'ಪುಷ್ಪ'ರಾಜ್ ಗಂಗಮ್ಮ ತಲ್ಲಿ ವೇಷದ ಹಿಂದಿದೆ 'ಕಾಂತಾರ' ಮೀರಿಸುವಂತಹ ರೋಚಕ ಜನಪದ ಕಥೆ

ಅಲ್ಲು ಅರ್ಜುನ್ ನಟನೆಯ 'ಪುಷ್ಪ'- 2 ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಖತ್ ವೈರಲ್ ಆಗಿದೆ. ಸ್ಟೈಲಿಶ್ ಸ್ಟಾರ್ ಸೀರೆ ಉಟ್ಟು, ಬಳೆ, ಮೂಗುತಿ ತೊಟ್ಟು ದೇವಿಯಂತೆ ದರ್ಶನ ಕೊಟ್ಟಿರುವ ಪೋಸ್ಟರ್ ಭಾರೀ ಸದ್ದು ಮಾಡ್ತಿದೆ. ಪೋಸ್ಟರ್ ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದು ಸಿನಿಮಾ ನೋಡೋಕೆ ಕಾತರದಿಂದ ಕಾಯ್ತಿದ್ದಾರೆ. ಈ ಗೆಟಪ್ ಹಿಂದಿನ ಕತೆ ಏನು? ಎನ್ನುವ ಚರ್ಚೆ ನಡೀತಿದೆ.

'ಪುಷ್ಪ'- 2 ಚಿತ್ರದ ಇಂಟರ್‌ವಲ್ ಸಮಯದಲ್ಲಿ ಬರುವ ಆಕ್ಷನ್ ಸೀಕ್ವೆನ್ಸ್‌ಗಾಗಿ ಅಲ್ಲು ಅರ್ಜುನ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಇನ್ನು ಅಲ್ಲು ಅರ್ಜುನ್ ಈ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದರ ಹಿಂದೆ ದೊಡ್ಡ ಕಥೆ ಇದೆ. ಈ ಗೆಟಪ್‌ಗೂ ಗಂಗಮ್ಮ ಚರಿತ್ರೆಗೂ, ಆ ಜಾತ್ರೆಗೂ ಅಲ್ಲಿನ ಪ್ರಾದೇಶಿಕ ಸಂಪ್ರದಾಯಕ್ಕೂ ಲಿಂಕ್ ಇದೆ. ಅದೇನು ಅಂದ್ರೆ, ಪ್ರತಿ ವರ್ಷ ತಿರುಪತಿಯಲ್ಲಿ ಗಂಗಮ್ಮ ತಾಯಿ ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಪುರುಷರು, ಮಹಿಳೆಯರ ರೀತಿ ವೇಷಭೂಷಣ ಧರಿಸುವ ಆಚಾರ ತಲೆಮಾರುಗಳಿಂದ ನಡೆದು ಬರ್ತಿದೆ.

Interesting Stroy behind Pushpa- 2 First Look Poster Allu Arjuns Gangamma Thalli Getup

ಹಿಂದಿನ ಕಾಲದಲ್ಲಿ ತಿರುಪತಿ ಸುತ್ತಮುತ್ತ ಪ್ರಾಂತ್ಯದಲ್ಲಿ ಪಾಳೇಗಾರರು ಆಳ್ವಿಕೆ ನಡೆಸುತ್ತಿದ್ದರು. ಆ ರೀತಿ ಪಾಳೇಗಾರ ವಂಶಸ್ಥರು ಆಳ್ವಿಕೆಯ ಸಮಯದಲ್ಲಿ ಆ ವಂಶದ ಒಬ್ಬ ಪಾಳೇಗಾರ ರಾಜ್ಯದಲ್ಲಿ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದ. ಜನರು ಇದನ್ನು ಒಪ್ಪದೇ ಇದ್ದಾಗ ಶೋಷಣೆ ಆರಂಭವಾಯಿತು. ಅಲ್ಲಿನ ಹೆಣ್ಣು ಮಕ್ಕಳನ್ನು ಹಿಂಸಿಸುವುದು, ಅನುಭವಿಸುವುದು ಶುರುವಾಯಿತು. ಆ ರಾಜ್ಯದಲ್ಲಿ ಯುವಕರು ಹೊಸದಾಗಿ ಮದುವೆ ಆದ್ರೆ, ಆ ವಧುವನ್ನು ತಾನೇ ಮೊದಲು ಅನುಭವಿಸಬೇಕು ಎನ್ನುವಂತಹ ಹೀನ ಆಚಾರವನ್ನು ತಂದನಂತೆ.

ಇಂತಹ ದುಷ್ಟರಿಗೆ ಶಿಕ್ಷೆಯಾಗಬೇಕು, ನಾಡಿನಲ್ಲಿ ಸುಖ ಶಾಂತಿ ನೆಲಸಬೇಕು ಎಂದು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದಂತೆ. ಸ್ತ್ರೀಯರ ರಕ್ಷಣೆಗಾಗಿ ಜಗನ್ಮಾತೆ ತಿರುಪತಿಯಿಂದ 2 ಕಿ. ಮೀ ದೂರದ ಅವಿಲಾಲ ಗ್ರಾಮದಲ್ಲಿ ಕೈಕಾಲ ಕುಲದಲ್ಲಿ ಗಂಗಮ್ಮ ಆಗಿ ಜನ್ಮಿಸಿದ್ದಳು. ಜನರ ರಕ್ಷಣೆಗಾಗಿಯೇ ಗ್ರಾಮ ದೇತೆ ಗಂಗಮ್ಮ ಅಲ್ಲಿ ಅವತಾರ ಎತ್ತಿದ್ದಳು. ಆ ತಾಯಿ ಆ ಮನೆಯಲ್ಲಿ ಅಂದವಾದ ಹೆಣ್ಣಾಗಿ ಬೆಳದಳು. ಆಕೆ ಗಂಗಮ್ಮ ತಾಯಿ ಎಂದು ಗೊತ್ತಿಲ್ಲದೇ ಪಾಳೇಗಾರರು ಆಕೆಗೆ ಕಿರುಕುಳ ಕೊಡಲು ಪ್ರಯತ್ನಿಸಿದರು.

Interesting Stroy behind Pushpa- 2 First Look Poster Allu Arjuns Gangamma Thalli Getup

ಆಕೆ ಬೆಳೆದು ದೊಡ್ಡವಳಾಗುತ್ತಿದ್ದಂತೆ ಪಾಳೇಗಾರನ ಕಣ್ಣು ಆಕೆಯ ಮೇಲೆ ಬಿದ್ದು ಆಕೆಯನ್ನು ಬಲತ್ಕಾರ ಮಾಡಲು ಯತ್ನಿಸಿದನಂತೆ. ಕೂಡಲೇ ಆಕೆ ತನ್ನ ವಿಶ್ವರೂಪ ಪ್ರದರ್ಶಿಸಿದಳಂತೆ. ನನ್ನ ಸಂಹಾರಕ್ಕಾಗಿಯೇ ಅವತರಿಸಿದ ಪರಾಶಕ್ತಿ ಈಕೆ ಎಂದು ಗೊತ್ತಾದ ಮೇಲೆ ಆ ಪಾಳೇಗಾರ ಓಡಿ ಹೋಗಿ ಬಚ್ಚಿಟ್ಟುಕೊಂಡನಂತೆ. ಅವರನ್ನು ಸಾಯಿಸೋಕು ಮುನ್ನ ಅವರು ತಪ್ಪಿಸಿಕೊಂಡು ಅಜ್ಞಾತ ಸ್ಥಳದಲ್ಲಿ ಹೋಗಿ ಸೇರಿಕೊಂಡರು. ಅವರನ್ನು ಹೊರಗೆ ಬರುವಂತೆ ಮಾಡಲು 7 ದಿನಗಳ ಕಾಲ ಜಾತ್ರೆ ನಡೆಸಿದರು.

ಹೀಗೆ ಜಾತ್ರೆ ನಡೆಯುವ ಸಮಯದಲ್ಲಿ ಬಚ್ಚಿಟ್ಟುಕೊಂಡ ಪಾಳೇಗಾರನನ್ನು ಹುಡುಕಲು ಗಂಗಮ್ಮ ಬೇರೆ ಬೇರೆ ವೇಷಗಳನ್ನು ಧರಿಸಿದಳಂತೆ. 3 ದಿನಗಳ ಕಾಲ ಎಷ್ಟೇ ವೇಷ ಬದಲಿಸಿ ಹುಡುಕಿದರೂ ಅವನು ಸಿಗಲಿಲ್ಲ. 4ನೇ ದಿನ ಗಂಗಮ್ಮ ದೊರೆಯ ವೇಷ ಧರಿಸಿದಳಂತೆ. ನನ್ನ ದೊರೆ ಬಂದ ಎಂದು ಪಾಳೇಗಾರ ಹೊರ ಬರುತ್ತಿದ್ದಂತೆ ಗಂಗಮ್ಮ ಆತನ ತಲೆ ಕಡಿದು ಸಂಹಾರ ಮಾಡಿ ದುಷ್ಟ ಶಿಕ್ಷಣ ಮಾಡಿದಳು ಎನ್ನುವ ಪುರಾಣ ಕಥೆ ಇದೆ.

Interesting Stroy behind Pushpa- 2 First Look Poster Allu Arjuns Gangamma Thalli Getup

ಆ ದುಷ್ಟ ಶಿಕ್ಷಣ ನೆನೆದು ಆ ತಾಯಿ ನಮ್ಮನ್ನು ತಣ್ಣಗೆ ಕಾಪಾಡಲಿ ಎಂದು ಕೋರುತ್ತಾ ಅಲ್ಲಿನ ಜನ ಈ ಜಾತ್ರೆ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಮಂಗಳವಾರ ಶುರುವಾಗುವ ಗಂಗಮ್ಮ ಜಾತ್ರೆ 7 ದಿನಗಳ ಕಾಲ ನಡೆಯುತ್ತದೆ. ಈ ಜಾತ್ರೆಯನ್ನು ತೆಲಂಗಾಣದ ಬೊನಮ್ಮ, ಬತುಕಮ್ಮ, ಸಮ್ಮಕ್ಕ ಹಬ್ಬಗಳಿಗೆ ಹೋಲಿಸಲಾಗುತ್ತದೆ. ಜಾತ್ರೆಯಲ್ಲಿ ಭಕ್ತರು ವಿವಿಧ ವೇಷಗಳಲ್ಲಿ ಸೇವೆ ಸಲ್ಲಿಸುವುದು ನಡೆದುಕೊಂಡು ಬಂದಿದೆ. ತೆಲಂಗಾಣದ ಜನರ ಆಚಾರ ವಿಚಾರಗಳಿಗೆ ಸಂಬಂಧಿಸಿದಂತೆ ಅಲ್ಲಿನ ವೇಷ ಭೂಷಣ ಇದ್ದರೆ, ಗಂಗಮ್ಮ ಜಾತ್ರೆಯಲ್ಲಿ ಇಲ್ಲಿನ ಜನ ಜೀವನ ವಿಧಾನದಂತೆ ವಸ್ತ್ರಧಾರಣೆ ಇರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಸೂಪರ್ ಸ್ಟಾರ್‌ಗಳು ಇಂತಾದೊಂದು ವೇಷದಲ್ಲಿ ನಟಿಸೋದನ್ನು ಊಹಿಸೋದು ಕಷ್ಟ. 'ಕಾಂತಾರ' ರಿಷಬ್ ಶೆಟ್ಟಿ ಪಂಜುರ್ಲಿ ಕೋಲ ವೇಷ ಧರಿಸಿ ಮೋಡಿ ಮಾಡಿದ್ದರು. ಇದರಿಂದ ಪ್ರೇರಣೆಗೊಂಡು ಈಗ ಅಲ್ಲು ಅರ್ಜುನ್ ಕೂಡ ಇಂತಾದೊಂದು ಪ್ರಯತ್ನ ಮಾಡಿರುವ ಸಾಧ್ಯತೆಯಿದೆ. ನಿರ್ದೇಶಕ ಸುಕುಮಾರ್ 'ಪುಷ್ಪ'- 2 ಚಿತ್ರದಲ್ಲಿ ಇಂತಾದೊಂದು ಸನ್ನಿವೇಶ ಸೃಷ್ಟಿಸಿ 'ಪುಷ್ಪ'ರಾಜ್‌ನ ಈ ಅವತಾರದಲ್ಲಿ ತೋರಿಸುತ್ತಿದ್ದಾರೆ.

ಈ ಗೆಟಪ್‌ನಲ್ಲಿ ನಡೆಯುವ ಆಕ್ಷನ್ ಸೀಕ್ವೆನ್ಸ್ 'ಪುಷ್ಪ'- 2 ಚಿತ್ರದ ಸ್ಪೆಷಲ್ ಅಟ್ರಾಕ್ಷನ್ ಎನ್ನಲಾಗ್ತಿದೆ. ಸ್ಟೈಲಿಶ್ ಸ್ಟಾರ್‌ನ ಸುಕುಮಾರ್ ಬಹಳ ವಿಭಿನ್ನ ಲುಕ್‌ನಲ್ಲಿ ತೋರಿಸುವ ಪ್ರಯತ್ನ ಮಾಡ್ತಿದ್ದಾರೆ. 2 ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಈ ಸಕ್ಸಸ್‌ನಿಂದ 2ನೇ ಭಾಗವನ್ನು ಮತ್ತಷ್ಟು ಅದ್ಧೂರಿಯಾಗಿ ರೋಚಕವಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ. ಸದ್ಯ ಕಾನ್ಸೆಪ್ಟ್ ಟೀಸರ್ ಹಾಗೂ ಫಸ್ಟ್ ಲುಕ್ ಪೋಸ್ಟರ್‌ನಿಂದಲೇ ಸಿನಿಮಾ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ.

More from Filmibeat

English summary
'ಪುಷ್ಪ'- 2 ಚಿತ್ರದ ಇಂಟರ್‌ವಲ್ ಸಮಯದಲ್ಲಿ ಬರುವ ಆಕ್ಷನ್ ಸೀಕ್ವೆನ್ಸ್‌ಗಾಗಿ ಅಲ್ಲು ಅರ್ಜುನ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಇನ್ನು ಅಲ್ಲು ಅರ್ಜುನ್ ಈ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದರ ಹಿಂದೆ ದೊಡ್ಡ ಕಥೆ ಇದೆ. ಈ ಗೆಟಪ್‌ಗೂ ಅಲ್ಲಿನ ಪ್ರಾದೇಶಿಕ ಸಂಪ್ರದಾಯಕ್ಕೆ ಲಿಂಕ್ ಇದೆ. ಅದೇನು ಅಂದ್ರೆ, ಪ್ರತಿ ವರ್ಷ ತಿರುಪತಿಯಲ್ಲಿ ಗಂಗಮ್ಮ ತಾಯಿ ಜಾತ್ರೆ ನಡೆಯುತ್ತೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X