ಚೈತು ನೆನಪು ಸಂಪೂರ್ಣವಾಗಿ ಅಳಿಸಲು ಸಮಂತಾ ಪ್ರಯತ್ನ; ಕಾರಣ ಅದೇನಾ?

ತೆಲುಗು ನಟ ನಾಗಚೈತನ್ಯಾ ಹಾಗೂ ಸಮಂತಾ ಪ್ರೀತಿಸಿ ಮದುವೆ ಆಗಿದ್ದು ಬಳಿಕ ಡಿವೋರ್ಸ್ ಪಡೆದು ದೂರಾಗಿದ್ದು ಗೊತ್ತೇಯಿದೆ. ಚೈತು ಈಗಾಗಲೇ ನಟಿ ಶೋಭಿತಾ ದುಲಿಪಾಲ ಅವರನ್ನು 2ನೇ ಮದುವೆ ಕೂಡ ಆಗಿದ್ದಾರೆ. ಇತ್ತ ಸಮಂತಾ ಕೂಡ ಮತ್ತೊಮ್ಮೆ ಲವ್ವಲ್ಲಿ ಬಿದ್ದಿದ್ದಾರೆ ಎಂದು ಗುಲ್ಲಾಗಿದೆ.

'ಯೆ ಮಾಯಾ ಚೇಸಾವೆ' ಚಿತ್ರದಲ್ಲಿ ಚೈ-ಸ್ಯಾಮ್ ಮೊದಲಿಗೆ ನಟಿಸಿದ್ದರು. ಅದೇ ಸಮಯದಲ್ಲಿ ಶುರುವಾಗಿದ್ದ ಸ್ನೇಹ ಪ್ರೀತಿಗೆ ತಿರುಗಿತ್ತು. ಒಂದಷ್ಟು ದಿನ ಕದ್ದು ಮುಚ್ಚಿ ಓಡಾಡಿದ ಜೋಡಿ ಬಳಿಕ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು. ಗೋವಾದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿತ್ತು. ಹಿಂದೂ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಅದ್ದೂರಿಯಾಗಿ ಮದುವೆ ಆಗಿತ್ತು.

Is Samantha trying to remove her tattoo after her divorce from Naga Chaitanya

ಚೈಸ್ಯಾಮ್ ಜೋಡಿಯನ್ನು ನೋಡಿ ಅಭಿಮಾನಿಗಳು ಖುಷಿ ಪಡುತ್ತಿದ್ದರು. ಆದರೆ ಇದ್ದಕ್ಕಿದಂತೆ ಇಬ್ಬರೂ ದೂರಾಗುತ್ತಾರೆ ಎನ್ನುವ ಸುದ್ದಿ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದರು. ಕೆಲವರು ನಂಬಲೇ ಇಲ್ಲ. ಆದರೆ ಅದೊಂದು ದಿನ ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ದೂರಾಗುತ್ತಿರುವ ಬಗ್ಗೆ ಪೋಸ್ಟ್ ಮಾಡಿದ್ದರು. ಇದು ಅಭಿಮಾನಿಗಳಿಗೆ ಶಾಕ್ ತಂದಿತ್ತು.

ಡಿವೋರ್ಸ್ ವಿಚಾರದಲ್ಲಿ ಸಮಂತಾ ಅಭಿಮಾನಿಗಳು ನಾಗಚೈತನ್ಯನನ್ನು ಅದೇ ರೀತಿ ಚೈತುನಾ ಸ್ಯಾಮ್ ಅಭಿಮಾನಿಗಳು ಟಾರ್ಗೆಟ್ ಮಾಡಿ ಟ್ರೋಲ್ ಮಾಡಿದರು. ಪರಿಸ್ಪರ ಪ್ರೀತಿಸಿ ಮದುವೆ ಆಗಿದ್ದ ಜೋಡಿ ದೂರಾಗಿದ್ದು ಯಾಕೆ ಎನ್ನುವುದಕ್ಕೆ ಅಸಲಿ ಕಾರಣ ಇನ್ನು ಗೊತ್ತಾಗಿಲ್ಲ. ಇನ್ನು ಚೈತುಗಾಗಿ ಸಮಂತಾ ಟ್ಯಾಟೂ ಹಾಕಿಸಿಕೊಂಡಿದ್ದರು. ಅದನ್ನೆಲ್ಲಾ ಅಳಿಸಲು ಈಗ ಪ್ರಯತ್ನಿಸುತ್ತಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಸಮಂತಾಗೆ ಟ್ಯಾಟೂ ಕ್ರೇಜ್ ಹೆಚ್ಚಿದೆ. ಈ ಬಗ್ಗೆ ಸಂದರ್ಶನಗಳಲ್ಲಿ ಕೂಡ ಮಾತನಾಡಿದ್ದರು. ಸ್ಯಾಮ್ ಹಾಗೂ ಚೈತು ಇಬ್ಬರೂ ತಮ್ಮ ಪ್ರೀತಿಯ ಸಂಕೇತವಾಗಿ ಬಲಗೈ ಮಣಿಕಟ್ಟಿನ ಮೇಲೆ ಬಾಣದ ಗುರುತಿನ ರೀತಿ ಟ್ಯಾಟೂ ಹಾಕಿಸಿಕೊಂಡಿದ್ದರು. ಅದನ್ನು 'ಪ್ಲೇ ನೆಕ್ಸ್ಟ್' ಸಿಂಬಲ್ ಎನ್ನುತ್ತಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚೈತು, "ಇದೊಂದು ರೋಮನ್ ಸಿಂಬಲ್, ರಿಯಾಲಿಟಿಯನ್ನು ನಾವೇ ಕ್ರಿಯೇಟ್ ಮಾಡಿಕೊಳ್ಳಬೇಕು" ಎನ್ನುವುದು ಇದರ ಅರ್ಥ ಎಂದಿದ್ದರು.

ಇಬ್ಬರ ಆಲೋಚನೆ ಹಾಗೂ ಮನಸುಗಳು ಹತ್ತಿರವಾಗಬೇಕು ಎಂದು ಹೀಗೆ ಒಟ್ಟಿಗೆ ಟ್ಯಾಟೂ ಹಾಕಿಸಿಕೊಂಡಿದ್ದಾಗಿ ಹೇಳಿದ್ದರು. ಸದ್ಯ ಸಮಂತಾ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇದೇ ವೇಳೆ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಜ್ಯೂಸ್ ಹೀರುತ್ತಾ ಕುಳಿತ ಫೋಟೊ ಕೂಡ ಇದೆ. ಆ ಫೋಟೊದಲ್ಲಿ ಸಮಂತಾ ಕೈಯಲ್ಲಿರುವ ಟ್ಯಾಟೂ ಅಳಿಸಿದಂತೆ ಕಾಣ್ತಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

ಸಮಂತಾ ಮಾಜಿ ಪತಿ ಚೈತು ನೆನಪನ್ನು ಸಂಪೂರ್ಣವಾಗಿ ಅಳಿಸಲು ಪ್ರಯತ್ನಿಸುತ್ತಿದ್ದಾರೆ, ಕೈಯಲ್ಲಿರುವ ಟ್ಯಾಟೂವನ್ನು ಕೂಡ ಅಳಿಸಲು ಪ್ರಯತ್ನಿಸುವಂತೆ ಕಾಣ್ತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಸ್ಯಾಮ್, ನಿರ್ದೇಶಕ ರಾಜ್ ನಿಡುಮೊರಿ ಪ್ರೀತಿಲಿ ಬಿದ್ದಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ಆಕೆ ನಟಿಸಿದ್ದ 'ಫ್ಯಾಮಿಲಿಮ್ಯಾನ್' ವೆಬ್ ಸೀರಿಸ್‌ಗೆ ರಾಜ್ ಆಕ್ಷನ್ ಕಟ್ ಹೇಳಿದ್ದರು.

ಸ್ಯಾಮ್- ರಾಜ್ ಕದ್ದು ಮುಚ್ಚಿ ಸುತ್ತಾಡುತ್ತಿದ್ದಾರೆ, ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಪದೇ ಪದೆ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗುತ್ತಿದೆ. ಇನ್ನು 'ತ್ರಲಾಲಾ ಮೂವಿಂಗ್ ಪಿಕ್ಚರ್ಸ್' ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ನಟಿ ಸಮಂತಾ ಆರಂಭಿಸಿದ್ದಾರೆ. ತಮ್ಮ ಬ್ಯಾನರ್‌ನಲ್ಲಿ 'ಶುಭಂ' ಚಿತ್ರ ಕೈಗೆತ್ತಿಕೊಂಡಿದ್ದಾರೆ. ಇದೊಂದು ಕಾಮಿಡಿ ಎಂಟರ್‌ಟೈನರ್ ಆಗಿದ್ದು ಹೊಸ ಪ್ರತಿಭೆಗಳಿಗೆ ಚಿತ್ರದಲ್ಲಿ ಹೆಚ್ಚು ಅವಕಾಶ ನೀಡಿದ್ದಾರೆ.

More from Filmibeat

English summary
Has Samantha decided to erase her tattoo after splitting from Naga Chaitanya?;
Read more about: samantha naga chaitanya
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X