ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ನಟಿ ಅನುಷ್ಕಾ ಶೆಟ್ಟಿ, ಇದರಿಂದ ಚಿತ್ರೀಕರಣಕ್ಕೂ ಸಮಸ್ಯೆ!
ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ ತೆಲುಗು, ತಮಿಳು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇದೀಗ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಒಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. 'ಬಾಹುಬಲಿ' ಸರಣಿ ಬಳಿ ಸ್ವೀಟಿ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿತ್ತು.
ದೇಹದ ತೂಕ ಹೆಚ್ಚಿಸಿಕೊಂಡಿದ್ದೇ ಅನುಷ್ಕಾ ಶೆಟ್ಟಿ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಮಾಡೋಕೆ ಕಾರಣ ಎನ್ನಲಾಯಿತು. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ ತಾವಾಗಿಯೇ ಹೆಚ್ಚು ನಟಿಸದೇ ಇರಲು ನಿರ್ಧರಿಸಿದ್ದಾಗಿ ಸ್ವೀಟಿ ಹೇಳಿಕೊಂಡಿದ್ದರು. ಇನ್ನು ಮದುವೆ ಬಗ್ಗೆಯೂ ಮಾತನಾಡಿದ್ದರು. ನಾನು ಮದುವೆ ಬೇಡ ಎನ್ನಲ್ಲ. ಕಾಲ ಕೂಡಿ ಬಂದರೆ ಎಲ್ಲವೂ ಸಾಧ್ಯ ಎಂದಿದ್ದರು.

ಸದ್ಯ ಅನುಷ್ಕಾ ಶೆಟ್ಟಿ 2 ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕ್ರಿಶ್ ನಿರ್ದೇಶನದ 'ಘಾಟಿ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. 'ಕತನಾರ್' ಎನ್ನುವ ಮಲಯಾಳಂ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ. ಇದೊಂದು ಫ್ಯಾಂಟಸಿ ಥ್ರಿಲ್ಲರ್ ಸಿನಿಮಾ ಆಗಿದೆ. ಇನ್ನು ಅನುಷ್ಕಾ ಶೆಟ್ಟಿ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಆಕೆಗೆ ತನ್ನ ನಗುವನ್ನು ಅಷ್ಟು ಸುಲಭವಾಗಿ ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದೇ ಆಕೆಗಿರುವ ಸಮಸ್ಯೆ ಎನ್ನಲಾಗುತ್ತಿದೆ.
ಬಹಳ ಹಿಂದೆ ಸಂದರ್ಶನವೊಂದರಲ್ಲಿ ಪರೋಕ್ಷವಾಗಿ ಅನುಷ್ಕಾ ಶೆಟ್ಟಿ ಈ ವಿಚಾರ ಹಂಚಿಕೊಂಡಿದ್ದರು. ಇದು ಈಗ ಮತ್ತೆ ವೈರಲ್ ಆಗುತ್ತಿದೆ. ಅನುಷ್ಕಾ ಶೆಟ್ಟಿ ಸ್ಯೂಡೋಬಲ್ಬಾರ್ ಎಫೆಕ್ಟ್ ಅಥವಾ PBA ನಿಂದ ಬಳಲುತ್ತಿದ್ದಾರೆ. ಇದು ನರಕ್ಕೆ ಸಂಬಂಧಿಸಿದ ಅಪರೂಪದ ಆರೋಗ್ಯ ಕಾಯಿಲೆಯಾಗಿದೆ. ಈ ಸಮಸ್ಯೆಯಿಂದ ಬಳಲುವವರು ವ್ಯಕ್ತಿಯು ಅನಿಯಂತ್ರಿತವಾಗಿ ನಗುತ್ತಾರೆ ಅಥವಾ ಅಳುತ್ತಾರೆ. ನನಗೆ ನಗುವನ್ನು ಅಷ್ಟು ಸುಲಭವಾಗಿ ತಡೆದುಕೊಳ್ಳಲು ಸಾಧ್ಯವಿಲ್ಲ, ಇದರಿಂದ ಕೆಲವೊಮ್ಮೆ ಚಿತ್ರೀಕರಣಕ್ಕೂ ಸಮಸ್ಯೆ ಆಗಿದೆ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದರು. ಹಾಗಾಗಿ ಇದನ್ನು ಸ್ವೀಟಿ ಸ್ಯೂಡೋಬಲ್ಬಾರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅನುಷ್ಕಾ ಶೆಟ್ಟಿ ಕೆಲವೊಮ್ಮೆ ನಗಲು ಪ್ರಾರಂಭಿಸಿದರೆ 15-20 ನಿಮಿಗಳ ಕಾಲ ನಗುತ್ತಲೇ ಇರುತ್ತಾರಂತೆ. ಶೂಟಿಂಗ್ ವೇಳೆ ಈ ರೀತಿ ನಾನು ನಗಲು ಆರಂಭಿಸಿದರೆ ಬೇರೆ ಕಲಾವಿದರು ವಿಶ್ರಾಂತಿ ಪಡೆಯಬಹುದು. ಯಾಕಂದರೆ ಚಿತ್ರೀಕರಣ ಮಾಡೋಕೆ ಆಗಲ್ಲ ಎಂದಿದ್ದರು. ಅನುಷ್ಕಾ ಶೆಟ್ಟಿ ಕೊನೆಯದಾಗಿ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರದಲ್ಲಿ ನಟಿಸಿದ್ದರು. ಕಳೆದ ವರ್ಷ ತೆರೆಗೆ ಬಂದಿದ್ದ ಆ ಸಿನಿಮಾ ತಕ್ಕಮಟ್ಟಿಗೆ ಸದ್ದು ಮಾಡಿತ್ತು. ಸ್ವೀಟಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.
'ಸೈಜ್ ಜೀರೊ' ಚಿತ್ರಕ್ಕಾಗಿ ಅನುಷ್ಕಾ ತೂಕ ಹೆಚ್ಚಿಸಿಕೊಂಡು ನಟಿಸುವ ಸಾಹಸಕ್ಕೆ ಕೈ ಹಾಕಿದ್ದರು. ಆದರೆ ಮತ್ತೆ ಮೊದಲಿಬೆ ಪಿಜಿಕ್ ಮರಳಿ ಪಡೆಯಲು ಆಕೆಗೆ ಸಾಧ್ಯವಾಗಲಿಲ್ಲ. ಬಳಕುವ ಬಳ್ಳಿಯಂತಿದ್ದ ಅನುಷ್ಕಾ ಶೆಟ್ಟಿ ಈಗ ದಪ್ಪ ಆಗಿದ್ದಾರೆ. ಹಾಗಾಗಿ ಮೊದಲಿನಂತೆ ನಾಯಕ ನಟರ ಜೊತೆ ರೊಮ್ಯಾನ್ಸ್ ಮಾಡುವಂತಹ ಪಾತ್ರಗಳು ಸಿಗುತ್ತಿಲ್ಲ. ಇದೇ ಕಾರಣಕ್ಕೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಹೆಚ್ಚು ನಟಿಸಲು ಆರಂಭಿಸಿದ್ದಾರೆ. 'ಘಾಟಿ' ಕೂಡ ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ರಮ್ಯಾಕೃಷ್ಣ ಸೇರಿದಂತೆ ಘಟನಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ರೋಜಿನ್ ಥಾಮಸ್ ನಿರ್ದೇಶನದ ಫ್ಯಾಂಟಸಿ ಥ್ರಿಲ್ಲರ್ ಸಿನಿಮಾ 'ಕಥನಾರ್'. ಅನುಷ್ಕಾ ಶೆಟ್ಟಿ ಈ ಚಿತ್ರದಲ್ಲಿ ಯಕ್ಷಿಣಿಯ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಕೊಂಚ ತೂಕ ಇಳಿಸಿಕೊಂಡು ಕ್ಯಾಮರಾ ಮುಂದೆ ನಿಂತಿದ್ದಾರೆ.


Click it and Unblock the Notifications











