For Quick Alerts
  ALLOW NOTIFICATIONS  
  For Daily Alerts

  ತೆಲುಗು ನಟ ವೆಂಕಟೇಶ್, ನಾನಿ ಮನೆ ಮೇಲೆ ಐಟಿ ದಾಳಿ

  |

  ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ನಡೆದಿದ್ದ ಐಟಿ ದಾಳಿ ಇನ್ನು ಮರೆತಿಲ್ಲ. ರಾಕ್ ಲೈನ್ ವೆಂಕಟೇಶ್, ವಿಜಯ್ ಕಿರಗಂದೂರ್, ಪುನೀತ್ ರಾಜ್ ಕುಮಾರ್, ಸುದೀಪ್ ಮನೆ ಸೇರಿದಂತೆ ಹಲವು ಕಡೆ ಏಕಕಾಲದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

  ಸ್ಯಾಂಡಲ್ ವುಡ್ ನ '8' ಶ್ರೀಮಂತ ಮನೆಗಳ ಮೇಲೆ ಐಟಿ ರೈಡ್ lಸ್ಯಾಂಡಲ್ ವುಡ್ ನ '8' ಶ್ರೀಮಂತ ಮನೆಗಳ ಮೇಲೆ ಐಟಿ ರೈಡ್ l

  ಇದೀಗ, ತೆಲುಗು ಇಂಡಸ್ಟ್ರಿಯಲ್ಲಿ ಇಂತಹದ್ದೇ ಐಟಿ ದಾಳಿ ನಡೆದಿದೆ. ತೆಲುಗಿನ ಖ್ಯಾತ ನಿರ್ಮಾಪಕ ಸುರೇಶ್ ಬಾಬು, ನಟ ವೆಂಕಟೇಶ್, ನಟ ನಾನಿ ಅವರಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿಗಳ ಮೇಲೆ ರೇಡ್ ಆಗಿದೆ. ಮುಂದೆ ಓದಿ.....

  ಸುರೇಶ್ ಬಾಬು ಟಾರ್ಗೆಟ್

  ಸುರೇಶ್ ಬಾಬು ಟಾರ್ಗೆಟ್

  ಟಾಲಿವುಡ್ ಇಂಡಸ್ಟ್ರಿಯ ಖ್ಯಾತ ನಿರ್ಮಾಪಕ ಸುರೇಶ್ ಬಾಬು ಅವರಿಗೆ ಸೇರಿದ ರಾಮಾನಾಯ್ಡು ಸ್ಟುಡಿಯೋ ಮೇಲೆ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಸುರೇಶ್ ಬಾಬು ಅವರ ಮನೆ ಮತ್ತು ಕಚೇರಿ ಹಾಗೂ ಸ್ಟುಡಿಯೋದಲ್ಲಿ ಪರಿಶೀಲನೆ ನಡೆಯುತ್ತಿದೆ.

  ಐಟಿ ದಾಳಿ ಬಗ್ಗೆ ನನಗೇನು ಆತಂಕವಿಲ್ಲ : ನಟ ಸುದೀಪ್

  ವೆಂಕಟೇಶ್ ಮನೆ ಮೇಲೂ ದಾಳಿ

  ವೆಂಕಟೇಶ್ ಮನೆ ಮೇಲೂ ದಾಳಿ

  ಸುರೇಶ್ ಬಾಬು ಅವರ ಸಹೋದರ 'ವಿಕ್ಟರಿ' ವೆಂಕಟೇಶ್ ಅವರ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಸ್ತಿ ಪತ್ರ, ದಾಖಲೆಗಳ ವಿವರಣೆ ಪಡೆದುಕೊಂಡಿದ್ದಾರೆ. ಸಿನಿಮಾಗಳಿಗೆ ಸಂಬಂಧಿಸದಂತೆ, ಅವರ ಲಾಭ, ಬಂಡವಾಳ, ಆದಾಯದ ಲೆಕ್ಕಾಚಾರಕ್ಕೆ ಸಂಬಂಧಿಸದಂತೆ ದಾಳಿ ಆಗಿದೆ ಎನ್ನಲಾಗಿದೆ.

  ನಾನಿ ಮತ್ತು ನಾಗಚೈತನ್ಯ ಮನೆ ಮೇಲೂ ದಾಳಿ

  ನಾನಿ ಮತ್ತು ನಾಗಚೈತನ್ಯ ಮನೆ ಮೇಲೂ ದಾಳಿ

  ಸುರೇಶ್ ಬಾಬು ಮತ್ತು ವೆಂಕಟೇಶ್ ಮನೆ ಮೇಲೆ ದಾಳಿ ಒಂದು ಕಡೆಯಾದರೆ, ಈ ಕಡೆ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸಂಬಂಧಿಸಿದ ಅನ್ನಪೂರ್ಣ ಸ್ಟುಡಿಯೋ ಹಾಗೂ ನಾಗಚೈತನ್ಯ ಅವರ ಮನೆ ಮೇಲೂ ದಾಳಿ ಆಗಿದೆ. ಜೊತೆಯಲ್ಲಿ ನಾನಿ ಅವರ ಮನೆ ಮೇಲೂ ರೇಡ್ ಆಗಿದೆ. ಸ್ಟಾರ್ ನಟರ ಆಡಿಟರ್ ಗಳನ್ನ ಜೊತೆಯಲ್ಲಿ ಕೂರಿಸಿಕೊಂಡು ಪರಿಶೀಲನೆ ಮಾಡಲಾಗುತ್ತಿದೆಯಂತೆ.

  ನಟರ ಮೇಲೆ ಐಟಿ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿದ್ದರಾಮಯ್ಯನಟರ ಮೇಲೆ ಐಟಿ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ

  ಐಟಿ ವಂಚಿಸಿರುವ ಆರೋಪ

  ಐಟಿ ವಂಚಿಸಿರುವ ಆರೋಪ

  ದುಬಾರಿ ಚಿತ್ರಗಳನ್ನ ನಿರ್ಮಿಸಿ ಲಾಭ ಮಾಡುತ್ತಿದ್ದರೂ ಸೂಕ್ತವಾದ ಲೆಕ್ಕಾಚಾರ ನೀಡಿಲ್ಲ ಎಂಬ ಆರೋಪ. ಹೆಚ್ಚು ಸಂಭಾವನೆ ಪಡೆಯುತ್ತಿದ್ದರೂ ತೆರಿಗೆ ವಂಚಿಸುತ್ತಿರುವ ಆರೋಪ, ಸಿನಿಮಾ ನಿರ್ಮಾಣ ಹಾಗೂ ಐಟಿ ರಿಟರ್ನ್ ನಲ್ಲಿ ವಂಚನೆ ಮಾಡಿರುವ ಆರೋಪಗಳಲ್ಲಿ ತೆಲುಗು ಸ್ಟಾರ್ ನಟ ಹಾಗೂ ನಿರ್ಮಾಪಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

  ವೆಂಕಟೇಶ್-ನಾಗಚೈತನ್ಯ ಮೆಗಾಸಿನಿಮಾ

  ವೆಂಕಟೇಶ್-ನಾಗಚೈತನ್ಯ ಮೆಗಾಸಿನಿಮಾ

  ಸುರೇಶ್ ಬಾಬು ನಿರ್ಮಾಣದಲ್ಲಿ 'ವೆಂಕಿ ಮಾಮ' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ವೆಂಕಟೇಶ್, ನಾಗಚೈತನ್ಯ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನ 'ಅಸುರನ್' ಚಿತ್ರದ ರೀಮೇಕ್ ಹಕ್ಕು ಖರೀದಿಸಿರುವ ಸುರೇಶ್ ಬಾಬು ಅದನ್ನ ಭಾರಿ ಬಜೆಟ್ ನಲ್ಲಿ ನಿರ್ಮಿಸಲಿದ್ದಾರೆ. ಮತ್ತೊಂದೆಡೆ ನಾನಿ ಕೂಡ ಸತತವಾಗಿ ಸಿನಿಮಾಗಳನ್ನ ಮಾಡುತ್ತಿದ್ದು, ಎಲ್ಲವೂ ಯಶಸ್ಸು ಕಾಣುತ್ತಿರುವುದು ಐಟಿ ಅಧಿಕಾರಗಳು ಗಮನಿಸಿದ್ದಾರೆ.

  English summary
  IT Raids on telugu film industry famous actors like nani, venkatesh, naga chaitanya, producer suresh babu's home.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X