ಈ ಚಿತ್ರಕ್ಕೆ ಹೆದರಿ ಪೋಸ್ಟ್‌ಪೋನ್ ಆಯ್ತಾ ಸಮಂತಾ 'ಶಾಕುಂತಲಂ'? ಈಗ ಬಂದ್ರೂ ಸಮಸ್ಯೆ, ಆಗ ಬಂದ್ರೂ ಸಮಸ್ಯೆನೇ!

ನಟಿ ಸಮಂತಾ ರುತ್ ಪ್ರಭು ನಟನೆಯ ಬಹು ನಿರೀಕ್ಷಿತ ಚಿತ್ರ ಶಾಕುಂತಲಂ ಬಿಡುಗಡೆ ಒಂದಿಲ್ಲೊಂದು ಕಾರಣದಿಂದ ತಡವಾಗುತ್ತಲೇ ಇದೆ. ಹಲವು ತಿಂಗಳುಗಳ ಹಿಂದೆಯೇ ಚಿತ್ರೀಕರಣ ಮುಗಿಸಿದ್ದ ಈ ಚಿತ್ರ ಈ ಹಿಂದೆ ಕಳಪೆ ವಿಎಫ್‌ಎಕ್ಸ್ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಕಳೆದ ಕೆಲ ವಾರಗಳ ಹಿಂದಷ್ಟೇ ಪತ್ರಿಕಾಗೋಷ್ಠಿಯನ್ನು ನಡೆಸಿದ ಚಿತ್ರತಂಡ ಫೆಬ್ರವರಿ ತಿಂಗಳ 17ಕ್ಕೆ ಚಿತ್ರ ತೆರೆಗೆ ಬರಲಿದೆ ಎಂಬುದನ್ನು ತಿಳಿಸಿತ್ತು.

ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದ ಸಮಂತಾ ಅಭಿಮಾನಿಗಳು ಹಾಗೂ ಸಿನಿ ರಸಿಕರು ಇನ್ನೇನು ಎರಡು ವಾರಗಳಲ್ಲಿ ಶಾಕುಂತಲಂ ಚಿತ್ರವನ್ನು ಬೆಳ್ಳಿ ತೆರೆ ಮೇಲೆ ಕಂಡು ಕಣ್ತುಂಬಿಕೊಳ್ಳಬಹುದು ಎಂದು ಯೋಜನೆ ಹಾಕಿಕೊಳ್ಳುತ್ತಿರುವಾಗಲೇ ಚಿತ್ರತಂಡ ಬೇಸರದ ಸುದ್ದಿಯೊಂದನ್ನು ಹೊರಹಾಕಿದ್ದು, ಚಿತ್ರ ಈ ದಿನದಂದೂ ಸಹ ಬಿಡುಗಡೆಯಾಗುವುದಿಲ್ಲ ಎಂಬುದನ್ನು ತಿಳಿಸಿದೆ.

ಹೌದು, ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಚಿತ್ರತಂಡ ಕಾರಣಾಂತರಗಳಿಂದ ಚಿತ್ರವನ್ನು ನಿಗದಿಪಡಿಸಿದ್ದಂತೆ ಫೆಬ್ರವರಿ 17ರಂದು ತೆರೆಗೆ ತರಲು ಆಗುವುದಿಲ್ಲ, ಮುಂದಿನ ಬೇಸಿಗೆ ಸಮಯಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ತಿಳಿಸಿದೆ. ಆದರೆ ಶಾಕುಂತಲಂ ಚಿತ್ರತಂಡ ಚಿತ್ರ ಬೇಸಿಗೆಯ ಯಾವ ದಿನಾಂಕದಂದು ಬಿಡುಗಡೆಯಾಗಲಿದೆ ಎಂಬ ಮಾಹಿತಿಯನ್ನು ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳದಿದ್ದರೂ ಕೆಲ ತೆಲುಗು ಮಾಧ್ಯಮಗಳು ಚಿತ್ರ ಯಾವಾಗ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನು ತಿಳಿಸಿವೆ. ಇನ್ನು ಶಾಕುಂತಲಂ ಚಿತ್ರ ನಿಗದಿಪಡಿಸಿದ್ದ ದಿನಾಂಕದಂದು ಬಿಡುಗಡೆಯಾಗದಿರಲು ಪ್ರಸ್ತುತ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಚಿತ್ರವೊಂದು ಕಾರಣ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೇ ಶಾಕುಂತಲಂ ಬಿಡುಗಡೆಯಾಗಬಹುದು ಎನ್ನಲಾಗುತ್ತಿರುವ ಮುಂದಿನ ದಿನಗಳಲ್ಲೂ ತೆಲುಗಿನ ದೊಡ್ಡ ಚಿತ್ರಗಳು ಬಿಡುಗಡೆಯಾಗಲಿದ್ದು ಆಗಲೂ ಶಾಕುಂತಲಂಗೆ ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಹೊಸ ಬಿಡುಗಡೆ ದಿನಾಂಕಗಳಿವು, ಆ ದಿನಗಳೂ ಇರಲಿದೆ ಪೈಪೋಟಿ

ಹೊಸ ಬಿಡುಗಡೆ ದಿನಾಂಕಗಳಿವು, ಆ ದಿನಗಳೂ ಇರಲಿದೆ ಪೈಪೋಟಿ

ಇನ್ನು ಚಿತ್ರತಂಡ ಶಾಕುಂತಲಂ ಚಿತ್ರದ ನೂತನ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸುತ್ತಿಲ್ಲವಾದರೂ ತೆಲುಗು ಮಾಧ್ಯಮಗಳು ಈ ಚಿತ್ರ ಏಪ್ರಿಲ್ 7 ಅಥವಾ 14ರಂದು ತೆರೆಗೆ ಬರಬಹುದು ಎಂಬ ಮಾಹಿತಿಯನ್ನು ಹಂಚಿಕೊಂಡಿವೆ. ಇನ್ನು ಏಪ್ರಿಲ್ 7ರಂದು ರವಿತೇಜಾ ನಟನೆಯ ರಾವಾಣಸುರ ಹಾಗೂ ಏಪ್ರಿಲ್ 14ರಂದು ಉಗ್ರಂ ಚಿತ್ರಗಳು ಬಿಡುಗಡೆಯಾಗಲಿದ್ದು, ಆ ದಿನಗಳಂದು ಶಾಕುಂತಲಂ ಬಿಡುಗಡೆಯಾದರೆ ದೊಡ್ಡ ಪೈಪೋಟಿಯನ್ನು ಎದುರಿಸಲೇಬೇಕಾಗುತ್ತದೆ.

ಪಠಾಣ್‌ಗೆ ಹೆದರಿ ಮುಂದಕ್ಕೆ ಹೋಯ್ತಾ ಶಾಕುಂತಲಂ?

ಪಠಾಣ್‌ಗೆ ಹೆದರಿ ಮುಂದಕ್ಕೆ ಹೋಯ್ತಾ ಶಾಕುಂತಲಂ?

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಶಾಕುಂತಲಂ ಪೋಸ್ಟ್‌ಪೋನ್ ಆಗಲು ಕಾರಣವೇನು ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ಜರುಗುತ್ತಿದ್ದು, ಶಾರುಖ್ ಖಾನ್ ನಟನೆಯ ಪಠಾಣ್ ಚಿತ್ರ ಕೂಡ ಚಿತ್ರ ಮುಂದಕ್ಕೆ ಹೋಗಲು ಒಂದು ಕಾರಣ ಎಂದು ಹೇಳಲಾಗ್ತಿದೆ. ಹೌದು, ಪಠಾಣ್ ದೇಶದಾದ್ಯಂತ ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿದ್ದು, ತೆಲುಗು ರಾಜ್ಯಗಳಲ್ಲಿಯೂ ಬಿಗಿಹಿಡಿತವನ್ನು ಹೊಂದಿದೆ. ಹೀಗಾಗಿ ಈ ಸಮಯದಲ್ಲಿ ಶಾಕುಂತಲಂ ತೆರೆಗೆ ಬಂದರೆ ಚಿತ್ರಮಂದಿರಗಳನ್ನು ಎದುರಿಸಬೇಕಾಗುತ್ತದೆ, ಅದರಲ್ಲೂ ಮಲ್ಟಿಪ್ಲೆಕ್ಸ್ ಶೋಗಳು ನಿರೀಕ್ಷಿಸಿದ ಮಟ್ಟದಲ್ಲಿ ಸಿಗುವುದಿಲ್ಲ ಎಂಬ ಕಾರಣದಿಂದಾಗಿ ಚಿತ್ರವನ್ನು ಪೋಸ್ಟ್‌ಪೋನ್ ಮಾಡಲಾಗಿದೆ ಎನ್ನಲಾಗುತ್ತಿದೆ.

ಶಾಕುಂತಲಂ ಮಾತ್ರವಲ್ಲ ಧಮ್ಕಿ ಕೂಡ ಪೋಸ್ಟ್‌ಪೋನ್!

ಶಾಕುಂತಲಂ ಮಾತ್ರವಲ್ಲ ಧಮ್ಕಿ ಕೂಡ ಪೋಸ್ಟ್‌ಪೋನ್!

ಇನ್ನು ಶಾಕುಂತಲಂ ಮಾತ್ರವಲ್ಲದೇ ಫೆಬ್ರವರಿ 17ರಂದು ವಿಶ್ವಕ್ ಸೇನ್ ನಿರ್ದೇಶನದ ಹಾಗೂ ನಟನೆಯ ಧಮ್ಕಿ ಚಿತ್ರ ಕೂಡ ಬಿಡುಗಡೆಯಾಗುವುದಾಗಿ ಘೋಷಿಸಲ್ಪಟ್ಟಿತ್ತು. ಆದರೆ ಈ ಚಿತ್ರವೂ ಸಹ ಕಂಪ್ಯೂಟರ್ ಗ್ರಾಫಿಕ್ಸ್ ಕೆಲಸಗಳು ಮುಗಿಯದ ಕಾರಣ ಪೋಸ್ಟ್‌ಪೋನ್ ಆಗಿದೆ ಎಂದು ತಿಳಿಸಲಾಗಿದ್ದು, ಈ ಚಿತ್ರವೂ ಸಹ ಬೇಸಿಗೆ ಸಮಯಕ್ಕೆ ತೆರೆಗೆ ಬರುವ ಸಾಧ್ಯತೆಗಳಿವೆ. ಈ ಚಿತ್ರ ಮುಂದೂದಲ್ಪಟ್ಟ ಸುದ್ದಿಯ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದ ಸಿನಿ ರಸಿಕರು ಇದೆಲ್ಲಾ ಪಠಾಣ್ ಎಫೆಕ್ಟ್ ಎಂದಿದ್ದರು.

More from Filmibeat

English summary
Is Samantha's Shaakuntalam postponed due to successful run of Pathaan movie? Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X