ಬೊಕ್ಕೆ ಬೇಡ ಎಂದು ತಳ್ಳಿದ ತಾರಕ್: ತಾತನ ಸಮಾಧಿಗೆ ನಮಿಸುವ ವೇಳೆ ಜ್ಯೂ. ಎನ್‌ಟಿಆರ್ ಗರಂ?
'RRR' ಚಿತ್ರದಿಂದ ಪ್ಯಾನ್ ಇಂಡಿಯಾ ಎನಿಸಿಕೊಂಡ ನಟ ಜ್ಯೂ. ಎನ್‌ಟಿಆರ್. ಬಾಲಿವುಡ್‌ಗೂ ಎಂಟ್ರಿ ಕೊಡಲು ತಾರಕ್ ಸಿದ್ಧರಾಗಿದ್ದಾರೆ. ಸಾಮಾನ್ಯವಾಗಿ ಟಾಲಿವುಡ್ ಯಂಗ್ ಟೈಗರ್‌ಗೆ ಕೋಪ ಬರಲ್ಲ. ಮೊದಲೆಲ್ಲಾ ತುಂಬಾ ಕೋಪ ಮಾಡಿಕೊಳ್ಳುತ್ತಿದ್ದೆ. ಮದುವೆ, ಮಕ್ಕಳು ಮಕ್ಕಳು ಆದಮೇಲೆ ಕೋಪ ಕಮ್ಮಿ ಆಯ್ತು ಅಂತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆದರೆ ತಾರಕ್ ಮೊನ್ನೆ ಗರಂ ಆಗಿದ್ದರು.
ತಾನಾಯ್ತು ತನ್ನ ಸಿನಿಮಾ ಆಯಿತು ಎಂದು ಜ್ಯೂ. ಎನ್‌ಟಿಆರ್ ಸುಮ್ಮನಿದ್ದಾರೆ. ಅಭಿಮಾನಿಗಳು ರಾಜಕೀಯರಂಗಕ್ಕೆ ಬರುವಂತೆ ಎಷ್ಟೇ ಬೇಡಿಕೆ ಇಟ್ಟರೂ ಆ ಬಗ್ಗೆ ಮೌನ ತಳೆದಿದ್ದಾರೆ. ಸದ್ಯ ತಾತ ಕಟ್ಟಿ ಬೆಳೆದ ಟಿಡಿಪಿ ಪಕ್ಷವನ್ನು ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಮುನ್ನಡೆಸುತ್ತಿದ್ದಾರೆ. ತಾರಕ್ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಂದೂ ಕೋಪ ಮಾಡಿಕೊಳ್ಳದ ನಟ ಮೊನ್ನೆ ತಾತನ ಸಮಾಧಿಗೆ ನಮನ ಸಲ್ಲಿಸುವ ವೇಳೆ ತಾಳ್ಮೆ ಕಳೆದುಕೊಂಡಿದ್ದರು.

ಭಾನುವಾರ(ಮೇ 28) ವಿಶ್ವ ವಿಖ್ಯಾತ ನಟಸಾರ್ವಭೌನ ಎನ್‌ಟಿಆರ್ 100ನೇ ವರ್ಷದ ಹುಟ್ಟುಹಬ್ಬ ಇತ್ತು. ಆ ದಿನ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಗಣ್ಯರು ಎನ್‌ಟಿಆರ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ತಾತನ ಸಮಾಧಿ ಸ್ಥಳಕ್ಕೆ ತಾರಕ್ ಕೂಡ ಭೇಟಿ ನೀಡಿ ಪುಷ್ಪಾರ್ಚನೆ ಸಲ್ಲಿಸಿ ನಮಿಸಿದ್ದರು. ಆದರೆ ಈ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿ ನೂಕಾಟ ತಳ್ಳಾಟ ಉಂಟಾಯಿತು. ಸ್ವತಃ ಜ್ಯೂ. ಎನ್‌ಟಿಆರ್ ಸಾವಧಾನದಿಂದ ಸಮಾಧಿಗೆ ನಮಿಸಲು ಸಾಧ್ಯವಾಗಲಿಲ್ಲ.
ಬೊಕ್ಕೆ ಕೊಡಲು ಕಿತ್ತಾಟ
ತಾರಕ್ ತಾತನ ಸಮಾಧಿಗೆ ಬರುವ ವಿಷಯ ತಿಳಿದು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಒಮ್ಮಿಂದೊಮ್ಮೆಲೆ ಜಮಾಯಿಸಿದರು. ಈ ವೇಳೆ ಅಭಿಮಾನಿ ಗುಂಪಿನ ನಡುವೆ ತಾರಕ್ ಸಮಾಧಿ ಬಳಿ ಬರಲು ಹರಸಾಹಸ ಪಡುವಂತಾಯಿತು. ಅಭಿಮಾನಿಗಳನ್ನು ನೂಕಿಕೊಂಡೇ ಸಮಾಧಿ ಸಮೀಪಿಸಿದರು. ಈ ವೇಳೆ ಅಲ್ಲಿದ್ದ ಇಬ್ಬರು ಜ್ಯೂ. ಎನ್‌ಟಿಆರ್ ಕೈಗೆ ಹೂವಿನ ಬೊಕ್ಕೆ ಕೊಡಲು ಕಿತ್ತಾಟ ನಡೆಸಿದರು. ತಾರಕ್ ಪಕ್ಕದಲ್ಲೇ ಇದ್ದರೂ ನಾನು ಕೊಡಬೇಕು, ನಾನು ಕೊಡಬೇಕು ಎಂದು ಕಿತ್ತಾಡುತ್ತಲೇ ಇದ್ದರು.

ಕೋಪದಿಂದಲೇ ಸಮಾಧಿ ನಮನ
ಎಲ್ಲರನ್ನು ನೂಕಿಕೊಂಡು ಅಲ್ಲಿಗೆ ಬಂದಿದ್ದ ತಾರಕ್ ಬೊಕ್ಕೆ ಕೊಡಲು ಅವರಿಬ್ಬರು ಕಿತ್ತಾಡುತ್ತಿದ್ದು ನೋಡಿ, ತಾಳ್ಮೆ ಕಳೆದುಕೊಂಡಂತೆ ಕಾಣುತ್ತಿತ್ತು. ಆದರೆ ಅದನ್ನು ತೋರ್ಪಡಿಸಲಿಲ್ಲ. ಬೊಕ್ಕೆಯನ್ನು ಬೇಡ ಎಂದು ತಳ್ಳಿ ಅಲ್ಲೇ ಪಕ್ಕದಲ್ಲಿ ತಟ್ಟೆಲಿ ಇದ್ದ ಬಿಡಿ ಹೂ ತೆಗೆದು ಸಮಾಧಿ ಮೇಲೆ ಹಾಕಿದರು. ಅಭಿಮಾನಿಗಳ ನೂಕಾಟದ ನಡುವೆಯೇ ತಾತನ ಸಮಾಧಿಗೆ ನಮಿಸಿದರು. ಆದರೆ ಹಿಂದೆ ಅಭಿಮಾನಿಗಳ ನೂಕುನುಗ್ಗಲು ಕಮ್ಮಿ ಆಗಿರಲಿಲ್ಲ. ಸಮಾಧಿಗೆ ನಮಿಸಿ ನಿರ್ಗಮಿಸಿದರು.
ವಿಡಿಯೋ ಫುಲ್ ವೈರಲ್
ಜ್ಯೂ. ಎನ್‌ಟಿಆರ್ ನೂಕುನುಗ್ಗಲಿನಲ್ಲಿ ತಾತನ ಸಮಾಧಿ ಬಳಿ ಬಂದಿದ್ದು, ಬೊಕ್ಕೆಗಾಗಿ ಇಬ್ಬರು ಕಿತ್ತಾಡಿದ್ದನ್ನು ನೋಡಿ ಬೇಸರದಿಂದ ಹೂವು ಸಮರ್ಪಿಸಿ ಸಮಾಧಿಗೆ ನಮಿಸಿದ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿ ಎನ್‌ಟಿಆರ್ ಕೋಪಗೊಂಡಿದ್ರಾ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಕೆಲವರು ಮಾತ್ರ ಬೇಕಂತಲೇ ತಾರಕ್ ಆ ಬೊಕ್ಕೆ ತೆಗೆದುಕೊಂಡಿಲ್ಲ ಎನ್ನುತ್ತಿದ್ದಾರೆ.
ಘಟನೆಗೆ ರಾಜಕೀಯ ಬಣ್ಣ
ಚಂದ್ರಬಾಬು ನಾಯ್ಡು ತಮ್ಮ ಮಗನನ್ನು ಟಿಡಿಪಿಯ ಭವಿಷ್ಯ ನಾಯಕನಾಗಿ ಮಾಡಲು ಮುಂದಾಗಿದ್ದಾರೆ, ಅದೇ ಕಾರಣಕ್ಕೆ ತಾರಕ್‌ನ ಪಕ್ಷದಿಂದ ದೂರ ಇಡುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಇದಕ್ಕೆ ಬಾಲಕೃಷ್ಣ ಕೂಡ ಬೆಂಬಲವಾಗಿ ನಿಂತಿದ್ದಾರೆ ಎನ್ನಲಾಗ್ತಿದೆ. ಜ್ಯೂ. ಎನ್‌ಟಿಆರ್ ಸಮಾಧಿ ಬಳಿ ಬಂದಾದ ಟಿಡಿಪಿ ಪಕ್ಷದವರು ಈ ರೀತಿ ಬೊಕ್ಕೆ ಕೊಡಲು ಕಿತ್ತಾಡಿದ್ದಾರೆ. ತಾರಕ್ ಬಳಿ ಹಣ ಇಲ್ವಾ? ಆತ ಬೊಕ್ಕೆ ತಗೊಂಡು ಹೋಗಲ್ವಾ? ತನ್ನದು ಬಿಟ್ಟು ನಿಮ್ಮದು ಕೊಟ್ಟರೆ ಪಕ್ಕಕ್ಕೆ ತಳ್ಳುತ್ತಾರೆ. ಅದಕ್ಕೆ ತಾರಕ್ ಅದನ್ನು ತೆಗೆದುಕೊಳ್ಳಲಿಲ್ಲ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಕೊಡಾಲಿ ನಾನಿ ಹೇಳಿದ್ದಾರೆ. ಆ ಹೇಳಿಕೆ ಈಗ ವೈರಲ್ ಆಗ್ತಿದೆ.


Click it and Unblock the Notifications











