ಒಬ್ಬಿಬ್ಬರಲ್ಲ ನನ್ನ ಬದುಕಿನಲ್ಲಿ ಹಲವಾರು ಹುಡುಗರು ಬಂದು ಹೋಗಿದ್ದಾರೆ ಎಂದ ನಟಿ..!
ಪುರುಷರು ಮತ್ತು ಮ್ಯಾಗಿ ಎರಡು ಒಂದೆ. ಯಾಕೆಂದರೆ ಎರಡು ಕೂಡ ಎರಡೇ ನಿಮಿಷದಲ್ಲಿ ಮುಕ್ತಾಯವಾಗುತ್ತೆ ಎಂದು ಹೇಳುವ ಮೂಲಕ ಈ ಹಿಂದೆ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಅಣುಕಿಸಿದ್ದವರು ರೆಜಿನಾ ಕ್ಯಾಸಂದ್ರ.
ಕನ್ನಡದ ಸೂರ್ಯಕಾಂತಿ ಚಿತ್ರದಲ್ಲಿ ಚೇತನ್ ಜೊತೆ ಆಕ್ಟ್ ಮಾಡಿದ್ದ ರೆಜಿನಾ, ಹಿಂದೊಮ್ಮೆ ನಾನು ಚೈಲ್ಡ್‌ವುಡ್‌ನಲ್ಲೇ ಫೋರ್ನ್ ಸಿನಿಮಾಗಳನ್ನು ನೋಡುತ್ತಿದ್ದೆ ಎಂದು ಹೇಳುವ ಮೂಲಕ ಎಲ್ಲರನ್ನೂ ನಿಬ್ಬೇರಗಾಗಿಸಿದ್ದರು. ಚರ್ಚೆಗೀಡಾಗಿದ್ದರು. ಇಂಥಾ ರೆಜಿನಾ ಕ್ಯಾಸಂದ್ರ ಈಗ ನನ್ನ ಬದುಕಿನಲ್ಲಿ ಒಬ್ಬರಲ್ಲ, ಇಬ್ಬರಲ್ಲ ಹಲವು ಹುಡುಗರು ಬಂದು ಹೋಗಿದ್ದಾರೆ ಎಂದು ಹೇಳಿದ್ದಾರೆ.

ಹೌದು, ಅಸಲಿಗೆ ಕೆಲ ಕಾಲ ಚಿತ್ರರಂಗದಿಂದ ಅಂತರ ಕಾಪಾಡಿಕೊಂಡು, ವೆಬ್ ಸರಣಿಗಳತ್ತ ತುಸು ಹೆಚ್ಚು ಗಮನ ವಹಿಸುತ್ತಿದ್ದ ರೆಜಿನಾ ಕ್ಯಾಸಂದ್ರ, ಸದ್ಯಕ್ಕೆ ಉತ್ಸವಂ ಚಿತ್ರದ ಮೂಲಕ ಬೆಳ್ಳಿತೆರೆಗೆ ಮರಳುತ್ತಿದ್ದಾರೆ. ಇಂದು ಈ ಚಿತ್ರ ಬಿಡುಗಡೆಯೂ ಆಗಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರವನ್ನೂ ಮಾಡುತ್ತಿರುವ ರೆಜಿನಾ ಹಲವಾರು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಹೀಗೆ ಸುಮನ್ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿರುವ ರೆಜಿನಾ ಕ್ಯಾಸಂದ್ರ, ನನಗೆ ಈ ಡೇಟಿಂಗ್ ಎಲ್ಲ ತುಂಬಾನೇ ಮಾಮೂಲಿ ಅಂದಿದ್ದಾರೆ. ಇಲ್ಲಿಯವರೆಗೆ ಹಲವಾರು ಜನರ ಜೊತೆ ನಾನು ಸುತ್ತಾಡಿದ್ದೇನೆ ಎಂದು ಹೇಳಿದ್ದಾರೆ.ನನ್ನ ಬದುಕಿನಲ್ಲಿ ಹಲವಾರು ಹುಡುಗರು ಬಂದು ಹೋಗಿದ್ದಾರೆ ಎಂದಿದ್ದಾರೆ.
ಇನ್ನೂ ನನ್ನಿಂದ ನನ್ನ ಹಳೆಯ ಸಂಬಂಧಗಳ ಕುರಿತ ವಿಚಾರವನ್ನೆಲ್ಲ ಮುಚ್ಚಿಡಲು ಸಾಧ್ಯವಾಗುವುದಿಲ್ಲ. ಹೀಗಾಗಿಯೇ ನಾನು ಎಲ್ಲವನ್ನೂ ನೇರವಾಗಿಯೇ ಹೇಳುವ ಅಭ್ಯಾಸ ರೂಡಿಸಿಕೊಂಡಿದ್ದೇನೆ ಎಂದಿರುವ ರೆಜಿನಾ, ನನ್ನ ಈ ಪ್ರಾಮಾಣಿಕ ಮಾತುಗಳಿಂದ ನನ್ನ ಮಾಜಿ ಬಾಯ್ ಫ್ರೆಂಡ್‌ಗಳ ಹೆತ್ತವರು ಕೂಡ ಆಘಾತಕ್ಕೊಳಗಾಗಿದ್ದು ಇದೆ ಎಂದಿದ್ದಾರೆ. ನಾನು ತುಂಬಾನೇ ಸ್ವತಂತ್ರ್ಯವಾಗಿ ಬೆಳೆದ ಹುಡುಗಿ, ನನ್ನ ಜವಾಬ್ಧಾರಿಯನ್ನು ವಹಿಸಿಕೊಳ್ಳುವ ಸಮರ್ಥವಾದ ಹುಡುಗನನ್ನೂ ಹುಡುಕುತ್ತಿದ್ದೇನೆ ಎಂದಿರುವ ರೆಜಿನಾ, ನನ್ನನ್ನೂ ಪ್ರೀತಿ ಮಾಡೋರ ಜೊತೆ, ಜವಾಬ್ಧಾರಿಗಳನ್ನೂ ಅರಿತು ಬದುಕು ನಡೆಸುವವರ ಜೊತೆ ಇರಲು ನನಗೆ ಇಷ್ಟವೆಂದು ಹೇಳಿದ್ಧಾರೆ. ಸದ್ಯಕ್ಕೆ ಈ ಪ್ರೀತಿ ಪ್ರೇಮ ಡೇಟಿಂಗ್ ಇವೆಲ್ಲದರಿಂದ ತಾವು ವಿರಾಮ ತೆಗೆದುಕೊಂಡಿರುವುದಾಗಿ ಕೂಡ ರೆಜಿನಾ ಈ ಸಂದರ್ಶನದಲ್ಲಿ ಹೇಳಿದ್ದಾರೆ.

ಅಂದ್ಹಾಗೇ ರೆಜಿನಾ ಕ್ಯಾಸಂದ್ರ ಮತ್ತು ಕ್ಯಾಪ್ಟನ್ ಮಿಲ್ಲರ್, ರಾಯನ್, ಮೈಕಲ್ ಸೇರಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ಸಂದೀಪ್ ಕಿಶನ್ ನಡುವೆ ಪ್ರೇಮಾಂಕುರವಾಗಿರುವ ಅನುಮಾನ ಅನೇಕರಲ್ಲಿದೆ. ಆದರೆ ಇದಕ್ಕೆ ಉತ್ತರವನ್ನೂ ನೀಡಿರುವ ರೆಜಿನಾ ಕ್ಯಾಸಂದ್ರ, ನಾನು ಮತ್ತು ಸಂದೀಪ್ ಅತ್ಯುತ್ತಮ ಸ್ನೇಹಿತರಷ್ಟೇ ಎಂದು ಹೇಳಿದ್ದಾರೆ. ನಾವೂ ಇಬ್ಬರು ಟಾಮ್ ಅಂಡ್ ಜೆರ್ರಿ ತರಹ ಆಗಾಗ ಕಿತ್ತಾಡಿಕೊಳ್ತಾನೇ ಇರುತ್ತೇವೆ, ಒಮ್ಮೊಮ್ಮೆ ಎರಡು ಮೂರು ತಿಂಗಳಾದರೂ ಮಾತನಾಡಲ್ಲ ಎಂದು ಕೂಡ ಸೂರ್ಯಕಾಂತಿಯ ಚೆಲುವೆ ರೆಜಿನಾ ಹೇಳಿದ್ದಾರೆ.
ಅಂದ್ಹಾಗೇ ರೆಜಿನಾ ಅಭಿನಯದ ಉತ್ಸವಂ ಚಿತ್ರ ಇಂದು ತೆರೆಗೆ ಬಂದಿದೆ. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಸಂಸ್ಥೆ ಈ ಚಿತ್ರವನ್ನು ಕರುನಾಡಿನೆಲ್ಲೆಡೆ ವಿತರಣೆ ಮಾಡುವ ಜವಾಬ್ಧಾರಿಯನ್ನು ವಹಿಸಿಕೊಂಡಿದೆ. ರೆಜಿನಾ ಎದುರು ನಾಯಕನಾಗಿ ಇಲ್ಲಿ ದಿಲೀಪ್ ಪ್ರಕಾಶ್ ಇದ್ದಾರೆ. ಇನ್ನೂ ಪ್ರಕಾಶ್ ರಾಜ್, ನಾಸರ್, ಬ್ರಹ್ಮಾನಂದಂ, ರಾಜೇಂದ್ರ ಪ್ರಸಾದ್ ಹೀಗೆ ದೊಡ್ಡ ದೊಡ್ಡ ಕಲಾವಿದರು ಈ ಉತ್ಸವಂ ಚಿತ್ರದ ಭಾಗವಾಗಿದ್ಧಾರೆ. ಚಿತ್ರಕ್ಕೆ ಅರ್ಜುನ್ ಸಾಯಿ ನಿರ್ದೇಶನ ಇದ್ದು, ಸುರೇಶ್ ಪಾಟೀಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಉಳಿದಂತೆ ಹಿಂದಿಯಲ್ಲಿ ಕೂಡ ರೆಜಿನಾ ಒಂದು ಸಿನಿಮಾವನ್ನು ಕಂಪ್ಲೀಟ್ ಮಾಡಿದ್ದಾರೆ. ಇದಲ್ಲದೇ ತಲಾ ಅಜಿತ್ ಅಭಿನಯದ ವಿಡಮುಯಾರ್ಚಿ ಚಿತ್ರದಲ್ಲಿ ಕೂಡ ರೆಜಿನಾ ಪ್ರಮುಖ ಪಾತ್ರ ನಿರ್ವಹಿಸಿದ್ಧಾರೆ. ಜಟ್ ಮತ್ತು ಪ್ಲ್ಯಾಶ್ ಬ್ಯಾಕ್ ಬಿಡುಗಡೆಗೆ ಸಿದ್ಧವಾಗಿರುವ ರೆಜಿನಾ ಅಭಿನಯದ ಇನ್ನೆರಡು ಚಿತ್ರಗಳು.


Click it and Unblock the Notifications











