ವಾರೆವ್ಹಾ... ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರದಲ್ಲಿ ಕೊರಿಯನ್ ನಟ ಡಾನ್ ಲೀ!

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ತಿದೆ. ಪ್ರಭಾಸ್ ನಟನೆಯ 3 ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದ್ದು ಈಗಾಗಲೇ ಭಾರೀ ಡೀಲ್ ಕುದುರಿಸಿದೆ. ರಿಷಬ್ ಶೆಟ್ಟಿ ಜೊತೆಗೂ ಮುಂದಿನ ದಿನಗಳಲ್ಲಿ 4 ಸಿನಿಮಾ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನಲಾಗ್ತಿದೆ.

'KGF' ಹಾಗೂ 'ಕಾಂತಾರ' ಚಿತ್ರಗಳ ಮೂಲಕ ಹೊಂಬಾಳೆ ಫಿಲ್ಮ್ಸ್ ಬಂಗಾರದ ಬೆಳೆ ತೆಗೆದಿತ್ತು. ಸದ್ಯ 'ಕಾಂತಾರ'-1 ಸಿನಿಮಾ ನಿರ್ಮಾಣವಾಗ್ತಿದೆ. ಮುಂದೆ 'KGF' ಚಾಪ್ಟರ್-3 ತೆರೆಗೆ ತರುವುದಾಗಿಯೂ ಘೋಷಿಸಿದ್ದಾರೆ. ಈಗಾಗಲೇ ಪ್ರಭಾಸ್ ನಟನೆಯ 'ಸಲಾರ್- 2' ಸಿನಿಮಾ ಆರಂಭವಾಗಿದೆ. ಒಟ್ಟಾರೆ ಸಂಸ್ಥೆ ಸಾವಿರಾರು ಕೋಟಿ ರೂಪಾಯಿಯನ್ನು ಚಿತ್ರ ನಿರ್ಮಾಣಕ್ಕೆ ಹೂಡಿಕೆ ಮಾಡ್ತಿದೆ.

Is Hombale films join hands with South Korean actor Ma Dong-seok aka don lee

ಸದ್ಯ ಪ್ರಭಾಸ್ 'ದಿ ರಾಜಾಸಾಬ್' ಹಾಗೂ 'ಫೌಜಿ' ಎನ್ನುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಚಿತ್ರಗಳು ತೆರೆಗೆ ಬರಲಿದೆ. ಬಳಿಕ 'ಸಲಾರ್- 2' ಚಿತ್ರ ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆಯಿದೆ. ಸಂದೀಪ್ ರೆಡ್ಡಿ ವಂಗಾ ಜೊತೆಗೂ ಒಂದು ಚಿತ್ರದಲ್ಲಿ ನಟಿಸಲಿದ್ದಾರೆ. 'ಅರ್ಜುನ್ ರೆಡ್ಡಿ', 'ಅನಿಮಲ್' ರೀತಿಯ ಸೆನ್ಸೇಷನಲ್ ಸಿನಿಮಾಗಳನ್ನು ಸಂದೀಪ್ ಕಟ್ಟಿಕೊಟ್ಟಿದ್ದಾರೆ.

ಪ್ರಭಾಸ್ ಹೀರೊ ಆಗಿ 'ಸ್ಪಿರಿಟ್' ಎನ್ನುವ ಚಿತ್ರ ಮಾಡಲು ಸಂದೀಪ್ ಮುಂದಾಗಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇನ್ನು 'ಸ್ಪಿರಿಟ್' ಚಿತ್ರದಲ್ಲಿ ಪ್ರಭಾಸ್ ಎದುರು ಕೊರಿಯನ್ ನಟ ಡಾನ್ ಲೀ ಕೂಡ ನಟಿಸ್ತಾರೆ ಎಂದು ಗುಲ್ಲಾಗಿದೆ. ಕೆಲ ದಿನಗಳ ಹಿಂದೆಯೇ ಇಂತಾದೊಂದು ಊಹಾಪೋಹ ಶುರುವಾಗಿತ್ತು. ಇದೀಗ ಮತ್ತೆ ಇದೇ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅದಕ್ಕೆ ಕಾರಣ ನಟ ಡಾನ್‌ ಲೀ ಹಾಕಿದ್ದರು ಎನ್ನಲಾಗ್ತಿರುವ ಇನ್‌ಸ್ಟಾ ಸ್ಟೋರಿ.

ದಕ್ಷಿಣ ಕೊರಿಯಾದ ನಟ ಲೀ ಡಾಂಗ್-ಸಿಯೋಕ್ ಅಲಿಯಾಸ್ ಡಾನ್‌ ಲೀ ಭಾರತೀಯ ಸಿನಿರಸಿಕರಿಗೂ ಚಿರಪರಿಚಿತ. ತನ್ನ ಖಡಕ್ ನಟನೆಯಿಂದ ಡಾನ್‌ ಲೀ ಧೂಳೆಬ್ಬಿಸಿದ್ದಾರೆ. ಪ್ರಭಾಸ್ ವರ್ಸಸ್ ಡಾನ್‌ ಲೀ ಫೈಟ್ ನಿಜಕ್ಕೂ ತೆರೆಮೇಲೆ ಮ್ಯಾಜಿಕ್ ಮಾಡುತ್ತೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. ಇತ್ತೀಚೆಗೆ ನಟ ಡಾನ್‌ ಲೀ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಪ್ರಭಾಸ್ ಫೋಟೊ ಹಂಚಿಕೊಂಡಿದ್ದರು ಎನ್ನಲಾಗ್ತಿದೆ.

Is Hombale films join hands with South Korean actor Ma Dong-seok aka don lee

ಪ್ರಭಾಸ್ ಅವರ 'ಸಲಾರ್' ಚಿತ್ರದ ಫೋಟೊ ಹಾಕಿ ಥಮ್ಸ್ ಅಪ್‌ ಎಮೋಜಿ ಹಾಕಿದ್ದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಅದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದೆ. ಆದರೆ ಸದ್ಯಕ್ಕೆ ಆತನ ಇನ್‌ಸ್ಟಾಗ್ರಾಮ್‌ನಲ್ಲಿ ಅಂತಹ ಯಾವುದೇ ಫೋಟೊ ಇಲ್ಲ. ಹಾಗಾಗಿ ಈ ಬಗ್ಗೆ ಗೊಂದಲ ಮೂಡಿದೆ. ಪ್ರಭಾಸ್ ಫ್ಯಾನ್ಸ್ ಮಾತ್ರ ಈ ಸ್ಕ್ರೀನ್ ಶಾಟ್ ವೈರಲ್ ಮಾಡಿ ಸಂಭ್ರಮಿಸುತ್ತಿದ್ದಾರೆ.

ಸದ್ಯ ವೈರಲ್ ಆಗಿರುವ ಸ್ಕ್ರೀನ್ ಶಾಟ್‌ನಲ್ಲಿ 'ಸಲಾರ್' ಚಿತ್ರದ ಫೋಟೊ ನೋಡಿ ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಡಾನ್‌ ಲೀ 'ಸ್ಪಿರಿಟ್' ಚಿತ್ರದಲ್ಲಿ ನಟಿಸ್ತಾರಾ? ಅಥವಾ 'ಸಲಾರ್'-2 ಚಿತ್ರದಲ್ಲಿ ಕಾಣಿಸಿಕೊಳ್ತಾರಾ? ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಸಲಾರ್' ಸೀಕ್ವೆಲ್ ಬರ್ತಿದೆ. ಸದ್ದಿಲ್ಲದೇ ಈಗಾಗಲೇ ಚಿತ್ರೀಕರಣ ಸಹ ಆರಂಭವಾಗಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಸಲಾರ್- 2' ಚಿತ್ರದಲ್ಲಿ ಡಾನ್‌ ಲೀ ನಟಿಸಿದರೂ ಅಚ್ಚರಿ ಪಡಬೇಕಿಲ್ಲ.

ಪ್ರಭಾಸ್ ಜೊತೆ 3 ಚಿತ್ರಗಳಿಗೆ ಒಪ್ಪಂದ ಮಾಡಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಂದಾಜು 1000 ಕೋಟಿ ರೂ. ಹಣ ಹೂಡಿಕೆ ಮಾಡುವ ಸಾಧ್ಯತೆಯಿದೆ. ಹಾಗಾಗಿ ದಕ್ಷಿಣ ಕೊರಿಯಾ ನಟ ಡಾನ್‌ ಲೀಯನ್ನು ಭಾರತೀಯ ಚಿತ್ರರಂಗಕ್ಕೆ ಕರೆತಂದರೂ ಅಚ್ಚರಿ ಪಡಬೇಕಿಲ್ಲ.

More from Filmibeat

English summary
South Korean actor Ma Dong-seok aka don lee to Make His Telugu Film Debut with Salaar-2?
Read more about: tollywood prabhas hombale films
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X