಖತ್ ಸ್ಟೈಲಿಶ್ ಆಗಿ ಮಿಂಚಿದ್ದರು. 'ದೇಶಮುದುರು', 'ಬನ್ನಿ', 'ಆರ್ಯ-2', 'ಜುಲಾಯಿ', 'ರೇಸುಗುರ್ರಂ', 'ಸರೈನೋಡು' ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದ್ದರು. 'ಅಲಾ ವೈಕುಂಠಪುರಂಲೊ' ಮತ್ತೊಂದು ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿತ್ತು.
ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ಸ್ಟೈಲಿಶ್ ಸ್ಟಾರ್‌ಗೆ ದೊಡ್ಡ ಬ್ರೇಕ್ ಕೊಟ್ಟಿದೆ. ಉತ್ತರ ಭಾರತದಲ್ಲೂ ಅಲ್ಲು ಅರ್ಜುನ್ ಕ್ರೇಜ್ ಶುರುವಾಗುವಂತೆ ಮಾಡಿದೆ. ಪುಷ್ಪರಾಜ್ ಆಗಿ ಬನ್ನಿ ಮ್ಯಾನರಿಸಂ, ಸ್ಟೈಲ್, ಪರ್ಫಾರ್ಮನ್ಸ್ ಸಿನಿರಸಿಕರಿಗೆ ಬಹಳ ಇಷ್ಟವಾಗಿದೆ. ಮತ್ತೆ ತೆರೆಮೇಲೆ ಪುಷ್ಪರಾಜ್ ಕಮಾಲ್ ನೋಡಲು ಕಾಯುತ್ತಿದ್ದಾರೆ. ಆಗಸ್ಟ್ 15ಕ್ಕೆ 'ಪುಷ್ಪ'-2 ತೆರೆಗಪ್ಪಳಿಸಲಿದೆ.


Click it and Unblock the Notifications











