ಯುವ ನಟನೊಂದಿಗೆ ಕಾಜಲ್ ಅಗರ್ವಾಲ್ ಪ್ರೀತಿ-ಪ್ರೇಮ-ಪ್ರಣಯ!?

ಒಂದು ಸಮಯದಲ್ಲಿ ತೆಲುಗು ಸಿನಿರಂಗದಲ್ಲಿ ಖ್ಯಾತಿಯ ಉತ್ತುಂಗದಲ್ಲಿದ್ದ ನಟಿ ಕಾಜಲ್ ಅಗರ್ವಾಲ್. ಈಗಲೂ ಅವರಿಗೆ ಬೇಡಿಕೆಯಿದೆಯಾದರೂ ಮೊದಲಿನಷ್ಟಲ್ಲ.

Recommended Video

ತಾಯಿಯನ್ನು ಕಳೆದುಕೊಂಡ ಜೋಗಿ ಪ್ರೇಮ್! | Filmibeat Kannada

35 ವರ್ಷ ವಯಸ್ಸಿನ ಈ ನಟಿ ಈಗಲೂ ಮೆಗಾಸ್ಟಾರ್ ಚಿರಂಜೀವಿ ಸೇರಿ ಕೆಲ ಯುವನಟರೊಂದಿಗೆ ಸಹ ನಟಿಸುತ್ತಿದ್ದಾರೆ. ಆದರೆ ಮೊದಲಿನಷ್ಟು ಬೇಡಿಕೆ ಈಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು.

ಕೆಲ ದಿನಗಳ ಹಿಂದೆ ಕಾಜಲ್ ಅಗರ್ವಾಲ್ ಅವರ ಮದುವೆ ಬಗ್ಗೆ ಸುದ್ದಿಗಳು ಬಹಳವಾಗಿ ಹರಿದಾಡಿದವು. ಆದರೆ ಅವೆಲ್ಲ ಸುಳ್ಳು ಎಂದು ಕಾಜಲ್ ಸ್ಪಷ್ಟನೆ ನೀಡಿದ್ದರು. ಆದರೆ ಇತ್ತಿಚೆಗೆ ಮತ್ತೆ ಕಾಜಲ್ ಸುದ್ದಿಯಲ್ಲಿದ್ದು, ಟಾಲಿವುಡ್‌ನ ಯುವನಟನೊಂದಿಗೆ ಕಾಜಲ್ ಪ್ರೇಮದಲ್ಲಿದ್ದಾರೆ ಎನ್ನಲಾಗುತ್ತಿದೆ.

ಕಾಜಲ್ ಅಗರ್ವಾಲ್-ಬೆಲ್ಲಂಕೊಂಡ ಶ್ರೀನಿವಾಸ್ ಪ್ರೇಮ?

ಕಾಜಲ್ ಅಗರ್ವಾಲ್-ಬೆಲ್ಲಂಕೊಂಡ ಶ್ರೀನಿವಾಸ್ ಪ್ರೇಮ?

ಕಾಜಲ್ ಅಗರ್ವಾಲ್ ಯುವ ನಟ ಬೆಲ್ಲಂಕೊಂಡ ಶ್ರೀನಿವಾಸ್ ಜೊತೆ ರಿಲೇಶನ್‌ಷಿಪ್‌ನಲ್ಲಿದ್ದಾರೆ ಎಂದು ತೆಲುಗು ಚಿತ್ರರಂದಲ್ಲಿ ಗಾಳಿ ಸುದ್ದಿ ಹರಿದಾಡುತ್ತಿದೆ. ಈ ಇಬ್ಬರೂ ಸೀತಾ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.

ಕೆಲವು ಸಿನಿಮಾಗಳಲ್ಲಿ ನಟಿಸಿರುವ ಶ್ರೀನಿವಾಸ್

ಕೆಲವು ಸಿನಿಮಾಗಳಲ್ಲಿ ನಟಿಸಿರುವ ಶ್ರೀನಿವಾಸ್

27 ವರ್ಷ ವಯಸ್ಸಿನ ಬೆಲ್ಲಂಕೊಂಡ ಶ್ರೀನಿವಾಸ್, ಖ್ಯಾತ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ ಪುತ್ರ. ಬೆಲ್ಲಂಕೊಂಡ ಶ್ರೀನಿವಾಸು ಈಗಾಗಲೇ ಕೆಲವು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಯಶಸ್ಸನ್ನೂ ಸಹ ಗಳಿಸಿದ್ದಾರೆ.

ವೈರಲ್ ಆಗಿರುವ ಚಿತ್ರಗಳು

ವೈರಲ್ ಆಗಿರುವ ಚಿತ್ರಗಳು

ಬೆಲ್ಲಂಕೊಂಡ ಶ್ರೀನಿವಾಸ್ ಜೊತೆ ಕಾಜಲ್ ಅಗರ್ವಾಲ್ ಆಪ್ತವಾಗಿರುವ ಇರುವ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಬ್ಬರೂ ರಾಧೆ-ಕೃಷ್ಣನಂತೆ ಫೋಸ್ ಕೊಟ್ಟಿರುವ ಚಿತ್ರ ಹಾಗೂ ಕಾಜಲ್, ಶ್ರೀನಿವಾಸ್ ಹೆಗಲ ಆಸರೆಯಲ್ಲಿರುವ ಚಿತ್ರಗಳು ಸೇರಿ ಹಲವು ಚಿತ್ರಗಳು ವೈರಲ್ ಆಗಿವೆ.

ಪರಸ್ಪರ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ

ಪರಸ್ಪರ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ

'ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ' ಎಂದು ಕಾಜೋಲ್, ಶ್ರೀನಿವಾಸ್ ಜೊತೆಗಿನ ಆಪ್ತ ಚಿತ್ರವೊಂದನ್ನು ಶೇರ್ ಮಾಡಿ ಬರೆದುಕೊಂಡಿದ್ದಾರೆ. ಪ್ರತಿಯಾಗಿ ಶ್ರೀನಿವಾಸ್ ಸಹ ನಿನ್ನನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

More from Filmibeat

English summary
News spreading that Kajal Agarwal and actor Bellamkonda Shrinivas in relation. Images of them both got viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X