'KGF- 2' ನೋಡಿ 'ಪುಷ್ಪ'- 2 ಕಾಪಿ ಮಾಡ್ತಿರೋದು ನಿಜ; ಬೇಕಂತಲೇ ಸುಕ್ಕು ಹೀಗೆ ಮಾಡ್ತಿದ್ದಾರಾ?
ಮೊದಲಿನಿಂದಲೂ ಕನ್ನಡದ ಚಿತ್ರದ ಜೊತೆಗೆ ತೆಲುಗಿನ 'ಪುಷ್ಪ' ಚಿತ್ರವನ್ನು ಹೋಲಿಕೆ ಮಾಡುವ ಕೆಲಸ ನಡೀತಿದೆ. ಅದಕ್ಕೆ ಕಾರಣ ಇದೆ. ಸುಕುಮಾರ್ ಶಿಷ್ಯ ಬುಚ್ಚಿಬಾಬು ನೀಡಿದ ಅದೊಂದು ಹೇಳಿಕೆ ಇದಕ್ಕೆ ಕಾರಣ ಎಂದರೂ ತಪ್ಪಾಗಲ್ಲ. ಇದೀಗ 'KGF'-2 ಜೊತೆ 'ಪುಷ್ಪ'-2 ಚಿತ್ರವನ್ನು ಹೋಲಿಕೆ ಮಾಡಲಾಗ್ತಿದೆ.
ಪ್ರಶಾಂತ್ ನೀಲ್ ನಿರ್ದೇಶನದ 'KGF' ಸರಣಿ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿತ್ತು. ಆಂಧ್ರ, ತೆಲಂಗಾಣದ ಕೆಲವು ಭಾಗಗಳಲ್ಲಿ 'KGF'-2 ದಾಖಲೆಯನ್ನು ತೆಲುಗು ಚಿತ್ರಗಳಿಂದಲೂ ಮೀರಿಸಲು ಸಾಧ್ಯವಾಗ್ತಿಲ್ಲ. ರಾಕಿ ಭಾಯ್ ಆಗಿ ಯಶ್ ಆರ್ಭಟಕ್ಕೆ ಭಾರತೀಯ ಚಿತ್ರರಂಗವೇ ಶಾಕ್ ಆಗಿತ್ತು. 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು.

ಎರಡು ಚಿತ್ರಗಳ ಒನ್‌ಲೈನ್ ಸ್ಟೋರಿಯಲ್ಲಿ ಕೂಡ ಸಾಮ್ಯತೆಯಿದೆ. 'KGF' ಚಿತ್ರದಲ್ಲ ಚಿನ್ನದ ಕಥೆ ಇದ್ದರೆ 'ಪುಷ್ಪ' ಚಿತ್ರದಲ್ಲಿ ರಕ್ತಚಂದನದ ಕಥೆಯಿದೆ. ಎರಡು ಚಿತ್ರಗಳಲ್ಲಿ ತಪ್ಪು ದಾರಿಯಲ್ಲಾದರೂ ಸರಿ ನಾನು ಗೆಲ್ಲಬೇಕ, ಮೆರೆಯಬೇಕು ಎನ್ನುವ ಇಬ್ಬರು ನಾಯಕರ ಕಥೆ ಇದೆ. ಒಂದು 'ಪುಷ್ಪ' ಹತ್ತು 'KGF' ಚಿತ್ರಗಳಿಗೆ ಸಮ ಎಂದು ನಿರ್ದೇಶಕ ಬುಚ್ಚಿಬಾಬು ಹೇಳಿದ್ದರು. ಅಲ್ಲಿಂದ ಮುಂದೆ ಎರಡೂ ಚಿತ್ರಗಳ ನಡುವೆ ಹೋಲಿಕೆ ಹೆಚ್ಚಾಯಿತು.
'KGF' ಚಾಪ್ಟರ್ 3 ಮಾಡುವುದಾಗಿಯೂ ಹೊಂಬಾಳೆ ಸಂಸ್ಥೆ ಘೋಷಿಸಿದೆ. ಅತ್ತ ತೆಲುಗಿನಲ್ಲಿ ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಸೀಕ್ವೆಲ್ ಬಿಡುಗಡೆಗೆ ಸಜ್ಜಾಗಿದೆ. ಮತ್ತೊಮ್ಮೆ ಸುಕುಮಾರ್ ಹಾಗೂ ಅಲ್ಲು ಅರ್ಜುನ್ ಜೋಡಿ ಬಾಕ್ಸಾಫೀಸ್ ಶೇಕ್ ಮಾಡುವ ಸುಳಿವು ಸಿಗುತ್ತಿದೆ. ಇದೆಲ್ಲದರ ನಡುವೆ 'KGF'-2 ಹಾಗೂ 'ಪುಷ್ಪ'-2 ಚಿತ್ರದ ಪೋಸ್ಟರ್‌ಗಳ ನಡುವೆ ಸಾಮ್ಯತೆ ಎದ್ದು ಕಾಣುತ್ತಿದೆ. ಬೇಕಂತಲೇ ಸುಕುಮಾರ್ ಅಂಡ್ ಟೀಂ ಹೀಗೆ ಮಾಡುತ್ತಿರುವುದು ಗೊತ್ತಾಗುತ್ತಿದೆ.

ಯಾವುದೇ ಸಿನಿಮಾ ಪೋಸ್ಟರ್, ಟೀಸರ್ ಬಿಡಗಡೆ ಆದರೆ ಬೇರೆ ಸಿನಿಮಾಗಳ ಜೊತೆ ಹೋಲಿಕೆ ಮಾಡುವುದು ಸಹಜ. ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಅದು ಹೆಚ್ಚಾಗುತ್ತಿದೆ. 'KGF'-2 ಮತ್ತು 'ಪುಷ್ಪ'-2 ಚಿತ್ರಗಳ ಪೋಸ್ಟರ್‌ಗಳ ವಿಚಾರದಲ್ಲಿ ಕೂಡ ಹೀಗೆ ನಡೆಯುತ್ತಿದೆ. ಸದ್ಯ ಟ್ರೈಲರ್ ರಿಲೀಸ್ ಅನೌನ್ಸ್‌ಮೆಂಟ್ ಪೋಸ್ಟರ್ ಕೂಡ ಇದಕ್ಕೆ ಇಂಬು ಕೊಡುವಂತಿದೆ.
ನವೆಂಬರ್ 17ಕ್ಕೆ 'ಪುಷ್ಪ'-2 ಟ್ರೈಲರ್ ರಿಲೀಸ್ ಆಗಲಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಬಂದಿರುವ ಪೋಸ್ಟರ್‌ನಲ್ಲಿ ಪುಷ್ಪರಾಜ್ ದೊಡ್ಡ ಬಂದೂಕು ಹಿಡಿದು ಬರುತ್ತಿರುವುದನ್ನು ನೋಡಬಹುದು. 'KGF'-2 ಚಿತ್ರದಲ್ಲಿ ರಾಕಿಭಾಯ್ ಇದೇ ರೀತಿ ಕಾಣಿಸಿಕೊಂಡಿದ್ದ ಪೋಸ್ಟರ್ ಒಂದಿತ್ತು. ಹಾಗಾಗಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಬಂದೂಕು ಕೈಯಲ್ಲಿ ಅಲ್ಲದೇ ಕಾಲಿನಲ್ಲಿ ಹಿಡಿದುಕೊಳ್ಳಲು ಸಾಧ್ಯವೇ? ಎಂದು ಕೆಲವರು ಕೇಳುತ್ತಿದ್ದಾರೆ. ಆದರೂ ಇಷ್ಟು ಹೋಲಿಕೆ ಇರುವಂತೆ ಪೋಸ್ಟರ್ ಯಾಕೆ ಬಿಡ್ತಿದ್ದಾರೆ ಎಂದು ಪ್ರಶ್ನೆ ಎದ್ದಿದೆ.
ಹೀಗೆ ಪೋಸ್ಟರ್‌ಗಳನ್ನು ಹೋಲಿಕೆ ಮಾಡುತ್ತಾರೆ ಎಂದು ಗೊತ್ತಿದ್ದು 'ಪುಷ್ಪ' ಟೀಮ್ ಯಾಕೆ ಈ ರೀತಿ ಮಾಡ್ತಿದೆ ಎನ್ನುವ ಪ್ರಶ್ನೆ ಕೆಲವರನ್ನು ಕಾಡ್ತಿದೆ. ಇದು ಒಂದು ರೀತಿಯ ಸ್ಟ್ಯಾಟರ್ಜಿ ಎಂದರೆ ತಪ್ಪಾಗಲ್ಲ. ನೆಗೆಟಿವ್ ಪಬ್ಲಿಸಿಟಿ ಮೂಲಕ ಹೈಪ್ ಕ್ರಿಯೇಟ್ ಮಾಡುವ ತಂತ್ರವೂ ಇರಬಹುದು. ಹೇಗಿದ್ದರೂ ಜನ ಹೋಲಿಕೆ ಮಾಡುತ್ತಾರೆ. ಮಾಡಲಿ ಬಿಡಿ, ಅದರಿಂದ ಪ್ರಚಾರ ಸಿಕ್ಕರೆ ಯಾಕೆ ಬಿಡಬೇಕು ಎನ್ನುವಂತೆ ನಿರ್ದೇಶಕ ಸುಕುಮಾರ್ ಭಾವಿಸಿದಂತಿದೆ.
'ಪುಷ್ಪ'-2 ಸಿನಿಮಾ ಅಷ್ಟೇನು ನಿರೀಕ್ಷೆ ಹುಟ್ಟಾಕ್ಕಿಲ್ಲ. ಈ ಹಿಂದೆ ಬಂದ ಟೀಸರ್ ಸಹ ನಿರಾಸೆ ಮೂಡಿಸಿತ್ತು. ಟ್ರೈಲರ್ ಗೆದ್ದರೆ ಮತ್ತಷ್ಟು ಹೈಪ್ ಕ್ರಿಯೇಟ್ ಆಗುವ ಸಾಧ್ಯತೆಯಿದೆ. 1000 ಕೋಟಿ ರೂ.ಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ನಡೆದಿದೆ. ಆದರೆ ಅದಕ್ಕೆ ತಕ್ಕಂತೆ ಕಲೆಕ್ಷನ್ ಆಗಬೇಕಿದೆ. ಹಾಗಾಗಿ ಎಲ್ಲಾ ರೀತಿಯ ಪ್ರಚಾರವನ್ನು 'ಪುಷ್ಪ' ತಂಡ ಬಳಸಿಕೊಳ್ಳುವಂತೆ ಕಾಣುತ್ತಿದೆ. ಇನ್ನು 'KGF'-3 ರೀತಿಯಲ್ಲೇ 'ಪುಷ್ಪ'-3 ಗೂ ಪ್ಲ್ಯಾನ್ ನಡೀತಿದೆ.


Click it and Unblock the Notifications











