ನಾನು ಪ್ರೀತಿ ಮಾಡ್ತಿರೋದು ನಿಜ ಅಂತ ಒಪ್ಪಿಕೊಂಡ ರಶ್ಮಿಕಾ ಮಂದಣ್ಣ.!
ಕೊಡಗಿನ ಕುವರಿ ಕನ್ನಡ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗಂತೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯಿಂದ ದೂರವಾದ ಮೇಲಂತೂ ರಶ್ಮಿಕಾ ಮಂದಣ್ಣ ಬೇಡದ ವಿಚಾರಗಳಿಗೆ ಜಾಸ್ತಿ ಸೌಂಡ್ ಮಾಡ್ತಿದ್ದಾರೆ.
ತೆಲುಗು ನಟನನ್ನ ನಟಿ ರಶ್ಮಿಕಾ ಮಂದಣ್ಣ ಪ್ರೀತಿಸುತ್ತಿದ್ದಾರಂತೆ ಎಂಬ ಅಂತೆ-ಕಂತೆ ಕೂಡ ಟಾಲಿವುಡ್ ಅಂಗಳದಲ್ಲಿ ಜೋರಾಗಿ ಕೇಳಿಬಂತು. ಈಗ ನೋಡಿದ್ರೆ ''ನಾನು ಪ್ರೀತಿ ಮಾಡ್ತಿರೋದು ನಿಜ'' ಅಂತ ರಶ್ಮಿಕಾ ಮಂದಣ್ಣ ಹೇಳಿಕೊಂಡಿದ್ದಾರೆ.
''ನಾನು ಪ್ರೀತಿ ಮಾಡ್ತಿರೋದು ನಿಜ'' ಅಂತ ರಶ್ಮಿಕಾ ಮಂದಣ್ಣ ಹೇಳಿದ್ದಾರೆ ನಿಜ. ಆದ್ರೆ, ಇದರಲ್ಲಿ ಒಂದು ಟ್ವಿಸ್ಟ್ ಇದೆ. ರಶ್ಮಿಕಾ ಮಂದಣ್ಣ ಪ್ರೀತಿ ಮಾಡ್ತಿರೋದು ಸಿನಿಮಾಗಳನ್ನ ಮಾತ್ರ.!
ಹೌದು, ಮೊನ್ನೆಮೊನ್ನೆಯಷ್ಟೇ ನಟಿ ರಶ್ಮಿಕಾ ಮಂದಣ್ಣ ಮಾಧ್ಯಮ ಸಂವಾದದಲ್ಲಿ ಭಾಗವಹಿಸಿದ್ದರು. ಈ ವೇಳೆ ''ನೀವು ಪ್ರೀತಿ ಮಾಡ್ತಿದ್ದೀರಾ.?'' ಎಂಬ ಪ್ರಶ್ನೆ ಮಾಧ್ಯಮ ಮಿತ್ರರಿಂದ ತೂರಿಬಂತು. ಆಗ, ''ಯೆಸ್, ನಾನು ಪ್ರೀತಿ ಮಾಡ್ತಿರೋದು ನಿಜ. ನಾನು ಪ್ರೀತಿ ಮಾಡ್ತಿರೋದು ನನ್ನ ಸಿನಿಮಾಗಳನ್ನ. ನಾನು ನನ್ನ ಸಿನಿಮಾಗಳನ್ನು ಮಾತ್ರ ಪ್ರೀತಿಸುತ್ತೇನೆ. ಒಳ್ಳೊಳ್ಳೆ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ನನಗಿದೆ'' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ.

ಇನ್ನೂ ''ಮೇಕಪ್ ಮಾಡಿಕೊಳ್ಳುವುದು ನನಗೆ ಇಷ್ಟವಿಲ್ಲ. ಚಿತ್ರೀಕರಣ ಇರುವಾಗ ಮಾತ್ರ ಮೇಕಪ್ ಧರಿಸುತ್ತೇನೆ. ಶೂಟಿಂಗ್ ಹೊರತು ಪಡಿಸಿದರೆ ನಾನು ಮೇಕಪ್ ಇಲ್ಲದೇ ಇರುತ್ತೇನೆ'' ಅಂತ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಅಂದ್ಹಾಗೆ, ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್ ಸಿನಿಮಾಗಳಲ್ಲೇ ಬಿಜಿಯಾಗಿದ್ದಾರೆ. ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕ್ಕೆವ್ವರು' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಇದರೊಂದಿಗೆ ಇನ್ನೆರಡು ಚಿತ್ರಗಳು ರಶ್ಮಿಕಾ ಕೈಯಲ್ಲಿದೆ.


Click it and Unblock the Notifications











