ಪ್ರಭಾಸ್ ಅಭಿಮಾನಿಗಳಿಗೆ ಹಬ್ಬ: 2021 ರಲ್ಲಿ ಎರಡು ಸಿನಿಮಾ ಬಿಡುಗಡೆ!?

ತಮ್ಮ ಮೆಚ್ಚಿನ ನಟನ ಸಿನಿಮಾವನ್ನು ಚಿತ್ರಮಂದಿರದಲ್ಲಿ ಕಣ್‌ತುಂಬಿಕೊಳ್ಳಲು ಪ್ರಭಾಸ್ ಅಭಿಮಾನಿಗಳು ಒಂದೂವರೆ ವರ್ಷದಿಂದಲೂ ಕಾತರರಾಗಿ ಕಾಯುತ್ತಿದ್ದಾರೆ.

ಪ್ರಭಾಸ್ ನಟನೆಯ 'ಸಾಹೊ' ಸಿನಿಮಾ 2019 ರ ಆಗಸ್ಟ್‌ನಲ್ಲಿ ಬಿಡುಗಡೆ ಆಗಿತ್ತು. ಅದಾದ ನಂತರ ಪ್ರಭಾಸ್ ನಟನೆಯ ಯಾವ ಸಿನಿಮಾವೂ ಸಹ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿಲ್ಲ.

ಪ್ರಸ್ತುತ ಪ್ರಭಾಸ್-ಪೂಜಾ ಹೆಗ್ಡೆ ನಟನೆಯ ಪ್ರೇಮಕಥಾ ಚಿತ್ರ 'ರಾಧೆ-ಶ್ಯಾಮ್' ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಮುಗಿಯುವ ಹಂತದಲ್ಲಿದ್ದು, ಸಿನಿಮಾವು ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಸುಮಾರು ಒಂದು ಮುಕ್ಕಾಲು ವರ್ಷ ಕಾಯ್ದಿರುವ ಅಭಿಮಾನಿಗಳಿಗಾಗಿ ಪ್ರಭಾಸ್ ಈ ವರ್ಷ ಹೆಚ್ಚುವರಿ ಉಡುಗೊರೆ ನೀಡಲಿದ್ದಾರೆ, ಅದುವೇ ಈ ವರ್ಷ ಪ್ರಭಾಸ್ ನಟನೆಯ ಎರಡು ಸಿನಿಮಾಗಳು ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ.

ರಾಧೆ-ಶ್ಯಾಮ್ ಸಿನಿಮಾ ಬಿಡುಗಡೆ ಆಗಲಿದೆ

ರಾಧೆ-ಶ್ಯಾಮ್ ಸಿನಿಮಾ ಬಿಡುಗಡೆ ಆಗಲಿದೆ

ಹೌದು, ಮಾರ್ಚ್ ತಿಂಗಳಲ್ಲಿ ರಾಧೆ-ಶ್ಯಾಮ್ ಸಿನಿಮಾ ಬಿಡುಗಡೆ ಆಗಲಿದೆ. ವರ್ಷಾಂತ್ಯದ ವೇಳೆಗೆ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ 'ಸಲಾರ್' ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ. ಹೀಗೆ ಒಂದೇ ವರ್ಷದಲ್ಲಿ ಪ್ರಭಾಸ್ ನಟನೆಯ ಎರಡು ಸಿನಿಮಾ ಬಿಡುಗಡೆ ಆಗಿ 11 ವರ್ಷವಾಗಿದೆ. ಕೊನೆಯದಾಗಿ 2009 ರಲ್ಲಿ ಪ್ರಭಾಸ್ ನಟನೆಯ ಎರಡು ಸಿನಿಮಾ ಬಿಡುಗಡೆ ಆಗಿದ್ದವು.

ನಿಯಮ ಮುರಿಯಲಿದ್ದಾರೆ ಪ್ರಭಾಸ್

ನಿಯಮ ಮುರಿಯಲಿದ್ದಾರೆ ಪ್ರಭಾಸ್

ಒಂದು ಸಿನಿಮಾ ಒಪ್ಪಿಕೊಂಡ ಮೇಲೆ ಅದು ಮುಗಿಯುವವರೆಗೂ ಬೇರೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಪ್ರಭಾಸ್. ಇದನ್ನು ಬಹಳ ವರ್ಷಗಳಿಂದಲೂ ಪಾಲಿಸಿಕೊಂಡು ಬಂದಿದ್ದಾರೆ ಪ್ರಭಾಸ್. ಆದರೆ ಮೊದಲ ಬಾರಿಗೆ ಸ್ವಯಂ ನಿಯಮವನ್ನು ಮುರಿದು ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸಲಿದ್ದಾರೆ ಪ್ರಭಾಸ್.

ಎರಡು ಸಿನಿಮಾದಲ್ಲಿ ಒಟ್ಟಿಗೆ ನಟನೆ?

ಎರಡು ಸಿನಿಮಾದಲ್ಲಿ ಒಟ್ಟಿಗೆ ನಟನೆ?

ಹೌದು, ಆದಿಪುರುಷ್ ಸಿನಿಮಾದ ಚಿತ್ರೀಕರಣದ ಜೊತೆ-ಜೊತೆಗೆ 'ಸಲಾರ್' ಸಿನಿಮಾದಲ್ಲಿ ನಟಿಸಲಿದ್ದಾರೆ ಪ್ರಭಾಸ್. ವರ್ಷಾಂತ್ಯದ ವೇಳೆಗೆ ಸಲಾರ್ ಸಿನಿಮಾ ಬಿಡುಗಡೆ ಆಗುವ ಸಂಭವ ಇದೆ. ಆದಿಪುರುಷ್ ದೊಡ್ಡ ಬಜೆಟ್‌ನ ಭಾರಿ ಕ್ಯಾನ್ವಾಸ್ ಸಿನಿಮಾ ಆಗಿರುವ ಕಾರಣ ಆ ಸಿನಿಮಾದ ಚಿತ್ರೀಕರಣ ಹಾಗೂ ಬಿಡುಗಡೆ ತಡವಾಗುವ ಸಾಧ್ಯವಾಗಿದೆ.

Recommended Video

Shivanna ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಕಿಡಿಗೇಡಿಗಳು | Filmibeat Kannada
ದೀಪಿಕಾ ಪಡುಕೋಣೆ ಜೊತೆ ನಟನೆ

ದೀಪಿಕಾ ಪಡುಕೋಣೆ ಜೊತೆ ನಟನೆ

ಆದಿಪುರುಷ್, ಸಲಾರ್ ಜೊತೆಗೆ ಮತ್ತೊಂದು ಬಹುಮುಖ್ಯ ಸಿನಿಮಾವನ್ನು ಪ್ರಭಾಸ್ ಒಪ್ಪಿಕೊಂಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶಿಸುತ್ತಿರುವ ಫ್ಯಾಂಟಸಿ ಕತೆ ಹೊಂದಿರುವ ಸಿನಿಮಾದಲ್ಲಿ ಸಹ ಪ್ರಭಾಸ್ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಹಾಗೂ ಅಮಿತಾಬ್ ಬಚ್ಚನ್ ನಟಿಸಲಿದ್ದಾರೆ.

More from Filmibeat

English summary
Prabhas's two movies may released in 2021. Radhe-Shyam movie will relase in few months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X