ಸಿನಿಮಾಗಳ ಆಯ್ಕೆಯಲ್ಲಿ ಎಡವಿ ಬೀಳ್ತಿದ್ದಾರಾ ನಟಿ ನಭಾ ನಟೇಶ್.?
'ವಜ್ರಕಾಯ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಟಿ ನಭಾ ನಟೇಶ್. 'ವಜ್ರಕಾಯ' ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದರೂ, ನಭಾ ನಟೇಶ್ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಬಳಿಕ ಟಾಲಿವುಡ್ ಗೆ ಹಾರಿದ ನಭಾ ನಟೇಶ್ 'ನನ್ನು ದೋಚುಕುಂದುವಟೇ' ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ, ತೆಲುಗು ಸಿನಿ ಅಂಗಳದಲ್ಲಿ ನಭಾ ನಟೇಶ್ ಗೆ ಅವಕಾಶಗಳು ಹುಡುಕಿಕೊಂಡು ಬಂದ್ವು.
ಬಂದ ಅವಕಾಶಗಳನ್ನೆಲ್ಲ ಸರಿಯಾಗಿ ಅಳೆದು ತೂಗದೆ ನಟಿ ನಭಾ ನಟೇಶ್ ಎಡವಿ ಬೀಳುತ್ತಿದ್ದಾರಾ.? ಹೀಗೊಂದು ಅನುಮಾನ ಸದ್ಯ ನಭಾ ನಟೇಶ್ ಅಭಿಮಾನಿಗಳನ್ನು ಕಾಡುತ್ತಿದೆ. ಮುಂದೆ ಓದಿರಿ...

ರಾಂಗ್ ಚಾಯ್ಸ್.!
ಸೆಕೆಂಡ್ ಹೀರೋಯಿನ್ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡು ನಭಾ ನಟೇಶ್ ರಾಂಗ್ ಚಾಯ್ಸ್ ಮಾಡುತ್ತಿದ್ದಾರೆ ಎಂಬ ಮಾತುಗಳು ಟಾಲಿವುಡ್ ನಲ್ಲೂ ಜೋರಾಗಿ ಕೇಳಿಬರುತ್ತಿದೆ. ಅದಕ್ಕೆ ಕಾರಣ ಇತ್ತೀಚೆಗಷ್ಟೇ ತೆರೆಕಂಡ 'ಡಿಸ್ಕೋ ರಾಜಾ' ಸಿನಿಮಾ. ಮಾಸ್ ಮಹಾರಾಜ ರವಿತೇಜಾ ನಟನೆಯ 'ಡಿಸ್ಕೋ ರಾಜಾ' ಚಿತ್ರದಲ್ಲಿ ಪಾಯಲ್ ರಾಜಪೂತ್, ನಭಾ ನಟೇಶ್ ಮತ್ತು ತಾನ್ಯ ಹೋಪ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ನೆನಪಲ್ಲಿ ಉಳಿಯದ ನಭಾ ನಟೇಶ್
ರವಿತೇಜಾ ಅಭಿನಯದ 'ಡಿಸ್ಕೋ ರಾಜಾ' ಚಿತ್ರದಲ್ಲೂ ನಭಾ ನಟೇಶ್ ಸೆಕೆಂಡ್ ಹೀರೋಯಿನ್ ಆಗಿ ನಟಿಸಿದ್ದಾರೆ. ಫಸ್ಟ್ ಹಾಫ್ ನಲ್ಲಿ ಎಲ್ಲರ ಕಣ್ಣು ಕುಕ್ಕುವ ನಭಾ ನಟೇಶ್ ಸೆಕೆಂಡ್ ಹಾಫ್ ನಲ್ಲಿ ನಾಪತ್ತೆಯಾಗುತ್ತಾರೆ. ಮತ್ತೆ ಕ್ಲೈಮ್ಯಾಕ್ಸ್ ನಲ್ಲಿ ಮಾತ್ರ ನಭಾ ನಟೇಶ್ ಪ್ರತ್ಯಕ್ಷವಾಗುತ್ತಾರೆ. ಹೀಗಾಗಿ, 'ಡಿಸ್ಕೋ ರಾಜಾ' ಚಿತ್ರದಲ್ಲಿ ನಭಾ ನಟೇಶ್ ನೆನಪಲ್ಲಿ ಉಳಿಯುವುದಿಲ್ಲ.

ಮುಂಬರುವ ಚಿತ್ರಗಳ ಕಥೆ ಏನು.?
ಸದ್ಯ ನಭಾ ನಟೇಶ್ ಕೈಯಲ್ಲಿ ಸಾಯಿ ಧರಮ್ ತೇಜಾ ಅಭಿನಯದ ಚಿತ್ರವಿದೆ. ಹಾಗೇಅಖಿಲ್ ಅಕ್ಕಿನೇನಿ ಜೊತೆಗೂ ನಟಿಸುವ ಚಾನ್ಸ್ ಕೂಡ ನಭಾ ನಟೇಶ್ ಗೆ ಸಿಕ್ಕಿದೆ. ಆದ್ರೆ, ಆ ಸಿನಿಮಾದಲ್ಲೂ ನಭಾ ನಟೇಶ್ ಸೆಕೆಂಡ್ ಹೀರೋಯಿನ್ ಎನ್ನಲಾಗಿದೆ.

ಎಚ್ಚೆತ್ತಿಕೊಳ್ಳಬೇಕು ನಭಾ.!
ಇನ್ನಾದರೂ ಎಚ್ಚೆತ್ತಿಕೊಂಡು ಒಳ್ಳೆಯ ಅಯ್ಕೆಗಳನ್ನು ನಭಾ ನಟೇಶ್ ಮಾಡಿದರೆ, ಅವರ ವೃತ್ತಿ ಜೀವನಕ್ಕೆ ಉತ್ತಮ ಅನ್ನೋದು ಸಿನಿ ಪಂಡಿತರ ಅಭಿಪ್ರಾಯ.


Click it and Unblock the Notifications











