ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಿಸಿ ಧೈರ್ಯ ತುಂಬಿದ ಅಲ್ಲು ಅರ್ಜುನ್

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಆಪ್ತ ಸಿಬ್ಬಂದಿಗಳಿಗೆ ಹಾಗು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಿದ್ದರು ಎಂಬ ಸುದ್ದಿ ಹೊರಬಿದ್ದಿದೆ.

45 ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಿಸಿದ್ದಾರೆ. ಖುದ್ದು ಅಲ್ಲು ಅರ್ಜುನ್ ಅವರೇ ಮೇಲ್ವಿಚಾರಣೆ ಮಾಡಿ ಎಲ್ಲಾ ವ್ಯವಸ್ಥೆ ಮಾಡಿಸಿರುವುದು ನಿಜಕ್ಕೂ ಶ್ಲಾಘನೀಯ.

''ಅಲ್ಲು ಅರ್ಜುನ್ ಅವರು ತಮ್ಮ ನೌಕರರನ್ನು ಕುಟುಂಬದಂತೆ ನೋಡಿಕೊಳ್ಳುತ್ತಾರೆ. ಈಗ 45 ವರ್ಷ ಮೇಲ್ಪಟ್ಟರು ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಿದ್ದಾರೆ'' ಎಂದು ಆಪ್ತರೊಬ್ಬರು ತಿಳಿಸಿರುವುದಾಗಿ ನ್ಯೂಸ್ 18 ಸಂಸ್ಥೆ ವರದಿ ಮಾಡಿದೆ.

Icon Star Allu Arjun vaccinates his staff who are aged above 45

ಅಂದ್ಹಾಗೆ, ಅಲ್ಲು ಅರ್ಜುನ್ ಅವರಿಗೂ ಕೊರೊನಾ ಸೋಂಕು ತಗುಲಿತ್ತು. ಸೋಂಕು ದೃಢವಾದ ಮೇಲೆ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದರು. ಬಳಿಕ, ಎರಡು ವಾರಗಳ ನಂತರ ಸಂಪೂರ್ಣವಾಗಿ ಗುಣಮುಖರಾಗಿದ್ದರು.

ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಪುಷ್ಪ ಸಿನಿಮಾ ಎರಡು ಭಾಗಗಳಾಗಿ ತೆರೆಕಾಣಲಿದೆ. ಆದರೆ, ಈ ಬಗ್ಗೆ ಅಧಿಕೃತ ಪ್ರಕಟಣೆಯಾಗಿಲ್ಲ.

ಪುಷ್ಪ ಸಿನಿಮಾ ತೆಲುಗು, ತಮಿಳು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಘೋಷಿಸಿರುವಂತೆ ಆಗಸ್ಟ್ 13ಕ್ಕೆ ಪುಷ್ಪ ಸಿನಿಮಾ ಚಿತ್ರಮಂದಿರಕ್ಕೆ ಬರಲಿದೆ.

Recommended Video

Bhojpuri ಸೇರಿಸಿದಂತೆ ಎಂಟು ಭಾಷೆಗಳಲ್ಲಿ ನಟಿಸಿದ ಕನ್ನಡತಿ Harshika Poonacha | Filmibeat Kannada

More from Filmibeat

English summary
Icon Star Allu Arjun vaccinates his staff who are aged above 45 and their family members.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X