ಪುಷ್ಪ ಭಾಗ 2: ವಿಶೇಷ ಸಂಗತಿಗಳು ಇಲ್ಲಿವೆ!

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ಬಾಕ್ಸಾಫೀಸ್ ಚಿಂದಿ ಮಾಡಿದೆ. ಚಿತ್ರ ರಿಲೀಸ್ ಆದ ದಿನದಿಂದಲೇ ಭಾರಿ ಸದ್ದು ಮಾಡುತ್ತಿದೆ. ನಿರೀಕ್ಷೆಗೂ ಮೀರಿ ಚಿತ್ರ ಗಳಿಕೆ ಮಾಡಿದೆ. ಸಿನಿಮಾವನ್ನು ನೋಡಿದವರೆಲ್ಲಾ ಪುಷ್ಪ ಚಿತ್ರವನ್ನು ಕೊಂಡಾಡಿದ್ದಾರೆ.

Recommended Video

ಅಲ್ಲು ಅರ್ಜುನ್ ಆಕ್ಟಿಂಗ್‌ಗೆ ಫಿದಾ ಆದಾ ಬಾಲಿವುಡ್ ನಿರ್ಮಾಪಕರು !

ಈಗ ಎಲ್ಲರ ಚಿತ್ತ ಪುಷ್ಪ ಚಿತ್ರದ ಸೀಕ್ವೆಲ್ ನತ್ತ ನೆಟ್ಟಿದೆ. ಪುಷ್ಪ ಚಿತ್ರದ ಕ್ಲೈಮ್ಯಾಕ್ಸ್‌ ಪುಷ್ಪ ಭಾಗ2 ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಕೂಡಿಸಿದೆ. ಈಗಾಗಲೇ ಸಿನಿಮಾ ಯಾವಾಗ ಬರಲಿದೆ ಎನ್ನುವ ಬಗ್ಗೆ ಜನ ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಪುಷ್ಪ ಮೊದಲ ಭಾಗಕ್ಕಿಂತಲ್ಲೂ ಎರಡನೇ ಭಾಗದಲ್ಲಿ ಸಾಕಷ್ಟು ವಿ‍ಶೇಷತೆ ಇರಲಿಲ್ಲ.

ಸದ್ಯ ಪುಷ್ಪ ಭಾಗ ಎರಡರಲ್ಲಿ ಏನೆಲ್ಲಾ ವಿಶೇಷತೆ ಇರಲಿದೆ ಎನ್ನುವ ಬಗ್ಗೆ ಸುದ್ದಿಗಳು ಹಬ್ಬಿವೆ. ನಟಿ ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಪಾತ್ರಗಳು ಮತ್ತು ಕಥೆಯಲ್ಲಿ ಸುಕುಮಾರ್ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲು ಸಿದ್ಧವಾಗಿದ್ದಾರೆ. ಪುಷ್ಪ2 ಚಿತ್ರದ ಒಂದಷ್ಟು ಕುತೂಹಲ ಕಾರಿ ಸಂಗತಿಗಳು ಇಲ್ಲಿವೆ.

3 ಕೋಟಿ ಸಂಭಾವನೆ ಪಡೆಯುತ್ತಾರ ರಶ್ಮಿಕಾ!

3 ಕೋಟಿ ಸಂಭಾವನೆ ಪಡೆಯುತ್ತಾರ ರಶ್ಮಿಕಾ!

ಪುಷ್ಪ ಚಿತ್ರದ ಬಗ್ಗೆ ಹೆಚ್ಚಾಗಿ ಹರಿದಾಡುತ್ತಿರುವ ಸುದ್ದಿಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಸದ್ಯ ಮೂರು ಕೋಟಿಗೆ ಏರಿದೆಯಂತೆ. ಪುಷ್ಪ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಅವರ ಸಂಭಾವನೆ ಮೂರು ಕೋಟಿಗೆ ಏರಿದೆ. ಹಾಗಾಗಿ ಪುಷ್ಪ ದಿ ರೂಲ್ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಅವರು ಮೂರು ಕೋಟಿ ಸಂಭಾವನೆ ಪಡೆಯಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಪುಷ್ಪ2 ವೆಬ್‌ ಸರಣಿ ಆಗಬೇಕಿತ್ತು!

ಪುಷ್ಪ2 ವೆಬ್‌ ಸರಣಿ ಆಗಬೇಕಿತ್ತು!

ಈ ಚಿತ್ರದ ಕಥಾ ಹಂದರಕ್ಕಾಗಿ ನಿರ್ದೇಶಕ ಸುಕುಮಾರ್‌ ಹೆಚ್ಚಿನ ಸಮಯ ತೆಗೆದುಕೊಂಡು, ರಕ್ತ ಸಂಶೋಧನೆ ಮಾಡಿದ್ದಾರೆ. ಹಾಗಾಗಿ ಈ ಕಥೆಯನ್ನು ವೆಬ್‌ ಸರಣಿ ಮಾಡಲು ಸುಕುಮಾರ್‌ ಸಜ್ಜಾಗಿದ್ದರಂತೆ. ಅದರೆ ಸಿನಿಮಾ ಮಾಡಿ ಗೆದ್ದು ಬೀಗಿದೆ ಚಿತ್ರ ತಂಡ. ಈ ಬಗ್ಗೆ ಸ್ವತಃ ಸುಕುಮಾರ್‌ ಅವರು ಈ ಹಿಂದೆ ಹೇಳಿಕೊಂಡಿದ್ದರು.

ಪುಷ್ಪ ಒಂದರ ಯಶಸ್ಸು, ಪುಷ್ಪ 2 ಚಿತ್ರ ಕಥೆ ಬದಲಾವಣೆಗೆ ಕಾರಣ!

ಪುಷ್ಪ ಒಂದರ ಯಶಸ್ಸು, ಪುಷ್ಪ 2 ಚಿತ್ರ ಕಥೆ ಬದಲಾವಣೆಗೆ ಕಾರಣ!

ಚಿತ್ರದ ನಿರ್ದೇಶಕ ಸುಕುಮಾರ್‌ ಪುಷ್ಪ ಭಾಗ ಒಂದಕ್ಕಾಗಿ ಹೆಚ್ಚುವರಿ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದಾರೆ. ಅದೇ ದೃಶ್ಯಗಳನ್ನು ಭಾಗ ಎರಡಕ್ಕೆ ಬಳಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಈಗ ಸಂಪೂರ್ಣ ಚಿತ್ರವನ್ನು ಮತ್ತೆ ಶೂಟ್ ಮಾಡಲು ಸುಕುಮಾರ್‌ ನಿರ್ಧರಿಸಿದ್ದಾರಂತೆ. ಪುಷ್ಪ ಮೊದಲ ಭಾಗ ಅದ್ದೂರಿ ಯಶಸ್ಸು ಕಂಡ ಬೆನ್ನಲ್ಲೇ ಭಾಗ ಎರಡನ್ನು ವಿಭಿನ್ನವಾಗಿ ಮಾಡಲು ಕಥೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರಂತೆ.

2022 ಡಿಸೆಂಬರ್‌ನಲ್ಲಿ ಪುಷ್ಪ2 ರಿಲೀಸ್!

2022 ಡಿಸೆಂಬರ್‌ನಲ್ಲಿ ಪುಷ್ಪ2 ರಿಲೀಸ್!

ಪುಷ್ಪ ಭಾಗ ಒಂದು ಚಿತ್ರ 2021ರ ಡಿಸೆಂಬರ್‌ನಲ್ಲಿ ತೆರೆಗೆ ಬಂತು. ಇನ್ನು ಪುಷ್ಪ 2 ರಿಲೀಸ್ ಯಾವಾಗ ಎನ್ನುವ ಬಗ್ಗೆ ಕುತೂಹಲಗಳು ಮೂಡಿವೆ. ಈ ಚಿತ್ರ ಇದೇ ವರ್ಷ ಅಂದರೆ 2022ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ. ಆದರೆ ಚಿತ್ರೀಕರಣ ಮುಗಿದ ಬಳಿಕವೇ ಚಿತ್ರದ ರಿಲೀಸ್‌ ಯಾವಾಗ ಎನ್ನುವ ಬಗ್ಗೆ ಅಂದಾಜು ಸಿಗಲಿದೆ.

More from Filmibeat

English summary
Intresting Facts About Allu Arjun, Rashmika Mandanna Starrer Pushpa Part 2, KNow More About It,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X