For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಸಿನಿಮಾದಲ್ಲಿ ಹಾಡಿದ ವ್ಯಕ್ತಿಗೆ ಉಡುಗೊರೆಗಳ ಸುರಿಮಳೆ

  |

  ಪವನ್ ಕಲ್ಯಾಣ್ ನಟಿಸಿರುವ ಹೊಸ ಸಿನಿಮಾ 'ಭೀಮ್ಲಾ ನಾಯಕ್‌'ನ ಟೈಟಲ್ ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ. ಹಾಡಿನ ವಿಡಿಯೋನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬರು ಕಾಡಿನಲ್ಲಿ ಕೂತು ತಂಬೂರಿ ಹಿಡಿದು ಹಾಡೊಂದನ್ನು ಹಾಡುತ್ತಿದ್ದರು. ವಯಸ್ಸಾದ ವ್ಯಕ್ತಿಯ ದನಿ ಹಲವರನ್ನು ಸೆಳೆದಿದೆ.

  'ಶಭಾಷ್ ಭೀಮ್ಲಾ ನಾಯಕ್' ಹಾಡು ಹಾಡಿರುವ ವಯಸ್ಸಾದ ವ್ಯಕ್ತಿಯ ಹೆಸರು ಕಿನ್ನೆರ ಮುಗುಲಯ್ಯ. ಕಿನ್ನೆರ ಮುಗುಲಯ್ಯ ಕಿನ್ನರಿ ಬಾರಿಸುವಲ್ಲಿ ಬಹಳ ಖ್ಯಾತರು, ತಲೆ ತಲಾಂತರಗಳಿಂದ ಅವರ ಕುಟುಂಬ ಕಿನ್ನರಿ ಬಾರಿಸುವುದನ್ನೇ ಉದ್ಯೋಗವನ್ನಾಗಿಸಿಕೊಂಡಿದೆ. ಇವರ ಕುರಿತು ಪ್ರಾಥಮಿಕ ಶಾಲಾ ಮಕ್ಕಳಿಗೆ ಪಾಠವೂ ಸಹ ಇದೆ. ತೆಲಂಗಾಣ ಸರ್ಕಾರವು ಯುಗಾದಿ ಪ್ರಶಸ್ತಿಯನ್ನು ನೀಡಿ ಕಿನ್ನೆರ ಮೊಗಲಯ್ಯನವರನ್ನು ಗೌರವಿಸಿದೆ.

  'ಭೀಮ್ಲಾ ನಾಯಕ್' ಸಿನಿಮಾದಲ್ಲಿ ಹಾಡು ಹಾಡಿದ ಬಳಿಕ ಕಿನ್ನೆಯ ಮುಗುಲಯ್ಯ ಜನಪ್ರಿಯತೆ ಹೆಚ್ಚಾಗಿದ್ದು, ಅವರ ಪ್ರತಿಭೆಯನ್ನು ಹಲವರು ಕೊಂಡಾಡಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ದುಬಾರಿ ಉಡುಗೊರೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

  ಸಿನಿಮಾದಲ್ಲಿ ಹಾಡು ಹಾಡಿದ್ದಕ್ಕೆ ಕಿನ್ನೆರ ಮುಗುಲಯ್ಯಗೆ ಎರಡು ಲಕ್ಷ ರುಪಾಯಿ ಸಂಭಾವನೆಯನ್ನು ನೀಡಲಾಗಿದೆ. ಇದರ ಜೊತೆಗೆ ಪವನ್ ಕಲ್ಯಾಣ್ ವೈಯಕ್ತಿಕವಾಗಿ ಎರಡು ಲಕ್ಷ ರುಪಾಯಿ ಹಣವನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದೀಗ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವು ಮುಗುಲಯ್ಯಗೆ ಮನೆ ಕಟ್ಟಿಕೊಡಲು ಮುಂದಾಗಿದೆ.

  ಆಶ್ವಾಸನೆ ನೀಡಿದ್ದ ಸರ್ಕಾರ

  ಆಶ್ವಾಸನೆ ನೀಡಿದ್ದ ಸರ್ಕಾರ

  ಕೆಲವು ಮಂತ್ರಿಗಳು ಈ ಹಿಂದೆ ಮುಗುಲಯ್ಯಗೆ ಮನೆ ಕಟ್ಟಿಕೊಡುವುದಾಗಿ ಹೇಳಿದ್ದರು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. 'ಭೀಮ್ಲಾ ನಾಯಕ್' ಸಿನಿಮಾದ ಹಾಡು ಹಿಟ್ ಆದ ಬಳಿಕ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು, ಹಾಗಾಗಿ ಜನಸೇನಾ ಪಕ್ಷವು ಮುಗುಲಯ್ಯಗೆ ಮನೆ ಕಟ್ಟಿಕೊಡುವುದಾಗಿ ಹೇಳಿದೆ.

  ಸೈಟು ನೀಡುವುದಾಗಿ ಘೋಷಿಸಿದ ಅಶೋಕ್ ರಾಥೋಡ್

  ಸೈಟು ನೀಡುವುದಾಗಿ ಘೋಷಿಸಿದ ಅಶೋಕ್ ರಾಥೋಡ್

  ಇದರ ನಡುವೆ ಅಶೋಕ್ ರಾಥೋಡ್ ಹೆಸರಿನ ಉದ್ಯಮಿ ಹಾಗೂ ಪವನ್ ಕಲ್ಯಾಣ್ ಅಭಿಮಾನಿಯೊಬ್ಬರು ಮುಗುಲಯ್ಯಗೆ ತಮ್ಮ ಸೈಟನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದೇ ಸ್ಥಳದಲ್ಲಿ ಜನಸೇನಾ ಪಕ್ಷವು ಮನೆ ಕಟ್ಟಿಕೊಡಲಿದೆ. ಮುಗುಲಯ್ಯಗೆ ಮನೆ ಕಟ್ಟಿಕೊಡುವುದಾಗಿ ಜನಸೇನಾ ಪಕ್ಷದ ಯುವ ಘಟನದ ಅಧ್ಯಕ್ಷ ವಂಗ ಲಕ್ಷ್ಮಣ್ ಗೌಡ ಘೋಷಿಸಿದ್ದಾರೆ.

  ಅಭಿನಂದಿಸಿರುವ ಪವನ್ ಕಲ್ಯಾಣ್

  ಅಭಿನಂದಿಸಿರುವ ಪವನ್ ಕಲ್ಯಾಣ್

  ಬುಡಕಟ್ಟು ಜನಾಂಗಗಳ ಜನರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಪವನ್ ಕಲ್ಯಾಣ್ ಈ ಹಿಂದೆ ಕೆಲವು ಬಾರಿ ಬುಡಕಟ್ಟು ಜನಾಂಗಗಳ ಹಾಡಿಗಳಿಗೆ ತೆರಳಿ ಅವರೊಟ್ಟಿಗೆ ಬೆರೆತಿದ್ದಿದೆ. ಇದೀಗ ತಮ್ಮದೇ ಪಕ್ಷದ ಯುವ ಘಟಕದ ಅಧ್ಯಕ್ಷ ವಂಗ ಲಕ್ಷ್ಮಣ್ ಗೌಡ, ಮುಗುಲಯ್ಯಗೆ ಮನೆ ಕಟ್ಟಿಕೊಡಲು ಮಾಡಿರುವ ನಿರ್ಣಯವನ್ನು ಪವನ್ ಕಲ್ಯಾಣ್ ಅಭಿನಂದಿಸಿದ್ದಾರೆ. 'ಜನಪದ ಕಲಾವಿದರನ್ನು ಗೌರವಿಸುತ್ತಿರುವ ಈ ನಡೆ ಅಭಿನಂದನಾರ್ಹ' ಎಂದಿದ್ದಾರೆ ಪವನ್ ಕಲ್ಯಾಣ್.

  'ಅಯ್ಯಪ್ಪನುಂ ಕೋಶಿಯುಂ' ರೀಮೇಕ್

  'ಅಯ್ಯಪ್ಪನುಂ ಕೋಶಿಯುಂ' ರೀಮೇಕ್

  ಪವನ್ ಕಲ್ಯಾಣ್ ನಟಿಸಿರುವ 'ಭೀಮ್ಲಾ ನಾಯಕ್' ಸಿನಿಮಾವು ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ರೀಮೇಕ್ ಆಗಿದ್ದು, ಸಿನಿಮಾದಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಾಣಾ ದಗ್ಗುಬಾಟಿ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಐಶ್ವರ್ಯಾ ರಾಜೇಶ್ ಹಾಗೂ ಕನ್ನಡತಿ ನಿತ್ಯಾ ಮೆನನ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಹೊಸ ನಿರ್ದೇಶಕ ಸಾಗರ್ ಕೆ ಚಂದ್ರಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಚಿತ್ರಕತೆ ಹಾಗೂ ಸಂಭಾಷಣೆಯನ್ನು ನಿರ್ದೇಶಕ ತ್ರಿವಿಕ್ರಮ್ ಬರೆದಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ಎಸ್ ತಮನ್ ನೀಡಿದ್ದಾರೆ. ಜನವರಿ 12 ಕ್ಕೆ 'ಭೀಮ್ಲಾ ನಾಯಕ್' ಸಿನಿಮಾ ಬಿಡುಗಡೆ ಆಗಲಿದೆ.

  English summary
  Janasena party announced that they will build house for singer Kinnera Mogulaiah. He sang a song in Pawan Kalyan's upcoming movie Bheemla Nayak.
  Wednesday, September 8, 2021, 8:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X