For Quick Alerts
    ALLOW NOTIFICATIONS  
    For Daily Alerts

    ಚಿರಂಜೀವಿ-ಶ್ರೀದೇವಿ ಅಭಿನಯದ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ನಲ್ಲಿ ರಾಮ್ ಚರಣ್-ಜಾಹ್ನವಿ?

    |

    ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಖ್ಯಾತ ನಟಿ ಶ್ರೀದೇವಿ ಅಭಿನಯದ ಸೂಪರ್ ಹಿಟ್ 'ಜಗದೇಕ ವೀರುಡು ಅತಿಲೋಕ ಸುಂದರಿ' ಸಿನಿಮಾಗೆ 30 ವರ್ಷದ ಸಂಭ್ರಮ. ಹೌದು ಈ ಸಿನಿಮಾ ರಿಲೀಸ್ ಆಗಿ 30 ವರ್ಷಗಳು ಕಳೆದಿವೆ.

    ಅಜ್ಜಿ ಜೊತೆ ಬೆಣ್ಣೆ ಕಡೆಯೋದನ್ನ ಕಲಿತ ಮಗಧೀರ | Ram Charan in Kitchen

    90ರ ದಶಕದಲ್ಲಿ ಸಂಚಲನ ಮೂಡಿಸಿದ್ದ ಸಿನಿಮಾವಿದು. ಅದೆಷ್ಟೊ ಚಿತ್ರಮಂದಿರಗಳಲ್ಲಿ ಯಶಸ್ವಿ ನೂರು ದಿನ ಓಡಿದ ಸಿನಿಮಾ. ವಿಶೇಷ ಅಂದರೆ ಒಂದೆ ಚಿತ್ರಮಂದಿರದಲ್ಲಿ 370 ದಿನಗಳು ಓಡಿ ದಾಖಲೆ ನಿರ್ಮಿಸಿದ ಸಿನಿಮಾವಿದು. ಚಿರಂಜೀವಿ ಮತ್ತು ಶ್ರೀದೇವಿ ಜೋಡಿ ಅಭಿಮಾನಿಗಳನ್ನು ಮೋಡಿ ಮಾಡಿತ್ತು.

    ಚಿತ್ರಮಂದಿರದಲ್ಲಿ ಈ ಜೋಡಿ ನೋಡಿ ಅಭಿಮಾನಿಗಳು ಹಬ್ಬ ಮಾಡಿದ್ದರು. ಅಷ್ಟರ ಮಟ್ಟಿಗೆ ಕ್ರೇಜ್ ಹುಟ್ಟುಹಾಕಿದ್ದ ಸಿನಿಮಾ ಇದಾಗಿತ್ತು. ಈಗ್ಯಾಕೆ ಈ ಸಿನಿಮಾದ ಬಗ್ಗೆ ಅಂತೀರಾ? ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ಮಾಡಲು ತಯಾರಿ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಮುಂದೆ ಓದಿ..

    ರಿಮೇಕ್ ಮಾಡುವ ಬಗ್ಗೆ ಪ್ಲಾನ್ ನಡೆದಿತ್ತು

    ರಿಮೇಕ್ ಮಾಡುವ ಬಗ್ಗೆ ಪ್ಲಾನ್ ನಡೆದಿತ್ತು

    ಚಿರಂಜೀವಿ ಮತ್ತು ಶ್ರೀದೇವಿ ಅಭಿನಯದ 'ಜಗದೇಕ ವೀರುಡು ಅತಿಲೋಕ ಸುಂದರಿ' ಸಿನಿಮಾವನ್ನು ಮತ್ತೆ ರಿಮೇಕ್ ಮಾಡಲಾಗುತ್ತಿದೆ ಎನ್ನುವ ಮಾತು ಕೆಲವು ದಿನಗಳ ಹಿಂದೆಯೆ ಕೇಳಿ ಬರುತ್ತಿತ್ತು. ರಿಮೇಕ್ ನಲ್ಲಿ ಚಿರು ಪಾತ್ರವನ್ನು ಅವರ ಪುತ್ರ ರಾಮ್ ಚರಣ್ ಅವರೆ ಮಾಡಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಅಪ್ಪನ ಪಾತ್ರವನ್ನು ಮತ್ತೆ ರಿಮೇಕ್ ಮಾಡಲು ರಾಮ್ ಚರಣ್ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ರಿಮೇಕ್ ಆಸೆ ಕೈಬಿಟ್ಟಿದ್ದರು.

    ವೈರಲ್ ಆಗಿದೆ ಸೀಕ್ವೆಲ್ ಸುದ್ದಿ

    ವೈರಲ್ ಆಗಿದೆ ಸೀಕ್ವೆಲ್ ಸುದ್ದಿ

    ರಿಮೇಕ್ ಆಲೋಚನೆ ಕೈಬಿಟ್ಟ ಕಾರಣ ಚಿತ್ರದ ಸೀಕ್ವಲ್ ಮಾಡಲು ತಯಾರಿ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ವಿಶೇಷ ಅಂದರೆ ಸೀಕ್ವೆಲ್ ನಲ್ಲಿ ರಾಮ್ ಚರಣ್ ಅವರೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿರು ಅಭಿನಯದ ಮುಂದುವರೆದ ಭಾಗದಲ್ಲಿ ರಾಮ್ ಚರಣ್ ಮಾಡಲಿದ್ದಾರಂತೆ.

    ರಾಮ್ ಚರಣ್ ಗೆ ಜಾಹ್ನವಿ ಕಪೂರ್ ನಾಯಕಿ

    ರಾಮ್ ಚರಣ್ ಗೆ ಜಾಹ್ನವಿ ಕಪೂರ್ ನಾಯಕಿ

    ರಾಮ್ ಚರಣ್ ಗೆ ನಾಯಕಿಯಾಗಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಪೋಷಕರು ನಿಭಾಯಿಸಿದ್ದ ಪಾತ್ರದಲ್ಲಿ ಮಕ್ಕಳು ಅಭಿನಯಿಸಿದರೆ ಹೇಗೆ ಎನ್ನುವ ಆಲೋಚನೆ ಚಿತ್ರತಂಡದ್ದು. ರಾಜು-ಇಂದ್ರಜಾ ಆಗಿ ಅಭಿಮಾನಿಗಳ ನಿದ್ದೆಗೆಡಿಸಿದ್ದ ಚಿರು ಮತ್ತು ಶ್ರೀದೇವಿ ಹಾಗೆ ರಾಮ್ ಚರಣ್ ಮತ್ತು ಜಾಹ್ನವಿ ಕಪೂರ್ ಜೋಡಿಯೂ ಮೋಡಿ ಮಾಡಲಿದೆ ಎನ್ನುವುದು ಚಿತ್ರತಂಡದ ಲೆಕ್ಕಾಚಾರ.

    ವದಂತಿ ಬಗ್ಗೆ ನಿರ್ಮಾಪಕರ ಪ್ರತಿಕ್ರಿಯೆ

    ವದಂತಿ ಬಗ್ಗೆ ನಿರ್ಮಾಪಕರ ಪ್ರತಿಕ್ರಿಯೆ

    ಈ ಬಗ್ಗೆ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸೀಕ್ವೆಲ್ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದ ಜೋರಾಗಿ ನಗಲು ಪ್ರಾರಂಭಿಸಿದ ನಿರ್ಮಾಪಕ ಅಶ್ವಿನಿ ದತ್ "ಒಂದು ವೇಳೆ ಇದು ಸಂಭವಿಸಿದರೆ ಅದ್ಭುತ" ಎಂದು ಹೇಳಿದ್ದಾರೆ. ಅಂದರೆ ಸೀಕ್ವೆಲ್ ಬರುವುದು ಜಸ್ಟ್ ಗಾಳಿಮಾತು ಅಷ್ಟೆ. ಒಂದು ವೇಳೆ ಅಭಿಮಾನಿಗಳ ಆಸೆಯಂತೆ ಸೀಕ್ವೆಲ್ ಬಂದರೆ ಚಿರು ಮತ್ತು ಶ್ರೀದೇವಿ ಜೋಡಿ ಹಾಗೆ ಮೋಡಿ ಮಾಡ್ತಾರಾ ಎನ್ನುವುದು ಕುತೂಹಲದ ಸಂಗತಿ.

    English summary
    Is Actor Ram Charan and Janhvi Kapoor team up for, Chiranjeevi and Sridevi's JVAS sequel.

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
    X