ಮಹೇಶ್ ಬಾಬು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಕಿಚ್ಚ ಸುದೀಪ್?
ಮಹೇಶ್ ಬಾಬು ಅವರ ಹೊಸ ಸಿನಿಮಾದ ಪೋಸ್ಟರ್ ಈಗಷ್ಟೆ ಬಿಡುಗಡೆ ಆಗಿದೆ. 'ಸರ್ಕಾರು ವಾರಿ ಪಾಠ' ಸಿನಿಮಾ ತನ್ನ ಪೋಸ್ಟರ್‌ನಿಂದಲೇ ಗಮನ ಸೆಳೆಯುತ್ತಿದೆ.
Recommended Video
ಈ ಸಿನಿಮಾದ ನಾಯಕಿ ಯಾರೂ ವಿಲನ್ ಯಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ. ಆದರೆ ಈ ನಡುವೆ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕುತೂಹಲ ಕೆರಳಿಸಿದೆ.
ಸುದೀಪ್ ಅವರ ಚಿತ್ರವಿರುವ 'ಸರ್ಕಾರು ವಾರಿ ಪಾಠ' ಚಿತ್ರದ ಪೋಸ್ಟರ್ ಒಂದು ಹರಿದಾಡುತ್ತಿದೆ. ಆದರೆ ಇದು ಅಧಿಕೃತವೋ ಅಥವಾ ಸುದೀಪ್ ಅಭಿಮಾನಿಗಳು ಹರಿಬಿಟ್ಟಿರುವುದೋ ಖಚಿತತೆ ಇಲ್ಲ.

ತೆಲುಗಿನಲ್ಲಿ ಕೆಲವು ಮುಖ್ಯ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ
ಸುದೀಪ್ ಅವರಿಗೆ ಅನ್ಯ ಭಾಷೆಯಲ್ಲಿ ಭಾರಿ ಬೇಡಿಕೆ ಇರುವುದು ಗೊತ್ತಿರುವ ಸಂಗತಿಯೇ. ತೆಲುಗಿನಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿಯೇ ನಟಿಸಿದ್ದಾರೆ ಸುದೀಪ್. ಹಾಗಾಗಿ ಸರ್ಕಾರ್ ವಾರಿ ಪಾಠ ಸಿನಿಮಾದಲ್ಲಿ ಸುದೀಪ್ ಅಭಿನಯಿಸಿದರೆ ಅಚ್ಚರಿ ಪಡುವಂತಿಲ್ಲ.

ಚಿತ್ರತಂಡದಿಂದ ಅಧಿಕೃತ ಮಾಹಿತಿ ಇಲ್ಲ
ಆದರೆ 'ಸರ್ಕಾರು ವಾರಿ ಪಾಠ' ಸಿನಿಮಾ ತಂಡ ಈವರೆಗೆ ಮಹೇಶ್ ಬಾಬು ಬಿಟ್ಟರೆ ಇನ್ನಾವ ನಟ-ನಟಿಯರು ತಮ್ಮ ಸಿನಿಮಾದಲ್ಲಿರಲಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಹಾಗಾಗಿ ಸುದೀಪ್ ಅವರ ಈ ಪೋಸ್ಟರ್ ಅನ್ನು ನಂಬುವುದು ಕಷ್ಟ. ಕಿಯಾರಾ ಅಡ್ವಾಣಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಪರಶುರಾಮ್ ನಿರ್ದೇಶಿಸುತ್ತಿರುವ ಸಿನಿಮಾ
ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ 'ಸರ್ಕಾರು ವಾರಿ ಪಾಠ' ಸಿನಿಮಾವನ್ನು ಪರಶುರಾಮ್ ನಿರ್ದೇಶಿಸುತ್ತಿದ್ದು, ಮೈತ್ರಿ ಪ್ರೊಡಕ್ಷನ್ಸ್ ಹಾಗೂ 14 ರೀಲ್ ನಿರ್ಮಿಸುತ್ತಿದೆ. ಸಂಗೀತವನ್ನು ತಮನ್ ನೀಡಲಿದ್ದಾರೆ. ನಾಯಕಯಾಗಿ ಕಿಯಾರಾ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

ಕೋಟಿಗೊಬ್ಬ 3 ಸಿನಿಮಾ ಬಿಡುಗಡೆಗೆ ರೆಡಿ
ಇನ್ನು ಸುದೀಪ್ ಅವರ ಕೋಟಿಗೊಬ್ಬ 3 ಬಿಡುಗಡೆಗೆ ತಯಾರಾಗಿದೆ. ಅನೂಪ್ ಭಂಡಾರಿ ನಿರ್ದೇಶನದ ಪ್ಯಾಂಟಮ್ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಮತ್ತು ನಿರೂಪ್ ಭಂಡಾರಿ ನಟಿಸುತ್ತಿದ್ದಾರೆ. ಸುದೀಪ್ ನಾಯಕಿ ಯಾರೆಂಬುದು ಇನ್ನೂ ಅಂತಿಮವಾಗಿಲ್ಲ.


Click it and Unblock the Notifications











