For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿಗೆ 'ಬಿಗ್ ಬಾಸ್' ನಡೆಸಿಕೊಟ್ಟ ಅನುಭವ ಬಿಚ್ಚಿಟ್ಟ ನಟಿ ಸಮಂತಾ

  |

  ತೆಲುಗು ಸಿನಿಮಾ ರಂಗದ ಖ್ಯಾತ ನಟಿ ಸಮಂತಾ ಅಕ್ಕಿನೇನಿ ಮೊದಲ ಬಾರಿಗೆ ಬಿಗ್ ಬಾಸ್ ರಿಯಾಲಿಟ್ ಶೋ ನಡೆಸಿಕೊಟ್ಟಿದ್ದಾರೆ. ತೆಲುಗು ಬಿಗ್ ಬಾಸ್ ಸೀಸನ್ 4 ನಡೆಯುತ್ತಿದ್ದು, ಈ ಬಾರಿಯ ಬಿಗ್ ಬಾಸ್ ಅನ್ನು ನಟ ನಾಗಾರ್ಜುನ ನಡೆಸಿಕೊಡುತ್ತಿದ್ದಾರೆ. ಕಳೆದ ವಾರ ನಾಗಾರ್ಜುನ ಸೊಸೆ ನಟಿ ಸಮಂತಾ ಹೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

  ಸಮಂತಾ ಎಂಟ್ರಿ ವೀಕ್ಷಕರಿಗೆ ಮಾತ್ರವಲ್ಲ, ಬಿಗ್ ಬಾಸ್ ಸ್ಪರ್ಧಿಗಳಿಗೂ ಅಚ್ಚರಿವುಂಟು ಮಾಡಿತ್ತು. ಸಮಂತಾ ವೇದಿಕೆ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ದಸರಾ ಹಬ್ಬದ ವಿಶೇಷ ಸಮಯದಲ್ಲಿ ಕಿರುತೆರೆ ವೀಕ್ಷಕರು ಸಮಂತಾ ನೋಡಿ ಫುಲ್ ಖುಷ್ ಆಗಿದ್ದರು.

  ಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತ

  ಮೊದಲ ಬಾರಿಗೆ ಬಿಗ್ ಬಾಸ್ ನಡೆಸಿಕೊಟ್ಟ ಅನುಭವನ್ನು ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಬಿಗ್ ಬಾಸ್ ಹೋಸ್ಟ್ ಮಾಡುವ ಮೊದಲು ಒಂದೇ ಒಂದು ಎಪಿಸೋಡ್ ಅನ್ನು ನೋಡಿರಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ತನ್ನ ಮಾವನಿಗೂ ಧನ್ಯವಾದ ಹೇಳಿದ್ದಾರೆ.

  "ಅನುಭವವನ್ನು ನೆನಪಿಸಿಕೊಳ್ಳುವುದು, ನಾನು ಬಿಗ್ ಬಾಸ್ ನಡೆಸಿಕೊಡುತ್ತೇನೆ ಎಂದು ಯಾವತ್ತೂ ಭಾವಿಸಿರಲಿಲ್ಲ. ನನ್ನ ಮಾವ ಈ ಜವಾಬ್ದಾರಿಯನ್ನು ನನಗೆ ನೀಡಿದ್ದರಿಂದ ಮಾತ್ರ ನನ್ನ ಭಯವನ್ನು ಹೋಗಲಾಡಿಸುವ ಶಕ್ತಿ ನನಗೆ ದೊರಕಿತು. ನನಗೆ ಹೋಸ್ಟ್ ಮಾಡಿದ ಅನುಭವವಿಲ್ಲ ಎಂಬ ಭಯ ಇಲ್ಲ. ತೆಲುಗಿನ ಭಯ. ನಾನು ಈ ಮೊದಲು ಬಿಗ್ ಬಾಸ್ ನೋಡಿಲ್ಲ. ನನ್ನ ಭಯವನ್ನು ಹೋಗಲಾಡಿಸಲು ಸಹಾಯ ಮಾಡಿದ್ದಕ್ಕಾಗಿ ಮತ್ತು ನನ್ನನ್ನು ನಂಬಿದ್ದಕ್ಕಾಗಿ ಧನ್ಯವಾದಗಳು ಮಾವ. ಎಪಿಸೋಡ್ ಬಳಿಕ ನಾನು ಪಡೆದ ಪ್ರೀತಿಗೆ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

  ಸಮಂತಾ ಅವರ ಈ ಪೋಸ್ಟ್ ಗೆ ಕೆಲವೇ ನಿಮಿಷದಲ್ಲಿ ಸಿಕ್ಕಾಪಟ್ಟೆ ಲೈಕ್ಸ್ ಹರಿದುಬಂದಿದೆ. 3.5 ಲಕ್ಷಕ್ಕು ಹೆಚ್ಚು ಲೈಕ್ಸ್ ಪಡೆದಿದೆ. ವಿಶೇಷ ಅಂದರೆ ನಟಿ ಕೀರ್ತಿ ಸುರೇಶ್ ಕಾಮೆಂಟ್ ಮಾಡಿ, ಅದ್ಭುತ ಎಂದು ಹೇಳಿದ್ದಾರೆ.

  English summary
  Actress Samantha Akkineni shares her Bigg Boss 4 experience. She reveals not watched any episode of Bigg Boss Telugu 4 before hosting it.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X