₹1800 ಕೋಟಿ ಗಳಿಸಿದ ಖುಷಿಯಲ್ಲಿದ್ದ ಪುಷ್ಪ 2 ನಿರ್ಮಾಪಕರಿಗೆ ಐಟಿ ಶಾಕ್..!

ರಾಜಕಾರಣಿಗಳ ಮನೆ ಮೇಲೆ, ಉದ್ಯಮಿಗಳ ಮೇಲೆ ವಾಣಿಜ್ಯ ತೆರೆಗೆ ಇಲಾಖೆ ಅಧಿಕಾರಿಗಳ ರೇಡು ಬೀಳೋದು ಮಾಮೂಲು. ಚಿತ್ರರಂಗ ಕೂಡ ಇದರಿಂದ ಹೊರತಾಗಿಲ್ಲ. ಆಗಾಗ ಇಲ್ಲಿ ರೇಡ್‌ ಬಿದ್ದ ಸುದ್ದಿ ಬೆಳ್ಳಂ ಬೆಳಗ್ಗೆಯೇ ಚಿತ್ರರಂಗವನ್ನು ನಡುಗಿಸುತ್ತೆ. ಇದಕ್ಕೆ ಪಕ್ಕದ ಹೈದರಾಬಾದ್‌ನಲ್ಲಿ ಇಂದು ನಡೆದ ಐಟಿ ಮತ್ತೊಂದು ಸಾಕ್ಷಿ.

ಹೌದು, ಪುಷ್ಪ 2 ಚಿತ್ರ ಗೆದ್ದ ಖುಷಿಯಲ್ಲಿ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ತೇಲುತ್ತಿತ್ತು. 1800 ಕೋಟಿ ಚಿತ್ರ ಗಳಿಸಿದ ಹಿನ್ನೆಲೆ ಸಂಭ್ರಮದ ಅಲೆಯಲ್ಲಿತ್ತು. ಈ ಸಂಭ್ರಮದ ಮೇಲೆ ಈಗ ಐಟಿ ಕಣ್ಣು ಬಿದ್ದಿದ್ದು, ಇಂದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ಕಚೇರಿ ಮತ್ತು ನಿರ್ಮಾಪಪರ ಮನೆಗೆ ಐಟಿ ಅಧಿಕಾರಿಗಳು ಬೆಳಗ್ಗೆಯೇ ಭೇಟಿ ನೀಡಿದ್ದಾರೆ.

income-tax-conducts-raids-at-pushpa-producers-and-dil-rajus-residence-and-office-in-hyderabad

ಇನ್ನೂ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ದಿಲ್ ರಾಜು, ಶಂಕರ್ ಮತ್ತು ರಾಮ್ ಚರಣ್ ಅವರ ಗೇಮ್ ಚೆಂಜರ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. 450 ಕೋಟಿ ಬಂಡವಾಳ ಹೂಡಿದ್ದರು. ಆದರೆ ಈ ಚಿತ್ರ ಕೈ ಕಚ್ಚಿದೆ. ಮತ್ತೊಂದು ಕಡೆ ಯಾವ ನಿರೀಕ್ಷೆ ಇಲ್ಲದೇ ಮಾಡಿದ್ದ 'ಸಂಕ್ರಾಂತಿಕಿ ವಸ್ತುನ್ನಾಮ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹಣ ದೋಚುತ್ತಿದೆ. ಈ ಕಾರಣಕ್ಕೆ ಖುಷಿ, ದುಃಖ ಎರಡನ್ನೂ ಅನುಭವಿಸುತ್ತಿದ್ದ ದಿಲ್ ರಾಜುಗೆ ಕೂಡ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ದಿಲ್ ರಾಜುಗೆ ಸಂಬಂಧಿಸಿದ ಎಂಟು ಕಡೆಗಳಲ್ಲಿ ಸುಮಾರು 65 ಜನರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿದೆ. ದಿಲ್ ರಾಜು ನಿರ್ಮಾಣ ಸಂಸ್ಥೆಯ ಕಚೇರಿ, ವಾಸವಿದ್ದ ನಿವಾಸ ಸಹೋದರ ಸಿರೇಶ್ ಹಾಗೂ ಮಗಳು ಹನ್ಸಿತಾ ರೆಡ್ಡಿ ಮನೆಗಳ ಮೇಲೂ ಕೂಡ ಅಧಿಕಾರಿಗಳು ದಾಳಿ ನಡೆಸಿದ್ದು, ಕೆಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.

ಇನ್ನು ದಿಲ್ ರಾಜು ಜೊತೆಯಲ್ಲಿ 'ಸಂಕ್ರಾಂತಿಗೆ ವಸ್ತುನ್ನಾಮ್​' ಚಿತ್ರದ ನಿರ್ದೇಶಕ ಅನಿಲ್ ರಾವಿಪುಡಿ ಕಚೇರಿ ಹಾಗೂ ವೆಂಕಟೇಶ್ವರ ಪ್ರೊಡಕ್ಷನ್ ಸಂಸ್ಥೆ ಕಚೇರಿ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

More from Filmibeat

Read more about: it raid tollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X