Prabhas- Anushaka: ರಿಲೇಷನ್‌ಶಿಪ್‌ನಲ್ಲಿದ್ದರೂ ಪ್ರಭಾಸ್- ಸ್ವೀಟಿ ಮದ್ವೆ ಆಗದೇ ಇರಲು ಅದೇ ಕಾರಣ?

ಬಾಹುಬಲಿ ಪ್ರಭಾಸ್ 44ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಯುಕೆಯಲ್ಲಿರುವ ಪ್ರಭಾಸ್ ಅಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇತ್ತ ಹೈದರಾಬಾದ್‌ನಲ್ಲಿ ಅಭಿಮಾನಿಗಳು 230 ಅಡಿ ಎತ್ತರದ ಪ್ರಭಾಸ್ ಕಟೌಟ್ ನಿಲ್ಲಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಇದೆಲ್ಲದರ ಮಧ್ಯೆ ಪ್ರಭಾಸ್ ಮದುವೆ ಯಾವಾಗ? ಎನ್ನುವ ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ಮುಂದುವರೆದಿದೆ.

ವಯಸ್ಸು 44 ದಾಟಿದ್ರು ಪ್ರಭಾಸ್ ಇನ್ನು ಯಾಕೆ ಮದುವೆ ಆಗಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿರುತ್ತದೆ. ಬಾಹುಬಲಿ ಸಿನಿಮಾ ಮುಗಿದ ಮೇಲೆ ಮದುವೆ ಎಂದು ಹೇಳಲಾಗಿತ್ತು. ಆದರೆ ಬಾಹುಬಲಿ ಬಂದೋಗಿ 5 ವರ್ಷ ಆಯಿತು. ಆದರೆ ಪ್ರಭಾಸ್ ಮದುವೆ ಬಗ್ಗೆ ಯಾವುದೇ ಸುದ್ದಿ ಇಲ್ಲ. ಇತ್ತೀಚೆಗೆ ಅಭಿಮಾನಿಗಳು ಪ್ರಭಾಸ್- ಅನುಷ್ಕಾ ಶೆಟ್ಟಿ ಮದುವೆ ಆಗಿರುವಂತೆ, ಮಕ್ಕಳು ಇರುವಂತೆ AI ಫೋಟೊಗಳನ್ನು ವೈರಲ್ ಮಾಡಿದ್ದರು.

Is horoscope problem reason behind the delay in Prabhas and Anushka Shettys wedding?

ಪ್ರಭಾಸ್- ಅನುಷ್ಕಾ 3 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರದ್ದು ಮೇಡ್ ಫಾರ್ ಇಚ್ ಅದರ್ ಜೋಡಿ ಅನ್ನೋದು ಅಭಿಮಾನಿಗಳ ಮಾತು. ಮದುವೆ ಆಗಬೇಕು ಎಂದು ಕೋರಿಕೊಳ್ಳುವವರ ಸಂಖ್ಯೆ ದೊಡ್ಡದಿದೆ. ಇಬ್ಬರು ರಿಲೇಷನ್‌ಶಿಪ್‌ನಲ್ಲಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಬಾರಿ ಕೇಳಿ ಬಂದಿತ್ತು. ಆದರೆ ಅದು ಸುಳ್ಳು ಎಂದು ಇಬ್ಬರು ಹೇಳಿದ್ದು ಆಗಿದೆ. ಆದರೂ ಇಬ್ಬರ ಮದುವೆ ಬಗ್ಗೆ ಪದೇ ಪದೆ ಚರ್ಚೆ ಆಗುತ್ತಿರುತ್ತದೆ.

ಇದೀಗ ಟೈಮ್ಸ್ ನೌ ಎಂಟರ್‌ಟೈನ್‌ಮೆಂಟ್ ವಿಂಗ್ ಜೂಮ್ ಪ್ರಭಾಸ್- ಅನುಷ್ಕಾ ಮದುವೆ ಆಗದೇ ಇರಲು ಕಾರಣ ಏನು ಎಂದು ವರದಿ ಮಾಡಿದೆ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ಆಗಲು ಪರಸ್ಪರ ಒಪ್ಪಿ ಮಾತು ಕೊಟ್ಟಿದ್ದಾರೆ. ಒಂದು ವೇಳೆ ಅದು ನಡೆಯದಿದ್ದರೆ ಇಬ್ಬರು ಸಿಂಗಲ್ ಆಗಿಯೇ ಉಳಿಯಲು ತೀರ್ಮಾನಿಸಿದ್ದಾರೆ. ಇಬ್ಬರು ಈವರೆಗೆ ಮದುವೆ ಆಗದಿರಲು ಕಾರಣ ಜಾತಕ ಎಂದು ವರದಿ ಮಾಡಿದೆ.

ನಮಗೆ ಎಕ್ಸ್‌ಕ್ಲೂಸಿವ್ ಮಾಹಿತಿ ಸಿಕ್ಕಿದೆ. ಪ್ರಭಾಸ್- ಅನುಷ್ಕಾ ಮದುವೆ ಆಗದಿರಲು ಅವರ ಕುಟುಂಬದವರ ನಿರ್ಧಾರವೇ ಕಾರಣ ಎಂದು ಬರೆದಿದ್ದಾರೆ. ಇವರಿಬ್ಬರ ಜಾತಕ ಹೊಂದಾಣಿಕೆಯಾಗದ ಕಾರಣ ಪ್ರಭಾಸ್ ತಾಯಿ ಮದುವೆಗೆ ಒಪ್ಪಲಿಲ್ಲವಂತೆ. ಪ್ರಭಾಸ್ ತಾಯಿ ದೇವರು ಮತ್ತು ಜಾತಕವನ್ನು ಬಹಳ ನಂಬುತ್ತಾರೆ. ತಾಯಿ ಮಾತನ್ನು ಮೀರದ ಶ್ರೀರಾಮನಂತೆ ಪ್ರಭಾಸ್ ಕೂಡ ತಾಯಿಯ ಮಾತು ಕೇಳಿ ಅನುಷ್ಕಾ ಶೆಟ್ಟಿನ ಮದುವೆ ಆಗಿಲ್ಲ ಎಂದು ವರದಿ ಮಾಡಿದೆ.

ಸಲ್ಮಾನ್ ಖಾನ್ ರೀತಿ ಪ್ರಭಾಸ್ ಕೂಡ ಮದುವೆ ಆಗದೇ ಉಳಿದುಬಿಡುತ್ತಾರಾ? ಎಂದು ಕೆಲವರು ಭಾವಿಸಿದ್ದಾರೆ. ಆದರೆ ಇತ್ತೀಚೆಗೆ ಖುದ್ದಿ ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ದೇವಿ ಮಾತನಾಡಿ ಪ್ರಭಾಸ್ ಖಂಡಿತ ಮದುವೆ ಆಗುತ್ತಾನೆ ಎಂದಿದ್ದರು. ಮುಂದಿನ ದಸರಾ ವೇಳೆಗೆ ದೇವರ ಆಶೀರ್ವಾದದಿಂದ ಪ್ರಭಾಸ್ ಮದುವೆ ನಡೆಯುತ್ತದೆ ಎಂದಿದ್ದರು.

ಇನ್ನು ಸಿನಿಮಾಗಳ ವಿಚಾರ ಬಂದ್ರೆ ಪ್ರಭಾಸ್ 5000 ಕೋಟಿ ರೂ. ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಲಾರ್, ಕಲ್ಕಿ, ರಾಜಾ ಡೀಲಕ್ಸ್ ಜೊತೆ ಸಿದ್ದಾರ್ಥ್‌ ಆನಂದ್ ಕಾಂಬಿನೇಷನ್‌ನಲ್ಲೂ ಯಂಗ್ ರೆಬಲ್ ಸ್ಟಾರ್ ನಟಿಸುತ್ತಿದ್ದಾರೆ. 'ಕಲ್ಕಿ' ಸಿನಿಮಾ ಬಜೆಟ್ ಸಾವಿರ ಕೋಟಿ ಸಮೀಪದಲ್ಲಿದೆ. ಇನ್ನು ಪ್ರಭಾಸ್ ಸಿನಿಮಾಗಳೆಲ್ಲಾ ಈಗ 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಲಾಗುತ್ತದೆ. ಸಿನಿಮಾಗಳ ಬಜೆಟ್ 2000 ಕೋಟಿ ರೂ.ವರೆಗೂ ಇದ್ದು 5000 ಕೋಟಿ ರೂ. ಬ್ಯುಸಿನೆಸ್ ಲೆಕ್ಕಾಚಾರ ನಡೀತಿದೆ.

ಮತ್ತೊಂದು ಕಡೆ ಅನುಷ್ಕಾ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಮಾಡಿದ್ದಾರೆ. 'ಬಾಹುಬಲಿ'-2 ಬಳಿಕ ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಕೊನೆಯದಾಗಿ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಹೊಸ ಸಿನಿಮಾ ಯಾವುದೇ ಒಪ್ಪಿಕೊಂಡಿಲ್ಲ.

More from Filmibeat

English summary
Prabhas and Anushka Shetty's horoscope problem for marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X