For Quick Alerts
  ALLOW NOTIFICATIONS  
  For Daily Alerts

  'ಜಗದೇಕ ವೀರಡು ಅತಿಲೋಕ ಸುಂದರಿ' ಸೀಕ್ವೆಲ್: ಭರ್ಜರಿ ಪ್ಲಾನಿಂಗ್

  |

  1990ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ 'ಜಗದೇಕ ವೀರಡು ಅತಿಲೋಕ ಸುಂದರಿ'. ಕೆ ರಾಘವೇಂದ್ರ ರಾವ್ ನಿರ್ದೇಶನ ಮಾಡಿದ್ದ ಈ ಚಿತ್ರ ಮೆಗಾಸ್ಟಾರ್ ಚಿರಂಜೀವಿ ಮತ್ತು ಶ್ರೀದೇವಿ ನಟಿಸಿದ್ದರು. ಇವರಿಬ್ಬರು ಜೋಡಿ ಪ್ರೇಕ್ಷಕರಿಗೆ ಭಾರಿ ಇಷ್ಟ ಆಗಿತ್ತು. ಈ ಹೆಸರಿಗೆ ತಕ್ಕ ಹಾಗೆ ಇಬ್ಬರು ತೆರೆ ಮೇಲೆ ಕಾಣಿಸಿಕೊಂಡಿದ್ದರು.

  ಆಶ್ವಿನಿ ದತ್ತ ಈ ಚಿತ್ರ ನಿರ್ಮಿಸಿದ್ದರು. ಸೌತ್ ಇಂಡಸ್ಟ್ರಿ ಬಾಕ್ಸ್ ಆಫೀಸ್‌ಗೆ ಶೇಕ್ ಮಾಡಿದ್ದ ಈ ಚಿತ್ರ ಅಂದಿನ ಸಮಯದಲ್ಲಿ ದೊಡ್ಡ ಕಲೆಕ್ಷನ್ ಮಾಡಿತ್ತು. ತೆಲುಗು ಇಂಡಸ್ಟ್ರಿಯ ಎಲ್ಲ ದಾಖಲೆಗಳನ್ನು ಪುಡಿಪುಡಿ ಮಾಡಿತ್ತು. ಇಂತಹ ಚಿತ್ರವನ್ನು ಮತ್ತೆ ರೀಮೇಡ್ ಮಾಡಬೇಕು ಎಂಬ ಆಸೆ, ಚರ್ಚೆ ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ. ಇದೀಗ, ಈ ಚಿತ್ರದ ಸೀಕ್ವೆಲ್ ಕುರಿತು ಮತ್ತೊಂದು ಸುದ್ದಿ ಹೊರಬಿದ್ದಿದೆ. ಮುಂದೆ ಓದಿ....

  ಫೀಲ್ಡಿಗಿಳಿದ ಜಕ್ಕಣ್ಣ: ರೇಸ್‌ನಲ್ಲಿ ಜೂ.ಎನ್‌ಟಿಆರ್-ರಾಮ್ ಚರಣ್ಫೀಲ್ಡಿಗಿಳಿದ ಜಕ್ಕಣ್ಣ: ರೇಸ್‌ನಲ್ಲಿ ಜೂ.ಎನ್‌ಟಿಆರ್-ರಾಮ್ ಚರಣ್

  ಚಿರಂಜೀವಿ ಅಂದೇ ಹೇಳಿದ್ದರು

  ಚಿರಂಜೀವಿ ಅಂದೇ ಹೇಳಿದ್ದರು

  'ಜಗದೇಕ ವೀರಡು ಅತಿಲೋಕ ಸುಂದರಿ' ಸಿನಿಮಾವನ್ನು ಮತ್ತೆ ಮಾಡುವುದಾದರೆ ಅದಕ್ಕೆ ರಾಮ್ ಚರಣ್ ತೇಜ ನಾಯಕರಾಗಲಿ ಮತ್ತು ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ನಾಯಕಿಯಾದ್ರೆ ಚೆನ್ನಾಗಿರುತ್ತೆ ಎಂದು ಮೆಗಾಸ್ಟಾರ್ ಚಿರಂಜೀವಿ ಈ ಹಿಂದೆಯೇ ಸಂದರ್ಶನವೊಂದರಲ್ಲಿ ಹೇಳಿದ್ದರು. ನಿರ್ಮಾಪಕ ಆಶ್ವಿನಿ ದತ್ತ ಈ ಮಾತನ್ನು ಸ್ವಲ್ಪ ಗಂಭೀರವಾಗಿ ತೆಗೆದುಕೊಂಡಿದ್ದರು.

  ರಾಮ್ ಚರಣ್ ಡೇಟ್ ಕೊಟ್ಟೆ ಬಿಟ್ಟರು

  ರಾಮ್ ಚರಣ್ ಡೇಟ್ ಕೊಟ್ಟೆ ಬಿಟ್ಟರು

  ನಿರ್ಮಾಪಕ ಆಶ್ವಿನಿ ದತ್ತ ಪ್ರಸ್ತುತ ಪ್ರಭಾಸ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿದ್ದಾರೆ. ಆ ಕಡೆ ರಾಜಮೌಳಿಯ 'ಆರ್ ಆರ್ ಆರ್' ಚಿತ್ರದಲ್ಲಿ ರಾಮ್ ಚರಣ್ ಬ್ಯುಸಿ ಇದ್ದಾರೆ. ಈ ನಡುವೆ ಅಶ್ವಿನಿ ದತ್ತ ಅವರು ರಾಮ್ ಚರಣ್ ಬಳಿಕ ಕಾಲ್‌ಶೀಟ್ ಸಹ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ರಾಮ್ ಚರಣ್ ಈ ಹಿಂದೆ ವೈಜಯಂತಿ ಪ್ರೊಡಕ್ಷನ್ ಸಂಸ್ಥೆಯಲ್ಲಿ 'ಚಿರುತಾ' ಎಂಬ ಸಿನಿಮಾ ಮಾಡಿದ್ದರು. ಅದಾದ ಬಳಿಕ ಮತ್ತೆ ಅಶ್ವಿನಿ ದತ್ತ ನಿರ್ಮಾಣದಲ್ಲಿ ಯಾವ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಈಗ ಆ ಸಮಯ ಹತ್ತಿರ ಆಗುತ್ತಿದೆ.

  ಡೈರೆಕ್ಟರ್ ಯಾರು ಎನ್ನುವುದೇ ಚರ್ಚೆ

  ಡೈರೆಕ್ಟರ್ ಯಾರು ಎನ್ನುವುದೇ ಚರ್ಚೆ

  'ಜಗದೇಕ ವೀರಡು ಅತಿಲೋಕ ಸುಂದರಿ' ಚಿತ್ರವನ್ನು ದಿಗ್ಗಜ ನಿರ್ದೇಶಕ ಕೆ ರಾಘವೇಂದ್ರ ರಾವ್ ಬಹಳ ಚೆನ್ನಾಗಿ ತಯಾರಿಸಿದ್ದರು. ಈಗ ಆ ಚಿತ್ರವನ್ನು ಮತ್ತೆ ಯಾರು ನಿರ್ದೇಶನ ಮಾಡಿದ್ರೆ ಉತ್ತಮ ಎಂಬ ಗೊಂದಲ ಕಾಡುತ್ತಿದೆ. ಹೇಗಾದರೂ ಮಾಡಿ ಈ ಚಿತ್ರ ಮಾಡಲೇಬೇಕು ಎಂದು ಹಠಕ್ಕೆ ಬಿದ್ದಿರುವ ನಿರ್ಮಾಪಕರಿಗೆ ಡೈರೆಕ್ಟರ್ ಯಾರು ಎಂಬ ಟೆನ್ಷನ್ ಹೆಚ್ಚಾಗಿದೆ.

  Ragini Dwivedi, ಬೇಲ್ ಕೊಟ್ಟಿಲ್ಲ ಅಂದ್ರೆ ಪರವಾಗಿಲ್ಲ ಈ 3 ವಸ್ತುಗಳನ್ನು ವಾಪಸ್ ಕೊಡಿ ಪ್ಲೀಸ್ |Filmibeat Kannada
  ನಾಗ್ ಅಶ್ವಿನ್ ಸೂಕ್ತ!

  ನಾಗ್ ಅಶ್ವಿನ್ ಸೂಕ್ತ!

  'ಜಗದೇಕ ವೀರಡು ಅತಿಲೋಕ ಸುಂದರಿ' ಚಿತ್ರವನ್ನು ಕೆ ರಾಘವೇಂದ್ರ ರಾವ್ ಅವರ ಮಗ ಪ್ರಕಾಶ್ ಮಾಡಬಹುದು ಎಂದು ಹೇಳಲಾಗುತ್ತಿದೆ. ಆದ್ರೆ, ಪ್ರಕಾಶ್ ಅವರ ಈ ಹಿಂದಿನ ಚಿತ್ರಗಳಾದ 'ಅನಗನಗಾ ಒಕ ಧೀರುಡು', 'ಸೈಜ್ ಜೀರೋ' ಚಿತ್ರಗಳು ಅಷ್ಟಾಗಿ ಯಶಸ್ವಿಯಾಗಿಲ್ಲ. ಹಾಗಾಗಿ, ಅಶ್ವಿನಿ ದತ್ತ ಅವರ ಅಳಿಯ ನಾಗ್ ಅಶ್ವಿನ್ ಈ ಚಿತ್ರ ಮಾಡಿದ್ರೆ ಸೂಕ್ತ ಎಂಬ ಮಾತು ಸಹ ಕೇಳಿ ಬರುತ್ತಿದೆ. ಸದ್ಯ, ನಾಗ್ ಅಶ್ವಿನ್, ಪ್ರಭಾಸ್-ದೀಪಿಕಾ ಪಡುಕೋಣೆ ಚಿತ್ರ ನಿರ್ದೇಶಿಸುತ್ತಿದ್ದಾರೆ.

  English summary
  Vyjayanthi Movies producer ashwini dutt planning to do jagadeka veerudu athiloka sundari sequel. here is the latest update.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X