twitter
    For Quick Alerts
    ALLOW NOTIFICATIONS  
    For Daily Alerts

    Tollywood Heroes Remuneration : ಪ್ರಭಾಸ್‌ಗೆ 100 ಕೋಟಿ, ಚಿರಂಜೀವಿ, ಮಹೇಶ್ ಬಾಬು ಸಂಭಾವನೆ ಎಷ್ಟು?

    |

    ಪ್ಯಾನ್‌ ಇಂಡಿಯಾ ಸಿನಿಮಾಗಳ ನಿರ್ಮಾಣ ಶುರುವಾದ ಬಳಿಕ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಒಂದು ಭಾಷೆಯಲ್ಲಿ ಸಿನಿಮಾ ಶೂಟಿಂಗ್ ಮಾಡಿ ಒಂದೇ ಭಾಷೆಯಲ್ಲಿ ರಿಲೀಸ್ ಮಾಡಿ ಅದಕ್ಕೆ ತಕ್ಕ ಕಲೆಕ್ಷನ್ ಮಾಡಬೇಕು ಎನ್ನುವುದು ಮೊದಲಿನ ಲೆಕ್ಕಾಚಾರ ಆಗಿತ್ತು. ಆದ್ರೀಗ ಸ್ಟಾರ್ ನಟರು ಪ್ಯಾನ್ ಇಂಡಿಯಾ ಚಿತ್ರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.

    ಪ್ಯಾನ್ ಇಂಡಿಯಾ ಅಂತ ಬಂದಾಗ ಸಿನಿಮಾ ಮಾಡಲು ದೊಡ್ಡ ಮಟ್ಟದ ಬಂಡವಾಳ ಹೂಡುತ್ತಿದ್ದಾರೆ. ವಿಶ್ವದ ಪ್ರೇಕ್ಷಕರಿಗಾಗಿ ಸಿನಿಮಾ ಮಾಡಲಾಗುತ್ತಿದೆ. ಯಾವುದೇ ಒಂದು ಪ್ರಾದೇಶಿಕ ಪ್ರೇಕ್ಷಕರನ್ನು ಮಾತ್ರ ಗಮನದಲ್ಲಿ ಇಟ್ಟುಕೊಳ್ಳದೆ. ಇಡೀ ವಿಶ್ವದ ಪ್ರೇಕ್ಷಕರಿಗಾಗಿ ಸಿನಿಮಾಗಳನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗುತ್ತಿದೆ. ಈ ಸಾಲಿಗೆ ಕನ್ನಡದ ಸಿನಿಮಾಗಳು ಕೂಡ ಸೇರಿಕೊಂಡಿದೆ.

    Vijay Devarakonda: ಇದು ವಿಜಯ್ ದೇವರಕೊಂಡರ 15 ಕೋಟಿ ಬೆಲೆಯ ಲಕ್ಷುರಿ ಬಂಗಲೆ!Vijay Devarakonda: ಇದು ವಿಜಯ್ ದೇವರಕೊಂಡರ 15 ಕೋಟಿ ಬೆಲೆಯ ಲಕ್ಷುರಿ ಬಂಗಲೆ!

    ಸಿನಿಮಾಗಳು ಮಾತ್ರ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಆಗುವುದು ಮಾತ್ರ ಅಲ್ಲ. ಈ ಚಿತ್ರಗಳಲ್ಲಿ ಅಭಿನಯಿಸುವ ತಾರೆಯರ ಸಂಭಾವನೆ ಕೂಡ ಹೆಚ್ಚಾಗಿದೆ. ಇತ್ತೀಚೆಗೆ ನಾಯಕ ನಟರ ಸಂಭಾವನೆಯಲ್ಲಿ ಹೆಚ್ಚಳ ಕಂಡಿದೆ. ಯಾಕೆಂದರೆ ಅವರ ಸಿನಿಮಾಗಳು ಪ್ಯಾನ್ ಇಂಡಿಯಾ ರಿಲೀಸ್ ಆಗಿ ಎಲ್ಲೆಡೆ ಭರ್ಜರಿ ಕಲೆಕ್ಷನ್‌ ಕಂಡಿದೆ. ಹಾಗಾಗಿ ನಟರಿಗೂ ದೊಡ್ಡ ಮಟ್ಟದ ಸಂಭಾವನೆ ನೀಡಲಾಗುತ್ತಿದೆ. ತೆಲುಗು ಚಿತ್ರರಂಗದಲ್ಲಿ ಬಹುತೇಕ ನಟರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಮಹೇಶ್ ಬಾಬು, ಚಿರಂಜೀವಿ, ಪ್ರಭಾಸ್, ರಾಮ್ ಚರಣ್ ಸೇರಿದಂತೆ ಮುಂತಾದವರ ಸಂಭಾವನೆ ಎಷ್ಟು ಎನ್ನುವುದನ್ನು ತಿಳಿಯಲು ಮುಂದೆ ಓದಿ...

    Prabhas-Anushka: ಮತ್ತೆ ತೆರೆ ಮೇಲೆ ಒಂದಾಗುತ್ತಿರುವ ಪ್ರಭಾಸ್ ಮತ್ತು ಅನುಷ್ಕಾ ಜೋಡಿ !Prabhas-Anushka: ಮತ್ತೆ ತೆರೆ ಮೇಲೆ ಒಂದಾಗುತ್ತಿರುವ ಪ್ರಭಾಸ್ ಮತ್ತು ಅನುಷ್ಕಾ ಜೋಡಿ !

    ಪ್ರಭಾಸ್‌ಗೆ 100 ಕೋಟಿ, ಪವನ್‌ಗೆ 50 ಕೋಟಿ!

    ಪ್ರಭಾಸ್‌ಗೆ 100 ಕೋಟಿ, ಪವನ್‌ಗೆ 50 ಕೋಟಿ!

    ತೆಲುಗು ನಟರ ಪೈಕಿ ನಟ ಪ್ರಭಾಸ್‌ಗೆ ಹೆಚ್ಚಿನ ಬೇಡಿಕೆ ಇದೆ. ಸ್ಟಾರ್ ನಟರಲ್ಲಿ ಒಬ್ಬರಾದ ಪ್ರಭಾಸ್ ಪ್ರತಿ ಚಿತ್ರಕ್ಕೂ 100 ಕೋಟಿ ರೂಪಾಯಿಗೂ ಹೆಚ್ಚು ಹಣ ಪಡೆಯುತ್ತಿದ್ದಾರೆ ಎಂದು ಅವರ ಪಿಆರ್ ತಂಡ ಅಧಿಕೃತವಾಗಿ ಘೋಷಿಸಿತ್ತು. ಆದರೆ 'ರಾಧೆಶ್ಯಾಮ್', 'ಆದಿ ಪುರುಷ್' ಚಿತ್ರದ ಬಳಿಕ ಪ್ರಭಾಸ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರಂತೆ. 25ನೇ ಚಿತ್ರ 'ಸ್ಪಿರಿಟ್'ಗೆ 150 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಬ್ರೇಕ್ ತೆಗೆದುಕೊಂಡು ಚಿತ್ರರಂಗಕ್ಕೆ ವಾಪಸ್ ಆದ ನಟ ಪವನ್ ಕಲ್ಯಾಣ್ ಸಾಲು, ಸಾಲು ಚಿತ್ರಗಳನ್ನು ಮಾಡುತ್ತಾ ಇದ್ದಾರೆ. ಪವನ್ ಕಲ್ಯಾಣ್ ಪ್ರತಿ ಚಿತ್ರಕ್ಕೆ 50 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. 'ಹರಿಹರ ವೀರಮಲ್ಲು' ಚಿತ್ರಕ್ಕೆ ಪವನ್ ಕಲ್ಯಾಣ್ 60 ಕೋಟಿ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಹಬ್ಬಿದೆ.

    RRR ಬಳಿಕ ರಾಮ್‌ ಚರಣ್ ಸಂಭಾವನೆ ಹೆಚ್ಚಳ!

    RRR ಬಳಿಕ ರಾಮ್‌ ಚರಣ್ ಸಂಭಾವನೆ ಹೆಚ್ಚಳ!

    ನಟ ರಾಮ್ ಚರಣ್ ಪ್ರತಿ ಚಿತ್ರಕ್ಕೆ ಸುಮಾರು 35 ಕೋಟಿ ರೂ. ತೆಗೆದುಕೊಳ್ಳುತ್ತಿದ್ದರಂತೆ. ಆದರೆ, RRR ಚಿತ್ರಕ್ಕೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡು, ಸರಿಸುಮಾರು 43 ಕೋಟಿ ರೂ. ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಈ ಚಿತ್ರದ ಬಳಿಕ ರಾಮ್‌ ಚರಣ್ ಸಂಭಾವನೆ 100 ಕೋಟಿ ಆಗಿದೆ. ಗೌತಮ್ ತಿನ್ನಾನೂರಿ ನಿರ್ದೇಶನದ ಚಿತ್ರಕ್ಕೆ ಮಗಧೀರ ರಾಮ್‌ಚರಣ್ 100 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

    ಮಹೇಶ್ ಬಾಬು, ಜೂ.ಎನ್‌ಟಿಆರ್ ಸಂಭಾವನೆ ಎಷ್ಟು?

    ಮಹೇಶ್ ಬಾಬು, ಜೂ.ಎನ್‌ಟಿಆರ್ ಸಂಭಾವನೆ ಎಷ್ಟು?

    ನಟ ಮಹೇಶ್ ಬಾಬು ಸಂಭಾವನೆ ಹೆಚ್ಚಾಗಿದೆ. ಆದರೆ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿಲ್ಲ. ಈ ಮೊದಲು ಮಹೇಶ್ ಬಾಬು ಒಂದು ಚಿತ್ರಕ್ಕೆ ಸುಮಾರು 55 ಕೋಟಿ ರೂ. ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಈಗ ಸಂಭಾವನೆ ಹೆಚ್ಚಿಸಿಕೊಂಡಿದ್ದು, ಮಹೇಶ್ ಬಾಬು ಪ್ರತಿ ಚಿತ್ರಕ್ಕೆ 80 ಕೋಟಿ ರೂ. ಪಡೆಯುತ್ತಾರಂತೆ. ಇನ್ನು ನಟ ಜೂನಿಯರ್ ಎನ್‌ಟಿಆರ್ ಸಂಭಾವನೆ ಕೂಡ ಹೆಚ್ಚಾಗಿಲ್ಲ. 'RRR' ಚಿತ್ರಕ್ಕಾಗಿ ಜೂನಿಯರ್ ಎನ್‌ಟಿಆರ್ 45 ಕೋಟಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಮುಂದಿನ ಚಿತ್ರಕ್ಕೆ ಎಷ್ಟು ಪಡೆಯುತ್ತಾರೆ ಎನ್ನುವುದು ಗೊತ್ತಾಗಬೇಕಿದೆ.

    ಅಲ್ಲು ಅರ್ಜುನ್ 60, ಚಿರಂಜೀವಿಗೆ 50 ಕೋಟಿ!

    ಅಲ್ಲು ಅರ್ಜುನ್ 60, ಚಿರಂಜೀವಿಗೆ 50 ಕೋಟಿ!

    ಇನ್ನು ನಟ ಅಲ್ಲು ಅರ್ಜುನ್ ಸದ್ಯ ಒಂದು ಚಿತ್ರಕ್ಕೆ 60 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಆದರೆ 'ಪುಷ್ಪ' ಹಿಟ್ ಕೊಟ್ಟ ಬಳಿಕ 100 ಕೋಟಿಗೆ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ನಟ ಚಿರಂಜೀವಿ ಒಂದು ಚಿತ್ರಕ್ಕೆ 50 ಕೋಟಿ ರೂ ಸಂಭಾವನೆ ಪಡೆಯುತ್ತಾರಂತೆ. ನಟ ನಂದಮೂರಿ ಬಾಲಕೃಷ್ಣ ಪ್ರತೀ ಚಿತ್ರಕ್ಕೆ 11 ಕೋಟಿ ಪಡೆದರೆ, ವೆಂಕಟೇಶ್ 7 ಕೋಟಿ ರೂ. ಪಡೆಯುತ್ತಾರಂತೆ.

    English summary
    Including Ram Charan, Chiranjeevi, Prabhas Other Telugu Heroes Remuneration List Is Here, Know More
    Friday, April 1, 2022, 14:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X