ಬಡಾಯಿ ಕೊಚ್ಚಿಕೊಳ್ಳುವ ಭರದಲ್ಲಿ ನೀಲ್, ಮೌಳಿ, ವಂಗಾನ ಕೆಣಕಿದ್ರಾ ನಾಗ್ ಅಶ್ವಿನ್?

ಪ್ರಭಾಸ್ ನಟನೆಯ 'ಕಲ್ಕಿ 2898 AD' ಸಿನಿಮಾ ಸಕ್ಸಸ್ ಕಂಡಿದೆ. ನಾಗ್‌ ಅಶ್ವಿನ್ ನಿರ್ದೇಶನದ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ಚಿತ್ರತಂಡ ಘೋಷಿಸಿದೆ. ಕೆಲವೇ ಪ್ಯಾನ್ ಇಂಡಿಯಾ ಸಿನಿಮಾಗಳು ಈ ಅಪರೂಪದ ಸಾಧನೆ ಮಾಡಿವೆ. ಜೂನ್ 27ರಂದು ಸಿನಿಮಾ ತೆರೆಗೆ ಬಂದಿತ್ತು.

ಕೇವಲ 2 ಚಿತ್ರಗಳನ್ನು ಕಟ್ಟಿಕೊಟ್ಟಿದ್ದ ನಾಗ್‌ ಅಶ್ವಿನ್ 5000 ಕೋಟಿ ರೂ. ಬಜೆಟ್ ಸಿನಿಮಾ ಸಿಕ್ಕಿತ್ತು. ಮಾವ ಅಶ್ವಿನಿ ದತ್ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಸಿನಿಮಾ ವಿಫಲವಾಗಿದೆ. ಆದರೂ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಇನ್ನು ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡಿರುವ ಬೆನ್ನಲ್ಲೇ ನಾಗ್‌ ಅಶ್ವಿನ್ ಮಾಡಿರುವ ಪೋಸ್ಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Is kalki 2898 ad director nag ashwin takes indirector jibe at rajamouli prashanth neel and vanga

ಸದ್ಯ ನಾಗ್‌ ಅಶ್ವಿನ್ ಮಾಡಿರುವ ಈ ಪೋಸ್ಟ್ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ತಮ್ಮ ಸಿನಿಮಾ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಲಿ. ಹಾಗಂತ ಬೇರೆ ಸಿನಿಮಾಗಳ ಬಗ್ಗೆ ವ್ಯಂಗ್ಯ ಮಾಡುವುದು ಯಾಕೆ? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಅಸಲಿಗೆ 'ಕಲ್ಕಿ 2898 AD' ಸಿನಿಮಾ 1000 ಕೋಟಿ ರೂ. ಗಳಿಕೆ ಮಾಡಿದೆ ಎನ್ನುವ ಬಗ್ಗೆಯೇ ಅನುಮಾನವಿದೆ. ಇಂತಹ ಸಮಯದಲ್ಲಿ ಇದೆಲ್ಲಾ ಬೇಕಾ? ಎಂದು ಅಣಕವಾಡುತ್ತಿದ್ದಾರೆ.

'ಕಲ್ಕಿ 2898 AD' ಸಿನಿಮಾ ಅಷ್ಟಾಗಿ ಪ್ರೇಕ್ಷಕರನ್ನು ರಂಜಿಸಲಿಲ್ಲ. ಬೇರೆ ಯಾವುದೇ ದೊಡ್ಡ ಸಿನಿಮಾ ಇಲ್ಲದ ಕಾರಣ ಜನ ಈ ಚಿತ್ರವನ್ನು ನೋಡುವಂತಾಗಿದೆ ಅಷ್ಟೇ. ಅದುಬಿಟ್ಟು ಸಿನಿಮಾ ಅದ್ಭುತ ಎನ್ನುವಂತಿಲ್ಲ. ಕೊನೆ 30 ನಿಮಿಷ ಅಷ್ಟೇ ಚೆನ್ನಾಗಿರೋದು ಎಂದು ಸಾಕಷ್ಟು ಜನ ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ನಾಗ್ ಅಶ್ವಿನ್ ಪೋಸ್ಟ್ ವೈರಲ್ ಆಗುತ್ತಿದೆ.

"ಈ ಮೈಲಿಗಲ್ಲು, ಈ ಸಂಖ್ಯೆ (₹ 1000 ಕೋಟಿ) ನಮ್ಮಂತಹ ಯುವ ತಂಡಕ್ಕೆ ನಿಸ್ಸಂಶಯವಾಗಿ ದೊಡ್ಡದಾಗಿದೆ. ಆದರೆ ನಾವು ಅದನ್ನು ರಕ್ತ, ರಕ್ತಪಾತ, ಅಶ್ಲೀಲತೆ, ಪ್ರಚೋದನಕಾರಿ ಅಥವಾ ಶೋಷಣೆಯ ಅಂಶಗಳಿಲ್ಲದೇ ಸಾಧಿಸಿದ್ದೇವೆ ಎನ್ನುವುದು ಬಹಳ ವಿಶೇಷ. ನಮ್ಮ ಬೆನ್ನೆಲುಬಾಗಿ ನಿಂತ ಪ್ರೇಕ್ಷಕರಿಗೆ ಮತ್ತು ಕಲಾವಿದರಿಗೆ ಧನ್ಯವಾದಗಳು" ಎಂದು ನಾಗಿ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

Is kalki 2898 ad director nag ashwin takes indirector jibe at rajamouli prashanth neel and vanga

ಈ ಹಿಂದೆ 'ಕೆಜಿಎಫ್', 'ಬಾಹುಬಲಿ' ಸರಣಿ ಹಾಗೂ 'ಅನಿಮಲ್' ಸಿನಿಮಾಗಳಲ್ಲಿ ವೈಲೆನ್ಸ್ ಜಾಸ್ತಿ ಇದೆ ಎನ್ನಲಾಗಿತ್ತು. 'ಅನಿಮಲ್' ಚಿತ್ರದಲ್ಲಂತೂ ಹಸಿ ಬಿಸಿ ದೃಶ್ಯಗಳಿವೆ, ಇದೆಲ್ಲಾ ಬೇಕಿತ್ತಾ? ಎಂದು ಕೆಲವರು ಟೀಕಿಸಿದ್ದರು. ಸಿನಿಮಾ ಸಿನಿಮಾ ತಾರೆಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇನ್ನು ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್' ಹಾಗೂ 'ಸಲಾರ್‌' ಸಿನಿಮಾಗಳಲ್ಲಿ ರಕ್ತಪಾತ ಹೆಚ್ಚಾಗಿತ್ತು. ಇದನ್ನೆಲ್ಲಾ ಉದ್ದೇಶಿಸಿ ನಾಗ್ ಅಶ್ವಿನ್ ಈ ರೀತಿ ಪೋಸ್ಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಮುಖ್ಯವಾಗಿ 'ಅನಿಮಲ್' ಸಿನಿಮಾ ಕಟ್ಟಿಕೊಟ್ಟ ಸಂದೀಪ್ ರೆಡ್ಡಿ ವಂಗಾಗೆ ಟಾಂಗ್ ಕೊಡಲು ನಾಗಿ ಈ ರೀತಿ ಪೋಸ್ಟ್ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಹಾಲಿವುಡ್ ಸಿನಿಮಾಗಳಿಂದ ಕಾಪಿ ಮಾಡಿ 'ಕಲ್ಕಿ' ಸಿನಿಮಾ ಕಟ್ಟಿಕೊಟ್ಟಿದ್ದಾರೆ, ಅಂತಹ ಅದ್ಭುತ ಸಿನಿಮಾ ಏನೆಲ್ಲಾ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ನಾಗ್ ಅಶ್ವಿನ್ ಇರೋದನ್ನೇ ಹೇಳುತ್ತಿದ್ದಾರೆ ಎಂದು ಪ್ರಭಾಸ್ ಫ್ಯಾನ್ಸ್ ವಾದಿಸುತ್ತಿದ್ದಾರೆ.

More from Filmibeat

English summary
Kalki 2898 ad director nag ashwin latest post sparks debate
Read more about: prashanth neel rajamouli telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X