ಬೆಳ್ಳಗಿದ್ರೆ ಸಾಕು ಸಿನಿಮಾಗಳಲ್ಲಿ ನಟಿಸ್ಬೋದು, ನಾನು ಯಾಕಾದ್ರೂ ಆ ಸಾಂಗ್ ಮಾಡಿದ್ನೋ; ಜ್ವಾಲಾ ಗುಟ್ಟಾ
ಸಿನಿಮಾಗಳಲ್ಲಿ ನಟಿಸೋಕೆ ಪ್ರತಿಭೆ ಬೇಕಿಲ್ಲ, ತೆಳ್ಳಗೆ ಬೆಳ್ಳಗೆ ಇದ್ದರೆ ಸಾಕು. ಅಂದವಾಗಿ ಕಾಣುವವರು ನಟ-ನಟಿರಾಗಿಬಿಡಬಹುದು ಎಂದು ಕೆಲವರು ಕಾಮೆಂಟ್ ಮಾಡುತ್ತಿರುತ್ತಾರೆ. ಸದ್ಯ ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಕೂಡ ಇದೇ ಮಾತನ್ನು ಹೇಳಿದ್ದಾರೆ. ತೆಲುಗು ಚಿತ್ರವೊಂದರ ಸ್ಪೆಷಲ್ ಸಾಂಗ್‌ನಲ್ಲಿ ಆಕೆ ಹೆಜ್ಜೆ ಹಾಕಿದ್ದರು.
ನಾನು 'ಗುಂಡೆ ಜಾರಿ ಗಲ್ಲಂತಯ್ಯಿಂಡೆ' ಚಿತ್ರದಲ್ಲಿ ನಟಿಸುವುದಕ್ಕೂ ಮುನ್ನ ಸಾಕಷ್ಟು ಅವಕಾಶಗಳು ಬಂದಿತ್ತು. ಬ್ಯಾಡ್ಮಿಂಟನ್‌ನಲ್ಲಿ ಶ್ರೇಷ್ಠ ಸಾಧನೆ ಮಾಡುತ್ತಿದ್ದಾಗ ತನಗೆ ಸಿನಿಮಾ ಆಫರ್‌ಗಳು ಬಂದವು, ಸಿನಿಮಾಗಳಲ್ಲಿ ನಟಿಸೋಕೆ ಬೆಳ್ಳಗಿದ್ದರೆ ಸಾಕು ಅಲ್ವಾ? ಆದರೆ ನಾನು ಆ ಅವಕಾಶಗಳನ್ನು ತಿರಸ್ಕರಿಸಿದೆ. ಚಿತ್ರರಂಗದಲ್ಲಿ ಸಾಕಷ್ಟು ಸ್ನೇಹಿತರು ನನಗೆ ಇದ್ದಾರೆ. ಅವರನ್ನು ನೋಡಿದರೆ ಇಂಡಸ್ಟ್ರಿಯಲ್ಲಿ ಹೇಗೆ ಇರಬೇಕು ಎನ್ನುವುದು ಅರ್ಥವಾಗುತ್ತದೆ. ಅವರಂತೆ ಇರಲು ಸಾಧ್ಯವಿಲ್ಲ. ಇಂಡಸ್ಟ್ರಿಯಲ್ಲಿದ್ದರೆ ಬದಲಾಗಬೇಕು ಎಂದು ಸಂದರ್ಶನವೊಂದರಲ್ಲಿ ಜ್ವಾಲಾ ಗುಟ್ಟಾ ಹೇಳಿದ್ದಾರೆ.

ಚಿತ್ರರಂಗದಲ್ಲಿರಬೇಕು ಅಂದರೆ ನಾಚಿಕೆ ಬಿಡಬೇಕು. ಸಾಕಷ್ಟು ವಿಚಾರಗಳನ್ನು ಸಹಿಸಿಕೊಳ್ಳಬೇಕು. ಈಗ ನನ್ನ ಪತಿ(ನಟ ವಿಷ್ಣು ವಿಶಾಲ್) ಚಿತ್ರರಂಗದಲ್ಲಿದ್ದಾರೆ. ದಿನದ 24 ಗಂಟೆ ಆತನಿಗೆ ಏನೋ ಕೆಲಸಗಳಿರುತ್ತವೆ. ಹಣಸ ವಿಚಾರದಲ್ಲಿ ಬಹಳ ಟೆನ್ಷನ್ ಇರುತ್ತದೆ. ಆದರೆ ನಮಗೆ ಆ ರೀತಿ ಇಲ್ಲ. 10 ಗಂಟೆಗಳ ಕಾಲ ಗೇಮ್ ಪ್ರಾಕ್ಟ್ರೀಸ್ ಮುಗಿಸಿದ ಬಳಿಕ ನೆಮ್ಮದಿಯಾಗಿ ನಿದ್ದೆ ಮಾಡುತ್ತೇವೆ. ಆದರೆ ಸಿನಿಮಾ ಮಂದಿ ಅದು ಚೆನ್ನಾಗಿಲ್ಲ, ಇದು ಚೆನ್ನಾಗಿಲ್ಲ ಅಂತೆಲ್ಲಾ ಬಹಳ ಚಿಂತಾಕ್ರಾಂತರಾಗಿರುತ್ತಾರೆ ಎಂದು ಜ್ವಾಲಾ ವಿವರಿಸಿದ್ದಾರೆ.
ನಟ ನಿತಿನ್ ನನಗೆ ಒಳ್ಳೆಯ ಸ್ನೇಹಿತ ಎಂದು ಜ್ವಾಲಾ ಗುಟ್ಟಾ ತಿಳಿಸಿದ್ದಾರೆ. ಒಮ್ಮೆ ಪಾರ್ಟಿಯಲ್ಲಿ ಭೇಟಿಯಾದಾಗ ನಮ್ಮ ಸಿನಿಮಾದಲ್ಲಿ ಒಂದು ಹಾಡಿದೆ. ನೀನು ಡ್ಯಾನ್ಸ್ ಮಾಡಬೇಕು ಎಂದಿದ್ದ. ನಾನು ಸರಿ ಎಂದು ಸುಮ್ಮನಾಗಿದ್ದೆ. 3 ತಿಂಗಳ ಬಳಿಕ ನಿತಿನ್ ಮತ್ತೆ ಭೇಟಿಯಾಗಿ ಸಾಂಗ್ ಫೈನಲ್ ಆಗಿದೆ, ಡ್ಯಾನ್ಸ್ ಮಾಡಬೇಕು ಎಂದಾಗ ಸಾಧ್ಯವಿಲ್ಲ ಎಂದೆ. ಆದರೆ ನಿತಿನ್ ಬಿಡಲಿಲ್ಲ, ಆತನಿಗಾಗಿ ಒಪ್ಪಿಕೊಂಡೆ ಎಂದು ನೆನಪಿಸಿಕೊಂಡಿದ್ದಾರೆ.
ಆ ಹಾಡಿನಲ್ಲಿ ನಾನು ಕುಣಿದಿದ್ದಕ್ಕೆ ಏನಾದರೂ ಒಳ್ಳೆದಾಗಿದೆ ಅಂದರೆ ಅದು ಸಿನಿಮಾ ಗೆಲುವು. ಅಲ್ಲಿಯವರರೆಗೂ ಕೆಲ ಸಿನಿಮಾಗಳನ್ನು ಮಾಡಿ ಸೋತಿದ್ದ ನಿತಿನ್ ಆ ಚಿತ್ರದಿಂದ ಸಕ್ಸಸ್ ಕಂಡರು. ನನ್ನ ಡ್ಯಾನ್ಸ್ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಆಯಿತು. ಇದನ್ನು ನಿತಿನ್ ನನಗೆ ತೋರಿಸಿ ನಿನ್ನಿಂದಲೇ ಇದೆಲ್ಲಾ ಎಂದಿದ್ದ. ಈ ಕೂಡ ಆ ಸಾಂಗ್ ಬಗ್ಗೆ ಮಾತನಾಡುವುದು ಗೊಂದಲ ಎನಿಸುತ್ತದೆ ಎಂದು ಜ್ವಾಲಾ ಹೇಳಿದ್ದಾರೆ.
ಸಾಂಗ್ ಶೂಟಿಂಗ್ ಬಗ್ಗೆ ನೆನಪಿಸಿಕೊಂಡಿರುಬ ಜ್ವಾಲಾ "ಮೊದಲ ದಿನ ಡ್ರೆಸ್ ಮೊಣಕಾಲಿನವರೆಗೆ ಇತ್ತು. ಮರುದಿನ ಡ್ರೆಸ್ ಚಿಕ್ಕದಾಗಿತ್ತು. ಬಳಿಕ 3ನೇ ದಿನವೂ ಅದೇ ರೀತಿ ಆಯಿತು. ಏನಿದೆಲ್ಲಾ ಎಂದುಕೊಂಡೆ. ನಾಲ್ಕನೇ ದಿನ ಹೇಗೋ ಸಾಂಗ್ ಚಿತ್ರೀಕರಣ ಮುಗಿಯಿತು ಎಂದು ಜ್ವಾಲಾ ಹೇಳಿರುವುದು ವೈರಲ್ ಆಗುತ್ತಿದೆ.
ವಿಜಯ್ ಕುಮಾರ್ ಕೊಂಡ ನಿರ್ದೇಶನದ 'ಗುಂಡೆ ಜಾರಿ ಗಲ್ಲಂತಯ್ಯಿಂಡೆ' ಚಿತ್ರ 2013ರಲ್ಲಿ ತೆರೆಗೆ ಬಂದಿತ್ತು. ನಿತಿನ್ ಜೋಡಿಯಾಗಿ ನಿತ್ಯಾ ಮೆನನ್ ನಟಿಸಿದ್ದರು. ಅನೂಪ್ ರುಬೆನ್ಸ್ ಸಂಗೀತ ಸಂಯೋಜನೆ ಮಾಡಿದ್ದರು. 'ಖುಷಿ ಖುಷಿಯಾಗಿ' ಟೈಟಲ್‌ನಲ್ಲಿ ಕನ್ನಡಕ್ಕೆ ಸಿನಿಮಾ ರೀಮೆಕ್ ಆಗಿತ್ತು. ಗಣೇಶ್-ಅಮೂಲ್ಯ ನಟಿಸಿದ್ದರು.


Click it and Unblock the Notifications











