ಜೈಲರ್ ಹವಾ: ಈ ಮೊದಲು ಅತಿ ಹೆಚ್ಚು ಗಳಿಕೆ ಮಾಡಿದ ರಜನಿಕಾಂತ್ ಚಿತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು?
ರಜನಿಕಾಂತ್ ನಟನೆಯ ಜೈಲರ್ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಇದು ಒಂದು. ನಿರ್ದೇಶಕ ನೆಲ್ಸನ್ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಇದೇ ಶುಕ್ರವಾರ (ಆಗಸ್ಟ್ 10) ಚಿತ್ರ ಸಿನಿಪರದೆಗೆ ಅಪ್ಪಳಿಸಲು ಸಿದ್ಧವಾಗಿದೆ. ಸಾವಿರಾರು ಶೋಗಳು ಬುಕ್ ಆಗಿವೆ.
ರಜನಿಕಾಂತ್ ಸಿನಿಮಾಗಳಿಗೆ ಮುಂಗಡ ಬುಕ್ಕಿಂಗ್, ಮೊದಲ ಶೋ ನೋಡಲು ಕಾಯುವ ಅಭಿಮಾನಿಗಳು ಹೆಚ್ಚು. 72ರ ಹರೆಯದಲ್ಲೂ ಭಾರತೀಯ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 'ಜೈಲರ್' ಬಿಡುಗಡೆಯ ಮೊದಲು, ಸೂಪರ್‌ಸ್ಟಾರ್ ಅಭಿನಯದ ಅತಿ ಹೆಚ್ಚು ಗಳಿಕೆ ಮಾಡಿದ ಏಳು ಚಿತ್ರಗಳ ಬಗ್ಗೆ ತಿಳಿಯೋಣ.

1. 2.0
ನಿರ್ದೇಶಕ ಶಂಕರ್ ಅವರ ಮಹತ್ವಾಕಾಂಕ್ಷೆಯ ಚಿತ್ರ 'ಎಂಥಿರನ್' ನ ಮುಂದುವರಿದ ಭಾಗವಾದ '2.0' ರಜನಿಕಾಂತ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ತನ್ನ ಸ್ಥಾನ ಉಳಿಸಿಕೊಂಡಿದೆ. ಈ ಚಿತ್ರದಲ್ಲಿ ರಜನಿಕಾಂತ್ ಜೊತೆಗೆ ಅಕ್ಷಯ್ ಕುಮಾರ್ ಮತ್ತು ಆಮಿ ಜಾಕ್ಸನ್ ಕಾಣಿಸಿಕೊಂಡಿತ್ತು. ಟ್ರೇಡ್ ವರದಿಗಳ ಪ್ರಕಾರ, '2.0' ವಿಶ್ವಾದ್ಯಂತ ಸುಮಾರು 800 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಸಿನಿಮಾದಲ್ಲಿ ಮೊಬೈಲ್ ಫೋನ್ ಟವರ್ ವಿಕಿರಣದ ದುಷ್ಪರಿಣಾಮಗಳು ಮತ್ತು ಅದರಿಂದ ಪಕ್ಷಿಗಳು, ಪ್ರಾಣಿಗಳು ಮತ್ತು ಮನುಷ್ಯರ ಮೇಲೆ ಆಗುವ ಪರಿಣಾಮಗಳ ಬಗ್ಗೆ ಹೇಳಲಾಗಿತ್ತು.
2. ಎಂಥಿರನ್
ನಿರ್ದೇಶಕ ಶಂಕರ್ ಅವರ 'ಎಂಥಿರನ್' 2010 ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ರಜನಿಕಾಂತ್ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಐಶ್ವರ್ಯಾ ರೈ ಬಚ್ಚನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವರದಿಯ ಪ್ರಕಾರ, 'ಎಂಥಿರನ್' ತನ್ನ ಜೀವಿತಾವಧಿಯಲ್ಲಿ ವಿಶ್ವಾದ್ಯಂತ ರೂ 290 ಕೋಟಿ ಗಳಿಸಿದೆ. ಚಿತ್ರದಲ್ಲಿನ ವಿಶುವಲ್ ಎಫೆಕ್ಟ್‌ಗಳು ಎಲ್ಲರ ಗಮನ ಸೆಳೆದಿದ್ದವು. ಹ್ಯೂಮನಾಯ್ಡ್ ರೋಬೋಟ್ ಅನ್ನು ನಿರ್ಮಿಸುವ ವಿಜ್ಞಾನಿಯ ಕಥೆಯನ್ನು 'ಎಂಥಿರನ್' ಒಳಗೊಂಡಿತ್ತು.
3. ಕಬಾಲಿ
ಚಿತ್ರವು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದ 'ಕಬಾಲಿ' ಸಿನಿಮಾ ರಜನಿಕಾಂತ್ ಮತ್ತು ನಿರ್ದೇಶಕ ಪಾ ರಂಜಿತ್ ಅವರ ಮೊದಲ ಪ್ರಾಜೆಕ್ಟ್. ಚಿತ್ರದಲ್ಲಿ ವಿನ್ಸ್ಟನ್ ಚಾವೋ, ರಾಧಿಕಾ ಆಪ್ಟೆ ಮತ್ತು ಧನ್ಸಿಕಾ ಕೂಡ ಇದ್ದಾರೆ. ರಜನಿಕಾಂತ್ ಅವರ ಮಾಸ್ ಸೈಡ್ ಅನ್ನು ಜೊತೆಗೆ, ನಾವು 'ಕಬಾಲಿ'ಯಲ್ಲಿ ತಲೈವರ್‌ನ ವಿಭಿನ್ನ ಮುಖಗಳನ್ನು ಸಹ ನೋಡಬಹುದು. ವರದಿಯ ಪ್ರಕಾರ, ಚಿತ್ರವು ವಿಶ್ವಾದ್ಯಂತ 286 ಕೋಟಿ ರೂಪಾಯಿ ಗಳಿಸಿದೆ.

4. ಪೆಟ್ಟಾ
'ಪೆಟ್ಟಾ' ರಜನಿಕಾಂತ್ ಸಿನಿ ಕೆರಿಯರ್‌ನಲ್ಲಿ ಅತ್ಯಂತ ವಿಶುಷ್ಟ ಸಿನಿಮಾ. ಚಿತ್ರಕ್ಕೆ ಕಾರ್ತಿಕ್ ಸುಬ್ಬರಾಜ್ ನಿರ್ದೇಶನವಿದೆ. ಚಿತ್ರದಲ್ಲಿ ರಜನಿಕಾಂತ್ ಹಾಸ್ಟಲ್ ವಾರ್ಡನ್ ಮತ್ತು ವಿಭಿನ್ನ ಶೆಡ್‌ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ವಿಜಯ್ ಸೇತುಪತಿ, ನವಾಜುದ್ದೀನ್ ಸಿದ್ದಿಕಿ ಮತ್ತು ಸಸಿಕುಮಾರ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ತ್ರಿಷಾ, ಮಾಳವಿಕಾ ಮೋಹನನ್ ಮತ್ತು ಸಿಮ್ರಾನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. 'ಪೆಟ್ಟಾ' ವಿಶ್ವಾದ್ಯಂತ 230 ಕೋಟಿ ರೂಪಾಯಿ ಗಳಿಸಿದೆ.
5. ದರ್ಬಾರ್
ಎಆರ್ ಮುರುಗದಾಸ್ ಅವರು ರಜನಿಕಾಂತ್ ಅವರೊಂದಿಗೆ ದರ್ಬಾರ್ ಎಂಬ ಆಕ್ಷನ್ ಚಿತ್ರ ಮಾಡಿದ್ದಾರೆ. ಚಿತ್ರದಲ್ಲಿ ರಜನಿಕಾಂತ್ ತನ್ನ ಮಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುವ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ದುಷ್ಟರನ್ನು ಸದೆಬಡಿಯಲು ನಿಂತು ವೈಯಕ್ತಿಕ ನಷ್ಟವನ್ನು ಅನುಭವಿಸುವ ತಂದೆಯಾಗಿ ಕಾಣಿಸಿಕೊಂಡಿದ್ದಾರೆ. 'ದರ್ಬಾರ್' ಸಿನಿಮಾಗೆ ಅಮತಹ ಉತ್ತಮ ಪ್ರತಿಕ್ರಿಯೆ ಬರದಿದ್ದರೂ ವಿಶ್ವಾದ್ಯಂತ 200 ಕೋಟಿ ರೂ. ಗಳಿಸಿದೆ.

6. ಕಾಲಾ
ಕಬಾಲಿ ನಂತರ ಪಾ ರಂಜಿತ್ ಮತ್ತು ರಜನಿಕಾಂತ್ ಮತ್ತೊಮ್ಮೆ 'ಕಾಲಾ' ಚಿತ್ರಕ್ಕೆ ಕೈ ಜೋಡಿಸಿದ್ದರು. ಈ ಚಿತ್ರವು ಭೂಮಿಯ ಹಕ್ಕುಗಳ ಬಗ್ಗೆ ದನಿ ಎತ್ತಿದೆ. ಇದಲ್ಲದೆ ಎಲ್ಲಾ ಭಾಗಗಳಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದು ಗೆದ್ದಿದೆ. ರಜನಿಕಾಂತ್ ಮತ್ತು ನಾನಾ ಪಾಟೇಕರ್ ಅವರ ಕಾಂಬಿನೇಷನ್ ದೃಶ್ಯಗಳು ಎಲ್ಲರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿವೆ. ವಿಶ್ವಾದ್ಯಂತ ಈ ಚಿತ್ರವು 159 ಕೋಟಿ ರೂಪಾಯಿಗಳನ್ನು ದಾಖಲಿಸಿದೆ ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸೈದ್ಧಾಂತಿಕವಾಗಿ ಪ್ರಬಲವಾಗಿರುವ ಚಿತ್ರಗಳಲ್ಲಿ 'ಕಾಲಾ' ಕೂಡ ಒಂದು.
7. ಲಿಂಗ
ನಿರ್ದೇಶಕ ಕೆ.ಎಸ್.ರವಿಕುಮಾರ್ ಅವರ ಲಿಂಗ ಚಿತ್ರವು ಸಾಕಷ್ಟು ಟೀಕೆಗೆ ಗುರಿಯಾದ ಚಿತ್ರಗಳಲ್ಲಿ ಒಂದು. ವಿಶೇಷವಾಗಿ ಕ್ಲೈಮ್ಯಾಕ್ಸ್. ಚಿತ್ರದಲ್ಲಿ ಅನುಷ್ಕಾ ಶೆಟ್ಟಿ, ಸೋನಾಕ್ಷಿ ಸಿನ್ಹಾ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಶ್ವಾದ್ಯಂತ ಲಿಂಗಾ 154 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.


Click it and Unblock the Notifications











