For Quick Alerts
  ALLOW NOTIFICATIONS  
  For Daily Alerts

  ತೆಲುಗಿನ ಸ್ಟಾರ್ ನಟನಾದರೂ ಮಹೇಶ್ ಬಾಬುಗೆ ತೆಲುಗು ಓದಲು, ಬರೆಯಲು ಬರಲ್ಲ

  |

  ಟಾಲಿವುಡ್ ಸ್ಟಾರ್ ನಟರಲ್ಲಿ ಪ್ರಿನ್ಸ್ ಮಹೇಶ್ ಬಾಬು ಕೂಡ ಒಬ್ಬರು. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಮಹೇಶ್ ಬಾಬು, ಅದ್ಭುತ ಸಿನಿಮಾಗಳ ಮೂಲಕ ತೆಲುಗು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಟಾಲಿವುಡ್‌ನಲ್ಲಿ ಸ್ಟಾರ್ ಗಿರಿ ಪಡೆದು ಮೆರೆಯುತ್ತಿರುವ ಮಹೇಶ್ ಬಾಬುಗೆ ತೆಲುಗು ಓದಲು ಮತ್ತು ಬರೆಯಲು ಬರಲ್ಲ ಎನ್ನುವುದು ಅಚ್ಚರಿ ಎನಿಸಿದರೂ ಇದು ನಿಜ.

  ಕಳೆದ ಎರಡು ದಶಕಗಳಿಂದ ಮಹೇಶ್ ಬಾಬು 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 8 ನಂದಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಂಧ್ರ ಪ್ರದೇಶ ಸರ್ಕಾರ ಸಿನಿಮಾ ಕ್ಷೇತ್ರಕ್ಕೆ ನೀಡುವ ಪ್ರತಿಷ್ಠಿತ ಪ್ರಶಸ್ತಿ ಇದು. ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಟನೆ ಜೊತೆಗೆ ಸಿನಿಮಾ ನಿರ್ಮಾಣದಲ್ಲೂ ಮಹೇಶ್ ಬಾಬು ಗುರುತಿಸಿಕೊಂಡಿದ್ದಾರೆ.

  ನಿರ್ದೇಶಕ ಎ.ಆರ್ ಮುರುಗದಾಸ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ದಕ್ಷಿಣದ ಸೂಪರ್ ಸ್ಟಾರ್ಸ್ನಿರ್ದೇಶಕ ಎ.ಆರ್ ಮುರುಗದಾಸ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ದಕ್ಷಿಣದ ಸೂಪರ್ ಸ್ಟಾರ್ಸ್

  ನಿರರ್ಗಳವಾಗಿ ತೆಲುಗು ಮಾತನಾಡುತ್ತಾರೆ. ಸಿನಿಮಾ ಡೈಲಾಗ್‌ಗಳನ್ನು ಹೇಳುವ ಮಹೇಶ್ ಬಾಬು ತೆಲುಗು ಓದಲು ಮತ್ತು ಬರೆಯಲು ಕಲಿಯಲಿಲ್ಲ. ತೆಲುಗು ಸ್ಟಾರ್ ಮಹೇಶ್ ಬಾಬು ತೆಲುಗು ಯಾಕೆ ಕಲಿಯಲಿಲ್ಲ. ಇಲ್ಲಿದೆ ಮಾಹಿತಿ...

  ಸ್ಟಾರ್ ಕಿಡ್ ಮಹೇಶ್ ಬಾಬು

  ಸ್ಟಾರ್ ಕಿಡ್ ಮಹೇಶ್ ಬಾಬು

  ಮಹೇಶ್ ಬಾಬು ತಂದೆ ಕೃಷ್ಣ ತೆಲುಗಿನ ಜನಪ್ರಿಯ ನಟ ಮತ್ತು ನಿರ್ಮಾಪಕ. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೃಷ್ಣ ನಟಿಸಿದ್ದಾರೆ. ಸಹೋದರು ರಮೇಶ್ ಬಾಬು ಕೂಡ ನಟ ಮತ್ತು ನಿರ್ಮಾಪಕ. ಸಿನಿಮಾ ಹಿನ್ನಲೆಯಿಂದ ಬಂದ ಮಹೇಶ್ ಬಾಬುಗೆ ಸಿನಿಮಾ ಎಂಟ್ರಿ, ನಟನೆ ಕಷ್ಟ ಎನಿಸಿದ್ದಿಲ್ಲ.

  ತಮಿಳು ನಟರಾದ ಕಾರ್ತಿ ಮತ್ತು ವಿಜಯ್ ಬಾಲ್ಯದ ಸ್ನೇಹಿತರು

  ತಮಿಳು ನಟರಾದ ಕಾರ್ತಿ ಮತ್ತು ವಿಜಯ್ ಬಾಲ್ಯದ ಸ್ನೇಹಿತರು

  ಮಹೇಶ್ ಬಾಬು ಜನಿಸಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಮಹೇಶ್ ಬಾಬು ತನ್ನ ಬಾಲ್ಯವನ್ನು ಕಳೆದಿದ್ದು ಮದ್ರಾಸ್‌ನಲ್ಲಿ. ವಿದ್ಯಾಭ್ಯಾಸ ಕೂಡ ಮದ್ರಾಸ್‌ನಲ್ಲೇ ಮುಗಿಸಿದ್ದರು. ವಿಶೇಷ ಎಂದರೆ ತಮಿಳಿನ ಸ್ಟಾರ್ ನಟ ಕಾರ್ತಿ ಮತ್ತು ಮಹೇಶ್ ಬಾಬು ಇಬ್ಬರು ಒಂದೇ ಶಾಲೆಯಲ್ಲಿ ಓದಿದ್ದು. ಇನ್ನು ದಳಪತಿ ವಿಜಯ್ ಕೂಡ ಮಹೇಶ್ ಬಾಬು ಅವರ ಆಪ್ತ ಗೆಳೆಯ. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದ್ದು. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ಇಬ್ಬರು ಉತ್ತಮ ಸ್ನೇಹಿತರು ಮತ್ತು ಒಟ್ಟಿಗೆ ಆಟಗಳನ್ನು ಆಡುತ್ತಿದ್ದರು.

  ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸೂಪರ್ ಸ್ಟಾರ್ ವಿಲನ್?ಮಹೇಶ್ ಬಾಬು ಚಿತ್ರಕ್ಕೆ ಕನ್ನಡದ ಸೂಪರ್ ಸ್ಟಾರ್ ವಿಲನ್?

  ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು

  ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು

  ಭಾರತೀಯ ಸಿನಿಮಾರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಕೆಲವೇ ಕೆಲವು ನಟರಲ್ಲಿ ಮಹೇಶ್ ಬಾಬು ಕೂಡ ಒಬ್ಬರು. ಮತ್ತು ರಾಷ್ಟ್ರೀಯ ಬ್ರ್ಯಾಂಡ್ ಅನ್ನು ಅನುಮೋದಿಸುವ ದಕ್ಷಿಣ ಕೆಲವೇ ನಟರಲ್ಲಿ ಮಹೇಶ್ ಬಾಬು ಕೂಡ ಒಬ್ಬರು. ಇನ್ನು ಮಹೇಶ್ ಬಾಬು ನಟನೆಯ ಹೆಚ್ಚು ಸಿನಿಮಾಗಳು 18 ಸಿನಿಮಾಗಳು ಹಿಂದೆಗೆ ಡಬ್ ಆಗಿ ಬಿಡುಗಡೆಯಾಗಿದೆ.

  ತೆಲುಗು ಓದಲು, ಬರೆಯಲು ಕಲಿಯಲಿಲ್ಲ ಮಹೇಶ್ ಬಾಬು

  ತೆಲುಗು ಓದಲು, ಬರೆಯಲು ಕಲಿಯಲಿಲ್ಲ ಮಹೇಶ್ ಬಾಬು

  ಮಹೇಶ್ ಬಾಬು ಈ ಹಿಂದೆ ನೀಡಿದ ಸಂದರ್ಶನದಲ್ಲಿ ತೆಲುಗು ಓದಲು ಮತ್ತು ಬರೆಯಲು ಬರಲ್ಲ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದ್ದರು. "ಚೆನ್ನೈನಲ್ಲಿ ಹುಟ್ಟಿ ಬೆಳೆದ ನಾನು ತೆಲುಗು ಓದಲು ಮತ್ತು ಬರೆಯಲು ಕಲಿಯಲಿಲ್ಲ" ಎಂದಿದ್ದರು. ಆದರೆ ತೆಲುಗು ನಿರರ್ಗಳವಾಗಿ ಮಾತನಾಡುತ್ತಾರೆ, ಸಿನಿಮಾ ಡೈಲಾಗ್‌ಗಳನ್ನು ಹೇಳುತ್ತಾರೆ.

  ಬ್ರಾಹ್ಮಣರನ್ನು ಅಪಮಾನಿಸಿದ್ದಕ್ಕೆ ಚೇತನ್ ವಿರುದ್ಧ FIR ದಾಖಲಿಸಿದ ಪೊಲೀಸ್ | Filmibeat Kannada
  ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿ

  ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿ

  ಮಹೇಶ್ ಬಾಬು ಕೊನೆಯದಾಗಿ ಸರಿಲೇರು ನೀಕೆವ್ವರು ಸಿನಿಮಾದಲ್ಲಿ ನಟಿಸಿದ್ದರು. ಆರ್ಮಿ ಅಧಿಕಾರಿ ಪಾತ್ರದಲ್ಲಿ ಮಹೇಶ್ ಬಾಬು ಮಿಂಚಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಬಾಕ್ಸ್ ಆಫೀಸ್ ನಲ್ಲಿ 260 ಕೋಟಿ ರೂ. ಗಳಿಕೆ ಮಾಡಿದೆ ಎನ್ನುವ ಸುದ್ದಿ ಇದೆ. ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಮಹೇಶ್ ಬಾಬು ಬ್ಯುಸಿಯಾಗಿದ್ದಾರೆ.

  English summary
  Tollywood Actor Mahesh Babu Cannot read and write Telugu. Interesting facts about Tollywood Superstar Mahesh Babu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X