ಸಮಂತಾ- ನಾಗಚೈತನ್ಯ ವಿಚ್ಛೇದನದ ಕಾರಣ ಬಯಲು: ಟಾಲಿವುಡ್‌ನಲ್ಲಿ ಹೊಸ ಗುಸು, ಗುಸು!

ನಟಿ ಸಮಂತಾ ಮತ್ತು ನಾಗಚೈತನ್ಯ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆದವರು. ಆದರೆ ಯಶಸ್ವಿ ದಾಂಪತ್ಯ ನಡೆಸುವಲ್ಲಿ ಈ ಜೋಡಿ ವಿಫಲ ಆಗಿದೆ. ಹತ್ತು ವರ್ಷದ ಪ್ರೀತಿಗೆ ಮದುವೆ ಆದ ನಾಲ್ಕೇ ವರ್ಷದಲ್ಲಿ ಅಂತ್ಯ ಹಾಡಿದ್ದಾರೆ. ಸದ್ಯ ವಿಚ್ಛೇದನ ಪಡೆದು ದೂರಾಗಿದ್ದಾರೆ.

ನಟಿ ಸಮಂತ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೆಸರು ಬದಲಾಯಿಸಿ ಕೊಂಡ ಬಳಿಕ ಇವರು ದೂರ ಆಗುವ ಬಗ್ಗೆ ಸುದ್ದಿ ಹರಿದಾಡತೊಡಗಿದವು. ಇದಾದ ಬಳಿಕ ಕೆಲವು ದಿನಗಳ ನಂತರ ಈ ಜೋಡಿ ತಮ್ಮ ವಿಚ್ಛೇದನದ ವಿಚಾರವನ್ನು ಬಹಿರಂಗ ಪಡಿಸಿತು. ಇದು ಅವರ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಆಗಿತ್ತು.

ವಿಚ್ಛೇದನದ ಬಳಿಕ ಮೂಡಿದ್ದು ಒಂದೇ ಪ್ರಶ್ನೆ. ಇವರು ದೂರ ಆಗಲು ಕಾರಣ ಏನು ಎನ್ನುವುದು. ಇದರ ಬಗ್ಗೆ ಸಮಂತಾ, ನಾಗಚೈತನ್ಯ ಇಬ್ಬರೂ ಎಲ್ಲೂ ಬಾಯಿ ಬಿಟ್ಟಿಲ್ಲ. ಆದರೆ ಈಗ ಇವರ ವಿಚ್ಛೇದನಕ್ಕೆ ಕಾರಣ ಏನು ಎನ್ನುವ ಸುದ್ದಿಯೊಂದು ಹೊರ ಬಂದಿದೆ. ಸದ್ಯ ಅದುವೇ ಟಾಲಿವುಡ್‌ನಲ್ಲಿ ಬಿಸಿ, ಬಿಸಿ ಸಮಾಚಾರ ಆಗಿದೆ.

ಸಮಂತಾ ಅಭಿನಯಕ್ಕೆ ಅಡ್ಡಿ ಆಗಿತ್ತಾ ನಾಗಚೈತನ್ಯ ಕುಟುಂಬ?

ಸಮಂತಾ ಅಭಿನಯಕ್ಕೆ ಅಡ್ಡಿ ಆಗಿತ್ತಾ ನಾಗಚೈತನ್ಯ ಕುಟುಂಬ?

ನಟಿ ಸಮಂತಾ ಸೌತ್‌ ಚಿತ್ರರಂಗದ ಸ್ಟಾರ್‌ ನಟಿಯರಲ್ಲಿ ಒಬ್ಬರು. ದೊಡ್ಡ ಚಿತ್ರಗಳಲ್ಲಿ ಸಮಂತಾಗೆ ಸದಾ ಬೇಡಿಕೆ ಇರುತ್ತಿತ್ತು. ಅಂತೆಯೇ ಸಮಂತಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ನಟಿ ಸಮಂತಾ ಮದುವೆ ಬಳಿಕ ಸಿನಿಮಾಗಳಲ್ಲಿ ಅಭಿನಯಿಸುವುದು ನಾಗಚೈತನ್ಯ ಕುಟುಂಬಕ್ಕೆ ಇಷ್ಟ ಇರಲಿಲ್ಲ ಎನ್ನುವ ಸುದ್ದಿ ಹುಟ್ಟಿ ಕೊಂಡಿದೆ. ಸಿನಿಮಾದಲ್ಲೇ ಬದುಕು ಕಟ್ಟಿ ಕೊಂಡ ನಟಿ ಸಮಂತಾಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ ಸಮಂತಾಗೆ ಸಿನಿಮಾಗಳಿಂದ ದೂರ ಉಳಿಯಲು ಸಾಧ್ಯ ಆಗಲಿಲ್ಲವಂತೆ.

ಮದುವೆ ಆದ ಬಳಿಕ ನಟಿಯರು ಸಿನಿಮಾಗಳಿಂದ ದೂರ ಉಳಿದು ಬಿಡುತ್ತಾರೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದರು ಕೂಡ ಮದುವೆ ಆದ ಮೇಲೆ ಬಣ್ಣ ಹಚ್ಚುವುದನ್ನು ನಿಲ್ಲಿಸಿ ಬಿಡುತ್ತಾರೆ. ಆದರೆ ಇದು ಸಮಂತಾ ಅವರಿಗೆ ಸಾಧ್ಯ ಆಗಿಲ್ಲ. ಹಾಗಾಗಿ ಇದೇ ವಿಚಾರಕ್ಕೆ ಸಮಂತಾ ಪತಿಯಿಂದ ದೂರಾಗಿದ್ದಾರೆ ಎನ್ನಲಾಗುತ್ತಿದೆ.

ಮದುವೆ ಬಳಿಕ ಪಾತ್ರ ಆಯ್ಕೆಯಲ್ಲಿ ಸೀಮಿತವಾಗಿದ್ದ ನಟಿ!

ಮದುವೆ ಬಳಿಕ ಪಾತ್ರ ಆಯ್ಕೆಯಲ್ಲಿ ಸೀಮಿತವಾಗಿದ್ದ ನಟಿ!

ಮದುವೆ ಬಳಿಕ ಸಮಂತಾ ಆಯ್ಕೆ ಮಾಡುತ್ತಿದ್ದ ಪಾತ್ರಗಳು ಕುಟುಂಬದವರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತಂತೆ. ಜೊತೆಗೆ ನಾಗಚೈತನ್ಯ ಮತ್ತು ಸಮಂತಾಗೆ ಇದೇ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗಿದೆ. ಮದುವೆ ಬಳಿಕ 2019- 2020ರಲ್ಲಿ ಸಮಂತಾ ಸಿನಿಮಾ ಆಯ್ಕೆ ಸೀಮಿತ ಆದಂತೆ ಕಾಣುತ್ತಿತ್ತು. ಸಮಂತಾ ಕೂಡ ಕ್ರಮೇಣ ಸಿನಿಮಾರಂಗದಿಂದ ದೂರ ಸರಿಯುತ್ತಾರೆ ಎನ್ನುವ ಚರ್ಚೆಗಳು ಕೂಡ ಹುಟ್ಟಿದ್ದವು. ಆದರೆ ಸೂಪರ್‌ ಡೀಲಕ್ಸ್ ಮತ್ತು ಫ್ಯಾಮಿಲಿ ಮ್ಯಾನ್‌ ವೆಬ್‌ ಸರಣಿಯಲ್ಲಿ ಸಮಂತಾ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದರು.

ವಿಚ್ಛೇದನದ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಸಮಂತಾ ಬ್ಯುಸಿ!

ವಿಚ್ಛೇದನದ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ಸಮಂತಾ ಬ್ಯುಸಿ!

ಇನ್ನು ಸಮಂತಾ ವಿಚ್ಛೇದನದ ಬಳಿಕ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಇದ್ದಾರೆ. ಇದು ಕೂಡ ಅಚ್ಚರಿಗೆ ಕಾರಣ ಆಗಿದೆ. ಮದುವೆ ಆದ ಮೇಲೆ ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿದ ಸಮಂತಾ ವಿಚ್ಛೇದನದ ಬಳಿಕ ಹೆಚ್ಚು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ವಿಚಾರ ಈಗ ಸದ್ದು ಮಾಡಲು ಕಾರಣ 'ಪುಷ್ಪ' ಚಿತ್ರ. ಪುಷ್ಪ ಚಿತ್ರದಲ್ಲಿ ನಟಿ ಸಮಂತಾ ವಿಶೇಷ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಈ ರೀತಿಯಾಗಿ ಸಮಂತಾ ತೆರೆಯ ಮೇಲೆ ಕಾಣಿಸಿಕೊಳ್ಳುವುದು ನಾಗಚೈತನ್ಯ ಕುಟುಂಬಕ್ಕೆ ಇಷ್ಟ ಇರಲಿಲ್ಲವಂತೆ.

ಸಮಂತಾಗೆ ಬಾಲಿವುಡ್‌ ಬಾಗಿಲು ಓಪನ್!

ಸಮಂತಾಗೆ ಬಾಲಿವುಡ್‌ ಬಾಗಿಲು ಓಪನ್!

ಇನ್ನು ಸಮಂತಾ ವಿಚ್ಛೇದನದ ಬಳಿಕ ತಮಿಳಿನ 'ಕಾತು ವಾಕುಲ ರೆಂಡು ಕಾದಲ್', 'ಶಾಕುಂತಲಂ', ತೆಲುಗಿನ 'ಯಶೋಧ' ಚಿತ್ರದ ಜೊತೆಗೆ ನಟಿ ತಾಪ್ಸಿ ಪನ್ನು ಜೊತೆಗೆ ಮಹಿಳಾ ಪ್ರಧಾನ ಸಿನಿಮಾ ಮಾಡಲು ಸಹಿ ಹಾಕಿದ್ದಾರೆ ಸಮಂತಾ. ಈ ಚಿತ್ರ ಪ್ಯಾನ್‌ ಇಂಡಿಯಾ ಸಿನಿಮಾ ಆಗಲಿದೆ. ಹಾಗೇ ನೋಡಿದರೆ ಸಮಂತಾ ಮದುವೆಗೂ ಮುನ್ನ ಮತ್ತು ವಿಚ್ಛೇದನದ ಬಳಿಕ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ದೊಡ್ಡ ದೊಡ್ಡ ಚಿತ್ರಗಳು ಆಕೆಯನ್ನು ಅರಸಿ ಬರುತ್ತಿವೆ.

More from Filmibeat

English summary
Is This The Real Reason Behind Naga Chaitanya And Samantha divorce,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X