"ಮೋಸ ಮಾಡಿ ವಂಚಕನಾಗಿ ಗೆಲ್ಲುವುದಕ್ಕಿಂತ"..; ಪವನ್ ಕಲ್ಯಾಣ್ ಬಗ್ಗೆ 'ಬಂಧುಬಳಗ' ಚಿತ್ರನಟಿ ವ್ಯಂಗ್ಯ?
ತೆಲುಗು ನಟ ಪವನ್ ಕಲ್ಯಾಣ್ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪವನ್ ನೇತೃತ್ವದ ಜನಸೇನಾ ಪಕ್ಷ 21 ವಿಧಾನಸಭೆ ಹಾಗೂ 2 ಲೋಕಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಎನ್‌ಡಿಎ ಮೈತ್ರಿಕೂಟಕ್ಕೂ ಬೆಂಬಲ ಸೂಚಿಸಿದೆ.
ಈಗಾಗಲೇ ಡಿಸಿಎಂ ಆಗಿ ಪವನ್ ಕಲ್ಯಾಣ್ ಅಧಿಕಾರ ಸ್ವೀಕರಿಸಿದ್ದಾರೆ. ಆಂಧ್ರ ವಿಧಾನಸಭೆ ಅಧಿವೇಶನದಲ್ಲೂ ಭಾಗಿ ಆಗಿದ್ದರು. ನಟಿ ಪೂನಂ ಕೌರ್ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು ಪ್ರಪಂಚದ ಹಾಗುಹೋಗುಗಳ ಬಗ್ಗೆ ಕಾಮೆಂಟ್ ಮಾಡುತ್ತಿರುತ್ತಾರೆ. ಮುಖ್ಯವಾಗಿ ಆಂಧ್ರ ರಾಜಕೀಯದ ಬಗ್ಗೆ ಪೋಸ್ಟ್ ಮಾಡುತ್ತಾರೆ. ನಟ ಪವನ್ ಕಲ್ಯಾಣ್ ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್‌ರನ್ನು ಟಾರ್ಗೆಟ್ ಮಾಡಿ ಟ್ವೀಟ್ ಮಾಡುತ್ತಿರುತ್ತಾರೆ.

ಕೆಲವೊಮ್ಮೆ ಪೂನಂ ನೇರವಾಗಿ ಕಾಮೆಂಟ್ ಮಾಡದೇ ಪರೋಕ್ಷವಾಗಿ ಕೋಟ್‌ಗಳನ್ನು ಪೋಸ್ಟ್ ಮಾಡಿ ತಿರುಗೇಟು ನೀಡುವ ಪ್ರಯತ್ನ ಮಾಡುತ್ತಾರೆ. ಕನ್ನಡದಲ್ಲಿ ಶಿವಣ್ಣ ನಟನೆಯ 'ಬಂಧುಬಳಗ' ಚಿತ್ರದಲ್ಲಿ ಆಕೆ ನಟಿಸಿದ್ದಳು. ಇನ್ನುಳಿದಂತೆ ತೆಲುಗು, ತಮಿಳಿನ ಕೆಲ ಸಿನಿಮಾಗಳಲ್ಲಿ ಪೂನಂ ಮಿಂಚಿದ್ದಾರೆ. ಇದೀಗ ಆಕೆ ಮಾಡಿರುವ ಪೋಸ್ಟ್‌ವೊಂದು ವೈರಲ್ ಆಗುತ್ತಿದೆ. ಪವನ್ ಕಲ್ಯಾಣ್ ಗೆಲುವನ್ನು ಉದ್ದೇಶಿಸಿ ಆಕೆ ಈ ಟ್ವೀಟ್ ಮಾಡಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
"ಮೋಸ ಮಾಡಿ ವಂಚಕನಾಗಿ ಗೆಲ್ಲುವುದಕ್ಕಿಂತ ಮೌಲ್ಯಗಳು ಮತ್ತು ಸಮಗ್ರತೆಯ ಯೋಧನಾಗಿ ಸೋಲುವುದು ಉತ್ತಮ" ಎಂದು ಪೂನಂ ಟ್ವೀಟ್ ಮಾಡಿದ್ದಾರೆ. ಕೇವಲ ಆಚೋಚನೆ ಎಂದು ಟ್ಯಾಗ್ ಮಾಡಿ ಬರೆದುಕೊಂಡಿದ್ದಾರೆ. ಸಾಕಷ್ಟು ಜನ ಇದು ಪವನ್ ಕಲ್ಯಾಣ್ ಜನಸೇನಾ ಪಕ್ಷದ ಯಶಸ್ಸಿನ ಬಗ್ಗೆ ನೀಡಿರುವ ತಿರುಗೇಟು ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಎನ್‌ಡಿಎ ಸರ್ಕಾರದ ವಿರುದ್ಧ ಮಾಡಿರುವ ಕಾಮೆಂಟ್ ಎಂಧು ಹೇಳುತ್ತಿದ್ದಾರೆ. ಈ ಟ್ವೀಟ್ ನೋಡಿ ಪವರ್ ಸ್ಟಾರ್ ಅಭಿಮಾನಿಗಳು ಪೂನಂ ಮೇಲೆ ಕಿಡಿಕಾರಿದ್ದಾರೆ.
ನಿಮ್ಮ ಬಳಿ ಸಾಕ್ಷ್ಯವಿದೆಯೇ, ಪೂನಂ ಅವರ ಪೋಸ್ಟ್‌ನಲ್ಲಿ ಏನು ತಪ್ಪಾಗಿದೆ? ಎಂದು ಕೆಲವರು ಕೇಳಿದರೆ ಇನ್ನು ಕೆಲವರು ಪವನ್ ಹೆಸರನ್ನು ಪೂನಂ ಹೇಳಿಲ್ಲವಲ್ಲ. ನೀವ್ಯಾಕೆ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತೀರಾ? ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಹುಟ್ಟಿ ಬೆಳೆದ ಪೂನಂ ಕೌರ್ ಕಾಲೇಜು ದಿನಗಳಲ್ಲೇ ನಟಿಸಲು ಆರಂಭಿಸಿದರು. '3ದೇವ್', 'ನಂದು ಎನ್ ನನ್ಬನ್', 'ಗೆಸ್ಟ್' ಹಾಗೂ 'ನಾತಿಚರಾಮಿ' ಎನ್ನುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ಸದ್ಯಕ್ಕೆ ಯಾವುದು ರಿಲೀಸ್ ಆಗುವ ಸುಳಿವು ಸಿಗುತ್ತಿಲ್ಲ.
ತೆಲಂಗಾಣ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಪೂನಂ ಕೌರ್ ಗುರ್ತಿಸಿಕೊಂಡಿದ್ದಾರೆ. 'ಒಕ ವಿಚಿತ್ರಂ' ಸಿನಿಮಾ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟ ಹೈದರಾಬಾದ್ ಬೆಡಗಿ ಮುಂದೆ 'ಶೌರ್ಯಂ', 'ಈನಾಡು', 'ಗಣೇಶ್', 'ನಾಗವಲ್ಲಿ', 'ಗಗನಂ', 'ಅಟ್ಯಾಕ್', 'ನಾಯಕಿ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು.
ಮತ್ತೊಂದು ಕಡೆ ಪವನ್ ಕಲ್ಯಾಣ್ ನಟನೆಯ 3 ಸಿನಿಮಾಗಳು ನಿಂತುಹೋಗಿದೆ. ಚುನಾವಣೆ ಘೋಷಣೆ ಆಗುತ್ತದಂತೆ ಪವನ್ ಶೂಟಿಂಗ್ ಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿದರು. ಹಾಗಾಗಿ 'ಹರಿಹರ ವೀರಮಲ್ಲು', 'ಉಸ್ತಾದ್ ಭಗತ್ ಸಿಂಗ್' ಹಾಗೂ 'ಓಜಿ' ಸಿನಿಮಾಗಳು ನಿಂತಿದೆ. ಯಾವಾಗ ರಿಲೀಸ್ ಆಗುತ್ತದೆ ಎನ್ನುವ ಮಾಹಿತಿ ಲಭ್ಯವಿಲ್ಲ.


Click it and Unblock the Notifications











