'ಅಯ್ಯೋ.. ಮಹೇಶ್ ಗೆ ರಶ್ಮಿಕಾ ಮಂದಣ್ಣ ಜೋಡಿನಾ!? ನಿರ್ದೇಶಕರ ಆಯ್ಕೆ ತಪ್ಪು.!'

Recommended Video

ತೆಲುಗು ನೆಲದಲ್ಲಿ ರಶ್ಮಿಕಾ ಬಗ್ಗೆ ನೆಗೆಟೀವ್ ಮಾತು | RASHMIKA MANDANNA | MEHESH BABU | FILMIBEAT KANNADA

''ಅಯ್ಯೋ.. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಜೋಡಿನಾ.!? ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಗ್ಯಾರೆಂಟಿ ಸೂಟ್ ಆಗಲ್ಲ. ನಿಮ್ಮ (ನಿರ್ದೇಶಕ ಅನಿಲ್ ರವಿಪುಡಿ) ಆಯ್ಕೆ ತಪ್ಪು. ರಶ್ಮಿಕಾ ಮಂದಣ್ಣ ರನ್ನ ಆಯ್ಕೆ ಮಾಡಬೇಡಿ'' - ಹೀಗಂತ ಅದೆಷ್ಟೋ ಜನ ಫೋನ್ ಮಾಡಿ ನಿರ್ದೇಶಕ ಅನಿಲ್ ರವಿಪುಡಿಗೆ ಹೇಳಿದ್ರಂತೆ. ಅದು 'ಸರಿಲೇರು ನೀಕೆವ್ವರು' ಚಿತ್ರದಲ್ಲಿ ಮಹೇಶ್ ಬಾಬುಗೆ ರಶ್ಮಿಕಾ ಮಂದಣ್ಣ ಹೀರೋಯಿನ್ ಅಂತ ಅನೌನ್ಸ್ ಮಾಡಿದ್ಮೇಲೆ.!

'ಸರಿಲೇರು ನೀಕೆವ್ವರು' ಚಿತ್ರದ ನಾಯಕಿ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಆಗಿದ್ದಾರೆ ಅಂತ ಬಹಿರಂಗ ಪಡಿಸಿದಾಗ, ಟಾಲಿವುಡ್ ಅಂಗಳದಲ್ಲಿ ನೆಗೆಟಿವ್ ಮಾತುಗಳೇ ಹೆಚ್ಚಾಗಿ ಕೇಳಿಬಂದ್ವಂತೆ.

ಆದ್ರೀಗ, 'ಸರಿಲೇರು ನೀಕೆವ್ವರು' ಚಿತ್ರದ ಟ್ರೈಲರ್ ಬಿಡುಗಡೆ ಆದ್ಮೇಲೆ ಆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಸರಿಯಾಗಿದೆ ಎಂಬ ಟಾಕ್ ಶುರುವಾಗಿದೆ ಎಂದು ಸಂದರ್ಶನವೊಂದರಲ್ಲಿ ನಿರ್ದೇಶಕ ಅನಿಲ್ ರವಿಪುಡಿ ಹೇಳಿಕೊಂಡಿದ್ದಾರೆ. ಮುಂದೆ ಓದಿರಿ...

ರಶ್ಮಿಕಾ ರನ್ನ ಆಯ್ಕೆ ಮಾಡಿದಾಗ...

ರಶ್ಮಿಕಾ ರನ್ನ ಆಯ್ಕೆ ಮಾಡಿದಾಗ...

''ಸರಿಲೇರು ನೀಕೆವ್ವರು' ಚಿತ್ರಕ್ಕೆ ರಶ್ಮಿಕಾ ಮಂದಣ್ಣ ರನ್ನ ಆಯ್ಕೆ ಮಾಡಿದಾಗ, ನೆಗೆಟಿವ್ ಮಾತುಗಳೇ ಹೆಚ್ಚಾಗಿ ಕೇಳಿಬಂತು. ನಿಮ್ಮ ಆಯ್ಕೆ ಸರಿಯಿಲ್ಲ. ಮಹೇಶ್ ಬಾಬುಗೆ ರಶ್ಮಿಕಾ ಸೂಟ್ ಆಗಲ್ಲ. ಆಕೆಯನ್ನ ಸೆಲೆಕ್ಟ್ ಮಾಡಬೇಡಿ'' ಅಂತ ಎಷ್ಟೋ ಜನ ನನಗೆ ಫೋನ್ ಮಾಡಿ ಹೇಳಿದರು'' ಎಂದು ನಿರ್ದೇಶಕ ಅನಿಲ್ ರವಿಪುಡಿ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

ಸ್ಟಾರ್ ಹೀರೋಯಿನ್ ಬೇಕಾಗಿರಲಿಲ್ಲ.!

ಸ್ಟಾರ್ ಹೀರೋಯಿನ್ ಬೇಕಾಗಿರಲಿಲ್ಲ.!

''ಸರಿಲೇರು ನೀಕೆವ್ವರು' ಚಿತ್ರದಲ್ಲಿ ನಮಗೆ ಸ್ಟಾರ್ ಹೀರೋಯಿನ್ ಬೇಕಾಗಿರಲಿಲ್ಲ. ಸ್ಟಾರ್ ನಾಯಕಿಯನ್ನು ಸೆಲೆಕ್ಟ್ ಮಾಡಿದ್ರೆ, ದೊಡ್ಡ ಎಡವಟ್ಟು ಆಗುತ್ತಿತ್ತು. ಹೀರೋಯಿನ್ ಅನ್ನೋದಕ್ಕಿಂತ ಹೆಚ್ಚಾಗಿ ಕ್ಯಾರೆಕ್ಟರ್ ಬೇಕಾಗಿತ್ತು. ರೈಲು ಸೀಕ್ವೆನ್ಸ್ ನಲ್ಲಿ ಕರ್ನೂಲಿಗೆ ಹೋಗುವ ಬಬ್ಲಿ ಹುಡುಗಿ ಬೇಕಾಗಿದ್ದಳು. ಅದಕ್ಕೆ ಸ್ಟಾರ್ ಇಮೇಜ್ ಇರುವ ನಾಯಕಿಯ ಅಗತ್ಯವಿರಲಿಲ್ಲ. ಹೀಗಾಗಿ ರಶ್ಮಿಕಾ ರನ್ನ ಆಯ್ಕೆ ಮಾಡಿದೆವು. ರಶ್ಮಿಕಾ ಆಯ್ಕೆ ಸರಿ ಎಂದು ಮಹೇಶ್ ಬಾಬು ಕೂಡ ಹೇಳಿದ್ದರು'' ಎಂದು ಅನಿಲ್ ರವಿಪುಡಿ ಹೇಳಿದ್ದಾರೆ.

ನಿರ್ದೇಶಕರ ಅನಿಸಿಕೆ

ನಿರ್ದೇಶಕರ ಅನಿಸಿಕೆ

''ಟ್ರೈಲರ್ ಬಿಡುಗಡೆಯಾದ್ಮೇಲೆ ಆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಆಯ್ಕೆ ಸರಿಯಾಗಿದೆ ಎಂದು ಕೆಲವರಿಗೆ ಅನಿಸಿದೆ. ಸಿನಿಮಾ ನೋಡಿದ್ಮೇಲೆ, ರಶ್ಮಿಕಾ ಪಾತ್ರ ಎಲ್ಲರಿಗೂ ಇಷ್ಟ ಆಗುತ್ತದೆ ಎಂಬ ನಂಬಿಕೆ ಇದೆ'' ಎಂದಿದ್ದಾರೆ ನಿರ್ದೇಶಕ ಅನಿಲ್ ರವಿಪುಡಿ

ಜನವರಿ 11 ಬಿಡುಗಡೆ

ಜನವರಿ 11 ಬಿಡುಗಡೆ

ಮೇಜರ್ ಅಜಯ್ ಕೃಷ್ಣ ಆಗಿ ಮಹೇಶ್ ಬಾಬು, ರಶ್ಮಿಕಾ ಮಂದಣ್ಣ, ವಿಜಯಶಾಂತಿ, ಕೃಷ್ಣ, ಪ್ರಕಾಶ್ ರಾಜ್ ರಂತಹ ದೊಡ್ಡ ತಾರಾಬಳಗ ಹೊಂದಿರುವ 'ಸರಿಲೇರು ನೀಕೆವ್ವರು' ಚಿತ್ರ ಜನವರಿ 11, 2020 ರಂದು ಬಿಡುಗಡೆ ಆಗಲಿದೆ. ದೇವಿಶ್ರೀ ಪ್ರಸಾದ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Is Rashmika Mandanna right choice opposite Mahesh Babu in Sarileru Neekkevvaru Movie.? Director Anil Ravipudi Answers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X