twitter
    For Quick Alerts
    ALLOW NOTIFICATIONS  
    For Daily Alerts

    ''ನಟಿ ಶ್ರೀಲೀಲಾ ನನ್ನ ಮಗಳಲ್ಲ'' ಎಂದ ಖ್ಯಾತ ತೆಲುಗು ಉದ್ಯಮಿ

    By ರವೀಂದ್ರ ಕೊಟಕಿ
    |

    ಕನ್ನಡದಲ್ಲಿ 'ಕಿಸ್' ಚಿತ್ರದ ಮೂಲಕ ಪಡ್ಡೆ ಹುಡುಗರ ಹೃದಯಕ್ಕೆ ಲಗ್ಗೆಯಿಟ್ಟು, ಶ್ರೀಮುರಳಿ ಅವರೊಂದಿಗೆ 'ಭರಾಟೆ' ಬೀಸಿ, ಧನ್ವೀರ್ ಜೊತೆ 'ಬೈ ಟು ಲವ್' ಶೇರ್ ಮಾಡಿಕೊಂಡು, ಧ್ರುವ ಸರ್ಜಾ ಜೊತೆ 'ದುಬಾರಿ' ದುನಿಯಾ ನೋಡಲು ಹೊರಟ ಶ್ರೀಲೀಲಾ ಸಿನಿಪ್ರಿಯರಿಗೆ ಚಿರಪರಿಚಿತ ಹೆಸರು. ಬೆಂಗಳೂರಿಗೆ ಸೇರಿದ ಈ ತೆಲುಗು ಪಿಲ್ಲ ಈಗಷ್ಟೇ ತೆಲುಗಿನಲ್ಲಿ ಕೂಡ 'ಪೆಲ್ಲಿ ಸಂದD' ಮುಗಿಸಿಕೊಂಡು ಬಂದಿದ್ದಾಳೆ. ಅಲ್ಲದೆ, ರವಿತೇಜ ಅವರ ಮುಂದಿನ ಚಿತ್ರಕ್ಕೂ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾಳೆ.

    ಶ್ರೀಲೀಲಾ ಕನ್ನಡ ಸಿನಿಮಾರಂಗದ ಪ್ರತಿಭಾವಂತ ನಾಯಕ ನಟಿಯಾಗಿದ್ದು ಬಹುತೇಕ ಯುವ ನಾಯಕ ನಟರ ಚಿತ್ರಗಳಲ್ಲಿ ನಟಿಸುತ್ತಿದ್ದಾಳೆ. ಶ್ರೀಲೀಲಾ 14 ಜುಲೈ 2001 ರಂದು ಅಮೆರಿಕದ ಮಿಚಿಗನ್‌ನ ಡೆಟ್ರಾಯಿಟ್‌ನಲ್ಲಿ ಜನಿಸಿದರು. ತಾಯಿಯ ಹೆಸರು ಸ್ವರ್ಣಲತಾ. ಶ್ರೀಲೀಲಾ ತಂದೆ ಯಾರು? ಏನಿದು ಶ್ರೀಲೀಲಾ ಕುಟುಂಬದ ಗೊಂದಲ, ವಿವರಕ್ಕಾಗಿ ಮುಂದೆ ಓದಿ...

    ಶ್ರೀಲೀಲಾ ತಂದೆ ಯಾರು?

    ಶ್ರೀಲೀಲಾ ತಂದೆ ಯಾರು?

    ಶ್ರೀಲೀಲಾ ಅವರ ತಂದೆ ವಿಚಾರಕ್ಕೆ ಬರುವುದಾದರೆ ಆಂಧ್ರದ ಖ್ಯಾತ ಉದ್ಯಮಿ ಶುಭಾಕರ್ ರಾವ್ ಸುರಪನೇನಿ ಅಂತ ಉಲ್ಲೇಖಿಸಲಾಗುತ್ತದೆ. ಆದರೆ ಇದು ಈಗ ವಿವಾದಕ್ಕೆ ಕಾರಣವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಉದ್ಯಮಿ ಶುಭಾಕರ್ ರಾವ್ ಸುರಪನೇನಿ ವಿಜಯವಾಡದಲ್ಲಿ ತುರ್ತು ಪತ್ರಿಕಾಗೋಷ್ಠಿಯನ್ನು ಕರೆದು ಶ್ರೀಲೀಲಾ ವಿಚಾರದಲ್ಲಿ ಅನೇಕ ಸಂಗತಿಗಳನ್ನು ಹೊರಗಿಟ್ಟಿದ್ದಾರೆ.

    ಶ್ರೀಲೀಲಾ ನನ್ನ ಮಗಳಲ್ಲ

    ಶ್ರೀಲೀಲಾ ನನ್ನ ಮಗಳಲ್ಲ

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಶುಭಾಕರ್ ರಾವ್ ಅವರು ಈ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುವುದು ಹೀಗೆ ''ಚಲನಚಿತ್ರ ನಟಿ ಶ್ರೀಲೀಲಾ ಅವರು ಅನೇಕ ವೇದಿಕೆಗಳಲ್ಲಿ ತಾನು ಖ್ಯಾತ ಉದ್ಯಮಿ ಶುಭಾಕರ್ ರಾವ್ ಸುರಪನೇನಿ ಮಗಳು ಎಂದು ಹೇಳಿಕೊಂಡು ಬಂದಿದ್ದಾರೆ. ಆದರೆ ಇದನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಿದ್ದೇನೆ. ಶ್ರೀಲೀಲಾ ಅವರ ತಾಯಿ ನನ್ನ ಮಾಜಿ ಪತ್ನಿಯಾಗಿದ್ದು ನಾವಿಬ್ಬರು ಬೇರ್ಪಟ್ಟ ಸಮಯಕ್ಕೆ ಕನಿಷ್ಠ ಆಕೆ ಗರ್ಭವತಿ ಕೂಡ ಆಗಿರಲಿಲ್ಲ'' ಎಂದಿದ್ದಾರೆ.

    ಪ್ರತ್ಯೇಕವಾಗಿ 20 ವರ್ಷಗಳೇ ಆಗಿದೆ

    ಪ್ರತ್ಯೇಕವಾಗಿ 20 ವರ್ಷಗಳೇ ಆಗಿದೆ

    ''ಶ್ರೀಲೀಲಾ ತಾಯಿ ತನ್ನಿಂದ ಪ್ರತ್ಯೇಕವಾಗಿ 20 ವರ್ಷಗಳೇ ಆಗಿದೆ. ಆನಂತರ ಜನಿಸಿರುವ ಶ್ರೀಲೀಲಾ ಅವರನ್ನು ತನ್ನ ಮಗಳು ಅಂತ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ ತಾಯಿ ಮತ್ತು ಮಗಳು ನನ್ನ ಹೆಸರು ಹಿಡಿದು ಕೆಲವು ಕಡೆ ಸಾಲ ಪಡೆಯಲು ಮುಂದಾಗಿದ್ದಾರೆ.

    ಜೊತೆಗೆ ಆಸ್ತಿಯನ್ನು ಕ್ಲೇಮ್ ಮಾಡಲು ತನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ,'' ಎಂದು ಆರೋಪಿಸಿದ್ದಾರೆ.
     'ಫ್ಯಾಮಿಲಿ ಕೋರ್ಟ್' ನಲ್ಲಿ ವಿಚ್ಛೇದನ

    'ಫ್ಯಾಮಿಲಿ ಕೋರ್ಟ್' ನಲ್ಲಿ ವಿಚ್ಛೇದನ

    ''ಕಳೆದ ಕೆಲವು ವರ್ಷಗಳಿಂದ 'ಫ್ಯಾಮಿಲಿ ಕೋರ್ಟ್' ನಲ್ಲಿ ತಮ್ಮ ವಿಚ್ಛೇದನ ಕೇಸ್ ನಡೆಯುತ್ತಿದೆ ಕಾರಣಾಂತರಗಳಿಂದ ಸುಪ್ರೀಂಕೋರ್ಟ್ ವರೆಗೂ ಹೋಗಿ, ಹೈಕೋರ್ಟ್‌ಗೆ ವರ್ಗವಾಗಿ ಈಗ ಫ್ಯಾಮಿಲಿ ಕೋರ್ಟ್‌ಗೆಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ವಿಚ್ಛೇದನ ಪಡೆಯುವ ನಿರೀಕ್ಷೆಯಲ್ಲಿದ್ದೇನೆ. ಇಂತಹ ಸಮಯದಲ್ಲಿ ತಾಯಿ ಮತ್ತು ಮಗಳು ನನ್ನ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಅವರಿಬ್ಬರಿಗೂ ಕೂಡ ಲೀಗಲ್ ನೋಟಿಸ್ ನೀಡುತ್ತಿದ್ದೇನೆ,'' ಎಂದು ತಿಳಿಸಿದ್ದಾರೆ.

    ನನಗಿರುವುದು ಏಕೈಕ ಸಂತಾನ

    ನನಗಿರುವುದು ಏಕೈಕ ಸಂತಾನ

    ಅಲ್ಲದೆ ಈ ವಿಚಾರದಲ್ಲಿ ಮತ್ತಷ್ಟು ಸ್ಪಷ್ಟವಾಗಿ ಹೇಳಿರುವ ಸುರಪನೇನಿ ಅವರು 'ತನಗೆ ಇರುವುದು ಏಕಮಾತ್ರ ಸಂತಾನ 'ಸಾಯಿ ತನ್ವಿ ಸುರಪನೇನಿ' ಅಂತ ಸ್ಪಷ್ಟಪಡಿಸಿದ್ದಾರೆ. 'ಆಕೆ ಹೊರತು ಮತ್ತೆ ಯಾವುದೇ ಸಂತಾನವನ್ನು ಹೊಂದಿಲ್ಲ' ಅಂತ ಸ್ಪಷ್ಟಪಡಿಸಿದ್ದಾರೆ. ಇನ್ನು ಈ ವಿವಾದದ ಬಗ್ಗೆ ನಟಿ ಶ್ರೀಲೀಲಾ ಮತ್ತು ಅವರ ತಾಯಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದುನೋಡಬೇಕಿದೆ.

    English summary
    Kannada Actress Sree Leela name in a controversy relating to her father's identity. Industrialist named Surapaneni Subhakar Rao has denied reports that Sree Leela is his daughter which was doing rounds in the media. Know more.
    Monday, October 18, 2021, 13:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X