ನಾನು ಬಿಕಿನಿ ಹಾಕ್ಕೊತ್ತೀನಾ, ಬಟ್ಟೆ ಬಿಚ್ಚಾಕಿ ಓಡಾಡ್ತೀನಾ, ನಿಮಗ್ಯಾಕೆ; ಅನಸೂಯ
ತೆಲುಗು ನಟಿ, ನಿರೂಪಕಿ ಅನಸೂಯ ಭಾರಧ್ವಜ್ ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ಗಳಿಂದ ಪದೇ ಪದೆ ಸುದ್ದಿ ಆಗುತ್ತಾರೆ. ತೆರೆಮೇಲೆ ಮಾತ್ರವಲ್ಲ ಸೋಶಿಯಲ್ ಮೀಡಿಯಾದಲ್ಲಿ ಕೂಡ ಬಿಂದಾಸ್ ಅವತಾರದಲ್ಲಿ ಅನುಸೂಯ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ಟೀಕೆ, ಟ್ರೋಲ್ ಎದುರಿಸುತ್ತಾರೆ. ಆದರೆ ಅದಕ್ಕೆಲ್ಲಾ ಕ್ಯಾರೆ ಎನ್ನುವವರಲ್ಲ.
'ರಂಗಸ್ಥಳಂ', 'ಪುಷ್ಪ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅನುಸೂಯ ಭಾರಧ್ವಜ್ ನಟಿಸಿದ್ದಾರೆ. ಭಾರೀ ವಿವಾದ ಸೃಷ್ಟಿಸಿದ 'ರಜಾಕರ್' ಚಿತ್ರದಲ್ಲಿ ಕೂಡ ಆಕೆ ಮಿಂಚಿದ್ದಾರೆ. ಇತ್ತೀಚೆಗೆ ಸಿನಿಮಾ ಓಟಿಟಿಗೆ ಬಂದು ಸದ್ದು ಮಾಡಿತ್ತು. ಅನುಸೂಯ ಯಾವುದೆ ಪೋಸ್ಟ್ ಮಾಡಿದರೂ ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ಆಂಟಿ ಎಂದು ಕರೆದು ವ್ಯಂಗ್ಯವಾಡುತ್ತಾರೆ. ಕೆಲ ದಿನಗಳ ಹಿಂದೆ ಆಂಟಿ ಎಂದು ತಮ್ಮನ್ನು ಟ್ರೋಲ್ ಮಾಡಿದವರ ವಿರುದ್ಧ ಅನಸೂಯ ಗರಂ ಆಗಿದ್ದರು.

ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಬಗ್ಗೆ ಅನಸೂಯ ಕಾಮೆಂಟ್ಸ್ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ದೇವರಕೊಂಡ ಫ್ಯಾನ್ಸ್ ಆಕೆಯನ್ನು ಟಾರ್ಗೆಟ್ ಮಾಡಿದ್ದರು. ಇನ್ನು ಎರಡು ಮಕ್ಕಳ ತಾಯಿಯಾಗಿರುವ ಅನಸೂಯ ತೆಲುಗು ಕಿರುತೆರೆ, ಹಿರಿತೆರೆಯಲ್ಲಿ ಗುರ್ತಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ 15 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ. ಕೆಟ್ಟದಾಗಿ ಕಾಮೆಂಟ್ ಮಾಡುವ ಕೆಲವರನ್ನು ಬ್ಲಾಕ್ ಮಾಡುತ್ತಿರುತ್ತಾರೆ.
ಇತ್ತೀಚೆಗೆ ನಿಖಿಲ್ ವಿಜಯೇಂದ್ರ ಸಿಂಹ ಯೂಟ್ಯೂಬ್ ಚಾನಲ್‌ನಲ್ಲಿ ಅನುಸೂಯ ಮಾತನಾಡಿದ್ದಾರೆ. ಈ ವೇಳೆ ಕೂಡ ಸೋಶಿಯಲ್ ಮೀಡಿಯಾ ಟ್ರೋಲ್ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ. ಸೆ* ಬಗ್ಗೆಯೂ ಪ್ರಶ್ನೆ ಎದುರಾಗಿದೆ. ಇದಕ್ಕೆ ಪ್ರತಿಕ್ರಿಯಿಸಿ ಸೆ* ಅನ್ನೋದು ಕೆಟ್ಟದಲ್ಲ, ಅದನ್ನು ಅಷ್ಟು ಕೆಟ್ಟದು ಎಂದು ನೋಡುವುದು ಬೇಕಿಲ್ಲ, ಅದು ಅವಶ್ಯಕತೆ ಅಷ್ಟೇ, ಹಾಗಂತ ಎಲ್ಲೆಂದರಲ್ಲಿ ಮಾಡಿ, ಮಾತನಾಡಿ ಎಂದು ನಾನು ಹೇಳಲ್ಲ ಎಂದು ಅನಸೂಯ ಹೇಳಿದ್ದಾರೆ.
"ನನ್ನನ್ನು ಆಂಟಿ ಎನ್ನುವವರು ನನ್ನನ್ನು ಕೆಟ್ಟದಾಗಿ ನೋಡುತ್ತಿದ್ದಾರಾ? ಎನ್ನುವುದು ನನ್ನ ಬೇಸರ, ನನ್ನನ್ನು ನನ್ನಂತೆಯೇ ಅರ್ಥ ಮಾಡಿಕೊಳ್ಳುವವರು ನನ್ನ ಸುತ್ತಾಮುತ್ತಾ ಸಾಕಷ್ಟು ಜನ ಇದ್ದಾರೆ. ಹಾಗಾಗಿ ಇನ್ನು ನಾನು ಆರಾಮಾಗಿ ಇದ್ದೀನಿ. ಇಲ್ಲದೇ ಇದ್ದರೆ ಕಥೆ ಬೇರೆನೇ ಆಗಿರುತ್ತಿತ್ತು. ಸ್ಟಾರ್ ನಟರು ಕೂಡ ನನ್ನ ಬಗ್ಗೆ ಏನೇನೊ ಮಾತನಾಡಿದ್ದಾರೆ. ಅದನ್ನೆಲ್ಲಾ ಸಹಿಸಿಕೊಂಡು ಇದ್ದೀನಿ" ಎಂದಿದ್ದಾರೆ.
"ನನ್ನನ್ನು ಆಂಟಿ ಎನ್ನುತ್ತಾರೆ. ನಾನು ನನ್ನ ಗಂಡನಿಗೆ ಸ್ವಂತ, ನಾನು ಬಿಕಿನಿ ಹಾಕ್ಕೊಂಡಿದ್ದೀನಾ, ಬಟ್ಟೆ ಬಿಚ್ಚಿ ಓಡಾಡುತ್ತೀನಾ? ಅದೆಲ್ಲ ನನ್ನಿಷ್ಟ, ಆದರೆ ನೀವು ನಿಮ್ಮ ಮಕ್ಕಳನ್ನು ಬೆಳೆಸಿರುವ ರೀತಿ ಹೇಗಿದೆ? ನನ್ನ ಮಡದಿ, ನನ್ನ ಪ್ರೇಯಸಿ ನನಗೆ ಮಾತ್ರ, ಬೇರೆಯವರಿಗೆ ಅಲ್ಲ, ನೀವು ಮನುಷ್ಯರೇ ಅಲ್ಲವೇ? ಆಂಟಿ ಎನ್ನುವ ಪದ ನನಗೆ ಅದಕ್ಕೆ ಬೇಸರ ತರಿಸುತ್ತದೆ. ಅದನ್ನು ಕೆಟ್ಟದಾಗಿ ಬಳಸುತ್ತಾರೆ. ನನ್ನಿಷ್ಟ ಬಂದಂತೆ ನಾನು ಬಟ್ಟೆ ಹಾಕ್ತೀನಿ, ಅದರಿಂದ ನಿನಗೇನು ಸಮಸ್ಯೆ? ಆದರೆ ನೀನು ಹೇಳುವ ಮಾತು ನನಗೆ ನೋವು ತರುತ್ತದೆ" ಎಂದು ಟ್ರೋಲ್ ಮಾಡುವವರ ಬಗ್ಗೆ ಅನಸೂಯ ಅಸಮಾಧಾನ ಹೊರ ಹಾಕಿದ್ದಾರೆ.
"ನಾನು ಕರ್ಮ ಎನ್ನುವುದನ್ನು ನಂಬುತ್ತೀನಿ. ನಮ್ಮ ಬಗ್ಗೆ ಮಾತನಾಡುವವರ ಪ್ರತಿಯೊಬ್ಬರ ಜೀವನದಲ್ಲಿ ಮಹಿಳೆಯರು ಇರುತ್ತಾರೆ. ಹಾಗಾಗಿ ಎಲ್ಲದ್ದಕ್ಕೂ ಸಿದ್ಧರಾಗಿರಿ" ಎಂದು ಪರೋಕ್ಷವಾಗಿ ತಿವಿದಿದ್ದಾರೆ. ಸದ್ಯ ಪವನ್ ಕಲ್ಯಾಣ್ ನಟನೆಯ 'ಹರಿಹರ ವೀರಮಲ್ಲು' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಅನಸೂಯ ಕುಣಿದಿದ್ದಾರೆ. 'ಫ್ಲ್ಯಾಶ್ ಬ್ಯಾಕ್' ಹಾಗೂ 'ವೂಲ್ಫ್' ಎಂಬ ಎರಡು ತಮಿಳು ಚಿತ್ರದಲ್ಲಿ ಈಗ ಬಣ್ಣ ಹಚ್ಚಿದ್ದಾರೆ.


Click it and Unblock the Notifications











