Prabhas: 'ಯಂಗ್ ರೆಬೆಲ್ ಸ್ಟಾರ್' ಬಿರುದು, ಕಲಾತ್ಮಕ ಸಿನಿಮಾಗಳ ಬಗ್ಗೆ ನಟ ಪ್ರಭಾಸ್ ಹೇಳೋದೇನು ಗೊತ್ತಾ?

ಪ್ಯಾನ್ ಇಂಡಿಯಾ ಸ್ಟಾರ್ ನಟ ಪ್ರಭಾಸ್ ಸೋಮವಾರ(ಅಕ್ಟೋಬರ್ 23) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತೆಲುಗು ಚಿತ್ರರಂಗದ ಈ ಕುಡಿ ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದೆ. ಸಾಲು ಸಾಲು ಸಿನಿಮಾಗಳು ಸೋಲು ಕಂಡರೂ ಕೂಡ ಪ್ರಭಾಸ್ ಚಾರ್ಮ್ ಕೊಂಚವೂ ಕೂಡ ಕಡಿಮೆಯಾಗಿಲ್ಲ. ಅವರ ಸಿನಿಮಾಗಳಿಗಾಗಿ ಫ್ಯಾನ್‌ ಕಾಯುವುದು ನಿಂತಿಲ್ಲ.

ತೆಲುಗು ಚಿತ್ರರಂಗದ ಈ ಡಾರ್ಲಿಂಗ್ ಮೊದಲು 2002 ರಲ್ಲಿ ಈಶ್ವರ್ ಸಿನಿಮಾದೊಂದಿಗೆ ಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿದರು. ಎರಡು ವರ್ಷಗಳ ನಂತರ ಬಿಡುಗಡೆಯಾದ ನಟಿ ತ್ರೀಷಾ ಅವರೊಂದಿಗಿನ ವರ್ಷಂ ಸಿನಿಮಾದಿಂದ ಖ್ಯಾತಿ ಗಳಿಸಿದರು. 2013 ರಲ್ಲಿ ಆಕ್ಷನ್ ಚಿತ್ರ ಮಿರ್ಚಿ ಬಿಡುಗಡೆಯಾಗುವ ಹೊತ್ತಿಗೆ, ಅವರು ಜನಪ್ರಿಯ ಸ್ಟಾರ್ ಆಗಿದ್ದರು. ಅಷ್ಟರಲ್ಲಿ ಅವರಿಗೆ 'ಯಂಗ್ ರೆಬೆಲ್ ಸ್ಟಾರ್' ಎಂಬ ಬಿರುದು ಪಡೆದಿದ್ದರು. 2015 ರಲ್ಲಿ ಎಸ್‌ಎಸ್ ರಾಜಮೌಳಿಯವರ ಬಾಹುಬಲಿ ದಿ ಬಿಗಿನಿಂಗ್ ಮೂಲಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡರು.

Interesting facts about Actor Prabhas on his birthday

ಬಿರುದುಗಳ ಬಗ್ಗೆ ನಟ ಪ್ರಭಾಸ್ ಅಭಿಪ್ರಾಯ ಹೀಗಿದೆ

ಸಾಮಾನ್ಯವಾಗಿ ಒಂದೆರಡು ಸಿನಿಮಾಗಳ ಬಳಿಕ ನಟರಿಗೆ ಒಂದು ಬಿರುದು, ಟೈಟಲ್ ಕೊಟ್ಟ ಕರೆಯಲಾಗುತ್ತದೆ. ಫ್ಯಾನ್ಸ್‌ಗಳು ತಮ್ಮ ನಟರನ್ನು ಹಾಗೆ ಕರೆಯಲು ಕೂಡ ಇಷ್ಟಾಪಡುತ್ತಾರೆ. ಆದರೆ, ನಟ ಪ್ರಭಾಸ್‌ಗೆ ಅಂತಹ ಬಿರುದುಗಳು ಇಷ್ಟವಿಲ್ಲವಂತೆ. ಹೌದು, ಈ ಬಗ್ಗೆ ಅವರೇ ಮಿರ್ಚಿ ಬಿಡುಗಡೆ ಸಮಯದಲ್ಲಿ 123ತೆಲುಗು ಡಾಟ್ ಕಾಮ್ ಗೆ ಕೊಟ್ಟಿರುವಂತಹ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಇಂತಹ ಬಿರುದುಗಳಿಂದ ನಾನು ಕಂಫರ್ಟ್ ಆಗಿಲ್ಲ ಎಂದು ಹೇಳಿದ್ದರು. ಸಂದರ್ಶನದಲ್ಲಿ ಮಾತನಾಡಿದ ಪ್ರಭಾಸ್, ಎಸ್ಎಸ್ ರಾಜಮೌಳಿ ಅವರ ಬಾಹುಬಲಿ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಶೀರ್ಷಿಕೆಗಳಿಂದ ನಾನು ಕಂಫರ್ಟ್ ಆಗಿಲ್ಲ ಮತ್ತು ಕೇವಲ ಪ್ರಭಾಸ್ ಆಗಲು ಬಯಸುತ್ತೇನೆ ಎಂದು ಹೇಳಿದ್ದರು.

Interesting facts about Actor Prabhas on his birthday

"ನನಗೆ ಸುಮ್ಮನೆ ಬಿಟ್ಟರೇ ನಾನು ಕೇವಲ ಪ್ರಭಾಸ್ ಆಗಿ ಇರಲು ಬಯಸುತ್ತೇನೆ. ಮಿರ್ಚಿ ಸಿನಿಮಾಗಾಗಿ ನಾನು ಯಂಗ್ ರೆಬಲ್ ಸ್ಟಾರ್ ಟೈಟಲ್ ಬಹಾಕದಂತೆ ನನ್ನ ಸ್ನೇಹಿತರನ್ನು ಮನವೊಲಿಸಲು ಪ್ರಯತ್ನಿಸಿದೆ. ಆದರೆ ಅವರೇ ನನ್ನನ್ನು ಒಪ್ಪಿಸಿದರು. ನನ್ನ ಅಭಿಮಾನಿಗಳು ಆ ಟೈಟಲ್ ಇಷ್ಟಪಡುತ್ತಾರೆ. ಹಾಗಾಗಿ ಅವರನ್ನು ನಿರಾಶೆಗೊಳಿಸಲು ಇಷ್ಟಪಡಿಸಲಿಲ್ಲ. ನಾನು ಅದಕ್ಕೆ ಒಪ್ಪಿದೆ. ನನ್ನ ಅಭಿಮಾನಿಗಳು ನನಗೆ ಅತ್ಯಂತ ಮುಖ್ಯ ಮತ್ತು ಅವರು ಇಷ್ಟಪಡುವದನ್ನು ನಾನು ಇಷ್ಟಪಡುತ್ತೇನೆ" ಎಂದು ತಿಳಿಸಿದ್ದರು.

ಕಲಾತ್ಮಕ ಸಿನಿಮಾದಲ್ಲಿ ನಟಿಸುವುದಿಲ್ಲ: ಪ್ರಭಾಸ್

ನಟ ಪ್ರಭಾಸ್ ಪ್ಯಾರಲಲ್ ಸಿನಿಮಾ ಅಥವಾ ಕಲಾತ್ಮಕ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದೂ ಪ್ರಭಾಸ್ ಇದೇ ಸಂದರ್ಶನದಲ್ಲಿ ಹೇಳಿದ್ದರು. "ನಾನು ಮನರಂಜನಾ ಸಿನಿಮಾಗಳಿಗೆ ಆದ್ಯತೆ ನೀಡುತ್ತೇನೆ. ನನ್ನ ಇಮೇಜ್ ಮಿತಿಯಲ್ಲಿ ನಾನು ಪ್ರಯೋಗ ಮಾಡುತ್ತೇನೆ. ಉದಾಹರಣೆಗೆ, ನಾನು ಕೌಟುಂಬಿಕ ಸಿನಿಮಾಗಳನ್ನು ಮಾಡಲು ಪ್ರಯತ್ನಿಸಿದಾಗಿನಿಂದ ಡಾರ್ಲಿಂಗ್ ಮತ್ತು ಮಿಸ್ಟರ್ ಪರ್ಫೆಕ್ಟ್ ನನ್ನ ಪ್ರಯೋಗಗಳಾಗಿವೆ" ಎಂದು ತಿಳಿಸಿದ್ದರು.

ಮುಂದುವರಿದು ಮಾತನಾಡಿರುವ ಅವರು, 'ಚಕ್ರ'ನಂಥ ಸಿನಿಮಾವನ್ನು ನಾನು ಮತ್ತೆಂದೂ ಮಾಡಬಾರದು. ಆಕ್ಷನ್ ಚಿತ್ರಗಳ ಸರಣಿಯ ನಂತರ ನನಗೆ ಬೇಸರವಾಯಿತು. ಅದಕ್ಕಾಗಿಯೇ ನಾನು ಡಾರ್ಲಿಂಗ್ ಮತ್ತು ಮಿಸ್ಟರ್ ಪರ್ಫೆಕ್ಟ್‌ನಂತಹ ಚಿತ್ರಗಳನ್ನು ಮಾಡಲು ನಿರ್ಧರಿಸಿದೆ. ನನಗೆ ಕಿಕ್ ಸಿಕ್ಕಿತು ಎಂದು ಮಾಹಿತಿ ನೀಡಿದ್ದರು.

ಪ್ರಭಾಸ್ ಸಿನಿಮಾಗಳು

ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ಓಂ ರಾವುತ್ ನಿರ್ದೇಶನದ ಆದಿಪುರುಷ ಚಿತ್ರದಲ್ಲಿ ಪ್ರಭಾಸ್ ರಾಘವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ರಾವಣನಾಗಿ ಸೈಫ್ ಅಲಿ ಖಾನ್ ಮತ್ತು ಜಾನಕಿಯಾಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಕಳಪೆ ಗ್ರಾಫಿಕ್ಸ್, ವಿಎಫ್‌ಎಕ್ಸ್‌ನಿಂದಾಗಿ ಜನರಿಂದ ತೀವ್ರ ಟೀಕೆ ಎದುರಿಸಿತ್ತು.

ಇನ್ನು, ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ಅವರ ಸಲಾರ್ ಭಾಗ ಒಂದು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದ್ದು, ಅದೇ ದಿನದಂದೇ ಶಾರುಖ್ ಖಾನ್ ಅವರ ಡಂಕಿ ಬಿಡುಗಡೆಯಾಗಲಿದೆ. ಎರಡೂ ಚಿತ್ರಗಳು ಈ ವರ್ಷ ಕ್ರಿಸ್‌ಮಸ್‌ನಲ್ಲಿ ಬಿಡುಗಡೆಯಾಗಲಿವೆ. ಸಲಾರ್ ಜೊತೆಗೆ, ಪ್ರಭಾಸ್ ಅವರು ನಾಗ್ ಅಶ್ವಿನ್ ಅವರ ಕಲ್ಕಿ 2898 AD ಸಿನಿಮಾದಲ್ಲಿಯೂ ಕೆಲಸ ಮಾಡುತ್ತಿದ್ದಾರೆ.

More from Filmibeat

English summary
Young Rebel Star Prabhas birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X