'ಜಗದೇಕ ವೀರಡು ಅತಿಲೋಕ ಸುಂದರಿ' ಸೀಕ್ವೆಲ್: ಭರ್ಜರಿ ಪ್ಲಾನಿಂಗ್
1990ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ 'ಜಗದೇಕ ವೀರಡು ಅತಿಲೋಕ ಸುಂದರಿ'. ಕೆ ರಾಘವೇಂದ್ರ ರಾವ್ ನಿರ್ದೇಶನ ಮಾಡಿದ್ದ ಈ ಚಿತ್ರ ಮೆಗಾಸ್ಟಾರ್ ಚಿರಂಜೀವಿ ಮತ್ತು ಶ್ರೀದೇವಿ ನಟಿಸಿದ್ದರು. ಇವರಿಬ್ಬರು ಜೋಡಿ ಪ್ರೇಕ್ಷಕರಿಗೆ ಭಾರಿ ಇಷ್ಟ ಆಗಿತ್ತು. ಈ ಹೆಸರಿಗೆ ತಕ್ಕ ಹಾಗೆ ಇಬ್ಬರು ತೆರೆ ಮೇಲೆ ಕಾಣಿಸಿಕೊಂಡಿದ್ದರು.
ಆಶ್ವಿನಿ ದತ್ತ ಈ ಚಿತ್ರ ನಿರ್ಮಿಸಿದ್ದರು. ಸೌತ್ ಇಂಡಸ್ಟ್ರಿ ಬಾಕ್ಸ್ ಆಫೀಸ್‌ಗೆ ಶೇಕ್ ಮಾಡಿದ್ದ ಈ ಚಿತ್ರ ಅಂದಿನ ಸಮಯದಲ್ಲಿ ದೊಡ್ಡ ಕಲೆಕ್ಷನ್ ಮಾಡಿತ್ತು. ತೆಲುಗು ಇಂಡಸ್ಟ್ರಿಯ ಎಲ್ಲ ದಾಖಲೆಗಳನ್ನು ಪುಡಿಪುಡಿ ಮಾಡಿತ್ತು. ಇಂತಹ ಚಿತ್ರವನ್ನು ಮತ್ತೆ ರೀಮೇಡ್ ಮಾಡಬೇಕು ಎಂಬ ಆಸೆ, ಚರ್ಚೆ ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ. ಇದೀಗ, ಈ ಚಿತ್ರದ ಸೀಕ್ವೆಲ್ ಕುರಿತು ಮತ್ತೊಂದು ಸುದ್ದಿ ಹೊರಬಿದ್ದಿದೆ. ಮುಂದೆ ಓದಿ....

ಚಿರಂಜೀವಿ ಅಂದೇ ಹೇಳಿದ್ದರು
'ಜಗದೇಕ ವೀರಡು ಅತಿಲೋಕ ಸುಂದರಿ' ಸಿನಿಮಾವನ್ನು ಮತ್ತೆ ಮಾಡುವುದಾದರೆ ಅದಕ್ಕೆ ರಾಮ್ ಚರಣ್ ತೇಜ ನಾಯಕರಾಗಲಿ ಮತ್ತು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ನಾಯಕಿಯಾದ್ರೆ ಚೆನ್ನಾಗಿರುತ್ತೆ ಎಂದು ಮೆಗಾಸ್ಟಾರ್ ಚಿರಂಜೀವಿ ಈ ಹಿಂದೆಯೇ ಸಂದರ್ಶನವೊಂದರಲ್ಲಿ ಹೇಳಿದ್ದರು. ನಿರ್ಮಾಪಕ ಆಶ್ವಿನಿ ದತ್ತ ಈ ಮಾತನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡಿದ್ದರು.

ರಾಮ್ ಚರಣ್ ಡೇಟ್ ಕೊಟ್ಟೆ ಬಿಟ್ಟರು
ನಿರ್ಮಾಪಕ ಆಶ್ವಿನಿ ದತ್ತ ಪ್ರಸ್ತುತ ಪ್ರಭಾಸ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿದ್ದಾರೆ. ಆ ಕಡೆ ರಾಜಮೌಳಿಯ 'ಆರ್ ಆರ್ ಆರ್' ಚಿತ್ರದಲ್ಲಿ ರಾಮ್ ಚರಣ್ ಬ್ಯುಸಿ ಇದ್ದಾರೆ. ಈ ನಡುವೆ ಅಶ್ವಿನಿ ದತ್ತ ಅವರು ರಾಮ್ ಚರಣ್ ಬಳಿಕ ಕಾಲ್‌ಶೀಟ್ ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ರಾಮ್ ಚರಣ್ ಈ ಹಿಂದೆ ವೈಜಯಂತಿ ಪ್ರೊಡಕ್ಷನ್ ಸಂಸ್ಥೆಯಲ್ಲಿ 'ಚಿರುತಾ' ಎಂಬ ಸಿನಿಮಾ ಮಾಡಿದ್ದರು. ಅದಾದ ಬಳಿಕ ಮತ್ತೆ ಅಶ್ವಿನಿ ದತ್ತ ನಿರ್ಮಾಣದಲ್ಲಿ ಯಾವ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಈಗ ಆ ಸಮಯ ಹತ್ತಿರ ಆಗುತ್ತಿದೆ.

ಡೈರೆಕ್ಟರ್ ಯಾರು ಎನ್ನುವುದೇ ಚರ್ಚೆ
'ಜಗದೇಕ ವೀರಡು ಅತಿಲೋಕ ಸುಂದರಿ' ಚಿತ್ರವನ್ನು ದಿಗ್ಗಜ ನಿರ್ದೇಶಕ ಕೆ ರಾಘವೇಂದ್ರ ರಾವ್ ಬಹಳ ಚೆನ್ನಾಗಿ ತಯಾರಿಸಿದ್ದರು. ಈಗ ಆ ಚಿತ್ರವನ್ನು ಮತ್ತೆ ಯಾರು ನಿರ್ದೇಶನ ಮಾಡಿದ್ರೆ ಉತ್ತಮ ಎಂಬ ಗೊಂದಲ ಕಾಡುತ್ತಿದೆ. ಹೇಗಾದರೂ ಮಾಡಿ ಈ ಚಿತ್ರ ಮಾಡಲೇಬೇಕು ಎಂದು ಹಠಕ್ಕೆ ಬಿದ್ದಿರುವ ನಿರ್ಮಾಪಕರಿಗೆ ಡೈರೆಕ್ಟರ್ ಯಾರು ಎಂಬ ಟೆನ್ಷನ್ ಹೆಚ್ಚಾಗಿದೆ.
Recommended Video

ನಾಗ್ ಅಶ್ವಿನ್ ಸೂಕ್ತ!
'ಜಗದೇಕ ವೀರಡು ಅತಿಲೋಕ ಸುಂದರಿ' ಚಿತ್ರವನ್ನು ಕೆ ರಾಘವೇಂದ್ರ ರಾವ್ ಅವರ ಮಗ ಪ್ರಕಾಶ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದ್ರೆ, ಪ್ರಕಾಶ್ ಅವರ ಈ ಹಿಂದಿನ ಚಿತ್ರಗಳಾದ 'ಅನಗನಗಾ ಒಕ ಧೀರುಡು', 'ಸೈಜ್ ಜೀರೋ' ಚಿತ್ರಗಳು ಅಷ್ಟಾಗಿ ಯಶಸ್ವಿಯಾಗಿಲ್ಲ. ಹಾಗಾಗಿ, ಅಶ್ವಿನಿ ದತ್ತ ಅವರ ಅಳಿಯ ನಾಗ್ ಅಶ್ವಿನ್ ಈ ಚಿತ್ರ ಮಾಡಿದ್ರೆ ಸೂಕ್ತ ಎಂಬ ಮಾತು ಸಹ ಕೇಳಿ ಬರುತ್ತಿದೆ. ಸದ್ಯ, ನಾಗ್ ಅಶ್ವಿನ್, ಪ್ರಭಾಸ್-ದೀಪಿಕಾ ಪಡುಕೋಣೆ ಚಿತ್ರ ನಿರ್ದೇಶಿಸುತ್ತಿದ್ದಾರೆ.


Click it and Unblock the Notifications











