"ನಾನು ಸಿಂಗಲ್ ಪೇರೆಂಟ್ ಅಲ್ಲ".. ತನ್ನ ಮಗುವಿನ ತಂದೆ ಯಾರು ಎಂದು ತೋರಿಸಿದ ಇಲಿಯಾನ
ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ ನಟಿ ಇಲಿಯಾನ ಡಿಕ್ರೂಸ್ ಈಗ ಸಿನಿಮಾಗಳಿಂದ ದೂರಾಗಿದ್ದಾರೆ. ಮದುವೆ ವಿಚಾರವನ್ನು ಹೇಳದೇ ತಾನು ಗರ್ಭಿಣಿ ಎಂದು ಘೋಷಿಸಿದ್ದ ಗೋವಾ ಬ್ಯೂಟಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗುವಿನ ತಂದೆ ಯಾರು ಎನ್ನುವ ವಿಚಾರದಲ್ಲಿ ಸಸ್ಪೆನ್ಸ್ ಕಾಯ್ದುಕೊಂಡಿದ್ದರು. ಆದರೆ ಈಗ ಅದಕ್ಕೆ ಬ್ರೇಕ್ ಬಿದ್ದಿದೆ. ಕೊನೆಗೂ ತನ್ನ ಮಗುವಿನ ತಂದೆ ಯಾರು ಎನ್ನುವುದನ್ನು ಇಲಿಯಾನಾ ಬಹಿರಂಗ ಪಡಿಸಿದ್ದಾರೆ.
ಒಂದಷ್ಟು ಫೋಟೊಗಳನ್ನು ಶೇರ್ ಮಾಡಿ ತನ್ನ ಮಿಸ್ಟರಿ ಮ್ಯಾನ್ ಬಗ್ಗೆ ಇಲಿಯಾನ ಹಿಂಟ್ ಕೊಟ್ಟರೂ ಆತನ ಮುಖ ಪರಿಚಯ ಮಾಡಿಸಿರಲಿಲ್ಲ. ಆದರೆ ಈಗ ಫೋಟೊ ಹಂಚಿಕೊಂಡಿದ್ದಾರೆ. ತೆಲುಗಿನ 'ದೇವದಾಸು' ಚಿತ್ರದಲ್ಲಿ ಮೊದಲಿಗೆ ಇಲಿಯಾನ ನಟಿಸಿದ್ದರು. ಬಳಿಕ 'ಪೋಕಿರಿ', 'ಜಲ್ಸಾ', 'ಬರ್ಫಿ' ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು.

'ಹುಡುಗ ಹುಡುಗಿ' ಕನ್ನಡ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಇಲಿಯಾನಾ ಮಿಂಚಿದ್ದರು. ಬಾಲಿವುಡ್ ಪ್ರವೇಶಿಸಿದ ಬಳಿಕ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಯಿತು. ಬರೀ ಇನ್‌ಸ್ಟಾಗ್ರಾಂನಲ್ಲಿ ಹಾಟ್ ಫೋಟೊಗಳನ್ನು ಶೇರ್ ಮಾಡುತ್ತ ಅಭಿಮಾನಿಗಳ ಗಮನ ಸೆಳೆಯುತ್ತಿದ್ದರು. ಆಸ್ಟ್ರೇಲಿಯಾ ಮೂಲದ ಫೋಟೊಗ್ರಫರ್ ಆಂಡ್ರ್ಯೂ ನೀಬೋನ್ ಜೊತೆ ಗೋವಾ ಬ್ಯೂಟಿ ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಬಳಿಕ ಇಬ್ಬರೂ ದೂರಾದರೂ ಎನ್ನುವ ವದಂತೆ ಹಬ್ಬಿತ್ತು.
ಇತ್ತೀಚೆಗಷ್ಟೇ ನಟಿ ಇಲಿಯಾನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಚಿಟ್‌ಚಾಟ್ ನಡೆಸಿದ್ದಾರೆ. ಅಭಿಮಾನಿಗಳ ಕುತೂಹಭರಿತ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಭಿಮಾನಿಯೊಬ್ಬರು ನಿಮ್ಮ ಸಿಂಗಲ್ ಪೇರೆಂಟಿಂಗ್ ಹೇಗಿದೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಇಲಿಯಾನಾ "ನಾನು ಸಿಂಗಲ್ ಪೇರೆಂಟ್ ಅಲ್ಲ ಎಂದು" ಮಗನ ತಂದೆ ಫೋಟೊವನ್ನು ಹಂಚಿಕೊಂಡಿದ್ದಾರೆ. ಅಲ್ಲಿಗೆ ಇಲಿಯಾನಾ ಗಂಡ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆತನ ಹೆಸರು ಮೈಕೆಲ್ ಡೋಲನ್. ಇಲಿಯಾನಾ ತಾವು ಗರ್ಭಿಣಿ ಎಂದು ಘೋಷಿಸುವ 4 ವಾರಗಳ ಮುನ್ನು ಮದುವೆ ಆಗಿದ್ದರು ಎಂದು ವರದಿ ಆಗಿತ್ತು.

ಮತ್ತೊಬ್ಬರು ನೀವು ಮತ್ತೆ ಸಿನಿಮಾಗಳಲ್ಲಿ ನಟಿಸೋದು ಯಾವಾಗ? 'ರುಸ್ತುಂ' ಚಿತ್ರದಲ್ಲಿ ನಿಮ್ಮ ಪಾತ್ರ ಬಹಳ ಇಷ್ಟವಾಯಿತು ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಇಲಿಯಾನಾ "ಧನ್ಯವಾದ. ಸದ್ಯಕ್ಕೆ ನಮ್ಮ ಗಮನ ಎಲ್ಲವೂ ನನ್ನ ಮಗನ ಮೇಲಿದೆ. ಆದಷ್ಟು ಬೇಗ ಚಿತ್ರರಂಗಕ್ಕೆ ಬರುತ್ತೇನೆ" ಎಂದು ರಿಪ್ಲೇ ಮಾಡಿದ್ದಾರೆ. ಇಲಿಯಾನಾ ಕಾಮೆಂಟ್ಸ್ ವೈರಲ್ ಆಗುತ್ತಿದೆ.
ಮೇ ತಿಂಗಳಲ್ಲಿ ಇಲಿಯಾನಾ ತಾನು ಗರ್ಭಿಣಿ ಆಗಿರುವ ವಿಚಾರ ಹಂಚಿಕೊಂಡಿದ್ದರು. ಆಗಸ್ಟ್ 1 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ನಂತರ ಆಗಸ್ಟ್ 5ರಂದು ಮಗನ ಫೋಟೋವನ್ನು ಹಂಚಿಕೊಂಡಿದ್ದರು. ಸದ್ಯ ತಾಯ್ತನದ ಸಂಭ್ರಮದಲ್ಲಿರುವ ಇಲಿಯಾನಾ ಅವನ ಲಾಲನೆ ಪಾಲನೆ ಬಗ್ಗೆ ಅಭಿಮಾನಿಗಳಿಗೆ ಆಗಿಂದಾಗ್ಗೆ ಮಾಹಿತಿ ನೀಡುತ್ತಿರುತ್ತಾರೆ. ಅಭಿಮಾನಿಗಳು ಲೈಕ್ಸ್, ಕಾಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಾ ಬರ್ತಿದ್ದಾರೆ.
ಬಳಕುವ ಬಳ್ಳಿಯಂತಿದ್ದ ಇಲಿಯಾನ ಜೀರೋ ಸೈಜ್ ಫಿಗರ್‌ನಿಂದ ಸಿನಿಮಾಗಳಲ್ಲಿ ಮಿಂಚಿದ್ದರು. ಬಳಿಕ ತೂಕ ಹೆಚ್ಚಿಸಿಕೊಂಡಿದ್ದ ಚೆಲುವೆ ಮತ್ತೆ ತೂಕ ಇಳಿಸಿ ಗಮನ ಸೆಳೆದಿದ್ದರು. ಆದರೆ ಯಾಕೋ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಆಕೆಯ ಚೂಸಿ ಆಗಿದ್ದರೋ ಅಥವಾ ಅವಕಾಶಗಳು ಸಿಗಲಿಲ್ಲವೋ ಒಟ್ನಲ್ಲಿ ಕೊಂಚ ಸ್ಲೋ ಆಗಿದ್ದರು. ಅಭಿಮಾನಿಗಳು ಮಾತ್ರ ಆಕೆಯನ್ನು ಮತ್ತೆ ತೆರೆಮೇಲೆ ನೋಡಲು ಕಾಯುತ್ತಿದ್ದಾರೆ.


Click it and Unblock the Notifications











