twitter
    For Quick Alerts
    ALLOW NOTIFICATIONS  
    For Daily Alerts

    ಪವನ್ ಕಲ್ಯಾಣ್ ಪಾರ್ಟಿ ಮೀಟಿಂಗ್ ವಿಡಿಯೋ ವೈರಲ್: ಚಿರಂಜೀವಿ ಬಗ್ಗೆ ಭರ್ಜರಿ ಸುದ್ದಿ

    |

    ನಟ ಮೆಗಾಸ್ಟಾರ್ ಚಿರಂಜೀವಿ ರಾಜಕೀಯಕ್ಕೆ ದೂರವಾಗಿ ಉಳಿದು ಸಿನಿಮಾಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

    'ಪ್ರಜಾರಾಜ್ಯಂ' ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ ಚಿರಂಜೀವಿ ಇನ್ನಿಲ್ಲದಂತೆ ರಾಜಕೀಯವಾಗಿ ವಿಫಲರಾದರು. ಸ್ವತಃ ಸಂಸದರಾಗಿ ಆಯ್ಕೆ ಆದರಾದರೂ ನಂತರ ಕಾಂಗ್ರೆಸ್ ಜೊತೆಗೆ ಪಕ್ಷವನ್ನು ವಿಲೀನಗೊಳಿಸಿ ತಾವೂ ರಾಜ್ಯ ಸಭೆ ಸದಸ್ಯರಾದರು ಹಾಗೂ ಕೇಂದ್ರ ಮಂತ್ರಿಯೂ ಆದರು.

    ಚಿರಂಜೀವಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ 'ಆಚಾರ್ಯ' ಸಿನಿಮಾತಂಡಚಿರಂಜೀವಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ 'ಆಚಾರ್ಯ' ಸಿನಿಮಾತಂಡ

    ಆದರೆ ತೆಲಂಗಾಣ ವಿಭಜನೆ ಆದ ಸಂದರ್ಭದಲ್ಲಿ ಬಹುತೇಕರು ಆಂಧ್ರಪ್ರದೇಶ ಸಂಸದರು ಕಾಂಗ್ರೆಸ್ ವಿರುದ್ಧ ಪ್ರತಿಭಟನೆಗಿಳಿದರು. ಆದರೆ ಚಿರಂಜೀವಿ ಕಾಂಗ್ರೆಸ್ ಜೊತೆಗೆ ಇದ್ದು, ಕಾಂಗ್ರೆಸ್ ಪರವಾಗಿ 2014 ರಲ್ಲಿ ಪ್ರಚಾರ ಸಹ ಮಾಡಿದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತು. ಆ ನಂತರ ರಾಜಕೀಯದಿಂದ ದೂರವೇ ಉಳಿದರು ನಟ ಚಿರಂಜೀವಿ. ಆದರೆ ಚಿರಂಜೀವಿ ಸಹೋದರ ಪವನ್ ಕಲ್ಯಾಣ್ 'ಜನಸೇನಾ' ಪಕ್ಷ ಸ್ಥಾಪಿಸಿ ರಾಜಕೀಯದಲ್ಲಿ ಸಕ್ರಿಯರಾಗಿದ್ದು, 'ಜನಸೇನಾ' ಪಕ್ಷದ ಖಾಸಗಿ ಮೀಟಿಂಗ್ ಒಂದರ ವಿಡಿಯೋ ಒಂದು ಇದೀಗ ವೈರಲ್ ಆಗಿದ್ದು, ವಿಡಿಯೋದಲ್ಲಿ ಚಿರಂಜೀವಿ ಬಗ್ಗೆ ಜನಸೇನಾ ಮುಖಂಡ ಆಡಿರುವ ಮಾತುಗಳು ತೆಲುಗು ಸಿನಿಮಾರಂಗ, ರಾಜಕೀಯ ರಂಗ ಎರಡಕ್ಕೂ ಕುತೂಹಲ ಮೂಡಿಸಿವೆ.

    ಚಿರಂಜೀವಿ ಬಗ್ಗೆ ಜನಸೇನಾ ಮೀಟಿಂಗ್‌ನಲ್ಲಿ ಚರ್ಚೆ

    ಚಿರಂಜೀವಿ ಬಗ್ಗೆ ಜನಸೇನಾ ಮೀಟಿಂಗ್‌ನಲ್ಲಿ ಚರ್ಚೆ

    ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಜನಸೇನಾ ಪಕ್ಷದ ಪ್ರಮುಖ ಮುಖಂಡ ಹಾಗೂ ಪವನ್ ಕಲ್ಯಾಣ್ ಗೆ ಅತ್ಯಾಪ್ತವಾಗಿರುವ ನಾದೆಂಡ್ಲ ಮನೋಹರ್, ನಟ ಚಿರಂಜೀವಿ ಜನಸೇನಾ ಪಕ್ಷಕ್ಕೆ ಬರುವ ಬಗ್ಗೆ ಆ ಮೂಲಕ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುವ ಸುಳಿವು ನೀಡಿದ್ದಾರೆ.

    'ಪವನ್‌ಗೆ ಬೆಂಬಲ ಕೊಡುವುದಾಗಿ ಹೇಳಿದ್ದಾರೆ ಚಿರಂಜೀವಿ'

    'ಪವನ್‌ಗೆ ಬೆಂಬಲ ಕೊಡುವುದಾಗಿ ಹೇಳಿದ್ದಾರೆ ಚಿರಂಜೀವಿ'

    ''ನಾನು (ನಾದೆಂಡ್ಲ ಮನೋಹರ್), ಪವನ್ ಕಲ್ಯಾಣ್, ಚಿರಂಜೀವಿ ಒಟ್ಟಿಗೆ ಕೂತು ಮಾತನಾಡಿದ್ದೇವೆ. ಇನ್ನೂ ಎರಡು ವರ್ಷಗಳ ಕಾಲ ಸಿನಿಮಾಗಳನ್ನು ಮಾಡಿ ನಂತರ ಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೋ ಎಂದು ಪವನ್‌ ಗೆ ಚಿರಂಜೀವಿ ಹೇಳಿದ್ದಾರೆ. ಅಷ್ಟೇ ಅಲ್ಲ 'ನಾನು ನಿನಗೆ ಬೆಂಬಲವಾಗಿ ಇರುತ್ತೇನೆ' ಎಂದು ಸಹ ಚಿರಂಜೀವಿ, ಪವನ್ ಕಲ್ಯಾಣ್ ಗೆ ಹೇಳಿದ್ದಾರೆ'' ಎಂದಿದ್ದಾರೆ ನಾದೆಲ್ಲ ಮನೋಹರ್.

    ಎಸ್ ಪಿ ಬಿಗೆ ಪದ್ಮ ವಿಭೂಷಣ; 'ಮರಣೋತ್ತರ' ಎಂದು ನೋಡಿ ದುಃಖವಾಗುತ್ತೆ ಎಂದ ಚಿರಂಜೀವಿಎಸ್ ಪಿ ಬಿಗೆ ಪದ್ಮ ವಿಭೂಷಣ; 'ಮರಣೋತ್ತರ' ಎಂದು ನೋಡಿ ದುಃಖವಾಗುತ್ತೆ ಎಂದ ಚಿರಂಜೀವಿ

    ಜನಸೇನಾ ಪಕ್ಷ ಸೇರಲಿದ್ದಾರೆಯೇ ಚಿರಂಜೀವಿ?

    ಜನಸೇನಾ ಪಕ್ಷ ಸೇರಲಿದ್ದಾರೆಯೇ ಚಿರಂಜೀವಿ?

    ಚಿರಂಜೀವಿ, ಪವನ್‌ ಗೆ ರಾಜಕೀಯದಲ್ಲಿ ಬೆಂಬಲವಾಗಿ ಇರುತ್ತಾರೆ ಎಂದರೆ ಚಿರಂಜೀವಿ ಸಹ ಜನಸೇನಾ ಪಕ್ಷ ಸೇರಿಕೊಳ್ಳುತ್ತಾರೆ ಎಂದೇ ಊಹಿಸಲಾಗುತ್ತಿದೆ. ಈಗಾಗಲೇ ಚಿರಂಜೀವಿ, ಪವನ್‌ ರ ಮತ್ತೊಬ್ಬ ಸಹೋದರ ನಾಗಬಾಬು ಜನಸೇನಾ ಪಕ್ಷದಲ್ಲಿ ಪ್ರಮುಖ ಮುಖಂಡರಾಗಿ ಗುರುತಿಸಿಕೊಂಡಿದ್ದಾರೆ.

    Recommended Video

    ಪೊಗರು, ರಾಬರ್ಟ್ ಬಗ್ಗೆ ಮಾತನಾಡಿದ ಪುನೀತ್ ರಾಜ್ ಕುಮಾರ್ | Filmibeat Kannada
    ಎರಡು ವರ್ಷವಷ್ಟೆ ಸಿನಿಮಾದಲ್ಲಿರಲಿದ್ದಾರೆ ಪವನ್

    ಎರಡು ವರ್ಷವಷ್ಟೆ ಸಿನಿಮಾದಲ್ಲಿರಲಿದ್ದಾರೆ ಪವನ್

    'ಪವನ್ ಕಲ್ಯಾಣ್ ಅವರು ರಾಜಕೀಯಕ್ಕಾಗಿ ಸಿನಿಮಾ ಬಿಟ್ಟಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಸಿನಿಮಾಗಳು ಸಹ ಅವಶ್ಯಕತೆ ಇರುವ ಕಾರಣ ಸಿನಿಮಾ ಮಾಡುತ್ತಿದ್ದಾರೆ. ಇನ್ನು ಎರಡು ವರ್ಷಗಳಷ್ಟೆ ಅವರು ಸಿನಿಮಾಗಳಲ್ಲಿ ನಟಿಸಲಿದ್ದಾರೆ, ಆ ನಂತರ ಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ' ಎಂದು ಸಭೆಯಲ್ಲಿ ಹೇಳಿದ್ದಾರೆ ನಾದಂಡ್ಲ ಮನೋಹರ್.

    English summary
    Janasena party leader Nadendla Manohar gave hint that Megastar Chiranjeevi may join Janasena party.
    Thursday, January 28, 2021, 9:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X