ಪ್ರೇಕ್ಷಕರ ತಿರಸ್ಕಾರಕ್ಕೆ ಒಳಗಾದ ಸಮಂತಾ: ಕಾರಣ ಏನು?

ಸಮಂತಾ ಸೌತ್ ಚಿತ್ರರಂಗದ ಸ್ಟಾರ್ ನಟಿ. ಆದರೆ, ಇದೀಗ ಪ್ರೇಕ್ಷಕರು ಆಕೆಯನ್ನು ತಿರಸ್ಕಾರ ಮಾಡುತ್ತಿದ್ದಾರೆ. ಕಾರಣ ಇತ್ತೀಚಿಗಷ್ಟೆ ಬಿಡುಗಡೆಯಾಗಿ 'ಜಾನು' ಸಿನಿಮಾದ ಟೀಸರ್.

'ಜಾನು' ತಮಿಳಿನ '96' ಸಿನಿಮಾದ ರಿಮೇಕ್ ಆಗಿದೆ. ರಿಮೇಕ್ ಎಂದ ಕೂಡಲೇ ಅದನ್ನು ಮಾಡುವುದು ತುಂಬ ಸುಲಭ ಎನ್ನುವ ಮಾತಿದೆ. ಆದರೆ, ಕೆಲವು ಬಾರಿ ರಿಮೇಕ್ ಮಾಡುವುದು ಬಹಳ ಕಷ್ಟವಾಗಿ ಬಿಡುತ್ತದೆ.

ಅದರಲ್ಲಿಯೂ ಕೆಲವು ಸಿನಿಮಾಗಳ ರಿಮೇಕ್ ಗೆ ಕೈ ಹಾಕುವುದೇ ಕಷ್ಟ ಎನಿಸಿಬಿಡುತ್ತದೆ. ಕಾರಣ, ರಿಮೇಕ್ ಆದ ಸಿನಿಮಾಗಳು ಎಷ್ಟೇ ಚೆನ್ನಾಗಿದ್ದರೂ, ಪ್ರೇಕ್ಷಕರು ಅದನ್ನು ಸ್ವೀಕರಿಸಲು ಸಿದ್ಧ ಇರುವುದಿಲ್ಲ. ಈಗ ಅದೇ ರೀತಿಯ ಪರಿಸ್ಥಿತಿ 'ಜಾನು' ಸಿನಿಮಾಗೆ ಬಂದ ಹಾಗಿದೆ.

'ಜಾನು' ಟೀಸರ್ ಗೆ ನೆಗೆಟಿವ್ ಕಾಮೆಂಟ್ಸ್

'ಜಾನು' ಟೀಸರ್ ಗೆ ನೆಗೆಟಿವ್ ಕಾಮೆಂಟ್ಸ್

'ಜಾನು' ತೆಲುಗು ಸಿನಿಮಾದ ಟೀಸರ್ ಜನವರಿ 9 ರಂದು ಬಿಡುಗಡೆ ಆಗಿದೆ. ಯೂ ಟ್ಯೂಬ್ ನಲ್ಲಿ ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ಸ್ ಗಳೆ ಹೆಚ್ಚಾಗಿದೆ. 20 ಲಕ್ಷಕ್ಕೂ ಹೆಚ್ಚು ಹಿಟ್ಸ್ ಹೊಂದಿರುವ ಈ ಟೀಸರ್ ಅನ್ನು ನೋಡಿದವರಲ್ಲಿ ಬಹುತೇಕರು ಸಮಾಧಾನಗೊಂಡಿಲ್ಲ. ಎಲ್ಲರೂ '96' ಸಿನಿಮಾಗೆ ಹೋಲಿಕೆ ಮಾಡುತ್ತಿದ್ದಾರೆ.

ರಾಮ್ ಅಂದ್ರೆ ಸೇತುಪತಿ, ಜಾನು ಅಂದ್ರೆ ತ್ರಿಷಾ

ರಾಮ್ ಅಂದ್ರೆ ಸೇತುಪತಿ, ಜಾನು ಅಂದ್ರೆ ತ್ರಿಷಾ

'96' ಸಿನಿಮಾದ ರಾಮ್ ಹಾಗೂ ಜಾನು ಪಾತ್ರಗಳು ಪ್ರೇಕ್ಷಕರ ಮನಸ್ಸಿಗೆ ಬಹಳ ಹತ್ತಿರವಾಗಿವೆ. ರಾಮ್ ಪಾತ್ರದಲ್ಲಿ ವಿಜಯ್ ಸೇತುಪತಿ ಬಿಟ್ಟು, ಜಾನು ಪಾತ್ರದಲ್ಲಿ ತ್ರಿಷಾ ಹೊರತುಪಡಿಸಿ ಬೇರೆ ಕಲಾವಿದರನ್ನು ಉಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅನೇಕರು ಹೇಳಿದ್ದಾರೆ. 'ಜಾನು'ನಲ್ಲಿ ಸಮಂತಾ ಹಾಗೂ ಶರ್ವಾನಂದ್ ನಟನೆ ಚೆನ್ನಾಗಿರೂ ಪ್ರೇಕ್ಷಕರು ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಟೀಸರ್ ಚೆನ್ನಾಗಿದೆ.. ಆದ್ರೆ...

ಟೀಸರ್ ಚೆನ್ನಾಗಿದೆ.. ಆದ್ರೆ...

'ಜಾನು' ಸಿನಿಮಾದ ಟೀಸರ್ ಚೆನ್ನಾಗಿಲ್ಲ ಎಂದು ಖಂಡಿತ ಹೇಳಲು ಸಾಧ್ಯವಿಲ್ಲ. ಕಲಾವಿದರ ನಟನೆ, ಸಂಗೀತ, ಕ್ಯಾಮರಾ ವರ್ಕ್ ಎಲ್ಲವೂ ಚೆನ್ನಾಗಿದೆ. '96' ಚಿತ್ರ ಮಾಡಿದ್ದ ನಿರ್ದೇಶಕ ಪ್ರೇಮ್ ಕುಮಾರ್ ಅವರೇ ಈ ಸಿನಿಮಾ ಮಾಡಿದ್ದಾರೆ. ಹೀಗೆ ಎಲ್ಲವೂ ಚೆನ್ನಾಗಿದ್ದರೂ, ಪ್ರೇಕ್ಷಕರು '96' ಕಥೆಯನ್ನು ಬೇರೆ ರೂಪದಲ್ಲಿ ನೋಡಲು ಇಷ್ಟ ಪಡುತ್ತಿಲ್ಲ. ಆ ಮಟ್ಟಿಗೆ ಆ ಸಿನಿಮಾ ಅವರ ಹೃದಯದಲ್ಲಿದೆ.

ಕನ್ನಡದಲ್ಲಿಯೂ ವಿಫಲವಾಗಿತ್ತು

ಕನ್ನಡದಲ್ಲಿಯೂ ವಿಫಲವಾಗಿತ್ತು

'96' ಸಿನಿಮಾ ತೆಲುಗಿಗೆ ಮೊದಲು ಕನ್ನಡದಲ್ಲಿ '99' ಆಯ್ತು. ನಟ ಗಣೇಶ್ ಹಾಗೂ ಭಾವನ, ರಾಮ್ ಮತ್ತು ಜಾನು ಆಗಿದ್ದರು. ರಾಮು ನಿರ್ಮಾಣ, ಪ್ರೀತಮ್ ಗುಬ್ಬಿ ನಿರ್ದೇಶನ ಮಾಡಿದ್ದರು. ಆದರೆ, ಸಿನಿಮಾ ಗೆಲ್ಲಲಿಲ್ಲ. '96' ಸಿನಿಮಾ ನೋಡಿದವರು ಈ ಸಿನಿಮಾ ಒಪ್ಪಿಕೊಳ್ಳಲಿಲ್ಲ. ತಮಿಳಿನಲ್ಲಿ ಯಶಸ್ಸು ಪಡೆದ ಸಿನಿಮಾ ಕನ್ನಡದಲ್ಲಿ ವಿಘಲವಾಗಿತು.

More from Filmibeat

English summary
'Jaanu' telugu movie teaser getting negative comments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X